ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೋಕುಲಾಷ್ಟಮಿ ಸೀಸನ್‌ನಲ್ಲಿ (Krishna Janmastami Cake Art) ಮುದ್ದು ಕೃಷ್ಣನ ಥೀಮ್ ಹೊಂದಿರುವ ಕೇಕ್ ಆರ್ಟ್ ಪ್ರೇಮ ಹೆಚ್ಚಾಗಿದ್ದು, ಕಸ್ಟಮೈಸ್ಡ್ ಕೇಕ್‌ಗಳಲ್ಲಿ ಅನಾವರಣಗೊಳ್ಳುತ್ತಿವೆ. ಕೃಷ್ಣ ಜನ್ಮಾಷ್ಟಮಿ ಆಸುಪಾಸಿನಲ್ಲಿ ಜನಿಸಿದ ಮಕ್ಕಳು ಅಥವಾ ಈ ಫೆಸ್ಟಿವ್ ಸೀಸನ್‌ನಲ್ಲಿ ಜನಿಸಿದ ಚಿಣ್ಣರ ಕೇಕ್‌ಗಳು ಈ ಥೀಮ್‌ನಲ್ಲಿ ಅನಾವರಣಗೊಳ್ಳುತ್ತಿವೆ. ಇನ್ನು ಕೆಲವು ಜನರು ಮಕ್ಕಳಿಗಾಗಿ ಕೃಷ್ಣ ಜನ್ಮಾಷ್ಟಮಿಯಲ್ಲಿ ಈ ಕಲಾತ್ಮಕ ಕೇಕನ್ನು ಆರ್ಡರ್ ಮಾಡಿ ಸೆಲೆಬ್ರೇಟ್ ಮಾಡುವುದು ಹೆಚ್ಚಾಗಿದೆ. ಕೇಕ್ ಆರ್ಟಿಸ್ಟ್ ಸುಮನಾ ಹೇಳುವಂತೆ, ಶ್ರೀ ಕೃಷ್ಣನ ಬಾಲಲೀಲೆ ಇಲ್ಲವೇ ರಾಧಾ ಜತೆಗಿರುವ ಕೇಕ್‌ಗಳು ಇಂದು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆಯಂತೆ. ಹಾಗೆಂದು ಇವು ಲೈಟ್‌ವೇಟ್ ಕೇಕ್‌ಗಳಲ್ಲ. ತೂಕ ಹಾಗೂ ಡಿಸೈನ್ ಆಧಾರದ ಮೇಲೆ ಬೆಲೆ ನಿರ್ಧರಿತವಾಗಿರುತ್ತದೆ ಎನ್ನುತ್ತಾರೆ. ಈ ಕೇಕ್ ಆರ್ಟ್ ಸುಲಭವಲ್ಲ. ಇದಕ್ಕೆ ಹೆಚ್ಚು ಸಮಯ ಹಿಡಿಯುತ್ತದೆ ಎನ್ನುತ್ತಾರೆ.
ಮುದ್ದು ಕೃಷ್ಣನ ಕೇಕ್ ಆರ್ಟ್
ಬೆಣ್ಣೆ ಮಡಿಕೆ ಹಿಡಿದಿರುವ ಕೃಷ್ಣ, ಆಟವಾಡುತ್ತಿರುವ ಮುದ್ದು ಗೋಪಾಲ, ಬಾಲಕೃಷ್ಣನ ಲೀಲೆ, ಹಸುಗಳೊಂದಿಗೆ ಇರುವಂತವು, ಕೃಷ್ಣ ಬಲರಾಮ, ಚೋಟಾ ಭೀಮ್‌ನೊಂದಿಗಿರುವ ಚಿತ್ರ, ಕೊಳಲನ್ನು ಊದುತ್ತಿರುವ ಸನ್ನಿವೇಶ, ರಾಧೆಯೊಂದಿಗಿರುವುದು ಸೇರಿದಂತೆ ನಾನಾ ಬಗೆಯವು ಈ ಸೀಸನ್‌ನ ಕೇಕ್ ಆರ್ಟ್‌ನಲ್ಲಿ ಕಾಣಬಹುದು.
ಕೃಷ್ಣನ ಎಗ್‌ಲೆಸ್ ಕೇಕ್
ಅಂದಹಾಗೆ, ಈ ಥೀಮ್ ಹೊಂದಿರುವ ಬಹುತೇಕ ಕೇಕ್‌ಗಳು ಎಗ್‌ಲೆಸ್ ಆಗಿರುತ್ತವೆ. ಗೋಕುಲಾಷ್ಟಮಿಯನ್ನು ಸೆಲೆಬ್ರೇಟ್ ಮಾಡಲು ಬಹುತೇಕರು ಕಸ್ಟಮೈಸ್ಡ್ ಕೇಕ್ ಮಾಡಿಸುವುದು ಹೆಚ್ಚಾಗಿದೆ. ಆರ್ಡರ್ ಮೇರೆಗೆ ಎಗ್‌ಲೆಸ್ ಮಾಡಿಕೊಡಲಾಗುತ್ತದೆ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
ಆನ್‌ಲೈನ್‌ನಲ್ಲೂ ಕೇಕ್ ಕೃಷ್ಣ
ಆನ್‌ಲೈನ್‌ನಲ್ಲಿ ಕೇಕ್ ಕೃಷ್ಣನ ಆರ್ಡರ್ ಸಾಕಷ್ಟು ಬೇಕರಿಗಳು ತೆಗೆದುಕೊಳ್ಳುತ್ತಿವೆ. ಸೋಷಿಯಲ್ ಮೀಡಿಯಾದಲ್ಲೂ ಇವುಗಳ ಝಲಕ್ ನೋಡಬಹುದು. ಇದರೊಂದಿಗೆ ಕಸ್ಟಮರ್ಸ್‌ಗೆ ಅಗತ್ಯವಿರುವಂತೆ ಆರ್ಡರ್ ತೆಗೆದುಕೊಳ್ಳುವ ಬೇಕರಿಗಳು ಕೂಡ ಹೆಚ್ಚಾಗಿವೆ.
ಸಿಂಪಲ್ ಕೇಕ್‌ಗೂ ಕೃಷ್ಣನ ಡಿಸೈನ್
ಇನ್ನು ಸಿಂಪಲ್ ಕೇಕ್‌ಗೂ ಟ್ರಡಿಷನಲ್ ಟಚ್ ನೀಡಿ , ನಂತರ ಮಾರುಕಟ್ಟೆಯಲ್ಲಿ ದೊರೆಯುವ ಪುಟ್ಟ ಕೃಷ್ಣನ ಮೂರ್ತಿಗಳನ್ನು ಇರಿಸಿ ಸಿಂಗರಿಸಿ, ಕೃಷ್ಣನ ಕೇಕ್ ಸಿದ್ಧಪಡಿಸಬಹುದು. ಜತೆಗೆ ನವಿಲುಗರಿ ಇಲ್ಲವೇ ಕೊಳಲನ್ನು ಅಕ್ಕಪಕ್ಕದಲ್ಲಿರಿಸಿ ಸಿಂಗರಿಸಬಹುದು ಎಂದು ಟಿಪ್ಸ್ ನೀಡುತ್ತಾರೆ ಕೇಕ್ ಆರ್ಟಿಸ್ಟ್ ಜಯರಾಮ್ ಹಾಗೂ ದೀನಾ. ಅಲಂಕರಿಸಿದ ಐಟಂಗಳನ್ನು ಸೇವಿಸಬಹುದಾದ ಕೇಕ್ ಆರ್ಟ್‌ಗೆ ಇಂದು ಹೆಚ್ಚು ಪ್ರಾಧಾನ್ಯತೆ. ಇಲ್ಲವಾದಲ್ಲಿಈ ಕೇಕ್‌ಗೆ ಬಳಸಿರುವ ಚಿಕ್ಕಪುಟ್ಟ ಅಲಂಕಾರಿಕ ಕೇಕ್ ಐಟಂಗಳನ್ನು ಸೈಡಿಗೆ ಇರಿಸಿ ಸವಿಯುವುದು ಉತ್ತಮ ಎನ್ನುತ್ತಾರೆ ಎಕ್ಸ್‌ಪರ್ಟ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Krishna janmastami Styling | ಮುದ್ದು ಮಕ್ಕಳಿಗೆ ಬೆಣ್ಣೆ ಕೃಷ್ಣನ ಸಿಂಗಾರ