ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮತ್ತೆ ಮರಳಿರುವ ಫ್ರಿಂಜ್ ನೆಕ್ಲೇಸ್‌ಗಳು, ಫ್ಯಾಷನ್ ಜ್ಯುವೆಲರಿಗಳ (Jewel Trend) ಟಾಪ್ ಲಿಸ್ಟ್‌ಗೆ ಸೇರಿದೆ. ಕುತ್ತಿಗೆಯ ಸೌಂದರ್ಯಕ್ಕೆ ಸಾಥ್ ನೀಡುವ ಈ ಶೈಲಿಯ ನೆಕ್ಲೇಸ್‌ಗಳು ನಾನಾ ಬಗೆಯ ಡಿಸೈನ್‌ಗಳಲ್ಲಿ ದೊರೆಯುತ್ತಿದ್ದು, ಎಥ್ನಿಕ್ ಹಾಗೂ ವೆಸ್ಟರ್ನ್ ಎರಡೂ ಡಿಸೈನರ್‌ವೇರ್‌ಗಳಿಗೂ ಮ್ಯಾಚ್ ಆಗುವ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.
ಏನಿದು ಫ್ರಿಂಜ್ ನೆಕ್ಲೇಸ್
ಕುತ್ತಿಗೆಯನ್ನು ಬಳಸುವ ಈ ನೆಕ್ಲೇಸ್‌ಗಳು ಪೆಂಡೆಂಟ್ ರೀತಿಯ ಬೀಡ್ಸ್ ಇಲ್ಲವೇ ಸಾಲು ಸಾಲಾಗಿರುವಂತಹ ಉದ್ದನೆಯ ಚೈನ್‌ನಂತವು ಅಥವಾ, ಸ್ಟೆಪ್ ಬೈ ಸ್ಟೆಪ್ ನೇತಾಡುವಂತೆ ಕಾಣುವಂತಹ ಡಿಸೈನ್‌ಗಳನ್ನು ಹೊಂದಿರುತ್ತವೆ. ಇಲ್ಲಿ ಕೊಟ್ಟಿರುವ ಚಿತ್ರಗಳನ್ನು ನೋಡಿದಾಗ ತಿಳಿಯಬಹುದು. ಹಾಗೆಂದು ಫ್ರಿಂಜ್ ಡಿಸೈನ್ ಎಂದಾಕ್ಷಣಾ ಅವು ಒಂದೇ ಡಿಸೈನ್‌ದ್ದಾಗಿರುವುದಿಲ್ಲ! ಬದಲಿಗೆ ಊಹೆಗೂ ಮೀರಿದ ವಿನ್ಯಾಸಗಳನ್ನು ಹೊಂದಿರುತ್ತವೆ. ಇವು ಅಗಲವಾದ ಹಾಗೂ ನೇತಾಡುವಂತಹ ಉದ್ದನಾದ ಡಿಸೈನ್‌ಗಳಿಂದ ಕೂಡಿರುತ್ತವೆ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ನೇಮಿಚಂದ್ರ. ಅವರ ಪ್ರಕಾರ, ಈ ಡಿಸೈನ್ ಇದೀಗ ಬಂಗಾರೇತರ ಫ್ಯಾಷನ್ ಜ್ಯುವೆಲರಿ ವಿನ್ಯಾಸಗಳಲ್ಲಿ ಅತಿ ಹೆಚ್ಚಾಗಿ ಕಂಡುಬರುತ್ತದಂತೆ. ಅದರಲ್ಲೂ ವೈಟ್ ಮತ್ತು ಬ್ಲಾಕ್ ಮೆಟಲ್‌ನವು ಹೆಚ್ಚು ಚಾಲ್ತಿಯಲ್ಲಿವೆ.
ಫ್ಯಾಷನ್ ಜ್ಯುವೆಲರಿಯಾದ ಫ್ರಿಂಜ್ ನೆಕ್ಲೇಸ್
ಫ್ಯಾಷನ್ ಜ್ಯುವೆಲರಿಗಳು ಪ್ರಸ್ತುತ ಟ್ರೆಂಡ್‌ಗೆ ತಕ್ಕಂತೆ ಬದಲಾಗುತ್ತದೆ. ಅದೇ ರೀತಿ ಈ ಫ್ರಿಂಜ್ ಜ್ಯುವೆಲರಿಗಳು ಕೂಡ ಇಂದಿನ ಜನರೇಷನ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ನಲ್ಲಿ ದೊರೆಯುತ್ತವೆ. ಕೆಲವು ಫಂಕಿ ಡಿಸೈನ್‌ನಲ್ಲೂ ದೊರೆಯುತ್ತಿವೆ. ಹಾಗೆಂದು ಲೇಯರ್ಡ್ ನೆಕ್ಲೇಸ್‌ಗಳು ಫ್ರಿಂಜ್‌ನವಲ್ಲ ಎಂಬುದು ಗೊತ್ತಿರಲಿ ಎನ್ನುತ್ತಾರೆ ಜ್ಯುವೆಲ್ ವಿನ್ಯಾಸಕಿ ಅರ್ಚನಾ.
ಫ್ರಿಂಜ್ ನೆಕ್ಲೇಸ್ ಧರಿಸುವವರಿಗೆ ಟಿಪ್ಸ್
- ಕುತ್ತಿಗೆ ಉದ್ದವಿರುವವರಿಗೆ ಈ ನೆಕ್ಲೇಸ್‌ಗಳು ಆಕರ್ಷಕವಾಗಿ ಕಾಣುತ್ತವೆ.
- ಶೋಲ್ಡರ್ ಅಗಲವಾಗಿರುವವರಿಗೂ ಚೆನ್ನಾಗಿ ಕಾಣುತ್ತವೆ.
- ಧರಿಸುವ ಉಡುಪಿನ ನೆಕ್ಲೈನ್ ಅಗಲವಾಗಿದ್ದಾಗ ಈ ನೆಕ್ಲೇಸ್ ಧರಿಸಬಹುದು.
- ಫ್ರಿಂಜ್ ನೆಕ್ಲೇಸ್ ಧರಿಸಿದಾಗ ಕಿವಿಗೆ ಹ್ಯಾಂಗಿಂಗ್ಸ್ ಧರಿಸಬೇಡಿ.
- ಬ್ಲಾಕ್ ಅಥಬಾ ವೈಟ್ ಮೆಟಲ್ನ ಫ್ರಿಂಝ್ ನೆಕ್ಲೇಸ್ ಆದಲ್ಲಿ ಕ್ಯಾಶುವಲ್ ಉಡುಪಿಗೆ ಮ್ಯಾಚ್ ಆಗುವುದು.
- ಎಥ್ನಿಕ್ ಲುಕ್ಗಾದಲ್ಲಿ ಗೋಲ್ಡನ್ ಶೇಡ್ಗಳನ್ನು ಮ್ಯಾಚ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಾನ್ಸೂನ್ ಶಿಮ್ಮರ್ ಪಾರ್ಟಿವೇರ್ಸ್‌ಗೂ ಸಿಕ್ತು ಲೇಯರ್ಡ್ ಲುಕ್!