ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಕರ್ಷಕವಾಗಿ ಕಾಣುವ ವರ್ಣಮಯ ವಿನ್ಯಾಸದ ಚಿಣ್ಣರ ಫಂಕಿ ಹೆಡ್‌ಬ್ಯಾಂಡ್‌ಗಳು ಆಗಮಿಸಿದ್ದು, ಮುದ್ದು ಕಂದಮ್ಮಗಳನ್ನು ಸಿಂಗರಿಸುತ್ತಿವೆ. ನೋಡಲು ಕ್ಯೂಟ್ ಆಗಿ ಬಿಂಬಿಸುವ ಈ ಬಣ್ಣಬಣ್ಣದ ಹೆಡ್‌ಬ್ಯಾಂಡ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ದೊರೆಯುತ್ತಿವೆ.
ಬಗೆಬಗೆಯ ಫಂಕಿ ಹೆಡ್‌ಬ್ಯಾಂಡ್ಸ್
“ನೋಡಲು ಫಂಕಿ ಲುಕ್ ನೀಡುವ ನಾನಾ ಬಗೆಯ ಹೆಡ್‌ಬ್ಯಾಂಡ್‌ಗಳು ಮಕ್ಕಳ ತಲೆಗೂದಲನ್ನು ಅಲಂಕರಿಸುತ್ತಿವೆ. ಅವುಗಳಲ್ಲಿ ಅನಿಮಲ್ಸ್, ಬಡ್ರ್ಸ್, ಜೆಮಿಟ್ರಿಕಲ್, ಅಬ್‌ಸ್ಟ್ರಾಕ್ಟ್ ವಿನ್ಯಾಸದ ಚಿತ್ರ-ವಿಚಿತ್ರ ವಿನ್ಯಾಸದ ಹೆಡ್‌ಬ್ಯಾಂಡ್‌ಗಳು ಹೆಚ್ಚು ಪ್ರಚಲಿತದಲ್ಲಿವೆ. ಪ್ರಾಣಿಗಳ ಮುಖವನ್ನೊಳಗೊಂಡ ಚಿತ್ತಾರದ ಹೆಡ್‌ಬ್ಯಾಂಡ್‌ಗಳು ಮಕ್ಕಳಿಗೆ ಹೆಚ್ಚು ಪ್ರಿಯವಾಗಿವೆ. ಮೊಲದ ಕಿವಿ, ಮೀನಿನ, ಶಾರ್ಕ್‌ನ ಶ್ವಾನದ ಕಿವಿ, ಪಕ್ಷಿಗಳ ರೆಕ್ಕೆ ಹೀಗೆ ಫಂಕಿ ಲುಕ್ ನೀಡುವ ವಿನ್ಯಾಸವಿರುವ ಹೆಡ್‌ಬ್ಯಾಂಡ್‌ಗಳು ಕಲರ್‌ಫುಲ್ ಡಿಸೈನ್‌ಗಳಲ್ಲಿ ಕಾಣಿಸಿಕೊಂಡಿವೆ. ಮೊದಲಿಗಿಂತ ಇದೀಗ ಇವುಗಳಿಗೆ ಬೇಡಿಕೆ ಹೆಚ್ಚಾಗಿದೆ” ಎನ್ನುತ್ತಾರೆ ಮಕ್ಕಳ ಸ್ಟೈಲಿಸ್ಟ್ಸ್.
ಬರ್ತ್ ಡೇ ಹೆಡ್‌ಬ್ಯಾಂಡ್ಸ್
ಇನ್ನು ಚಿಣ್ಣರಿಗೆಂದೇ ಬರ್ತ್‌ಡೇ ಹೆಡ್‌ಬ್ಯಾಂಡ್‌ಗಳು ಬಂದಿವೆ. ಅವುಗಳಲ್ಲಿ ಏಂಜೆಲ್ ಡಿಸೈನ್‌ನವು ಪಾಪ್ಯುಲರ್ ಆಗಿವೆ. ಇದರೊಂದಿಗೆ ಕಾರ್ಟೂನ್ ಕ್ಯಾರೆಕ್ಟರ್‌ನ ಹೆಡ್‌ಬ್ಯಾಂಡ್‌ಗಳು ಆಗಮಿಸಿವೆ. ಮಕ್ಕಳಿಗೆ ಪ್ರಿಯವಾದ ಕಲರ್‌ಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಾಕರ್ಷಕವಾದ ಡಿಸೈನ್‌ಗಳನ್ನುಈ ಹೆಡ್‌ಬ್ಯಾಂಡ್‌ಗಳಲ್ಲಿ ಮೂಡಿಸಲಾಗಿದೆ. ಮಕ್ಕಳು ಇಷ್ಟಪಟ್ಟು ಧರಿಸುವಂತಹ ಡಿಸೈನ್‌ಗಳನ್ನೇ ಆಯ್ಕೆ ಮಾಡಿ ಇವುಗಳನ್ನು ಸಿದ್ಧಪಡಿಸಲಾಗಿದ್ದು, ಬೇಡಿಕೆ ಹೆಚ್ಚಾಗಲು ಕಾರಣ ಎನ್ನುತ್ತಾರೆ ಮಾರಾಟಗಾರರು.
ಬೋ ಹೆಡ್‌ಬ್ಯಾಂಡ್‌ಗಳು
ಪ್ರತಿನಿತ್ಯ ಮಕ್ಕಳು ಧರಿಸಬಹುದಾದಂತಹ ಸಿಂಪಲ್ ಬೋ ಹೆಡ್‌ಬ್ಯಾಂಡ್‌ಗಳು ಕೂಡ ಇಂದು ಹೆಚ್ಚು ಟ್ರೆಂಡಿಯಾಗಿವೆ. ಚಿಕ್ಕ ಬೋ, ದೊಡ್ಡ ಬೋ ಇರುವಂತಹ ಬಣ್ಣಬಣ್ಣದ ಹೆಡ್‌ಬ್ಯಾಂಡ್‌ಗಳು ಚಿಕ್ಕ ಮಕ್ಕಳು ಮಾತ್ರವಲ್ಲ, ಶಾಲೆಗೆ ಹೋಗುವ ಹೆಣ್ಣುಮಕ್ಕಳು ಧರಿಸಬಹುದಾಗಿದೆ. ತೀರಾ ಚಿಕ್ಕ ಕೂದಲಿನ ಕೇಶ ವಿನ್ಯಾಸಕ್ಕೂ ಇವು ಧರಿಸಬಹುದಾಗಿದ್ದು, ಎಲ್ಲಾ ಉಡುಪುಗಳಿಗೆ ಮ್ಯಾಚಿಂಗ್ ಕೂಡ ದೊರೆಯುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಚಿಣ್ಣರ ಹೆಡ್‌ಬ್ಯಾಂಡ್ ಆಯ್ಕೆಗೂ ಮುನ್ನ
ಆದಷ್ಟೂ ಫಿಟ್ ಆಗಿರುವುದನ್ನು ಖರೀದಿಸಿ.
ಸಾಫ್ಟ್ ಎಲಾಸ್ಟಿಕ್‌ನವು ಚಿಕ್ಕ ಮಕ್ಕಳಿಗೆ ಸೂಕ್ತ.
ನಾನಾ ಫ್ಯಾಬ್ರಿಕ್‌ನವು ಮ್ಯಾಚಿಂಗ್‌ನಲ್ಲಿ ಲಭ್ಯ.
ಮಗುವಿಗೆ ಕಂಫರ್ಟಬಲ್ ಆಗಿದ್ದಲ್ಲಿ ಮಾತ್ರ ಹಾಕಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Stars Fashion | ಲಂಗ-ದಾವಣಿ-ಸೀರೆಯ ಟ್ರೆಡಿಷನಲ್ ಲುಕ್‌ನಲ್ಲಿ ಕಂಗೊಳಿಸಿದ ನಟಿಯರು