Site icon Vistara News

Leopard Prints Fashion: ರೆಟ್ರೊ ಫ್ಯಾಷನ್‌ಗೆ ಮರಳಿದ ಆಕರ್ಷಕ ಚೀತಾ ಪ್ರಿಂಟ್ಸ್

Leopard Prints Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೆಲೆಬ್ರೆಟಿಗಳ ರೆಟ್ರೊ ಹಿಟ್ ಫ್ಯಾಷನ್ (Leopard Prints Fashion) ಲಿಸ್ಟ್‌ನಲ್ಲಿದ್ದ ಚೀತಾ (ಚಿರತೆ) ಪ್ರಿಂಟ್ಸ್ ಉಡುಪುಗಳು ಇದೀಗ ಮತ್ತೆ ಮರಳಿವೆ. ಹೌದು. ದಶಕಗಳಿಂದೇ ಚಾಲ್ತಿಯಲ್ಲಿದ್ದ ಈ ಚೀತಾ ಪ್ರಿಂಟ್ಸ್ ಫ್ಯಾಷನ್ ಇದೀಗ ಹೊಸ ಲುಕ್ ಹಾಗೂ ವಿನ್ಯಾಸದೊಂದಿಗೆ ಮರಳಿದೆ. ಹಿಂದೆಗಿಂತ ಈ ಬಾರಿ ಸಾಕಷ್ಟು ಶೈಲಿಯಲ್ಲಿ ಡಿಸೈನ್‌ಗಳಲ್ಲಿ ಬಿಡುಗಡೆಯಾಗಿವೆ.

ಬಣ್ಣ ಬಣ್ಣದ ಚೀತಾ ಪ್ರಿಂಟ್ಸ್

ಅಂದಹಾಗೆ, ಚೀತಾ ಪ್ರಿಂಟ್ಸ್ ಫ್ಯಾಷನ್ ಹೊಸತೇನಲ್ಲ! ಸಾಕಷ್ಟು ವರ್ಷಗಳಿಂದಲೂ ಇದೆ. ಹಾಲಿವುಡ್ ನಟಿಯರ ಡಿಸೈನರ್‌ ವೆರ್‌ಗಳಲ್ಲಿ ಇವು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದವು. ವಿದೇಶಿ ಫ್ಯಾಷನ್ ವಿನ್ಯಾಸಗಾರರಿಂದ ತಯಾರಾಗುತ್ತಿದ್ದ ಈ ಡ್ರೆಸ್‌ಗಳು ಹೈ ಕ್ಲಾಸ್ ಫ್ಯಾಷನ್ ಲಿಸ್ಟ್‌ಗೆ ಸೇರಿದ್ದವು.

ಹೈ ಕ್ಲಾಸ್ ಚೀತಾ ಪ್ರಿಂಟೆಡ್ ವೇರ್ಸ

ಮೂಲತಃ ವೆಸ್ಟರ್ನ್ ವಿನ್ಯಾಸದಲ್ಲಿ ಅನಿಮಲ್ ಪ್ರಿಂಟ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಚೀತಾ ವಿನ್ಯಾಸ ಕೇವಲ ಹುಡುಗಿಯರ ಡ್ರೆಸ್‌ಗಳಿಗೆ ಸೀಮಿತವಾಗಿತ್ತು. ಇದೀಗ ಯುವಕರ ಡ್ರೆಸ್‌ಗಳಲ್ಲೂ ಕಾಣಿಸತೊಡಗಿವೆ. ಪ್ರಿಂಟ್ಸ್ ನೋಡಲು ಒಂದೇ ತರಹದ್ದಾಗಿ ಕಂಡರೂ ಚಿಕ್ಕ ಪುಟ್ಟ ವಿನ್ಯಾಸದಲ್ಲಿ ಬದಲಾವಣೆ ಕಂಡಿದೆ. ಕಲರ್ಸ್ ಬದಲಾಗಿದೆ. ಮೊದಲಿನಂತೆ ಚೀತಾ ಪ್ರಿಂಟ್ಸ್ ಕಾಮನ್ ಕಲರ್‌ನಲ್ಲಿ ಮಾತ್ರ ಕಂಡು ಬರುತ್ತಿಲ್ಲ! ಬದಲಿಗೆ ಅದರಲ್ಲೆನಾನಾ ವರ್ಣದಲ್ಲಿ ಬಿಡುಗಡೆಯಾಗಿವೆ. ಜತೆಗೆ ಕಲರ್ಫುಲ್ ಆಗಿವೆ. ಬಹುಶಃ ಇದಕ್ಕೆ ಇರಬೇಕು ಇಂದಿನ ಜನರೇಷನ್ ಹೈ ಫ್ಯಾಷನ್‌ಗೆ ಮತ್ತೊಮ್ಮೆ ಎಂಟ್ರಿ ನೀಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಸಾಮಾನ್ಯರ ಫ್ಯಾಷನ್‌ಗೂ ಎಂಟ್ರಿ

ಸ್ಟೈಲಿಸ್ಟ್ ರಜತ್ ಅವರ ಪ್ರಕಾರ, ಈ ಚೀತಾ ಪ್ರಿಂಟ್ಸ್ ಡಿಸೈನರ್ವೇರ್ಸ್ ಹೊಸ ವಿನ್ಯಾಸದಲ್ಲಿ ಸಾಮಾನ್ಯ ಫ್ಯಾಷನ್ ಪ್ರಿಯರನ್ನು ತಲುಪಿವೆ. ಡೇ ಟುಡೇ ಲೈಫ್‌ನಲ್ಲಿ ಸಾಮಾನ್ಯರು ಕೂಡ ಇವನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಬಿಡುಗಡೆಗೊಂಡಿವೆ. ನಾರ್ಮಲ್ ಟೀ ಶರ್ಟ್‌ನಿಂದ ಹಿಡಿದು ಜಾಕೆಟ್, ಕೋಟ್, ಬ್ಲೇಝರ್ ಯೂನಿಸೆಕ್ಸ್ ಡಿಸೈನ್ನಲ್ಲಿ ಬಿಡುಗಡೆಗೊಂಡಿದ್ದು, ಇನ್ನು ಹುಡುಗಿಯರಿಗೆ ಪ್ರಿಯವಾಗುವಂತಹ ಬಾಡಿಕಾನ್ ಡ್ರೆಸ್, ಟ್ರೆಂಚ್ಕೋಟ್, ಲಾಂಗ್ ಟಾಪ್, ಪಾರ್ಟಿ ಡ್ರೆಸ್‌ಗಳ ಕೆಟಗರಿಯಲ್ಲೂ ಬಂದಿವೆ ಎನ್ನುತ್ತಾರೆ.

ವೆರೈಟಿ ಶೇಡ್ಸ್‌ನ ಚೀತಾ ಪ್ರಿಂಟ್ಸ್

ಕಾಂಟ್ರಸ್ಟ್ ಶೇಡ್ಸ್‌ನ ಮಜಂತಾ ಪಿಂಕ್, ಯೆಲ್ಲೊ, ಡಾರ್ಕ್ ವೈನ್, ಡಾರ್ಕ್ ಚಾಕೋಲೇಟ್, ಕೋರಲ್ ಸಾಫ್ರನ್, ಸೀ ಬ್ಲ್ಯೂನ ಅನಿಮಲ್ ಪ್ರಿಂಟ್ಸ್ ಇಂದು ಹೆಚ್ಚು ಡಿಸೈನರ್ವೇರ್ ಕಲರ್ ಲಿಸ್ಟ್‌ನಲ್ಲಿದೆ. ಚೀತಾ ಪ್ರಿಂಟ್ಸ್ ಧರಿಸಲು ಇಚ್ಛಿಸುವವರು ಆದಷ್ಟೂ ಅವರವರ ಸ್ಕಿನ್‌ಟೋನ್‌ಗೆ ಇವನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಘವ್.

ಚೀತಾ ಪ್ರಿಂಟ್ಸ್ ಡ್ರೆಸ್ಕೋಡ್ ಟಿಪ್ಸ್

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Santhosh Lad Foundation Fashion Show: ಧಾರವಾಡದಲ್ಲಿ ಯಶಸ್ವಿಯಾದ ಸಂತೋಷ್‌ ಲಾಡ್ ಫೌಂಡೇಶನ್‌ನ ವರ್ಣ ರಂಜಿತ ಫ್ಯಾಷನ್‌ ಶೋ

Exit mobile version