Kids winter Fashion | ಮಕ್ಕಳನ್ನು ಕ್ಯೂಟ್‌ ಆಗಿ ಬಿಂಬಿಸುವ ವಿಂಟರ್‌ ಫ್ಯಾಷನ್‌ - Vistara News

ಫ್ಯಾಷನ್

Kids winter Fashion | ಮಕ್ಕಳನ್ನು ಕ್ಯೂಟ್‌ ಆಗಿ ಬಿಂಬಿಸುವ ವಿಂಟರ್‌ ಫ್ಯಾಷನ್‌

ಈ ಬಾರಿಯ ವಿಂಟರ್‌ ಫ್ಯಾಷನ್‌ನಲ್ಲಿ ಬೆಚ್ಚಗಿಡುವ ಕಲರ್‌ಫುಲ್‌ ಟ್ರೆಂಡಿ ಫ್ಯಾಷನ್‌ವೇರ್‌ಗಳು ಆಗಮಿಸಿದ್ದು, ಮಕ್ಕಳನ್ನು ಕ್ಯೂಟ್‌ ಆಗಿ ಬಿಂಬಿಸುವುದರೊಂದಿಗೆ ನೋಡಲು ಆಕರ್ಷಕವಾಗಿ ಕಾಣಲು ಸಾಥ್‌ ನೀಡುತ್ತಿವೆ. ಈ ವಿಂಟರ್‌ವೇರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

VISTARANEWS.COM


on

Kids winter Fashion
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈ ಬಾರಿಯ ಸೀಸನ್‌ ಫ್ಯಾಷನ್‌ನಲ್ಲಿ ಮಕ್ಕಳಿಗೆಂದೇ ವೈವಿಧ್ಯಮಯ ವಿಂಟರ್‌ವೇರ್‌ಗಳು ಬಿಡುಗಡೆಗೊಂಡಿವೆ. ಮೊದಲೇ ಕ್ಯೂಟ್‌ ಆಗಿರುವ ಮುದ್ದು ಮಕ್ಕಳಿಗೆ ಮತ್ತಷ್ಟು ಕ್ಯೂಟ್‌ ಆಗಿ ಕಾಣಿಸುವಂತಹ ನಾನಾ ಬಗೆಯ ವಿಂಟರ್‌ ಫ್ಯಾಷನ್‌ವೇರ್‌ಗಳು ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿವೆ.

Kids winter Fashion

ಟ್ರೆಂಡಿಯಾಗಿರುವ ಕಿಡ್ಸ್‌ ವುಲ್ಲನ್‌ವೇರ್‌ಗಳಿವು

ವುಲ್ಲನ್‌ವೇರ್‌ಗಳಲ್ಲಿ ಕಲರ್‌ಫುಲ್‌ ಕಾರ್ಟೂನ್‌ ಕ್ಯಾರೆಕ್ಟರ್‌ ಜಂಪ್‌ಸೂಟ್‌, ತ್ರೀ ಪೀಸ್‌ ಸ್ವೆಟರ್ಸ್, ಟರ್ಟಲ್‌ನೆಕ್‌ ಸ್ವೆಟರ್ಸ್‌, ಕಾರ್ಡಿಗಾನ್‌ ಸ್ವೆಟರ್ಸ್‌, ಹ್ಯಾಂಡ್‌ನಿಟ್‌ ಸ್ವೆಟರ್ಸ್‌ ಅಂತೆಯೇ, ನೋಡಲು ಲೆಯರ್‌ ಲುಕ್‌ ನೀಡುವ ಸಾಫ್ಟ್‌ ಸ್ವಿಂಗ್‌ ಕೋಟ್ಸ್‌, ವಿಂಟರ್‌ ಕೋಟ್ಸ್‌, ಕ್ಯೂಟ್‌ ಪರ್ಕಾಸ್‌, ಫರ್‌ ಕೋಟ್ಸ್‌, ಯೂನಿಸೆಕ್ಸ್‌ ಪಫರ್‌ ಜಾಕೆಟ್ಸ್‌, ನೈಲಾನ್‌ ಜಾಕೆಟ್ಸ್‌, ಟುಟು ವಿಂಟರ್‌ ಇಯರ್‌ ಮಫ್ಸ್‌, ಕಾಕಿ ವಿಂಟರ್‌ ಜಾಕೆಟ್ಸ್‌, ಓವರ್‌ಸೈಝ್‌ ಜಾಕೆಟ್ಸ್‌, ಕೇಪ್ಸ್‌, ಸ್ಕಾರ್ಫ್ ಸೇರಿದಂತೆ ನಾನಾ ವೈವಿಧ್ಯಮಯ ವುಲ್ಲನ್‌ ವಿಂಟರ್‌ವೇರ್‌ಗಳು ಈ ಸೀಸನ್‌ನಲ್ಲಿ ಮತ್ತಷ್ಟು ಹೊಸ ವಿನ್ಯಾಸದಲ್ಲಿ, ವೈಬ್ರೆಂಟ್‌ ಕಲರ್ಸ್‌ನಲ್ಲಿ ಬಿಡುಗಡೆಗೊಂಡಿವೆ ಎನ್ನುತ್ತಾರೆ ಡಿಸೈನರ್‌ ರಾಶಿ.

Kids winter Fashion

ಮಕ್ಕಳಿಗಿರಲಿ ಕಲರ್‌ಫುಲ್‌ ಲೇಯರ್‌ಲುಕ್‌

ಇನ್ನು ಲೇಯರ್‌ ಲುಕ್‌ ನೀಡುವ ಡೆನೀಮ್‌ ಜಾಕೆಟ್‌ಗಳು, ಟ್ರೆಂಚ್‌ ಕೋಟ್‌ಗಳು, ಲಾಂಗ್‌ ಕಾರ್ಡಿಗಾನ್‌ಗಳು ಮಕ್ಕಳಿಗೆ ಪ್ರಿಯವಾಗುವಂತಹ ಕಾರ್ಟೂನ್‌ ಕ್ಯಾರೆಕ್ಟರ್‌ ಪ್ಯಾಚ್‌ ವರ್ಕ್ ಅಥವಾ ಪ್ರಿಂಟ್‌ನಲ್ಲಿ ಬಂದಿವೆ. ಇನ್ನು ಟೀನೇಜ್‌ ಹುಡುಗ-ಹುಡುಗಿಯರಿಗೆ ಒಂದಿಷ್ಟು ಕಾಲರ್‌ ಹಾಗೂ ಮಲ್ಟಿಪಲ್‌ ಪಾಕೆಟ್ಸ್‌ ಇರುವಂತಹ ವಿನ್ಯಾಸಗಳಲ್ಲಿ ಆಗಮಿಸಿವೆ. ಇದರೊಂದಿಗೆ ಒಂದರ ಮೇಲೊಂದು ಧರಿಸುವ ಕಾನ್ಸೆಪ್ಟ್‌ ಹೊಂದಿರುವ ಲೇಯರ್‌ ಲುಕ್‌ ಉಡುಪುಗಳಲ್ಲಿ ತ್ರೀ ಪೀಸ್‌, ಫೋರ್‌ ಪೀಸ್‌ ಉಡುಪುಗಳು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Kids winter Fashion

ಹೀಗಿರಲಿ ಮಕ್ಕಳ ವಿಂಟರ್‌ ಉಡುಪುಗಳು

ಇನ್ನು ಮಕ್ಕಳ ವಿಂಟರ್‌ ಸೀಸನ್‌ನ ಉಡುಪುಗಳನ್ನು ಕೊಳ್ಳುವಾಗ ಸಾಕಷ್ಟು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ, ಮಕ್ಕಳಿಗೆ ಟ್ರೆಂಡಿ ಉಡುಪುಗಳನ್ನು ಹಾಕಿಸುವ ನೆಪದಲ್ಲಿ ತೀರಾ ದಪ್ಪನೆಯ ಹಾಗೂ ಬಿಗಿಯಾಗಿರುವುದನ್ನು ಖರೀದಿಸಬಾರದು. ಅವರ ಅಭಿರುಚಿಗೆ ತಕ್ಕಂತೆ ಆಯ್ಕೆ ಮಾಡಬೇಕು. ಆದಷ್ಟೂ ಉತ್ತಮ ಗುಣಮಟ್ಟದ್ದನ್ನು ಕೊಳ್ಳಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ ಜಾಯ್‌.

Kids winter Fashion

ಮಕ್ಕಳ ವಿಂಟರ್‌ವೇರ್‌ಗೆ ಒಂದಿಷ್ಟು ಸಲಹೆಗಳು :

  • ಆದಷ್ಟೂ ಸಾಫ್ಟ್‌ ಫ್ಯಾಬ್ರಿಕ್‌ನದ್ದನ್ನು ಚೂಸ್‌ ಮಾಡಿ.
  • ಇನ್ನರ್‌ ಲೈನಿಂಗ್‌ ಅಥವಾ ಸ್ಟಿಚ್ಚಿಂಗ್‌ ಚುಚ್ಚುವಂತಿರಬಾರದು.
  • ಲೇಯರ್‌ ಲುಕ್‌ ಉಸಿರುಗಟ್ಟಿಸುವಂತಿರಬಾರದು.
  • ಆದಷ್ಟೂ ಫ್ರೀ ಸೈಝ್‌ನದ್ದನ್ನು ಪ್ರಿಫರ್‌ ಮಾಡಬೇಕು.
  • ಕಿರಿಕಿರಿಯಾದಲ್ಲಿ ತಕ್ಷಣ ಬದಲಿಸಿ.

ಇದನ್ನೂ ಓದಿ| Winter Fashion | ಚಳಿಗಾಲಕ್ಕೆ ಬೆಚ್ಚಗಿಡುವ ಔಟ್‌ಫಿಟ್‌ ಶರ್ಟ್‌ ಹೂಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ಕ್ಯಾಶುವಲ್‌ ಹಾಗೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ. ಯಾವ್ಯಾವ ಶೈಲಿಯವು ಟ್ರೆಂಡಿಯಾಗಿವೆ? ಹೇಗೆಲ್ಲಾ ಹೆಣೆದುಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Season Hairstyle
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಟ್ರೆಡಿಷನಲ್‌ ಹೇರ್‌ಸ್ಟೈಲ್‌ (Season Hairstyle) ಲಿಸ್ಟ್‌ನಲ್ಲಿದ್ದ ಎರಡು ಜಡೆಗಳು ಇದೀಗ ವೆಸ್ಟರ್ನ್‌ ಲುಕ್‌ಗೂ ಎಂಟ್ರಿ ನೀಡಿವೆ. ಯುವತಿಯರ ವೀಕೆಂಡ್‌ ಔಟಿಂಗ್‌ ಕ್ಯಾಶುವಲ್‌ ಲುಕ್‌ನಲ್ಲಿ ಅದರಲ್ಲೂ ವೆಸ್ಟರ್ನ್‌ ವೇರ್‌ಗಳೊಂದಿಗೆ ಕಾಣಿಸಿಕೊಳ್ಳುತ್ತಿವೆ.

Season Hairstyle

ಜಡೆಯ ಮೂಲರೂಪ

“ಎರಡು ಜಡೆ ಹೇರ್‌ಸ್ಟೈಲ್‌ ನಿನ್ನೆ ಮೊನ್ನೆಯದೇನಲ್ಲ! ಹಿಂದಿನ ಕಾಲದಿಂದಲೂ ಇದೆ. ಅದರಲ್ಲೂ ನಮ್ಮಲ್ಲಿ ಹೆಣ್ಣುಮಕ್ಕಳು ಚಿಕ್ಕವರಿದ್ದಾಗ ಎರಡು ಜಡೆ ಹಾಕುವುದು ಈಗಲೂ ಇದೆ. ಇನ್ನು ಎಣ್ಣೆ ಹಚ್ಚಿ ಎರಡು ಜಡೆ ಹಾಕಿಕೊಳ್ಳುವ ಹೆಣ್ಣುಮಕ್ಕಳು ಈಗಲೂ ಗ್ರಾಮೀಣ ಪ್ರದೇಶದಲ್ಲಿ ಕಾಣ ಸಿಗುತ್ತಾರೆ. ಆ ಮಟ್ಟಿಗೆ ಈ ಎರಡು ಜಡೆ ತನ್ನ ಮೂಲತನವನ್ನು ಉಳಿಸಿಕೊಂಡಿದೆ. ಇದೀಗ ಇವಕ್ಕೆ ಹೇರ್‌ಸ್ಟೈಲಿಸ್ಟ್‌ಗಳು ಮತ್ತೆ ಮರು ಜೀವ ತುಂಬಿ ಒಂದಿಷ್ಟು ಹೊಸತನದಲ್ಲಿ ಪ್ರೆಸೆಂಟ್‌ ಮಾಡಿದ್ದಾರೆ. ಹಾಗಾಗಿ ಹೊಸ ಹೊಸ ರೂಪದಲ್ಲಿ ಎರಡು ಜಡೆಗಳು ಆಗಮಿಸಿವೆ. ನಾನಾ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಅವುಗಳಲ್ಲಿ ಇದೀಗ 3 ಬಗೆಯವು ಹೆಚ್ಚು ಪ್ರಚಲಿದಲ್ಲಿವೆ” ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌ ದಿಗಂತ್‌.

ಫ್ರೆಂಚ್‌ ಫ್ಲಾಟ್‌ನಂತಹ ಎರಡು ಜಡೆ

ತಲೆಯ ಅಂದರೆ, ಹಣೆ ಮುಂಭಾಗದಿಂದಲೇ ಎರಡು ಜಡೆ ಹೆಣೆದು, ಕೆಳಗಿನ ಭಾಗದವರೆಗೂ ಜಡೆ ಕಂಟಿನ್ಯೂ ಮಾಡುವ ಈ ಹೇರ್‌ಸೈಲ್‌ ಇದೀಗ ಟೀನೇಜ್‌ ಹುಡುಗಿಯರನ್ನು ಆವರಿಸಿಕೊಂಡಿದೆ. ಇದರಲ್ಲೆ ನಾನಾ ಪ್ರಕಾರದ ಜಡೆಗಳು ಇನ್‌ಸ್ಟಾ ಬ್ಯೂಟಿ ಬ್ಲಾಗ್‌ಗಳಿಂದ ಚಾಲ್ತಿಗೆ ಬಂದಿವೆ.

Season Hairstyle

ಫಿಶ್‌ಟೈಲ್‌ ಜಡೆ

ಮೇಲಿನಿಂದ ಹೆಣೆದ ಜಡೆಯು ಕೊನೆಯಲ್ಲಿ ಫಿಶ್‌ ಟೈಲ್‌ನಂತೆ ಲುಕ್‌ ನೀಡಲಾಗುತ್ತದೆ. ಈ ಹೇರ್‌ಸ್ಟೈಲ್‌ ಕೂಡ ಸಾಕಷ್ಟು ಚಾಲ್ತಿಯಲ್ಲಿದೆ. ಮಾಡೆಲಿಂಗ್‌ ಶೋಗಳಲ್ಲಿ ಕೆಲಕಾಲ ಈ ಹೇರ್‌ಸ್ಟೈಲ್‌ ಪ್ರಚಲಿತದಲ್ಲಿತ್ತು. ಇನ್ನು ಕೆಲವು ಸೆಲೆಬ್ರೆಟಿಗಳ ಫೋಟೋ ಶೂಟ್‌ಗಳಲ್ಲೂ ಇವನ್ನು ಕಾಣಬಹುದು.

ಉಲ್ಟಾ ಜಡೆ

ಹಣೆಯ ಮುಂಭಾಗ ಇಲ್ಲವೇ ಕಿವಿಯ ಹಿಂಭಾಗದಿಂದ ಕಂಪ್ಲೀಟ್‌ ಉಲ್ಟಾ ಶೈಲಿಯಲ್ಲಿ ಹೆಣೆಯುವ ಈ ಉಲ್ಟಾ ಎರಡು ಜಡೆ ಕೂಡ ಫ್ಯಾಷೆನಬಲ್‌ ಹುಡುಗಿಯರನ್ನು ಆವರಿಸಿದೆ. ಇವು ನೋಡಲು ಡಿಫರೆಂಟ್‌ ಲುಕ್‌ ನೀಡುತ್ತವೆ. ಔಟಿಂಗ್‌ ಹೋದಾಗ ಹಾಕಿಕೊಂಡಲ್ಲಿ, ಕೂದಲು ಅಲ್ಲಾಡುವುದಿಲ್ಲ. ಕೆದರುವುದು ಇಲ್ಲ.

Season Hairstyle

ಎರಡು ಜಡೆ ಪ್ರಿಯರಿಗೆ ಒಂದಿಷ್ಟು ಟಿಪ್ಸ್‌

  • ಔಟಿಂಗ್‌ ಹೋಗುವಾಗ ಈ ಜಡೆಗಳನ್ನು ಹೆಣೆಯುವುದು ಸೂಕ್ತ.
  • ಜಡೆ ಹೆಣೆದ ಮಾರನೇ ದಿನ ಬಿಚ್ಚಿದಲ್ಲಿ ಕೂದಲು ಗುಂಗುರಾಗುತ್ತದೆ.
  • ಆದಷ್ಟೂ ಸಾಫ್ಟ್‌ ಹೇರ್‌ಬ್ಯಾಂಡ್‌ಗಳನ್ನು ಬಳಸಿ.
  • ಹೆಣ್ಣುಮಕ್ಕಳಿಗೆ ಕಲರ್‌ಫುಲ್‌ ಬ್ಯಾಂಡ್‌ಗಳಿಂದ ಮಲ್ಟಿ ಲೇಯರ್‌ ಜಡೆ ಲುಕ್‌ ನೀಡಬಹುದು.
  • ಎಣ್ಣೆ ಹಚ್ಚಿ ಜಡೆ ಹೆಣೆಯುವುದು ನಾಟ್‌ ಓಕೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Continue Reading

ಫ್ಯಾಷನ್

Star Saree Fashion: ಪಾಸ್ಟೆಲ್‌ ಅರ್ಗಾನ್ಜಾ ಸೀರೆಯಲ್ಲಿ ಮಿಂಚಬೇಕೆ? ನಟಿ ಮೋಕ್ಷಿತಾ ಪೈ ನೀಡಿದ್ದಾರೆ 5 ಸಿಂಪಲ್‌ ಐಡಿಯಾ

ಬೇಸಿಗೆ ಸೀಸನ್‌ನಲ್ಲಿ ಟ್ರೆಂಡಿಯಾಗಿರುವ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ನೀವೂ ಕೂಡ ಪಾರು ಖ್ಯಾತಿಯ ನಟಿ ಮೋಕ್ಷಿತಾರಂತೆ ಮನಮೋಹಕವಾಗಿ ಕಾಣಬಹುದು. ಅದು ಹೇಗೆ ಅಂತಿರಾ? ಖುದ್ದು ಮೋಕ್ಷಿತಾ ಪೈ ಈ ಕುರಿತಂತೆ 5 ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ಮೋಕ್ಷಿತಾ ಟಿಪ್ಸ್‌ಗಳನ್ನು ನೀವು ಜಸ್ಟ್‌ ಫಾಲೋ ಮಾಡಿ ನೋಡಿ.

VISTARANEWS.COM


on

Star Saree Fashion
ಚಿತ್ರಗಳು: ಮೋಕ್ಷಿತಾ ಪೈ, ಕಿರುತೆರೆ ನಟಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಿರುತೆರೆಯಲ್ಲಿ ಪಾರೂ ಎಂದೇ ಖ್ಯಾತಿ ಗಳಿಸಿರುವ ನಟಿ ಮೋಕ್ಷಿತಾ ಪೈ ಈ ಸೀಸನ್‌ನಲ್ಲಿ ಮಹಿಳೆಯರ ಪ್ರೀತಿಗೆ ಪಾತ್ರವಾಗಿರುವ ಟ್ರಾನ್ಸಪರೆಂಟ್‌ ಅರ್ಗಾನ್ಜಾ ಸೀರೆಯಲ್ಲಿ (Star Saree Fashion) ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಸೀರೆ ಪ್ರಿಯರ ಲಿಸ್ಟ್‌ನಲ್ಲಿರುವ ಈ ಅರ್ಗಾನ್ಜಾ ಪಾಸ್ಟೆಲ್‌ ಸೀರೆಗಳು ಈ ಸೀಸನ್‌ನಲ್ಲಿ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ, ಎಂದರೇ ನೋಡಲು ಆಕರ್ಷಕವಾಗಿ ಕಾಣಿಸುವುದು ಮಾತ್ರವಲ್ಲ, ಜೊತೆಗೆ ಬ್ರಿಥೆಬಲ್‌ ಫ್ಯಾಬ್ರಿಕ್‌ನಲ್ಲಿ ಬಂದಿವೆ. ಹಾಗಾಗಿ ಮಾನಿನಿಯರನ್ನು, ಅದರಲ್ಲೂ ಸೀರೆ ಪ್ರಿಯರನ್ನು ಬರಸೆಳೆದಿವೆ.

Star Saree Fashion

ನಟಿ ಮೋಕ್ಷಿತಾ ಸೀರೆ ಲವ್‌

ಪಾರೂ ಸೀರಿಯಲ್‌ನಲ್ಲಿ ಕರಾರುವಕ್ಕಾಗಿ ಸೀರೆಗಳನ್ನು ಉಟ್ಟು ಕಾಣಿಸಿಕೊಳ್ಳುತ್ತಿದ್ದ, ನಟಿ ಪಾರು ಅಲಿಯಾಸ್‌ ಮೋಕ್ಷಿತಾಗೆ ಸಾಕಷ್ಟು ಮಂದಿ ಯಾವ ಸೀರೆ ಉಟ್ಟಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಹುಟ್ಟಿಕೊಂಡಿದ್ದರಂತೆ. ಅದರಲ್ಲೂ ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ಇವರ ಸೀರೆಗಳ ಡ್ರೇಪಿಂಗ್‌ ಹಾಗೂ ಅವುಗಳ ಸ್ಟೈಲಿಂಗ್‌ಗನ್ನು ಗಮನಿಸುತ್ತಿದ್ದರಂತೆ. ಆ ಮಟ್ಟಿಗೆ ರೂರಲ್‌ ಹೆಣ್ಣುಮಕ್ಕಳು ಇವರ ಸೀರೆಗಳ ಅಭಿಮಾನಿಯಾಗಿದ್ದರಂತೆ. ಹಾಗೆಂದು ಟೆಲಿವಿಷನ್‌ ಸ್ಟೈಲಿಸ್ಟ್‌ಗಳೇ ಹೇಳುತ್ತಾರೆ. ಇನ್ನು, ಮೋಕ್ಷಿತಾ ಕೂಡ ಕೇವಲ ಧಾರವಾಹಿಯಲ್ಲಿ ಮಾತ್ರವಲ್ಲ, ಸಾಕಷ್ಟು ಬಾರಿ ಸೋಷಿಯಲ್‌ ಮೀಡಿಯಾದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆಯುತ್ತಿರುತ್ತಾರೆ. ನನಗಂತೂ ಸೀರೆಗಳೆಂದರೇ ಸಖತ್‌ ಇಷ್ಟ. ಇವು ನಮ್ಮ ಸಂಸ್ಕೃತಿಯ ಧ್ಯೋತಕ ಎನ್ನುತ್ತಾರೆ ಮೋಕ್ಷಿತಾ. ಡಿಫರೆಂಟ್‌ ಸೀರೆಗಳನ್ನು ಉಡುವುದು, ವಿಭಿನ್ನವಾದ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಳ್ಳುವುದು ತುಂಬಾ ಇಷ್ಟ ಎನ್ನುತ್ತಾರೆ ಮೋಕ್ಷಿತಾ.
ಈ ಪಾಸ್ಟೆಲ್‌ ಸೀರೆ ಪ್ರಿಯರಿಗೆ ಆಕರ್ಷಕವಾಗಿ ಕಾಣಿಸಿಕೊಳ್ಳಲು ಒಂದಿಷ್ಟು ಸಿಂಪಲ್‌ ಐಡಿಯಾಗಳನ್ನು ನೀಡಿದ್ದಾರೆ.

ಪಾಸ್ಟೆಲ್‌ ಸೀರೆಗಿರಲಿ ಕಾಂಟ್ರಾಸ್ಟ್‌ ಬ್ಲೌಸ್‌

ಧರಿಸುವ ಅರ್ಗಾನ್ಜಾ ಸೀರೆ ಹಾಗೂ ಅದಕ್ಕೆ ಧರಿಸುವ ಬ್ಲೌಸ್‌ ಮ್ಯಾಚಿಂಗ್ ಕಾಂಟ್ರಾಸ್ಟ್‌ ಆಗಿದ್ದರೇ ಉತ್ತಮ. ಆಗ ಸೀರೆ ನೋಡಲು ಎದ್ದು ಕಾಣುತ್ತದೆ. ಪಾಸ್ಟೆಲ್‌ ಶೇಡ್‌ನ ಸೀರೆ ಹೈಲೈಟಾಗುತ್ತದೆ.

ಸಿಂಪಲ್‌ ಮೇಕಪ್‌ ಹಾಗೂ ಹೇರ್‌ಸ್ಟೈಲ್‌

ಅರ್ಗಾನ್ಜಾ ಸೀರೆಗೆ ಸಿಂಪಲ್‌ ಮೇಕಪ್‌ ಮಾಡಿದರೂ ಸಾಕು. ಡಾರ್ಕ್‌ ಮೇಕಪ್‌ ಸೂಟ್‌ ಆಗದು. ಹಾಗಾಗಿ ಮೇಕಪ್‌ ಹಿತಮಿತವಾಗಿರಲಿ. ಇನ್ನು ಹೇರ್‌ಸ್ಟೈಲ್‌ ಕೂಡ ಅಷ್ಟೇ, ತೀರಾ ಕಾಂಪ್ಲಿಕೇಟೆಡ್‌ ಹೇರ್‌ಸ್ಟೈಲ್‌ ಮಾಡಕೂಡದು.

Star Saree Fashion

ಜ್ಯುವೆಲರಿ ಮಿನಿಮಲ್‌ ಆಗಿರಲಿ

ಈ ಪಾಸ್ಟೆಲ್‌ ಸೀರೆ ಎದ್ದು ಕಾಣಬೇಕಾದಲ್ಲಿ ಆದಷ್ಟೂ ಕಡಿಮೆ ಜ್ಯುವೆಲರಿ ಧರಿಸುವುದು ಉತ್ತಮ. ಅದರಲ್ಲೂ ಸಿಂಪಲ್‌ ನೆಕ್‌ಪೀಸ್‌ ಹಾಗೂ ಕಡ, ಇಯರಿಂಗ್ಸ್‌ ಹಾಕಿದರೇ ಸಾಕು. ಇನ್ನು ಬ್ಲೌಸ್‌ ಹೈ ನೆಕ್‌ ಅಥವಾ ಫುಲ್‌ ನೆಕ್‌ ಇದ್ದಲ್ಲಿ, ಎಂಬ್ರಾಯ್ಡರಿ ಡಿಸೈನ್‌ ಮಾಡಿಸಿದ್ದಲ್ಲಿ ನೋಡಿಕೊಂಡು ಆಭರಣಗಳನ್ನು ಧರಿಸುವುದು ಉತ್ತಮ. ಹೆಚ್ಚು ಆಭರಣಗಳ ಅಗತ್ಯವಿರುವುದಿಲ್ಲ.

ಅರ್ಗಾನ್ಜಾ ಸೀರೆ ಪಾಸ್ಟೆಲ್‌ ಶೇಡ್‌ನದ್ದಾಗಿರಲಿ

ನೀವು ಆಯ್ಕೆ ಮಾಡುವ ಅರ್ಗಾನ್ಜಾ ಸೀರೆ ಪಾಸ್ಟೆಲ್‌ ಶೇಡ್‌ನದ್ದಾಗಿರಲಿ. ಸೀರೆಯು ಡಿಸೈನರ್‌ ಡಿಸೈನ್‌ ಹೊಂದಿದ್ದಲ್ಲಿ ಅದಕ್ಕೆ ತಕ್ಕಂತೆ ಮೇಕೋವರ್‌ ಮಾಡುವುದು ಅಗತ್ಯ. ಇನ್ನು ಪಾಸ್ಟೆಲ್‌ ಶೇಡ್‌ಗಳು ಸಮ್ಮರ್‌ನಲ್ಲಿ ಫ್ರೆಶ್‌ ಲುಕ್‌ ನೀಡುವುದರೊಂದಿಗೆ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ.

Star Saree Fashion

ಡ್ರೇಪಿಂಗ್‌ ಹೀಗಿರಲಿ

ಅರ್ಗಾನ್ಜಾ ಸೀರೆಗಳನ್ನು ಆದಷ್ಟೂ ಒಟ್ಟೊಟ್ಟಿಗೆ ಪಿನ್‌ ಮಾಡುವುದಕ್ಕಿಂತ, ಸಿಂಗಲ್‌ ಪಿನ್‌ ಮಾಡುವುದು ಉತ್ತಮ. ಯಾಕೆಂದರೇ ಅದರ ಡಿಸೈನ್‌ ಹಾಗೂ ಲುಕ್‌ ಹೈ ಲೈಟಾಗುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

Continue Reading

ಫ್ಯಾಷನ್

Summer Fashion: ಬೇಸಿಗೆಯಲ್ಲಿ ಕ್ರಾಪ್‌ ಟೀ ಶರ್ಟ್‌ ಸ್ಟೈಲಿಂಗ್‌ಗೆ 3 ಐಡಿಯಾ

ಬೇಸಿಗೆಯಲ್ಲಿ (Summer Fashion) ಟ್ರೆಂಡಿಯಾಗಿರುವ ಕ್ರಾಪ್‌ ಟೀ ಶರ್ಟ್‌ಗಳನ್ನು ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಮಾಡಬಹುದು. ಅವುಗಳಲ್ಲಿ 3 ಬಗೆಯವು ಹೆಚ್ಚು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಅವು ಯಾವ್ಯುವು? ಹೇಗೆಲ್ಲಾ ಸ್ಟೈಲಿಂಗ್‌ ಮಾಡಬಹುದು? ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Summer Fashion
ಚಿತ್ರಕೃಪೆ: ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೇಸಿಗೆಯಲ್ಲಿ (Summer Fashion) ಟ್ರೆಂಡಿಯಾಗಿರುವ ನಯಾ ಡಿಸೈನ್‌ನ ಕ್ರಾಪ್‌ ಟೀ ಶರ್ಟ್‌ಗಳನ್ನು ನಾನಾ ಬಗೆಯಲ್ಲಿ ಸ್ಟೈಲಿಂಗ್‌ ಮಾಡಬಹುದು. ಅವುಗಳಲ್ಲಿ 3 ಬಗೆಯವು ಹೆಚ್ಚು ಹುಡುಗಿಯರನ್ನು ಸವಾರಿ ಮಾಡುತ್ತಿವೆ. ಅದರಲ್ಲೂ ಟೀನೇಜ್‌ ಹುಡುಗಿಯರು ಈ ಕ್ರಾಪ್‌ ಟೀ ಶರ್ಟ್‌ಗಳನ್ನು ಸಮ್ಮರ್‌ ಸೀಸನ್‌ನ ಡ್ರೆಸ್‌ಕೋಡ್‌ಗಳಲ್ಲಿ ಸೇರಿಸಿಕೊಂಡಿದ್ದಾರೆ. ತಮ್ಮ ಸ್ಟೈಲಿಂಗ್‌ನಲ್ಲಿ ಇವುಗಳಿಗೆ ಡಿಫರೆಂಟ್‌ ಲುಕ್‌ ನೀಡಿದ್ದಾರೆ. ಹಾಗಾಗಿ ಇವು ಸಖತ್‌ ಪಾಪುಲರ್‌ ಆಗಿವೆ.

Summer Fashion

ಪಾಪುಲರ್‌ ಕ್ರಾಪ್‌ ಟೀ ಶರ್ಟ್ಸ್‌

ಕ್ರಾಪ್‌ ಟೀ ಶರ್ಟ್ಸ್‌ ಮೊದಲೆಲ್ಲಾ ಈ ಜನರೇಷನ್‌ನ ಹಾಗೂ ಟೀನೇಜ್‌ ಹುಡುಗಿಯರಿಗೆ ಮಾತ್ರ ಸೀಮಿತವಾಗಿದ್ದವು. ಆದರೆ, ಇದೀಗ ಉದ್ಯೋಗಸ್ಥ ಮಹಿಳೆಯರ ವೀಕೆಂಡ್‌ ಹಾಗೂ ಔಟಿಂಗ್‌ ಡ್ರೆಸ್‌ಕೋಡ್‌ನಲ್ಲೂ ಸೇರಿಕೊಂಡಿವೆ. ನೋಡಲು ಮಾಡರ್ನ್‌ ಲುಕ್‌ ನೀಡುವ ಇವು ಈ ಸೀಸನ್‌ಗೆ ಸಾಥ್‌ ನೀಡುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು .

Summer Fashion
  • ಕ್ರಾಪ್‌ ಟೀ ಶರ್ಟ್ಸ್‌ ಜೊತೆಗೆ ಜೀನ್ಸ್‌ ಪ್ಯಾಂಟ್‌
  • ಇದು ತೀರಾ ಕಾಮನ್‌ ಆಗಿರುವ ಸ್ಟೈಲಿಂಗ್‌ ಕಾನ್ಸೆಪ್ಟ್.‌ ಬಹುತೇಕ ಹುಡುಗಿಯರು ಜೀನ್ಸ್‌ ಪ್ಯಾಂಟ್‌ ಜೊತೆಗೆ ಕ್ರಾಪ್‌ ಟೀ ಶರ್ಟ್ಸ್‌ ಪ್ರಿಫೆರ್‌ ಮಾಡುತ್ತಾರೆ. ಇದು ಅತಿ ಸರಳ ಹಾಗೂ ಸುಲಭವಾಗಿ ಕಾಂಬೀನೇಷನ್‌ ಮಾಡಬಹುದಾದ ಸ್ಟೈಲಿಂಗ್‌. ಒಂದು ಬ್ಲ್ಯೂ ಅಥವಾ ಯಾವುದೇ ಕಲರ್‌ನ ಜೀನ್ಸ್‌ ಪ್ಯಾಂಟ್‌ಗೆ ಯಾವ ಶೇಡ್‌ನದ್ದಾದರೂ ಸರಿಯೇ, ಕ್ರಾಪ್‌ ಟೀ ಶರ್ಟ್‌ ಮ್ಯಾಚ್‌ ಮಾಡಿದರಾಯಿತು. ನೋಡಲು ಸಿಂಪಲ್‌ ಲುಕ್‌ನೊಂದಿಗೆ ಮಾಡರ್ನ್‌ ಟಚ್‌ ನೀಡುತ್ತದೆ. ಟೋರ್ನ್‌ ಜೀನ್ಸ್‌ ಪ್ಯಾಂಟ್‌ ಜೊತೆ ಅಲ್ಟ್ರಾ ಮಾಡರ್ನ್‌ ಲುಕ್‌ ನೀಡುತ್ತದೆ. ಸಿಕ್ಸ್‌ ಪಾಕೆಟ್‌ ಕಾರ್ಗೋ ಪ್ಯಾಂಟ್‌ ಅಥವಾ ಪೇಂಟರ್‌ ಪ್ಯಾಂಟ್‌ ಕೂಡ ಈ ಕ್ರಾಪ್‌ ಟೀ ಶರ್ಟ್‌ ಜೊತೆ ಧರಿಸಬಹುದು.
  • ಕ್ರಾಪ್‌ ಟೀ ಶರ್ಟ್‌ ಜೊತೆ ಸ್ಕರ್ಟ್‌
  • ಮಿನಿ ಶಾರ್ಟ್ಸ್‌ ಆದರೂ ಓಕೆ, ಮಿಡಿಯಂತಹ ಪೆನ್ಸಿಲ್‌ ಸ್ಕರ್ಟ್‌ ಆದರೂ ಓಕೆ. ಕ್ರಾಪ್‌ ಟೀ ಶರ್ಟ್‌ ಧರಿಸಬಹುದು. ಸಾದಾ ಅಥವಾ ಮಾನೋಕ್ರೋಮ್‌ ಶೇಡ್‌ನ ಟೀ ಶರ್ಟ್ಗಿಂತ ಪ್ರಿಂಟೆಡ್‌ ಅದರಲ್ಲೂ ಟೆಕ್ಸ್ಟ್‌ ಇರುವಂತಹ ಕ್ರಾಪ್‌ ಟೀ ಶರ್ಟ್‌ಗಳು ಇವಕ್ಕೆ ಸೂಕ್ತ. ಅದರಲ್ಲೂ ಪಾಸ್ಟೆಲ್‌ ಶೇಡ್‌ನ ಕ್ರಾಪ್‌ ಟೀ ಶರ್ಟ್‌ಗಳು ಈ ಸೀಸನ್‌ನಲ್ಲೂ ಆಕರ್ಷಕವಾಗಿ ಕಾಣುವುದರೊಂದಿಗೆ ಮನಸ್ಸಿಗೆ ಉಲ್ಲಾಸ ನೀಡುತ್ತವೆ.
  • ಶಾರ್ಟ್ಸ್‌ ಜೊತೆ ಕ್ರಾಪ್‌ ಟೀ ಶರ್ಟ್‌
  • ಟೋರ್ನ್‌ ಜೀನ್ಸ್‌ ಶಾರ್ಟ್‌ ಜೊತೆ ಬಗೆಬಗೆಯ ಕ್ರಾಪ್‌ ಟೀ ಶರ್ಟ್‌ ಧರಿಸುವುದು ಜೆನ್‌ ಜಿ ಹುಡುಗಿಯರ ಕ್ರೇಝಿ ಫ್ಯಾಷನ್‌ ಲಿಸ್ಟ್‌ನಲ್ಲಿದೆ. ಇದು ಕಾಲನ್ನು ಎಕ್ಸ್ಪೋಸ್‌ ಮಾಡುತ್ತದೆ. ಬೇಸಿಗೆಗೆ ಬಿಂದಾಸ್‌ ಲುಕ್‌ ನೀಡುತ್ತದೆ. ಇದರೊಂದಿಗೆ ಕೆಲವು ಕಾಟನ್‌ ಶಾರ್ಟ್ಸ್‌ ಕೂಡ ಟ್ರೆಂಡ್‌ನಲ್ಲಿದೆ. ಚಿಕ್ಕ ಹೆಣ್ಣು ಮಕ್ಕಳು ಇವನ್ನು ಧರಿಸುವುದು ಸಾಮಾನ್ಯವಾಗಿದೆ. ಈ ಸ್ಟೈಲಿಂಗ್‌ ಕೂಡ ಈ ಸೀಸನ್‌ನ ಟ್ರೆಂಡ್‌ನಲ್ಲಿದೆ.
Summer Fashion

ಕ್ರಾಪ್‌ ಟೀ ಶರ್ಟ್‌ ಲುಕ್‌ ಹೀಗಿರಲಿ

  • ಸಿಂಪಲ್‌ ಹೇರ್‌ಸ್ಟೈಲ್‌ ನಿಮ್ಮದಾಗಲಿ.
  • ಆಕ್ಸೆಸರೀಸ್‌ ಮಿನಿಮಲ್‌ ಆಗಿರಲಿ.
  • ಹಾಫ್‌ ಶೂ ಇವಕ್ಕೆ ಮ್ಯಾಚ್‌ ಆಗುತ್ತವೆ.
  • ಮೇಕಪ್‌ ಹೆವ್ವಿಯಾಗದಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿ

Continue Reading

ಫ್ಯಾಷನ್

Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿಯ ಇಸ್ರೋ ರೂಪಾ ವ್ಯಾಖ್ಯಾನ ಹೀಗಿದೆ!

ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಇಸ್ರೋ ರೂಪಾ ಮಳಲಿ ಯಾರಿಗೆ ಗೊತ್ತಿಲ್ಲ! ಅವರ ಸಾಧನೆ ಎಲ್ಲರಿಗೂ ಗೊತ್ತಿದೆ. ಆದರೆ, ಅವರ ಸಿಂಪಲ್‌ ಕಾಟನ್‌ ಸೀರೆ ಫ್ಯಾಷನ್‌ (Cotton Saree Fashion) ಸ್ಟೇಟ್‌ಮೆಂಟ್‌ ಬಗ್ಗೆ ಗೊತ್ತೇ! ಈ ಕುರಿತಂತೆ ಖುದ್ದು ಅವರೇ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

VISTARANEWS.COM


on

Cotton Saree Fashion Roopa Malali, Chandrayaan - 3 ISRO Deputy Project Director
ಚಿತ್ರಗಳು : ರೂಪ ಮಳಲಿ, ಚಂದ್ರಯಾನ - 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌
Koo

ಸಂದರ್ಶನ : ಶೀಲಾ ಸಿ. ಶೆಟ್ಟಿ
ಚಂದ್ರಯಾನ – 3 ಇಸ್ರೋ ಡೆಪ್ಯೂಟಿ ಪ್ರಾಜೆಕ್ಟ್‌ ಡೈರೆಕ್ಟರ್‌ ಇಸ್ರೋ ರೂಪ ಮಳಲಿ ಯಾರಿಗೆ ಗೊತ್ತಿಲ್ಲ! ಯಶಸ್ವಿ ಚಂದ್ರಯಾನ ಮೂರರ ನಂತರ ಸಾಕಷ್ಟು ಗುರುತಿಸಿಕೊಂಡವರು. ಎಲ್ಲದಕ್ಕಿಂತ ಹೆಚ್ಚಾಗಿ ಅವರು ನಮ್ಮ ಕನ್ನಡತಿ. ಅವರ ಸಾಧನೆ ಬಗ್ಗೆ ಅವರ ಜೀವನಗಾಥೆ ಕುರಿತಂತೆ ಸಾಕಷ್ಟು ಕಡೆ ಸುದ್ದಿಯಾಗಿದೆ. ಅವರ ಕಾರ್ಯವೈಖರಿ ಕುರಿತಂತೆಯೂ ಎಲ್ಲೆಡೆ ಪ್ರಶಂಸೆಯ ಸುರಿಮಳೆಯಾಗಿರುವುದು, ನಾನಾ ಪ್ರಶಸ್ತಿ ಪುರಸ್ಕಾರ ದೊರೆತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಮಧ್ಯೆ ಉದ್ಯಾನನಗರಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ವಿಸ್ತಾರ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ತಮ್ಮ ಸಿಂಪಲ್‌ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್ಸ್‌ ಬಗ್ಗೆ ಸಂದರ್ಶನ ನೀಡಿದರು. ಈ ಕುರಿತ (Cotton Saree Fashion) ಸಂಕ್ಷಿಪ್ತ ಸಾರಂಶ ಇಲ್ಲಿದೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌: ಸದಾ ತಮ್ಮ ಪ್ರಾಜೆಕ್ಟ್‌ಗಳಲ್ಲಿ ಬ್ಯುಝಿಯಾಗಿರುವ ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ಜಾಗವಿದೆಯೇ!

ರೂಪಾ ಮಳಲಿ : ಖಂಡಿತಾ ಇಲ್ಲ! ನಾನೆಂದು ಫ್ಯಾಷನ್‌ ಹಾಗೂ ಸ್ಟೈಲ್‌ ಎಂದೆಲ್ಲಾ ತಲೆಕೆಡಿಸಿಕೊಂಡವಳಲ್ಲ! ನನ್ನ ಗುರಿ ನನ್ನ ಸಾಧನೆ ಬಗ್ಗೆ ಸದಾ ಯೋಚಿಸುವವಳು. ಇನ್ನು ಇವೆಲ್ಲದರ ಮಧ್ಯೆ ನನ್ನ ಜೀವನಶೈಲಿಗೆ ತಕ್ಕಂತೆ ಅಗತ್ಯವಿರುವುದನ್ನು ಫಾಲೋ ಮಾಡುತ್ತೇನಷ್ಟೇ!

ವಿಸ್ತಾರ ನ್ಯೂಸ್‌: ನಿಮಗೆ ಕಾಟನ್ ಸೀರೆಗಳೆಂದರೇ ಇಷ್ಟವಂತೆ ?

ರೂಪಾ ಮಳಲಿ : ಹೌದು. ನನಗೆ ಕಾಟನ್‌ ಸೀರೆಗಳೆಂದರೇ ತುಂಬಾ ಇಷ್ಟ. ನಾನು ಹೆಚ್ಚಾಗಿ ಕಾಟನ್ ಸೀರೆಗಳನ್ನೇ ಉಡುತ್ತೇನೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌ : ಹಾಗಾದಲ್ಲಿ, ನೀವು ಸೀರೆ ಪ್ರೇಮಿಯಾ ?

ರೂಪಾ ಮಳಲಿ: ಪ್ರತಿ ಮಹಿಳೆಗೂ ಸೀರೆ ಪ್ರೇಮ ಇದ್ದೇ ಇರುತ್ತದೆ. ಅದರಲ್ಲೂ ನನಗೆ ಸಿಂಪಲ್‌ ಕಾಟನ್‌ ಸೀರೆಗಳೆಂದರೇ ಮೊದಲಿನಿಂದಲೂ ಪ್ರೀತಿ. ಇದಕ್ಕೆ ಕಾರಣವೂ ಇದೆ. ಅವು ಲೈಟ್‌ವೈಟ್‌ ಆಗಿರುತ್ತವೆ. ನೋಡಲು ಆಕರ್ಷಕವಾಗಿ ಕಾಣುತ್ತವೆ. ಇನ್ನು ಉಟ್ಟಾಗ ಎಲಿಗೆಂಟ್‌ ಲುಕ್‌ ನೀಡುತ್ತವೆ.

ವಿಸ್ತಾರ ನ್ಯೂಸ್‌: ನಿಮ್ಮ ಬಳಿ ಸೀರೆ ಕಲೆಕ್ಷನ್‌ ಇದೆಯಾ?

ರೂಪಾ ಮಳಲಿ : ಒಂದಿಷ್ಟು ಇದೆ. ಹಾಗೆಂದು ರಾಶಿ ರಾಶಿ ಸೀರೆಗಳ ಕಲೆಕ್ಷನ್‌ ಇಲ್ಲ! ನನಗೆ ಅಗತ್ಯವಿರುವಷ್ಟು ಸೀರೆಗಳಿವೆ. ರೇಷ್ಮೆ ಸೀರೆಗಳಿಗಿಂತ ಹೆಚ್ಚಾಗಿ ಕಾಟನ್‌ ಸೀರೆಗಳು ನನ್ನ ಬಳಿ ಇವೆ.

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌ : ನಿಮಗೆ ಡ್ರೆಸ್‌ಕೋಡ್‌ ಇದೆಯಾ? ನಿಮ್ಮ ವರ್ಕಿಂಗ್‌ ನೇಚರ್‌ನಲ್ಲಿ ನೀವು ಪ್ರಿಫರ್‌ ಮಾಡುವ ಉಡುಪು ಯಾವುದು?

ರೂಪಾ ಮಳಲಿ : ಡ್ರೆಸ್‌ಕೋಡ್‌ ಇಲ್ಲ! ನಮ್ಮ ವರ್ಕ್‌ ನೇಚರ್‌ನಲ್ಲಿ ಇದೇ ಉಡುಪು ಧರಿಸಬೇಕೆಂಬ ನಿಯಮವೇನೂ ಇಲ್ಲ! ಆಯಾ ವ್ಯಕ್ತಿಗೆ ಅನುಗುಣವಾಗಿ ಅವರವರು ತಂತಮ್ಮ ಡ್ರೆಸ್‌ಕೋಡ್‌ ನಿರ್ಧರಿಸುತ್ತಾರೆ. ಹಾಗೆಯೇ ನಾನು ಕೂಡ. ಸಿಂಪಲ್‌, ಎಲಿಗೆಂಟ್‌ ಹಾಗೂ ಡಿಸೆಂಟ್‌ ಉಡುಪನ್ನು ಧರಿಸಲು ಇಷ್ಟಪಡುತ್ತೇನೆ.

ವಿಸ್ತಾರ ನ್ಯೂಸ್‌: ನಿಮ್ಮ ಯೂನಿಕ್‌ ಸ್ಟೈಲ್‌ ಸ್ಟೇಟ್ಮೆಂಟ್‌ ಬಗ್ಗೆ ಹೇಳಿ ?

ರೂಪ ಮಳಲಿ : ನನ್ನದು ಯೂನಿಕ್‌ ಎನ್ನುವುದಕ್ಕಿಂತ ಸದಾ ಸಿಂಪಲ್‌ ಕಾಟನ್‌ ಸೀರೆ, ಅದಕ್ಕೊಂದು ಪರ್ಲ್‌ ನೆಕ್‌ಪೀಸ್‌, ಸ್ಟಡ್ಸ್‌ ಧರಿಸುತ್ತೇನೆ. ಇದು ನನ್ನ ಆಲ್‌ ಟೈಮ್‌ ಯೂನಿಕ್‌ ಸ್ಟೈಲ್‌ ಸ್ಟೇಟ್ಮೆಂಟ್ಸ್.‌

Roopa Malali, Chandrayaan - 3 ISRO Deputy Project Director

ವಿಸ್ತಾರ ನ್ಯೂಸ್‌: ಉದ್ಯೋಗಸ್ಥ ಮಹಿಳೆಯರಿಗೆ ನೀವು ನೀಡುವ ಟಿಪ್ಸ್‌ ಏನು ?

ರೂಪಾ ಮಳಲಿ : ನಿಮ್ಮ ವ್ಯಕ್ತಿತ್ವಕ್ಕೆ ತಕ್ಕಂತೆ ನಿಮ್ಮ ಲೈಫ್‌ಸ್ಟೈಲ್‌ ರೂಪಿಸಿಕೊಳ್ಳಿ. ಗುರಿಯೊಂದಿಗೆ ನಿಮ್ಮ ಚಾಯ್ಸ್ಗೂ ಅವಕಾಶ ನೀಡಿ. ಆತ್ಮವಿಶ್ವಾಸದಿಂದ ಮುನ್ನೆಡೆಯಿರಿ. ಇನ್ನು, ಫ್ಯಾಷನ್‌ ವಿಷಯಕ್ಕೆ ಬಂದಲ್ಲಿ, ನಿಮ್ಮ ಮನಸ್ಸಿಗೆ ಮುದ ನೀಡುವ ಉಡುಗೆಗಳನ್ನು ಧರಿಸಿ. ಇಡೀ ದಿನ ಉಲ್ಲಾಸಮಯವಾಗಿರುತ್ತದೆ.

(ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Flower Crown Trend: ಬಣ್ಣಬಣ್ಣದ ಫಂಕಿ ಫ್ಲವರ್‌ ಕ್ರೌನ್‌ಗೆ ಯುವತಿಯರು ಫಿದಾ

Continue Reading
Advertisement
MLA Srinivasa Mane Election campaign for Haveri Gadag Lok Sabha constituency Congress candidate Anandaswamy Gaddadevaramath
ಹಾವೇರಿ12 mins ago

Lok Sabha Election: ಕಾಂಗ್ರೆಸ್‌ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಶಾಸಕ ಶ್ರೀನಿವಾಸ ಮಾನೆ ಪ್ರಚಾರ

Toyota Kirloskar Motor launched the Tgloss
ವಾಣಿಜ್ಯ13 mins ago

Toyota Kirloskar Motor: ಕಾರ್‌ ಕೇರ್‌ಗೆ ʼಟಿಗ್ಲೊಸ್ʼ ಆರಂಭಿಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್

Lok Sabha Election-2024
Lok Sabha Election 202416 mins ago

Lok Sabha Election: ಒಂದೇ ಒಂದು ಕುಟುಂಬಕ್ಕಾಗಿ ಪ್ರತ್ಯೇಕ ಮತಗಟ್ಟೆ! ಹೀಗೂ ಉಂಟು!

Arvind Kejriwal
ದೇಶ18 mins ago

ಸಿಎಂ ಸ್ಥಾನ ಔಪಚಾರಿಕ ಅಲ್ಲ, 24 ಗಂಟೆ ಸಿಗಬೇಕು; ರಾಜೀನಾಮೆ ನೀಡದ ಕೇಜ್ರಿವಾಲ್‌ಗೆ ಕೋರ್ಟ್‌ ಚಾಟಿ

LSG vs MI
ಕ್ರೀಡೆ20 mins ago

LSG vs MI: ಲಕ್ನೋ ಸವಾಲಿಗೆ ಮುಂಬೈ ಸಜ್ಜು; ಸೋತರೆ ಪಾಂಡ್ಯ ಪಡೆಯ ಪ್ಲೇ ಆಫ್​ ಹಾದಿ ಕಠಿಣ

Tumkur News 10 huts burnt down in Chimpuganahalli Minister Dr G Parameshwar visited the place
ತುಮಕೂರು21 mins ago

Tumkur News: ಚಿಂಪುಗಾನಹಳ್ಳಿಯಲ್ಲಿ 10 ಗುಡಿಸಲು ಭಸ್ಮ; ಸ್ಥಳಕ್ಕೆ ಪರಮೇಶ್ವರ್‌ ಭೇಟಿ

PM Narendra Modi met four special people in Sirsi visit
Lok Sabha Election 202422 mins ago

PM Narendra Modi: ಶಿರಸಿಗೆ ಬಂದಾಗ ಮೋದಿ ಭೇಟಿ ಮಾಡಿದ ನಾಲ್ವರು ವಿಶೇಷ ವ್ಯಕ್ತಿಗಳಿವರು! ಏನಿವರ ಸಾಧನೆ?

Tears Of Joy
ಆರೋಗ್ಯ34 mins ago

Tears Of Joy: ಕಣ್ಣೀರು ಸುರಿಸುವುದರಿಂದಲೂ ಲಾಭವಿದೆ!

Murugha Seer
ಕರ್ನಾಟಕ44 mins ago

Murugha Seer: ಸುಪ್ರೀಂ ಆದೇಶದಂತೆ ಕೋರ್ಟ್‌ಗೆ ಶರಣಾದ ಮುರುಘಾ ಶ್ರೀ; ಮತ್ತೆ 1 ತಿಂಗಳು ಜೈಲು

Season Hairstyle
ಫ್ಯಾಷನ್51 mins ago

Season Hairstyle: ವೆಸ್ಟರ್ನ್‌ ಲುಕ್‌ಗೆ ಎಂಟ್ರಿ ಕೊಟ್ಟ ಟ್ರೆಡಿಷನಲ್‌ ಲುಕ್‌ನ ಎರಡು ಜಡೆಯ 3 ರೂಪ ಹೇಗಿದೆ ನೋಡಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

PM Narendra modi in Bagalakote and Attack on Congress
Lok Sabha Election 20246 hours ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20247 hours ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ14 hours ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Congress fears defeat over EVMs Congress will not win a single seat in Karnataka says PM Narendra Modi
Lok Sabha Election 20241 day ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

PM Narendra Modi in Sirsi
Lok Sabha Election 20241 day ago

PM Narendra Modi: ಕಾಂಗ್ರೆಸ್ ರಾಮ ವಿರೋಧಿ; ಮನೆಗೆ ಹೋಗಿ ಕರೆದರೂ ಮಂದಿರ ಉದ್ಘಾಟನೆಗೆ ಬರಲಿಲ್ಲ: ಮೋದಿ ಟೀಕೆ

If Congress comes to power all your assets will belong to Government says PM Narendra Modi
Lok Sabha Election 20241 day ago

Narendra Modi: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀವು ಕಷ್ಟಪಟ್ಟು ಸಂಪಾದಿಸಿದ ಆಸ್ತಿಯೆಲ್ಲ ಅನ್ಯರ ಪಾಲು: ಮೋದಿ ಎಚ್ಚರಿಕೆ

Congress ties with Aurangzeb supporters and Girls killed under his rule says Narendra Modi
Lok Sabha Election 20241 day ago

Narendra Modi: ಔರಂಗಜೇಬ್ ಬೆಂಬಲಿಗರ ಜತೆ ಕಾಂಗ್ರೆಸ್ ದೋಸ್ತಿ; ಇವರ ಆಡಳಿತದಲ್ಲಿ ಹೆಣ್ಣು ಮಕ್ಕಳ ಹತ್ಯೆ: ಮೋದಿ ವಾಗ್ದಾಳಿ

Modi in Karnataka stay in Belagavi tomorrow and Huge gatherings at five places
Latest1 day ago

Narendra Modi Live : ಪ್ರಧಾನಿ ಮೋದಿಯ ಬೆಳಗಾವಿ ಪ್ರಚಾರ ಸಭೆಯ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ…

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ದಿನದ ಮಟ್ಟಿಗೆ ಖರ್ಚು ಹೆಚ್ಚು

Lok sabha election 2024
Lok Sabha Election 20242 days ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

ಟ್ರೆಂಡಿಂಗ್‌