Site icon Vistara News

Kylie Jenner Fashion: ಲಯನ್‌ ಹೆಡ್‌ ಗೌನ್‌ ಧರಿಸಿ ಅಚ್ಚರಿ ಮೂಡಿಸಿದ ಕೈಲಿ ಜೆನ್ನರ್‌

Kylie Jenner Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಧರಿಸಿದ ಉಡುಪಿಗಿಂತ ಭಯಾನಕ ಸಿಂಹದ ಮುಖವೇ ಎದ್ದು ಕಾಣುವಂತಾದರೇ ಹೇಗನಿಸಬೇಡ! ಹೌದು. ಇಂತಹ ದಂಗು ಬಡಿಸುವ, ಅಚ್ಚರಿ ಮೂಡಿಸುವ ಲಯನ್‌ ಹೆಡ್‌ ಗೌನ್‌ (kylie jenner lion head dress) ಧರಿಸಿದ ಕೈಲಿ ಜೆನ್ನರ್‌, ಪ್ಯಾರಿಸ್‌ ಶಿಯಾಪರೇಲಿ ಫ್ಯಾಷನ್‌ ಶೋನಲ್ಲಿ ನೆರೆದಿದ್ದವರಲ್ಲಿ ಕ್ಷಣಕಾಲ ದಿಗ್ಭ್ರಮೆ ಮೂಡಿಸಿದರು.

ಶೋಲ್ಡರ್‌ಲೆಸ್‌ ಬ್ಲಾಕ್‌ ಗೌನ್‌ ಮೇಲೆ ಡಿಸೈನ್‌ ಮಾಡಿದ ನೈಜವೆನಿಸುವ ಲಯನ್‌ ಹೆಡ್‌ (lion head dress) ಧರಿಸಿದ ಅಮೆರಿಕಾದ ರಿಯಾಲಿಟಿ ಶೋ ಸೆಲೆಬ್ರಿಟಿ ಹಾಗೂ ಕಾಸ್ಮೆಟಿಕ್‌ ಉದ್ಯಮಿ ಕೈಲಿ ಜೆನ್ನರ್‌ (kylie jenner) ಪ್ಯಾರಿಸ್‌ನ ಶೋನಲ್ಲಿ ಕೆಲಕಾಲ ನೆರೆದಿದ್ದವರನ್ನು ತಮ್ಮತ್ತ ಸೆಳೆದರು. ಅಷ್ಟು ಮಾತ್ರವಲ್ಲ, ಸೋಷಿಯಲ್‌ ಮೀಡಿಯಾದಲ್ಲಿ ಜಗತ್ತಿನಾದ್ಯಾಂತ ಫ್ಯಾಷನ್‌ ಪ್ರೇಮಿಗಳನ್ನು ಆಕರ್ಷಿಸಿದರು.

ಅವರು ಧರಿಸಿದ ಈ ಲಯನ್‌ ಹೆಡ್‌, ನೋಡುಗರಿಗೆ ವಿಚಿತ್ರವೆನಿಸಿದರೂ ಫ್ಯಾಷನ್‌ ವೀಕ್‌ನಲ್ಲಿ ನೆರೆದಿದ್ದವರ ಗಮನ ಮಾತ್ರ ಅವರ ಮೇಲೆ ಇತ್ತು. ವೇದಿಕೆ ಮೇಲೆ ವಾಕ್‌ ಮಾಡುತ್ತಿದ್ದ ಮಾಡೆಲ್‌ಗಳಿಗಿಂತ, ಫೋಟೊಗ್ರಾಫರ್‌ ಹಾಗೂ ಮೀಡಿಯಾದವರ ಕಣ್ಣು ಮಾತ್ರ ಕೈಲಿಯ ಮೇಲೆ ನೆಟ್ಟಿತ್ತು. ಈ ವಿಭಿನ್ನ ಸ್ಟೈಲ್‌ ಸ್ಟೇಟ್‌ಮೆಂಟ್‌ ಮೂಲಕ ಕೈಲಿ, ಕೆಲಕಾಲ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಆಗಿದ್ದರು.

ಏನಿದು ಲಯನ್‌ ಹೆಡ್‌ ಡ್ರೆಸ್‌

ಶಿಯಾಪರೇಲಿ ಪ್ಯಾರೀಸ್‌ ಶೋನಲ್ಲಿ ಕೇಂದ್ರ ಬಿಂದುವಾಗಿದ್ದ ಕೈಲಿ, ಬ್ಲಾಕ್‌ ಡಿಸೈನರ್‌ ಶೋಲ್ಡರ್‌ಲೆಸ್‌ ಬಾಡಿಕಾನ್‌ ವೆಲ್ವೆಟ್‌ ಗೌನ್‌ ಧರಿಸಿದ್ದು, ಆ ಗೌನ್‌ಗೆ ಬಲಗಡೆ ಫೇಕ್‌ ಲಯನ್‌ ಹೆಡ್‌ ಫಿಕ್ಸ್‌ ಮಾಡಲಾಗಿತ್ತು. ನೋಡಿದ ತಕ್ಷಣ ನೈಜವಾಗಿ ಕಾಣಿಸುತ್ತಿದ್ದ ಈ ಸಿಂಹದ ತಲೆಯ ರಿಪ್ಲೀಕಾವನ್ನು ಕ್ರಿಯೇಟಿವ್‌ ಡೈರೆಕ್ಟರ್‌ ಡ್ಯಾನಿಯೆಲ್‌ ರೋಸ್‌ಬೆರ್ರಿ ಆರ್ಟಿಸ್ಟಿಕ್‌ ಆಗಿ ಡಿಸೈನ್‌ ಮಾಡಿದ್ದು, ಯಾವುದೇ ಪ್ರಾಣಿಯ ಫರ್‌ ಆಗಲಿ ಚರ್ಮವಾಗಲಿ ಇದಕ್ಕಾಗಿ ಬಳಸಿಲ್ಲ. ಆ ಮಟ್ಟಿಗೆ ಈ ಸಿಂಹದ ಮುಖ ರಿಯಲ್‌ ಎಂದೆನಿಸುತ್ತಿದೆ ಎಂದು ಕೈಲಿ ಅವರೇ ಹೊಗಳಿಕೊಂಡಿದ್ದಾರೆ.

ಬೋಲ್ಡ್‌ ಮೇಕಪ್‌ ಸಾಥ್‌

ಇನ್ನು ಬೋಲ್ಡ್‌ ಗ್ಲಾಮ್‌ ಎಕ್ಲೆಕ್ಟಿಕ್‌ ಮೇಕಪ್‌, ಫ್ಲೀಕ್‌ ಐಬ್ರೋ, ಕೋಕೊವಾ ಲಿಪ್‌ಶೇಡ್‌, ವಿಂಗ್ಡ್‌ ಐ ಲೈನರ್‌ ಎಲ್ಲವೂ ಕೈಲಿಯ ಈ ಲುಕ್‌ಗೆ ಸಾಥ್‌ ನೀಡಿದೆ.

ಯಾರಿದು ಕೈಲಿ ಜೆನ್ನರ್‌ ?

ಕೈಲಿ ಜೆನ್ನರ್‌ ಅತಿ ಹೆಚ್ಚು ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿರುವ ರಿಯಾಲಿಟಿ ಶೋ ಸೆಲೆಬ್ರಿಟಿ ಹಾಗೂ ಮಾಡೆಲ್‌. ಈಕೆ ಪಾಪ್‌ ಸ್ಟಾರ್‌ ಅರಿಯಾನಾ ಗ್ರಾಂಡೇಯವರನ್ನು ಹಿಂದಿಕ್ಕಿ ಅವರಿಗಿಂತ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ತಮ್ಮದೇ ಆದ ಚಿತ್ರ-ವಿಚಿತ್ರ ಫ್ಯಾಷನ್‌ ಹಾಗೂ ಸ್ಟೈಲ್‌ಸ್ಟೇಟ್‌ಮೆಂಟ್‌ಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ೩೦ ಮಿಲಿಯನ್‌ಗೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ.

( ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fall/winter Paris Fashion Week 2023: ಬೆರಗು ಮೂಡಿಸಿದ ವರ್ಷದ ಮೊದಲ ಪ್ಯಾರೀಸ್‌ ಫ್ಯಾಷನ್‌ ವೀಕ್‌

ಎಫ್‌ಎಕ್ಯೂ (Frequently Asked Questions-FAQ)

1. ಭಾರತದಲ್ಲಿ ಕೈಲಿ ಜೆನ್ನರ್ ಉತ್ಪನ್ನಗಳು ಲಭ್ಯವಿದೆಯೇ?

ಹೌದು, ಇದು ಅಮೆಜಾನ್‌ನಲ್ಲಿ ಲಭ್ಯವಿದೆ

2. ಇನ್‌ಸ್ಟಾಗ್ರಾಂ ಕೈಲಿಗೆ ಪಾವತಿಸುತ್ತದೆಯೇ?

ಹೌದು, ಕೆಲವು ಸೆಲೆಬ್ರಿಟಿಗಳಿಗೆ ಇನ್‌ಸ್ಟಾಗ್ರಾಂ ಪಾವತಿಸುತ್ತದೆ

3. ಕೈಲಿ ವಿವಾಹಿತಳೇ?

ಹೌದು

Exit mobile version