Site icon Vistara News

Kids Sunglasses Fashion: ಚಿಣ್ಣರ ಸ್ಟೈಲಿಂಗ್‌ಗೂ ಬಂತು ಕಲರ್‌ಫುಲ್‌ ಫಂಕಿ ಸನ್‌ ಗ್ಲಾಸ್‌

Kids Sunglass Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಿಣ್ಣರ ಔಟಿಂಗ್‌ಗೆ ಇದೀಗ ಫಂಕಿ ಸನ್‌ಗ್ಲಾಸ್‌ಗಳು (Kids Sunglasses Fashion) ಮಾರುಕಟ್ಟೆಗೆ ಎಂಟ್ರಿ ನೀಡಿವೆ. ಧರಿಸಿದಾಗ ನೋಡಲು ಮುದ್ದು ಮುದ್ದಾಗಿ ಕಾಣುವ ಈ ಸನ್‌ಗ್ಲಾಸ್‌ಗಳು ಲೆಕ್ಕವಿಲ್ಲದಷ್ಟು ಕಲರ್‌ಫುಲ್‌ ಫ್ರೇಮ್‌ ಹಾಗೂ ಆಕಾರಗಳಲ್ಲಿ ಬಂದಿವೆ. “ಈ ಮೊದಲು ದೊಡ್ಡವರಿಗೆ ಮಾತ್ರ ಸೀಮಿತವಾಗಿದ್ದ, ಈ ಕಲರ್‌ಫುಲ್‌ ಫ್ರೇಮ್‌ ಇರುವಂತಹ ಮಿನಿ ಸನ್‌ಗ್ಲಾಸ್‌ಗಳು, ಪುಟ್ಟ ಮಕ್ಕಳಿಗೂ ಮುದ್ದಾದ ಚಿಣ್ಣರಿಗೂ ಬಗೆಬಗೆಯ ವಿನ್ಯಾಸದಲ್ಲಿ ಬಂದಿವೆ. ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತಿರುವ ಇವು ಆಯಾ ವಿನ್ಯಾಸ ಹಾಗೂ ಅದರಲ್ಲಿರುವ ಗ್ಲಾಸ್‌ಗೆ ತಕ್ಕಂತೆ ಬೆಲೆ ಹೊಂದಿರುತ್ತವೆ. ಅಷ್ಟೇಕೆ! ನೋಡಲು ಆಕರ್ಷಕವಾದ ಕ್ಯೂಟ್‌ ಡಿಸೈನ್‌ಗಳಲ್ಲೂ ಲಭ್ಯವಿದೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇತ್ತೀಚೆಗೆ ಇವು ದೊಡ್ಡವರು ಧರಿಸುವ ಪ್ಯಾಟರ್ನನಲ್ಲೂ ದೊರೆಯುತ್ತಿವೆ” ಎನ್ನುತ್ತಾರೆ.

ಕಿಡ್ಸ್ ಸನ್‌ಗ್ಲಾಸ್‌ ವೆರೈಟಿ

ಮಕ್ಕಳಿಗೆ ದೊರೆಯುತ್ತಿರುವ ಸನ್‌ಗ್ಲಾಸ್‌ಗಳಲ್ಲಿ ಬಿಳಿ, ಹಳದಿ, ಪಿಂಕ್‌, ಬ್ಲ್ಯೂ, ವೈಟ್‌, ರೆಡ್‌ ಹೀಗೆ ಬಣ್ಣಬಣ್ಣದ ಫ್ರೇಮ್‌ಗಳಿಗೆ ಹೆಚ್ಚು ಮಾನ್ಯತೆ ಇರುವುರಿಂದ ಫಂಕಿ ಶೈಲಿಯ ಕ್ಯಾಟ್‌ ಐ ಶೇಪ್‌, ಹಾರ್ಟ್ ಶೇಪ್‌, ಓವಲ್‌, ರೆಕ್ಟಾಂಗಲ್‌, ರೌಂಡ್‌ ಶೇಪ್‌ನವು ಹೆಚ್ಚು ಚಾಲ್ತಿಯಲ್ಲಿವೆ. ಮಕ್ಕಳಿಗೆ ಯಾವುದೇ ಬಗೆಯ ಸನ್‌ಗ್ಲಾಸ್‌ ಹಾಕಿದರೂ ಚೆನ್ನಾಗಿಯೇ ಕಾಣುತ್ತದೆ. ಹಾಗಾಗಿ ಧರಿಸಲು ಯಾವುದಾದರೂ ಸರಿಯೇ ಎನ್ನುತ್ತಾರೆ ಕಿಡ್ಸ್‌ ಸ್ಟೈಲಿಸ್ಟ್ ರಾಘವ್‌. ಅವರ ಪ್ರಕಾರ, ಮಕ್ಕಳ ಸನ್‌ಗ್ಲಾಸ್‌ ಆಯ್ಕೆಯಲ್ಲಿ ಜಾಣತನ ತೋರುವುದು ಅಗತ್ಯ ಎನ್ನುತ್ತಾರೆ.

ಬೀದಿ ಬದಿಯ ಸನ್‌ಗ್ಲಾಸ್‌ನಿಂದ ಕಣ್ಣಿಗೆ ಧಕ್ಕೆ

ಇತ್ತೀಚೆಗೆ ಬೀದಿ ಬದಿಯ ಅಂಗಡಿಗಳಲ್ಲಿ ನಾನಾ ಬಗೆಯ ಸನ್‌ಗ್ಲಾಸ್‌ಗಳು ದೊರೆಯುತ್ತಿವೆ. ಕಡಿಮೆ ದೊರೆಯುತ್ತಿರುವ ಇವನ್ನು ಬಳಸುತ್ತಿರುವವರು ಹೆಚ್ಚಾಗಿದ್ದಾರೆ. ಹೆಚ್ಚು ಸಮಯ ಮಕ್ಕಳಿಗೆ ಇವನ್ನು ಹಾಕಿದಲ್ಲಿ ಕಣ್ಣಿನ ಸಮಸ್ಯೆಯಾಗಬಹುದು. ಹಾಗಾಗಿ ಇವನ್ನು ಕೊಳ್ಳುವ ಮುನ್ನ ಯೋಚಿಸಿ. ಹೆಚ್ಚು ಸಮಯ ಮಕ್ಕಳಿಗೆ ಹಾಕಬೇಡಿ ಎನ್ನುತ್ತಾರೆ ಐ ಸ್ಪೆಷಲಿಸ್ಟ್ ಡಾ. ಆರಾಧ್ಯ.

ಮಕ್ಕಳಿಗೆ ಸನ್‌ ಗ್ಲಾಸ್‌ ಆಯ್ಕೆ ಹೀಗಿರಲಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಶ್ವೇತ ವರ್ಣದ ಸೀರೆಯಲ್ಲಿ ಮಲಯಾಳಿ ಕುಟ್ಟಿಯಂತೆ ಕಂಡ ನಟಿ ಮೋಕ್ಷಿತಾ ಪೈ

Exit mobile version