ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಥೀಮ್‌ಗೆ ತಕ್ಕಂತೆ ಮಕ್ಕಳ ಫ್ಯಾಷನ್ ಕೂಡ ಬದಲಾಗುತ್ತಿದೆ.
ಇದೀಗ ಥೀಮ್ ಹಾಗೂ ಸಂದರ್ಭಕ್ಕೆ ತಕ್ಕಂತೆ ಮಕ್ಕಳ ಫ್ಯಾಷನ್‌ವೇರ್‌ಗಳು ದೊರೆಯುತ್ತವೆ. ಮೊದಲೆಲ್ಲಾ ಮಕ್ಕಳ ಫ್ಯಾಷನ್‌ನಲ್ಲಿ ಹೆಚ್ಚಿನ ಆಪ್ಷನ್‌ಗಳಿರಲಿಲ್ಲ. ಅದರಲ್ಲೂ ಬ್ರಾಂಡೆಡ್ ವೇರ್‌ಗಳು ದೊರೆಯುತ್ತಿರಲಿಲ್ಲ. ಆದರೆ, ಇದೀಗ ಕಿಡ್ಸ್ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ನಾನಾ ಥೀಮ್‌ಗೆ ತಕ್ಕಂತೆ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಇಬ್ಬರಿಗೂ ಲೆಕ್ಕವಿಲ್ಲದಷ್ಟು ಬಗೆಯ ಫ್ಯಾಷನ್‌ವೇರ್‌ಗಳು ಬಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಥೀಮ್ ಫ್ಯಾಷನ್‌ವೇರ್‌ಗಳು
ಥೀಮ್ ಕಿಡ್ಸ್ ಫ್ಯಾಷನ್‌ನಲ್ಲಿ ಸೆಲೆಬ್ರೇಷನ್ ಕೆಟಗರಿಗೆ ಹುಟ್ಟಿದ ಹಬ್ಬ, ನಾಮಕರಣ, ಪಾರ್ಟಿ, ಗೆಟ್ ಟುಗೆದರ್, ಔಟಿಂಗ್ ಕೆಟಗರಿಗೆ ಸೇರುವ ಪಿಕ್ನಿಕ್, ಸೀಸನ್ ಟ್ರಾವೆಲಿಂಗ್, ಸ್ಪೋಟ್ರ್ಸ್ ವೇರ್ ಇನ್ನು ಪಕ್ಕಾ ಫ್ಯಾಮಿಲಿ ಅಥವಾ ಫ್ರೆಂಡ್ಸ್ ಫೋಟೋಶೂಟ್‌ಗೆಂದೇ ದೊರಕುವ ಮಕ್ಕಳ ವಿಶೇಷ ಉಡುಪುಗಳು ಎಲ್ಲಾ ಸೀಸನ್‌ನಲ್ಲೂ ಬಿಡುಗಡೆಗೊಳ್ಳುತ್ತಲೇ ಇರುತ್ತವೆ.
ಉದಾಹರಣೆಗೆ, ಹುಟ್ಟುಹಬ್ಬಕ್ಕಾಗಿ ಹೆಣ್ಣು ಮಕ್ಕಳಿಗೆ ಏಂಜೆಲ್ ಔಟ್‌ಫಿಟ್ಸ್, ಗಂಡುಮಕ್ಕಳಿಗೆ ಸೂಪರ್ ಮ್ಯಾನ್ ಅಥವಾ ಬ್ಯಾಟ್‌ಮ್ಯಾನ್‌ನಂತೆ ತಯಾರಾಗಬಹುದಾದ ಕ್ಯಾರೆಕ್ಟರ್ ಸೂಟ್ ಸೆಟ್‌ಗಳು ಥೀಮ್ ಫ್ಯಾಷನ್‌ವೇರ್‌ಗಳಲ್ಲಿ ದೊರೆಯುತ್ತವೆ ಎನ್ನುತ್ತಾರೆ ಮಕ್ಕಳ ಡಿಸೈನರ್‌ಗಳಾದ ಶರಧಿ ಹಾಗೂ ನಿಖಿತಾ. ಅವರ ಪ್ರಕಾರ, ಇತ್ತೀಚೆಗೆ ಥೀಮ್ ಫ್ಯಾಷನ್‌ವೇರ್‌ಗಳನ್ನು ಬೋಟಿಕ್‌ಗಳು ಕಸ್ಟಮೈಸ್ಡ್ ಕೂಡ ಮಾಡುತ್ತವೆ. ಹಾಗಾಗಿ ಹೆಚ್ಚೆಚ್ಚು ವಿನ್ಯಾಸದವು ದೊರೆಯುತ್ತವೆ ಎನ್ನುತ್ತಾರೆ.
ಥೀಮ್ ಫ್ಯಾಷನ್‌ವೇರ್‌ಗಳಲ್ಲಿ ಕ್ಯೂಟ್ ಮಕ್ಕಳು
ಇತ್ತೀಚೆಗೆ ಥೀಮ್ ಫೋಟೋಶೂಟ್‌ಗಳು ಹೆಚ್ಚಾಗುತ್ತಿದ್ದಂತೆ ಥೀಮ್ ಫ್ಯಾಷನ್‌ವೇರ್‌ಗಳ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಶಾಲೆಗಳಲ್ಲೂ ಕೂಡ ನಾನಾ ಬಗೆಯ ಸಮಾರಂಭಗಳು ನಡೆಯುತ್ತಲೇ ಇರುತ್ತದೆ. ಅದಕ್ಕೆ ತಕ್ಕಂತೆ ಮಕ್ಕಳನ್ನು ಸಿದ್ಧಪಡಿಸುವುದೇ ಪೋಷಕರಿಗೆ ಒಂದು ದೊಡ್ಡ ಟಾಸ್ಕ್. ಇದಕ್ಕೆ ಪೂರಕ ಎಂಬಂತೆ, ಇದೀಗ ನಾನಾ ಬ್ರಾಂಡ್‌ಗಳು ಆಯಾ ವಯಸ್ಸಿಗೆ ತಕ್ಕಂತೆ ಸೀಸನ್‌ಗೆ ತಕ್ಕಂತೆ ಫ್ಯಾಷನ್‌ವೇರ್‌ಗಳನ್ನು ಬಿಡುಗಡೆಗೊಳಿಸುತ್ತಿವೆ. ಇವು ಇದೀಗ ಶಾಪ್‌ಗಳಲ್ಲಿ ಮಾತ್ರವಲ್ಲ ಅನ್‌ಲೈನ್‌ಗಳಲ್ಲೂ ಸುಲಭವಾಗಿ ದೊರೆಯುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಸೀಸನ್‌ಗೆ ತಕ್ಕಂತಿರಲಿ
ಮಕ್ಕಳ ಫ್ಯಾಷನ್ ಥೀಮ್‌ಗೆ ತಕ್ಕಂತೆ ಇದ್ದರೂ ಈ ಸೀಸನ್‌ಗೂ ಸೂಟ್ ಆಗುವಂತಿರಬೇಕು ಎಂಬುದು ನೆನಪಿರಲಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಉದಾಹರಣೆಗೆ ಔಟಿಂಗ್ ಥೀಮ್‌ನಲ್ಲಿ ಸಮ್ಮರ್ ಉಡುಗೆಗಳನ್ನು ತೊಡಿಸಬಾರದು. ಇದು ನಾಟ್ ಓಕೆ ಎನ್ನುತ್ತಾರೆ.
ಥೀಮ್ ಫ್ಯಾಷನ್‌ವೇರ್ ಟಿಪ್ಸ್
- ಮಕ್ಕಳ ಪರ್ಸನಾಲಿಟಿಗೆ ತಕ್ಕಂತಿರಲಿ.
- ಹೆವ್ವಿ ಆಕ್ಸೆಸರೀಸ್ ಮಕ್ಕಳಿಗೆ ಭಾರವಾಗದಿರಲಿ.
- ಗುಣಮಟ್ಟದ ಉಡುಪನ್ನು ಮಾತ್ರ ಕೊಳ್ಳಿ.
- ಸೀಸನ್‌ಗೆ ಸೂಟ್ ಆಗುವಂತಹ ಉಡುಪಿನ ಆಯ್ಕೆ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Kids winter Fashion | ಮಕ್ಕಳನ್ನು ಕ್ಯೂಟ್ ಆಗಿ ಬಿಂಬಿಸುವ ವಿಂಟರ್ ಫ್ಯಾಷನ್