ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೇಕಪ್ ಕಾರ್ಯಾಗಾರಗಳಲ್ಲಿ (Makeup Class) ತರಬೇತಿ ಪಡೆಯುವ ಬ್ಯೂಟಿ ಪ್ರಿಯ ಮಹಿಳೆಯರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಸಾಕಷ್ಟು ಸದುಪಯೋಗ ಪಡೆಯಬಹುದು ಎನ್ನುತ್ತಾರೆ ಸೌಂದರ್ಯ ತಜ್ಞರು. ಹೌದು, ಇತ್ತೀಚೆಗೆ ಮೇಕಪ್ ಪ್ರಿಯರು ಹೆಚ್ಚಾಗುತ್ತಿದ್ದಂತೆ ಇದೀಗ ಸೆಲ್ಫ್ ಮೇಕಪ್ ತರಗತಿ ಹಾಗೂ ಒಂದೆರೆಡು ದಿನದ ಇಲ್ಲವೇ ವಾರದ ತರಬೇತಿ ಕಾರ್ಯಾಗಾರಗಳನ್ನು ನಡೆಸುವ ಬ್ಯೂಟಿ ಎಕ್ಸ್‌ಪಟ್ರ್ಸ್ ಸಂಖ್ಯೆಯೂ ಹೆಚ್ಚಾಗಿದೆ. ಒಂದು ದಿನ, ಒಂದು ವಾರ ಹೀಗೆ ಶಾರ್ಟ್ ಟರ್ಮ್ ಕೋರ್ಸ್‌ಗಳ ಮೂಲಕ ಸೆಲ್ಫ್ ಮೇಕಪ್ ಕುರಿತಂತೆ ಹೇಳಿಕೊಡುವ ಈ ಕಾರ್ಯಾಗಾರಗಳು ಇದೀಗ ಆನ್‌ಲೈನ್ ಹಾಗೂ ಆಫ್‌ಲೈನ್‌ಗಳಲ್ಲೂ ನಡೆಯುತ್ತಿವೆ. ಈ ತರಗತಿಗಳಿಗೆ ಕೇಳಿದಷ್ಟು ಶುಲ್ಕ ನೀಡಿ, ಸೇರಿಕೊಳ್ಳುವ ಮಾನಿನಿಯರು ಇಲ್ಲಿ ಕಲಿಯುವುದರೊಂದಿಗೆ ಮತ್ತೊಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು ಎನ್ನುವ ಸೌಂದರ್ಯ ತಜ್ಞರು ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
ಸರ್ಟಿಫೈಡ್ ಕೋರ್ಸ್
ಯಾವುದೇ ಕಾರ್ಯಾಗಾರ ಅಥವಾ ಮೇಕಪ್ ಕೋರ್ಸ್ ಮಾಡುವುದಾದಲ್ಲಿ ನೀವು ತರಬೇತಿ ಪಡೆಯುತ್ತಿರುವ ಬ್ಯೂಟಿಶೀಯನ್ ಸರ್ಟಿಫೈಡ್ ಪಾರ್ಲರ್ ಹೊಂದಿದ್ದಾರೆಯೇ ಅಥವಾ ಎಕ್ಸ್‌ಪರ್ಟ್ ಹೌದಾ ಅಲ್ಲವೇ ಎಂಬುದನ್ನು ಮೊದಲೇ ತಿಳಿದುಕೊಳ್ಳಿ.
ಗುಣಮಟ್ಟದ ಮೇಕಪ್ ಕಿಟ್
ಕಾರ್ಯಾಗಾರಗಳಲ್ಲಿ ಬಳಸುವ ಮೇಕಪ್ ಸಾಧನಗಳು ಹಾಗೂ ಕಿಟ್ ಗುಣಮಟ್ಟದ ಬ್ರಾಂಡ್ ಹೊಂದಿವೆಯೇ ಎಂಬುದನ್ನು ತಿಳಿದುಕೊಂಡು ಆ ಸಂಸ್ಥೆಯ ಸದಸ್ಯರಾಗಿ. ಇಲ್ಲವಾದಲ್ಲಿ ನಿರಾಕರಿಸಿ.
ಕಾರ್ಯಾಗಾರ ಸರ್ಟಿಫಿಕೇಟ್ ಪಡೆಯಿರಿ
ಒಂದು ದಿನ ಅಥವಾ ಒಂದು ವಾರದ ಕಾರ್ಯಾಗಾರದಲ್ಲಿ ಕೊನೆಯಲ್ಲಿ ತರಬೇತಿ ಪಡೆದಿರುವ ಸರ್ಟಿಫಿಕೇಟ್ ಪಡೆಯಿರಿ. ಇದು ನಿಮಗೆ ಮುಂದೊಮ್ಮೆ ಸಹಾಯವಾಗಬಹುದು.
ಪ್ರಾಕ್ಟಿಕಲ್ ಅನುಭವ
ಕಾರ್ಯಾಗಾರದಲ್ಲಿ ಮೇಕಪ್ ಮಾಡುವ ಪ್ರಾಕ್ಟಿಕಲ್ ಅನುಭವದಲ್ಲಿ ನೀವು ಟ್ರಯಲ್ ಮಾಡಬೇಕಿದ್ದಲ್ಲಿ, ಸದಾವಕಾಶವನ್ನು ಉಪಯೋಗಿಸಿಕೊಳ್ಳಿ. ಇದು ನಿಮ್ಮ ಡೌಟ್‌ಗಳಿಗೆ ಪರಿಹಾರ ನೀಡಬಲ್ಲದು.
ಸೌಂದರ್ಯ ತಜ್ಞರ ವಿವರ
ನೀವು ತರಬೇತಿ ಪಡೆಯುತ್ತಿರುವ ಸೌಂದರ್ಯ ತಜ್ಞರ ವಿವರ ಪಡೆದು ನೋಂದಾಯಿಸಿ. ಸುಖಾಸುಮ್ಮನೇ ಹೇಳ ಹೆಸರಿಲ್ಲದ ಮೇಕಪ್ ತಜ್ಞರ ಬಳಿ ತರಬೇತಿ ಉಪಯೋಗವಾಗುವುದಿಲ್ಲ ಎಂಬುದು ನೆನಪಿರಲಿ.
ಆನ್‌ಲೈನ್ ಕಾರ್ಯಾಗಾರಗಳ ಆಯ್ಕೆ ಬೇಡ
ಆನ್‌ಲೈನ್ ಮೇಕಪ್ ಕಾರ್ಯಾಗಾರಗಳಿಂದ ಕಲಿಯಲು ಕಷ್ಟಸಾಧ್ಯ. ಇದರಿಂದ ಯಾವುದೇ ಪ್ರಯೋಜನವಾಗದು. ಒಂದಿಷ್ಟು ಮಾಹಿತಿ ಪಡೆಯಬಹುದಷ್ಟೇ! ಹಾಗಾಗಿ, ಆನ್‌ಲೈನ್ ಕಾರ್ಯಾಗಾರಗಳಿಗೆ ಸೇರುವ ಬದಲು ಪ್ರಾತ್ಯಕ್ಷಿಕೆ ನೀಡುವಂತಹ ತರಬೇತಿಗಳಿಗೆ ಮಾತ್ರ ಸೇರಿಕೊಳ್ಳಿ.
ಅಪ್‌ಡೇಟ್ ಮಾಹಿತಿ ತಿಳಿದುಕೊಳ್ಳಿ
ಕಾರ್ಯಾಗಾರದಲ್ಲಿ ಇಂದಿನ ಮೇಕಪ್ ಟ್ರೆಂಡ್ ಹಾಗೂ ಚಾಲ್ತಿಯಲ್ಲಿರುವ ಮೇಕಪ್ ಕುರಿತಂತೆ ತಿಳಿದುಕೊಳ್ಳಿ. ಹೇಗೆಲ್ಲಾ ಅವಕಾಶಗಳಿವೆ ಎಂಬುದರ ಬಗ್ಗೆ ಮಾಹಿತಿ ಪಡೆಯಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show: ರ‍್ಯಾಂಪ್‌ನಲ್ಲಿ ಜ್ಯುವೆಲರಿಗಳೊಂದಿಗೆ ಮನ ಸೆಳೆದ ಡಿಸೈನರ್ ಫಾರ್ ಎವರ್ ನವೀನ್ ಕುಮಾರ್ ಗೌನ್ಸ್