ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಲ್ಟ್ರಾ ಮಾಡರ್ನ್ ಹುಡುಗಿಯರು ಜೀನ್ಸ್ ಸೀರೆ ಫ್ಯಾಷನ್‌ಗೆ ಸೈ ಎಂದಿದ್ದಾರೆ. ಹೌದು. ಜೀನ್ಸ್ ಜೊತೆ ಸೀರೆ ಧರಿಸುವ ಅಲ್ಟ್ರಾ ಮಾಡರ್ನ್ ಸೀರೆ ಫ್ಯಾಷನ್ (Jeans Saree Fashion) ಇದೀಗ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿದೆ. ಅಷ್ಟು ಮಾತ್ರವಲ್ಲ, ಮಾಡರ್ನ್ ಲುಕ್ ಬಯಸುವ ನಾರಿಯರು ಕೂಡ ಈ ಇಂಡೋ-ವೆಸ್ಟರ್ನ್ ಜೀನ್ಸ್ ಸೀರೆಯಲ್ಲಿ ಬಿಂದಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ.
ಏನಿದು ಜೀನ್ಸ್ ಸೀರೆ ಫ್ಯಾಷನ್
ಜೀನ್ಸ್ ಸೀರೆ ಫ್ಯಾಷನ್ ಅನ್ನು ಸಿಂಪಲ್ಲಾಗಿ ಹೇಳುವುದಾದಲ್ಲಿ ಜೀನ್ಸ್‌ನೊಂದಿಗೆ ಸೀರೆ ಧರಿಸುವ ಸ್ಟೈಲಿಂಗ್. ಇದನ್ನೇ ಜೀನ್ಸ್ ಸೀರೆ ಫ್ಯಾಷನ್ ಎಂದು ಫ್ಯಾಷನ್ ಭಾಷೆಯಲ್ಲಿ ಹೇಳಲಾಗುತ್ತದೆ. ಯಾವುದೇ ಟೈಟ್ ಜೀನ್ಸ್, ಫಿಟ್ಟಿಂಗ್ ಜೀನ್ಸ್ ಇಲ್ಲವೇ ಟೊರ್ನ್ ಜೀನ್ಸ್ ಹೀಗೆ ಆಯಾ ಹುಡುಗಿಯರ ಚಾಯ್ಸ್ ಹಾಗೂ ಜೀನ್ಸ್ ಥೀಮ್‌ಗೆ ತಕ್ಕಂತೆ ಸೀರೆಯನ್ನು ಸ್ಟೈಲಿಂಗ್ ಮಾಡುವುದು ಈ ಫ್ಯಾಷನ್‌ನಲ್ಲಿ ಸೇರಿದೆ. ಮಡಿವಂತಿಕೆ ಇಲ್ಲಿಲ್ಲ. ಇಲ್ಲೆನಿದ್ದರೂ ಟ್ರೆಡಿಷನಲ್ ಸೀರೆಯನ್ನು ವೆಸ್ಟರ್ನ್ ಸೀರೆಯೊಂದಿಗೆ ಮ್ಯಾಚ್ ಮಾಡಿ ಉಡುವುದು.
ಅದು ಯಾವ ಬಗೆಯ ಸೀರೆಯಾದರೂ ಸರಿ, ಯಾವುದೇ ಬಣ್ಣದ ಜೀನ್ಸ್ ಪ್ಯಾಂಟ್ ಆದರೂ ಸರಿಯೇ, ಅದರೊಂದಿಗೆ ಸ್ಟೈಲಿಂಗ್ ಮಾಡುವುದು ಎನ್ನುತ್ತಾರೆ ಸೀರೆ ಡ್ರೇಪಿಂಗ್ ಸ್ಪೆಷಲಿಸ್ಟ್ ರಿಯಾ ಶರ್ಮಾ. ಅವರ ಪ್ರಕಾರ, ಜೀನ್ಸ್ ನೊಂದಿಗೆ ಸೀರೆ ಧರಿಸುವುದು ಮಾಡರ್ನ್ ಕಲ್ಚರ್‌ನ ಪರಿಚಯ ನೀಡುತ್ತದೆ. ಬಿಂದಾಸ್ ಹುಡುಗಿಯರ ಪ್ರಯೋಗಾತ್ಮಕ ಸ್ಟೈಲಿಂಗ್‌ಗೆ ಸೇರುತ್ತದೆ ಎನ್ನುತ್ತಾರೆ. ಇನ್ನು ಮಾಡರ್ನ್ ಲುಕ್ ಬಯಸುವ ಕಾರ್ಪೋರೇಟ್ ಕ್ಷೇತ್ರದ ನಾರಿಯರು ಈ ರೀತಿಯ ಜೀನ್ಸ್ ಜೊತೆ ಸೀರೆಗಳನ್ನು ಧರಿಸುವುದು ಹೆಚ್ಚಾಗಿದೆ. ಇದು ನೂರು ಜನರ ಮಧ್ಯೆ ಎದ್ದು ಕಾಣುವ ಸೀರೆ ಡ್ರೇಪಿಂಗ್ ಕಾನ್ಸೆಪ್ಟ್ ಎನ್ನುತ್ತಾರೆ ಸೀರೆ ಸ್ಟೈಲಿಂಗ್ ಎಕ್ಸ್‌ಪರ್ಟ್ ರೀತು.
ಹೇಗೆಲ್ಲಾ ಜೀನ್ಸ್‌ನೊಂದಿಗೆ ಸ್ಟೈಲಿಂಗ್ ಮಾಡಬಹುದು?
- ಜೀನ್ಸ್ ಪ್ಯಾಂಟ್ನೊಂದಿಗೆ ಹೇಗೆಲ್ಲಾ ಸೀರೆಯನ್ನು ಡ್ರೇಪಿಂಗ್ ಹಾಗೂ ಸ್ಟೈಲಿಂಗ್ ಮಾಡಬಹುದು. ಮಿಕ್ಸ್ ಮ್ಯಾಚ್ ಐಡಿಯಾ ಹೇಗೆ? ಎಂಬುದರ ಕುರಿತಂತೆ ರಿಯಾ ಶರ್ಮಾ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.
- ವೆಸ್ಟರ್ನ್ ಕ್ರಾಪ್ ಟಾಪ್ ಜೊತೆ ನಿಮ್ಮ ಬಾಡಿ ಸ್ಟ್ರಕ್ಚರ್ಗೆ ಹೊಂದುವಂತಹ ಸೀರೆ ಆಯ್ಕೆ ಮಾಡಿ. ಅದಕ್ಕೆ ಬೆಲ್ಟ್ ಧರಿಸಿ. ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುವುದು.
- ಪಾರ್ಟಿ ಲುಕ್ಗಾದಲ್ಲಿ ಮಾನೋಕ್ರಾಮ್ ಅಥವಾ ಶಿಮ್ಮರ್ ಬ್ಲೌಸ್ಗೆ ಬ್ಲಾಕ್ ಜೀನ್ಸ್ ಧರಿಸಿ, ಗೋಲ್ಡನ್ ಸೀರೆಯನ್ನು ಒಂದು ಸೈಡ್ ಸೆರಗು ಹಾಕಿ ಉಡಬಹುದು.
- ಜೆನ್ ಜಿ ಹುಡುಗಿಯರಾದಲ್ಲಿ ಟೊರ್ನ್ ಜೀನ್ಸ್ಗೆ ಟರ್ಟಲ್ ನೆಕ್ಲೈನ್ ಬ್ಲೌಸ್ ಧರಿಸಿ ಹಾಫ್ ಸೀರೆಯಂತೆ ಧರಿಸಿ ಸ್ಟೋಲ್ನಂತೆ ಸೀರೆ ಸೆರಗನ್ನು ಸುತ್ತಬಹುದು. ಅಲ್ಟ್ರಾ ಮಾಡರ್ನ್ ಲುಕ್ ನೀಡುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಡಿಸೈನರ್‌ಗಳಿಗೆ ವೇದಿಕೆ ಕಲ್ಪಿಸುತ್ತಿರುವ ಬೆಂಗಳೂರು ಫ್ಯಾಷನ್ ಸಾಗಾ