Site icon Vistara News

Kids Styling Tips: ಚಿಣ್ಣರ ಸ್ಟೈಲಿಂಗ್‌ಗೆ ಪೋಷಕರು ಪಾಲಿಸಬೇಕಾದ 7 ಸೂತ್ರಗಳು

Kids Styling Tips

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಿಣ್ಣರ ಉಡುಪನ್ನು ಖರೀದಿಸುವುದು ಮಾತ್ರವಲ್ಲ, ಅದನ್ನು ಮಕ್ಕಳಿಗೆ ಇಷ್ಟವಾಗುವಂತೆ ಸ್ಟೈಲಿಂಗ್‌ (Kids Styling Tips) ಮಾಡಿದಾಗ ಮಕ್ಕಳು ನೋಡಲು ಆಕರ್ಷಕವಾಗಿ ಸಾಧ್ಯವಾಗುತ್ತದೆ. ಈ ಕುರಿತಂತೆ ಕಿಡ್ಸ್ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ. “ಪೋಷಕರು ತಮ್ಮ ಮುದ್ದು ಮಕ್ಕಳನ್ನು ಸಿಂಗರಿಸಲು ಸದಾ ಇಷ್ಟಪಡುತ್ತಾರೆ. ಮಕ್ಕಳ ಮನಸ್ಥಿತಿಯನ್ನು ಮನಗಂಡು ಅವರ ಆಯ್ಕೆ ಹಾಗೂ ಅಭಿರುಚಿ ಬಗ್ಗೆ ತಿಳಿದುಕೊಂಡು ಡ್ರೆಸ್ಸ್‌ ಮಾಡುವುದು ಅಗತ್ಯ ಎನ್ನುತ್ತಾರೆ” ಸ್ಟೈಲಿಸ್ಟ್‌ಗಳು.

ಮಕ್ಕಳಿಗೆ ಇಷ್ಟವಾಗುವಂತೆ ತಿಳಿಸಿ

ನೀವು ಆಯ್ಕೆ ಮಾಡಿದ ಬಟ್ಟೆ ಸುಂದರವಾಗಿದ್ದರೆ ಮಗು ಧರಿಸುವ ಮುನ್ನ ಮಗುವಿಗೆ ಆ ಬಗ್ಗೆ ಆಸಕ್ತಿ ಬರುವಂತೆ ವರ್ಣಿಸಿ ಹೇಳಿ. ಎಷ್ಟೇ ತಿಳಿ ಹೇಳಿದರೂ ಮಗು ಯಾವುದಾದರೂ ಉಡುಪು ಧರಿಸಲು ನಿರಾಕರಿಸಿತೆಂದರೆ ಒತ್ತಾಯ ಬೇಡ. ಇದರಿಂದ ಮಕ್ಕಳಿಗೆ ಮಾನಸಿಕ ಕಿರಿಕಿರಿ ಉಂಟಾಗಬಹುದು.

ಮಕ್ಕಳಿಗೆ ಕಲಿಸಿಕೊಡಿ

ಹೆಚ್ಚಾಗಿ ಮಕ್ಕಳಿಗೆ ಅವರಾಗಿಯೇ ಡ್ರೆಸ್ಸ್‌ ಮಾಡಿಕೊಳ್ಳಲು ಬಿಟ್ಟುಬಿಡಿ. ತಪ್ಪಾದಲ್ಲಿ ತಿಳಿ ಹೇಳಿ, ತಿದ್ದಿ. ಇದರಿಂದ ಅವರು ಡ್ರೆಸ್ಸಿಂಗ್‌ ವಿಷಯದಲ್ಲಿ ಪರಾವಲಂಬಿಯಾಗುವುದನ್ನೂ ತಪ್ಪಿಸಬಹುದು.

ಉಡುಪುಗಳು ಸಾಫ್ಟಾಗಿರಲಿ

ದೇಹಕ್ಕೆ ಚುಚ್ಚುವ, ಕಿರಿಕಿರಿಯುಂಟಾಗುವ ಹಾಗೂ ಅಂಟುವ ಉಡುಪುಗಳು ಮಕ್ಕಳಿಗೆ ಖಂಡಿತ ಬೇಡ. ಇದರಿಂದ ನೋವು ಹಾಗೂ ಅಲರ್ಜಿ ಉಂಟಾಗಬಹುದು. ತೊಡಿಸುವ ಬಟ್ಟೆಯ ಬಣ್ಣ ಅವರಿಗೆ ಒಪ್ಪುವಂತಿರಲಿ. ಆಗ ಮಕ್ಕಳ ಸೌಂದರ್ಯ ಇಮ್ಮಡಿಯಾಗುವುದು.

ಸೀಸನ್‌ಗೆ ತಕ್ಕಂತೆ ಆಯ್ಕೆ ಇರಲಿ

ಮಕ್ಕಳ ಡ್ರೆಸ್ಸ್‌ನ ಆಯ್ಕೆಯಲ್ಲಿ ಬದಲಾವಣೆ ಇರಲಿ. ಆ ಆ ಕಾಲಕ್ಕೆ ತಕ್ಕಂತೆ ವಿನ್ಯಾಸ ಬದಲಾಗುತ್ತ ಇರಬೇಕು. ಒಂದೇ ತರಹದ ಡ್ರೆಸ್ಸ್‌ ಮಕ್ಕಳಿಗೆ ಇಷ್ಟವಾಗಲಾರದು. ಬಣ್ಣ, ಡಿಸೈನ್‌ಗಳಲ್ಲಿ ವೈವಿಧ್ಯತೆಯಿರಲಿ.

ಆಕ್ಸೆಸರೀಸ್‌ ಸಿಂಪಲ್‌ ಆಗಿರಲಿ

ಡ್ರೆಸ್ಸ್‌ಗೆ ಹೊಂದಿಕೆಯಾಗುವಂತಹ ಫ್ಯಾನ್ಸಿ ಆಭರಣಗಳನ್ನು ತೊಡಿಸುವುದು ಸೂಕ್ತ. ಚುಚ್ಚದ ಸರ, ಬಳೆ, ಹೇರ್‌ಕ್ಲಿಫ್ಸ್‌, ಚಪ್ಪಲಿಗಳ ಆಯ್ಕೆ ಮಾಡಿ. ವಿವಿಧ ವಿನ್ಯಾಸವಿದ್ದು, ಹೊಂದಿಕೆಯಾಗುವ ಬಣ್ಣದ್ದಿರಲಿ.

ಲೂಸಾದ ಉಡುಪಿನ ಆಯ್ಕೆ ಬೇಡ

ಮಕ್ಕಳು ಮುಂದೆ ಬೆಳೆಯುತ್ತಾರೆ ಎಂಬ ಉದ್ದೇಶದಿಂದ ಅವರ ಗಾತ್ರಕ್ಕಿಂತ ಮಿಗಿಲಾದ ಬಟ್ಟೆ ಖರೀದಿಸುವುದು ಬೇಡ. ಹೀಗಾದಲ್ಲಿ ಡ್ರೆಸ್ಸ್‌ ಎಷ್ಟೇ ಅಂದವಿದ್ದರೂ ಮಗುವಿನ ಅಂದ ಕುಗ್ಗಿಸಿಬಿಡುವುದಲ್ಲದೇ ನೋಡುಗರಿಗೂ ಅಸಹ್ಯ ಎನಿಸುವುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Sequence Blouse Fashion: ಸೆಲೆಬ್ರೆಟಿ ಲುಕ್‌ಗಾಗಿ ಬೇಡಿಕೆ ಹೆಚ್ಚಿಸಿಕೊಂಡ ಮಿನುಗುವ ಸಿಕ್ವಿನ್ಸ್ ಬ್ಲೌಸ್‌

Exit mobile version