ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕರ್ಲಿ ಹೇರ್ ಸ್ಟೈಲಿಂಗ್ (Curly Hair styling) ಮಾಡಲು ನಿಮ್ಮ ಕೂದಲು ಕರ್ಲಿಯಾಗಿರಬೇಕಿಲ್ಲ! ಇದೀಗ ಟ್ರೆಂಡಿಯಾಗಿರುವ ಕ್ರೌಡಿ ಕರ್ಲ್, ಟೈಟ್ ರಿಂಗಲ್ಸ್, ಲೂಸ್ ಕರ್ಲ್ಸ್ , ಸ್ಟೆಪ್ ಬೈ ಸ್ಟೆಪ್ ಕರ್ಲ್ಸ್, ಸ್ಟ್ರೈಟ್ ಜತೆ ಲೈಟಾಗಿ ಕರ್ಲಿ ಯಾವುದನ್ನು ಬೇಕಾದರೂ ಇದೀಗ ತಾತ್ಕಲಿಕವಾಗಿ ಸೃಷ್ಟಿಸಬಹುದು. ಹೌದು, ಕರ್ಲಿ ಹೇರ್ ಸ್ಟೈಲಿಂಗ್ ನಿರ್ವಹಣೆ ಕೊಂಚ ಕಷ್ಟವಾದರೂ ಯೂನಿಕ್ ಸ್ಟೈಲ್ ಸ್ಟೇಟ್‌ಮೆಂಟ್ ನೀಡುತ್ತದೆ ಎನ್ನುತ್ತಾರೆ ಹೇರ್ ಸ್ಟೈಲಿಸ್ಟ್‌ಗಳು. “ಇನ್ನು, ನಿನ್ನೆಯಷ್ಟೇ ಅವಳ ಕೂದಲು ಸ್ಟ್ರೈಟ್ ಆಗಿತ್ತು, ಅದ್ಹೇಗೆ ಇವತ್ತು ಗುಂಗುರಾಗಿದೆ! ಎಂದು ಯೋಚಿಸುತ್ತಿದ್ದೀರಾ? ಇದೆಲ್ಲಾ ಇಂದು ಸಾಧ್ಯ. ನೆಟ್ಟಗಿರುವ ಕೂದಲ ರಾಶಿಯನ್ನು ಗುಂಗುರು ಮಾಡಿಕೊಂಡು ಕೆಲಕಾಲ ಗ್ಲಾಮರಸ್ ಆಗಿ ಕಾಣುವ ಫ್ಯಾಷನ್ ಕಾಲವಿದು. ಸದ್ಯಕ್ಕೆ ಯುವತಿಯರ ಹಾಟ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲೊಂದಾಗಿದೆ” ಎನ್ನುತ್ತಾರೆ ಸೌಂದರ್ಯ ತಜ್ಞರು.
ಕಾಮನ್ ಆಯ್ತು ಕರ್ಲಿಂಗ್
ಇಂದು ಬ್ಯೂಟಿ ಕ್ಷೇತ್ರ ಯಾವ ಮಟ್ಟಿ ಬದಲಾಗಿದೆ ಎಂದರೆ, ಗುಂಗರು ಕೂದಲಿನಲ್ಲೂಬಗೆಬಗೆಯ ವೆರೈಟಿಗಳನ್ನು ಕಾಣಬಹುದು. ಬ್ಯೂಟಿಷಿಯನ್ ರೀಟಾ ಪ್ರಕಾರ, ಈ ಹಿಂದೆ, ಕೂದಲನ್ನು ಗುಂಗುರುಗೊಳಿಸಬೇಕಾದಲ್ಲಿ ರೋಲರ್ಸ್ ಹಾಗೂ ಪರ್ಮಿಂಗ್ ಬಳಸಬೇಕಾಗಿತ್ತು. ಆದರೆ ಇಂದು ಇನ್‌ಸ್ಟಂಟ್ ಕ್ರೀಮ್ ಬಳಸುವುದರಿಂದಿಡಿದು ಬಗೆಬಗೆಯ ವಿಧಾನಗಳು ಪರಿಚಯಗೊಂಡಿವೆ. ಕುಳಿತುಕೊಂಡೇ ನೆಟ್ಟಗಿರುವ ತಲೆಕೂದಲನ್ನು ಸುರುಳಿಯನ್ನಾಗಿಸಬಹುದು.
ಮುಖಕ್ಕೆ ಹೊಂದಲಿ
ಮೊದಲೆಲ್ಲಾ ಕೂದಲ ಸುರಳಿ ಮಾಡುವುದರಲ್ಲೂ ವೈವಿಧ್ಯತೆ ಇರಲಿಲ್ಲ! ಇಂದು ಕಾಸ್ಮೆಟಿಕ್ ಪ್ರಪಂಚ ಬಹಳಷ್ಟು ಮುಂದುವರಿದಿದೆ. ಕ್ರೌಡಿ ಕರ್ಲ್, ಟೈಟ್ ರಿಂಗಲ್ಸ್, ಲೂಸ್ ಕರ್ಲ್ಸ್ ಹೀಗೆ ಸಾಕಷ್ಟು ವೆರೈಟಿ ಕರ್ಲಿಂಗ್‌ಗಳಿವೆ. ಒಟ್‌ನಲ್ಲಿ, ನಿಮ್ಮ ಮುಖಕ್ಕೆ ಯಾವ ಬಗೆಯದ್ದು ಸೂಟ್ ಆಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕರ್ಲ್ ಮಾಡಿಸಿಕೊಂಡರೆ ಒಳಿತು. ಉದ್ದ ಮುಖವಿದ್ದವರಿಗೆ ಕರ್ಲಿ ಹೇರ್ ಫ್ಯಾಷನ್ ಸೂಟ್ ಆಗುತ್ತದೆ. ಇನ್ನು ದಪ್ಪಗಿರುವವರು ಸಂಪೂರ್ಣ ಕರ್ಲಿ ಮಾಡಿಸಿಕೊಂಡರೆ ಮತ್ತಷ್ಟು ಡುಮ್ಮಗೆ ಕಾಣಿಸುತ್ತಾರೆ ಎನ್ನುತ್ತಾರೆ ಎಕ್ಸ್‌ಪಟ್ರ್ಸ್.
ಕರ್ಲಿಂಗ್ ಬಗ್ಗೆ ಸಾಮಾನ್ಯ ಜ್ಞಾನ
ಟೈಟ್ ರಿಂಗ್ಲೆಟ್ಸ್ ಬಗೆಯದ್ದಕ್ಕೆ ಹಾಟ್ ರೋಲರ್ಸ್ ಬಳಸುವುದು ಒಳಿತು. ಇನ್ನು ನಿಮಗೆ ದೊಡ್ಡ ದೊಡ್ಡ ಸುರಳಿಯಂತೆ ಬೇಕಾದಲ್ಲಿ ಸ್ಟೈಲಿಂಗ್ ಜೆಲ್ ಹಾಕಬಹುದು. ಸಾಫ್ಟರ್ ಕರ್ಲ್‌ಗಳಿಗೆ ಕರ್ಲಿಂಗ್ ಐರನ್ ಮಾಡಿಸಬೇಕು. ಕರ್ಲಿಂಗ್ ಮಾಡಿಸುವ ಮುನ್ನ ಈ ಬಗ್ಗೆ ಸಾಮಾನ್ಯ ಜ್ಞಾನವಿದ್ದರೆ ಒಳಿತು ಎನ್ನುತ್ತಾರೆ ಹೇರ್ ಸ್ಟೈಲ್ ಸ್ಪೆಷಲಿಸ್ಟ್ ಬಾಬು.
ಕರ್ಲಿಂಗ್ ಮಾಡಿಸುವವರಿಗೆ ಸಲಹೆ
ಕರ್ಲಿ ಹೇರ್ ಸ್ಟೈಲ್ ಹೊಂದಿರುವ ಬಹುತೇಕ ಹುಡುಗಿಯರ ಕೂದಲು ನಿಸ್ತೇಜವಾದಂತೆ ಇಲ್ಲವೇ, ಒಣಗಿದಂತಿರುತ್ತದೆ. ಆಗಾಗ್ಗೆ ಕಂಡೀಷನ್ ಅಗತ್ಯ. ಒದ್ದೆಯಿದ್ದಾಗ ಬಾಚಕೂಡದು. ಶೈನಿಂಗ್‌ಗಾಗಿ ಹೇರ್ ಸಿರಮ್ ಬಳಸಬಹುದು. ಟ್ರೆಂಡ್‌ಗೊಸ್ಕರ ಟೆಂಪರರಿ ಕರ್ಲಿಂಗ್‌ಗೆ ಮೊರೆ ಹೋಗಿ. ಆದರೆ, ಪರ್ಮನೆಂಟ್ ಬೇಡ ಎನ್ನುತ್ತಾರೆ ಬ್ಯೂಟಿ ತಜ್ಞರು, ಇದರಿಂದ ಕೂದಲ ಸಮಸ್ಯೆ ಹೆಚ್ಚಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Kids Hoodie Fashion: ಇದ್ದರೆ ಹೀಗಿರಬೇಕು ಮಕ್ಕಳ ಚಳಿಗಾಲದ ಹೂಡಿ ಫ್ಯಾಷನ್!