Site icon Vistara News

Fashion Show: ಕೇರಳದ ಬ್ರೈಡಲ್‌ ಫ್ಯಾಷನ್‌ ವೀಕ್‌ನಲ್ಲಿ ಕನ್ನಡತಿ ಚಂದನಾ ಶೋ ಸ್ಟಾಪರ್‌ ವಾಕ್‌

Kerala Bridal Fashion Week

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕೇರಳದಲ್ಲಿ ಎರಡು ದಿನಗಳ ಕಾಲ ನಡೆದ ಮಲಬಾರ್‌ ಬ್ರೈಡಲ್‌ ಫ್ಯಾಷನ್‌ (Fashion Show) ವೀಕ್‌ನಲ್ಲಿ, ನಾನಾ ಡಿಸೈನರ್‌ಗಳ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳನ್ನು ಧರಿಸಿದ ಕನ್ನಡದ ಮಾಡೆಲ್‌ ಹಾಗೂ ನಟಿ ಚಂದನಾಗೌಡ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕಲಾತ್ಮಕ ಗ್ರ್ಯಾಂಡ್‌ ಡಿಸೈನರ್‌ವೇರ್‌ಗಳ ಅನಾವರಣ

ಸುಮಾರು 20 ಡಿಸೈನರ್‌ಗಳು ಹಾಗೂ 35 ಕ್ಕೂ ಹೆಚ್ಚು ಮಾಡೆಲ್‌ಗಳು ಈ ಬ್ರೈಡಲ್‌ ಫ್ಯಾಷನ್‌ ವೀಕ್‌ನಲ್ಲಿ ಪಾಲ್ಗೊಂಡಿದ್ದರು. ನಿರಂತರವಾಗಿ ಎರಡು ದಿನಗಳ ಕಾಲ ನಡೆದ ಈ ಶೋನಲ್ಲಿ ರಾಷ್ಟ್ರದ ನಾನಾ ಕಡೆಯಿಂದ ಆಗಮಿಸಿದ್ದ ಡಿಸೈನರ್‌ಗಳು ತಮ್ಮ ತಮ್ಮ ಕಲಾತ್ಮಕ ಗ್ರ್ಯಾಂಡ್‌ ಬ್ರೈಡಲ್‌ ಕಲೆಕ್ಷನ್‌ಗಳನ್ನು ಅನಾವರಣಗೊಳಿಸಿದರು.

ಕನ್ನಡದ ಮಾಡೆಲ್‌ ಹಾಗೂ ನಟಿ ಚಂದನಾಗೌಡ

ವೆಡ್ಡಿಂಗ್‌ ಕಲೆಕ್ಷನ್‌ನಲ್ಲಿ ಮಿಂಚಿದ ಚಂದನಾ

ಹೆವಿ ಗ್ರ್ಯಾಂಡ್‌ ಲೆಹೆಂಗಾದಲ್ಲಿ ಕಾಣಿಸಿಕೊಂಡ ಚಂದನಾ, ಟ್ರೆಂಡಿ ಡಿಸೈನ್‌ನ ಕಲಾತ್ಮಕ ಡಿಸೈನರ್‌ವೇರ್‌ಗಳಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ಕಾಣಿಸಿಕೊಂಡರು. ಈ ಫ್ಯಾಷನ್‌ ವೀಕ್‌ನಲ್ಲಿ ಕಲ್ಯಾಣ್‌ ಕೇಂದ್ರ, ಶೋಭಿಕಾ ವೆಡ್ಡಿಂಗ್‌ ಹಾಗೂ ಸುಹಾನಾ ಡಿಸೈನರ್‌ ಅವರ ಬ್ರಾಂಡ್‌ಗಳ ವಿಶೇಷ ಹೆವ್ವಿ ಬ್ರೈಡಲ್‌ ಲೆಹೆಂಗಾಗಳಲ್ಲಿ ಏಂಜೆಲ್‌ನಂತೆ ಚಂದನಾ ಆಕರ್ಷಕವಾಗಿ ಕಾಣಿಸಿಕೊಂಡರು.

ಸಂತಸ ತಂದ ಫ್ಯಾಷನ್‌ ವೀಕ್‌

“ಪ್ರತಿ ಹೆಣ್ಣಿಗೆ ಇಷ್ಟವಾಗುವಂತಹ ರೆಡ್‌ ಶೇಡ್‌ನ ಹೆವ್ವಿ ಬ್ರೈಡಲ್‌ ಲೆಹೆಂಗಾ ಸಾಂಪ್ರದಾಯಿಕ ಲುಕ್‌ನಲ್ಲಿ ಎಲ್ಲರಿಗೂ ಇಷ್ಟವಾಗುವಂತಿತ್ತು. ಧರಿಸಿದಾಗ ಭಾರ ಎಂದೆನಿಸಿದರೂ ನೋಡಲು ಎಲ್ಲರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಇನ್ನು ವೈನ್‌ ರೆಡ್‌ ಶೇಡ್‌ನ ಇಂಡೋ-ವೆಸ್ಟರ್ನ್ ಲುಕ್‌ ನೀಡುವ ಲೆಹೆಂಗಾ ಡಿಫರೆಂಟ್‌ ಲುಕ್‌ ನೀಡಿತ್ತು. ಮಾನೋಕ್ರೋಮ್‌ ಲೈಟ್‌ ಶೇಡ್‌ನ ಲೆಹೆಂಗಾ ಸಿಂಪಲ್‌ ಆಗಿ ಕಂಡರೂ ನೋಡಲು ಮನಮೋಹಕವೆಂದೆನಿಸಿತ್ತು. ಕೇರಳದಲ್ಲಿ ನಡೆದ ಈ ದೊಡ್ಡ ಮಟ್ಟದ ಫ್ಯಾಷನ್‌ ವೀಕ್‌ನಲ್ಲಿ ಕನ್ನಡಿಗಳಾಗಿ ವಾಕ್‌ ಮಾಡಿದ್ದು, ಸಂತಸ ತಂದಿತು” ಎಂದು ಚಂದನಾ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.
ಈ ಫ್ಯಾಷನ್‌ ವೀಕ್‌ನಲ್ಲಿ ಎಲ್ಲೆಡೆಯಿಂದ ಆಗಮಿಸಿದ್ದ ಫ್ಯಾಷನ್‌ ಪ್ರಿಯರು ಈ ಸೀಸನ್‌ನ ಬ್ರೈಡಲ್‌ ಡಿಸೈನರ್‌ವೇರ್‌ಗಳನ್ನು ರ್ಯಾಂಪ್‌ ಮೇಲೆ ನೋಡಿ ಕಣ್ತುಂಬಿಸಿಕೊಂಡರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Taj India Fashion: ಆಗ್ರಾದಲ್ಲಿ ಫ್ಯಾಷನ್‌ ರನ್‌ವೇ ರ‍್ಯಾಂಪ್‌ ಶೋ; ಗೌನ್‌ನಲ್ಲೂ ವೆಡ್ಡಿಂಗ್‌ ಕಲೆಕ್ಷನ್‌!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version