Site icon Vistara News

Lip Fillers Awareness: ಲಿಪ್‌ ಫಿಲ್ಲರ್ಸ್ ಪ್ರಿಯರೇ ಎಚ್ಚರ !

Lip Fillers Awareness

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಲಿಪ್‌ ಫಿಲ್ಲರ್ಸ್ (Lip Fillers Awareness) ಪ್ರೇಮಿಗಳೇ ಜೋಕೆ ಎನ್ನುತ್ತಾರೆ ಸೌಂದರ್ಯ ತಜ್ಞರು. ಹೌದು. ಹಿಂದೆ ಮುಂದೆ ಯೋಚಿಸದೇ, ಡಿಸ್ಕೌಂಟ್‌ನಲ್ಲಿ ಅಥವಾ ಕಡಿಮೆ ದರದಲ್ಲಿ ಮಾಡಿಸುವ ಸಾಕಷ್ಟು ಲಿಪ್‌ ಫಿಲ್ಲರ್ಸ್ (Lip Fillers Awareness) ಸೌಂದರ್ಯ ಚಿಕಿತ್ಸೆಗಳು ಸೈಡ್‌ ಎಫೆಕ್ಟ್‌ ಉಂಟು ಮಾಡಬಹುದು. ಕನಿಷ್ಠ ಪಕ್ಷ ಆರೋಗ್ಯವಾಗಿದ್ದ, ನೋಡಬಹುದಾಗಿದ್ದ ತುಟಿಯನ್ನು ಮತ್ತಷ್ಟು ಕುರೂಪಗೊಳಿಸಬಹುದು ಎಚ್ಚರವಹಿಸಿ ಎನ್ನುತ್ತಾರೆ.

ಬಾಲಿವುಡ್‌ ನಟಿ ಊರ್ಫಿ ಜಾವೀದ್‌

ಊರ್ಫಿ ಜಾವೀದ್‌ ಲಿಪ್‌ ಫಿಲ್ಲರ್ಸ್ ಸೈಡ್‌ ಎಫೆಕ್ಟ್ಸ್

ಇನ್ನು, ಊರ್ಫಿ ಜಾವಿದ್‌ ಯಾರಿಗೆ ಗೊತ್ತಿಲ್ಲ! ಲಿಪ್‌ ಫಿಲ್ಲರ್ಸ್ ಸೈಡ್‌ ಎಫೆಕ್ಸ್ಟ್ ಆಗಿರುವ ಬಗ್ಗೆ, ಖುದ್ದು ಅವರೇ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಉದ್ದುದ್ದದ ನೋಟ್‌ ಹಾಗೂ ತುಟಿಗಾಗಿರುವ ಪರಿಸ್ಥಿತಿಯ ಫೋಟೋ ಅಪ್‌ಲೋಡ್‌ ಮಾಡಿ ಎಂದು ಜಾಗೃತಿ ಮೂಡಿಸಿದ್ದರು. ಕಡಿಮೆ ಶುಲ್ಕದಲ್ಲಿ ಮಾಡಿಸಿದ ಲಿಪ್‌ ಫಿಲ್ಲರ್ಸ್‌ನಿಂದ, ತಮ್ಮ ತುಟಿಗೆ ಆದ ಸೈಡ್‌ ಎಫೆಕ್ಸ್ಟ್ ಬಗ್ಗೆ ಅಳಲು ತೋಡಿಕೊಂಡಿದ್ದರು.

ಏನಿದು ಲಿಪ್‌ ಫಿಲ್ಲರ್ಸ್

ಸಿಂಪಲ್‌ ಆಗಿ ಹೇಳುವುದಾದಲ್ಲಿ, ಶೇಪ್‌ ಇಲ್ಲದ, ನಿಸ್ತೇಜವಾಗಿ ಕಾಣುವ ತುಟಿಗಳು ತುಂಬಿದಂತೆ ಬಿಂಬಿಸಲು, ಒಳಗಾಗುವ ಸೌಂದರ್ಯ ಚಿಕಿತ್ಸೆಯೇ ಲಿಪ್‌ ಫಿಲ್ಲರ್ಸ್.

ಹೆಚ್ಚಾದ ಲಿಪ್‌ ಫಿಲ್ಲರ್ಸ್ ಪ್ರೇಮಿಗಳು

ಹಿಂದೆಲ್ಲಾ ಕೇವಲ ಲೈಮ್‌ಲೈಟ್‌ನಲ್ಲಿರುವ ಸೆಲೆಬ್ರೆಟಿಗಳು ಹಾಗೂ ತಾರೆಯರಿಗೆ ಸೀಮಿತವಾಗಿದ್ದ ಈ ಲಿಪ್‌ ಫಿಲ್ಲರ್ಸ್ ಸೌಂದರ್ಯ ಚಿಕಿತ್ಸೆ, ಇದೀಗ ಮಾಡೆಲಿಂಗ್‌ಗೆ ಕ್ಷೇತ್ರಕ್ಕೆ ಕಾಲಿಡುತ್ತಿರುವ ಯುವತಿಯರನ್ನು ಸೆಳೆಯುತ್ತಿದೆ. ಕತ್ರೀನಾ ಕೈಫ್‌, ಅನುಷ್ಕಾ, ನೋರಾರಂತಹ ಆಕರ್ಷಕ ತುಟಿಗಳನ್ನು ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಯುವತಿಯರು ಅತಿ ಕಡಿಮೆ ಸಮಯದಲ್ಲಿ ಅಂದ ಹೆಚ್ಚಿಸಿಕೊಳ್ಳಬಹುದಾದ ಲಿಪ್‌ ಫಿಲ್ಲರ್ಸ್ ಸೌಂದರ್ಯ ಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಚಿಕಿತ್ಸೆಯ ಆರಂಭದಲ್ಲಿ ಇವು ಅತ್ಯಾಕರ್ಷಕವಾಗಿ ಕಾಣುತ್ತವಾದರೂ, ಕೆಲವು ತಿಂಗಳು ಹಾಗೂ ವರ್ಷಗಳ ನಂತರ ಮರಳಿ ನ್ಯಾಚುರಲ್‌ ರೂಪಕ್ಕೆ ಬರುವುದಿರಲಿ, ಅದಕ್ಕಿಂತ ಕುರೂಪ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಇದಕ್ಕೆ ಕಾರಣವೂ ಇದೆ. ಗುಣಮಟ್ಟದ ಚಿಕಿತ್ಸೆ ಪಡೆಯದಿರುವುದು ಹಾಗೂ ಅಧಿಕೃತ ಸೌಂದರ್ಯ ಚಿಕಿತ್ಸಕರಿಂದ ಚಿಕಿತ್ಸೆ ಮಾಡದಿರುವುದು ಎನ್ನುತ್ತಾರೆ ಕಾಸ್ಮೆಟಿಕ್‌ ತಜ್ಞರು.

ಲಿಪ್‌ ಫಿಲ್ಲರ್ಸ್ ಜಾಗೃತಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಳೆಗಾಲದ ಫ್ಯಾಷನ್‌ನಲ್ಲಿ ಹೂಡಿಗೂ ಬಿತ್ತು ಕತ್ತರಿ!

Exit mobile version