ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಂಡನ್ ಫ್ಯಾಷನ್ ವೀಕ್ ಎಂದಾಕ್ಷಣ ಫ್ಯಾಷನ್ ಪ್ರಿಯರು ಕಣ್ಣರಳಿಸಿ ಕಾಯುವುದುಂಟು. ಎಂದಿನಂತೆ ಮೊದಲೇ ನಿಗಧಿಗೊಂಡಿದ್ದ ಲಂಡನ್ ಫ್ಯಾಷನ್ ವೀಕ್, ಬ್ರಿಟನ್ ಕ್ವೀನ್ ಎಲಿಜಬತ್‌ಗೆ ಗೌರವಾರ್ಪಣೆ ಸಲ್ಲಿಸಿ ಆರಂಭಗೊಂಡಿತು.
ಡಿಸೈನರ್‌ಗಳ ಸಂತೆ
ಲಂಡನ್ ಫ್ಯಾಷನ್ ವೀಕ್‌ನಲ್ಲಿ ಈ ಬಾರಿ ಸುಮಾರು ೧೦೬ ಕ್ಕೂ ಹೆಚ್ಚು ಡಿಸೈನರ್‌ಗಳು ಭಾಗವಹಿಸಿದರೆನ್ನಲಾಗಿದೆ. ವಿಶ್ವಾದಾದ್ಯಂತ ಖ್ಯಾತಿಗಳಿಸಿರುವ ಡಿಸೈನರ್‌ಗಳು ತಮ್ಮ ಕ್ರಿಯೇಟಿವಿಟಿಯನ್ನು ಈ ವೇದಿಕೆ ಮೂಲಕ ತೆರೆದಿಟ್ಟರು.
ನಾನ್‌ವೇರಬಲ್ ಡಿಸೈನ್‌ಗಳ ಅಬ್ಬರ
ಅವುಗಳಲ್ಲಿ ಒಂದಿಷ್ಟು ಡಿಸೈನರ್‌ಗಳು ಕ್ರಿಯೇಟಿವಿಟಿಗೆ ಒತ್ತು ಕೊಟ್ಟರೇ, ಮತ್ತೊಂದಿಷ್ಟು ಡಿಸೈನರ್‌ಗಳು ನಾನ್‌ವೇರಬಲ್ ಕೆಟಗರಿಗೆ ಪ್ರಾಮುಖ್ಯತೆ ನೀಡಿದ್ದರು. ಅವುಗಳಲ್ಲಿ ಒಂದಿಷ್ಟು ಮಂದಿ ಹುಬ್ಬೇರಿಸುವಂತಹ ಹಾಟ್ ಡಿಸೈನರ್‌ವೇರ್‌ಗಳಿಗೆ ಆದ್ಯತೆ ನೀಡಿದ್ದರು. ಬಹುತೇಕ ಡಿಸೈನರ್‌ಗಳು ಮಾಡೆಲ್‌ಗಳ ಬದಲಾಗಿ ಸ್ಥಳೀಯ ನಟ-ನಟಿಯರನ್ನೇ ಆಯ್ಕೆ ಮಾಡಿ ರ್ಯಾಂಪ್ ವಾಕ್ ಮಾಡಿಸಿದರು. ಇವುಗಳಲ್ಲಿ ಕೆಲವು ಡಿಸೈನರ್‌ವೇರ್‌ಗಳು ಬ್ರಿಟಿಷ್ ಕ್ಲಾಸಿ ಸಿಸ್ಟಂಗೆ ಚಾಲೆಂಜ್ ಹಾಕುವಂತಿದ್ದವು ಎನ್ನುತ್ತಾರೆ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿದ್ದ ಪ್ರೇಕ್ಷಕರೊಬ್ಬರು. ಇದಕ್ಕೆ ಪೂರಕ ಎಂಬಂತೆ ಡಿಸೈನರ್ ಸ್ಟೀವ್ ಸ್ಟೂಕಿಯವರು ಬ್ರೀಟಿಷ್ ಯೂನಿಫಾರ್ಮ್ ಥೀಮನ್ನೇ ಸ್ಪೂರ್ತಿಯಾಗಿಸಿಕೊಂಡು ಡಿಸೈನರ್‌ವೇರ್ ರೂಪಿಸಿದ್ದರು.
ಇನ್ನು ಡಿಸೈನರ್ ಮೊಲ್ಲಿಯವರ ಲಾರ್ಜರ್ ದ್ಯಾನ್ ಲೈಫ್ ಥೀಮ್‌ನಲ್ಲಿ ವೈಬ್ರೆಂಟ್ ಶೇಡ್‌ನ ಡಿಸೈನರ್‌ವೇರ್‌ಗಳು ನೋಡುಗರ ಹುಬ್ಬೇರಿಸಿದವು.
ಡಿಸೈನರ್ ಅರ್ಲಿಂಗ್‌ಟನ್, ರೆಜಿನೊಪ್ಯೋ, ಸಿಮನೊರೋಚಾ, ಕ್ರಿಸ್ಟೋಫರ್, ಆಂಡೆರ್‌ಸನ್, ಮಾಶಾಪ್, ಸ್ಟೀವನ್‌ಸ್ಟಾಕಿ, ಎಡ್ವರ್ಡ್, ಪಾರಿಯಾ, ಹ್ಯಾರಿ, ಎಲಾನ್ ಅಂತೋನಿ, ಸೇರಿದಂತೆ ಖ್ಯಾತ ಡಿಸೈನರ್‌ಗಳು ಈ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಿ, ನಾನಾ ಕ್ರಿಯೇಟಿವಿಟಿಗೆ ಖುದ್ದು ಸಾಕ್ಷಿಯಾದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ : Fashion trend | ಯಂಗ್‌ಲುಕ್‌ಗೆ ಸಾಥ್ ನೀಡುವ ವ್ರಾಪ್ ಹೆಡ್‌ಬ್ಯಾಂಡ್ಸ್