ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಣ್ಣಿನ ರೆಪ್ಪೆಯ ಸೌಂದರ್ಯ ಹೆಚ್ಚಿಸುವ ವ್ಯಾಲ್ಯೂಮೈಸಿಂಗ್ ಹಾಗೂ ಕರ್ಲಿಂಗ್ ಮಸ್ಕರಾಗಳು (Maskara Secrets) ಬ್ಯೂಟಿ ಲೋಕದಲ್ಲಿ ಟ್ರೆಂಡಿಯಾಗಿವೆ. ಸಾಮಾನ್ಯ ರೆಪ್ಪೆಯನ್ನು ಆಕರ್ಷಕವಾಗಿಸಬಲ್ಲ ಅಂದರೇ, ಹಚ್ಚಿದ ನಂತರ ದಪ್ಪನಾಗಿ ಬಿಂಬಿಸಬಲ್ಲ ವಾಲ್ಯೂಮ್ ಹೆಚ್ಚಿಸುವಂತವು ಹಾಗೂ ಕರ್ಲಿ ಶೇಪ್ ನೀಡುವ ಮಸ್ಕರಾಗಳು ಸಾಮಾನ್ಯ ಮಹಿಳೆಯರನ್ನು ಸೆಳೆದಿವೆ.
ಐ ಮೇಕಪ್ ಹೈಲೈಟ್ ಮಾಡುವ ಮಸ್ಕರಾ
ಮೊದಲೆಲ್ಲಾ ಕಣ್ಣಿನ ರೆಪ್ಪೆಯನ್ನು ಗಾಢವಾಗಿಸುವ ಮಸ್ಕರಾಗಳು ಬ್ಲಾಕ್ ಕಲರ್‌ನಲ್ಲಿ ಮಾತ್ರ ಲಭ್ಯವಿದ್ದವು, ಬರಬರುತ್ತಾ ಬ್ರೌನ್ ಹಾಗೂ ಲೈಟ್ ಬ್ಲಾಕ್, ಡಾರ್ಕ್ ಬ್ಲಾಕ್, ಎಬೋನಿ ಬ್ಲಾಕ್ ಸೇರಿದಂತೆ ಕೊಂಚ ಬದಲಾಗುವ ಶೇಡ್‌ಗಳಲ್ಲಿ ಬಿಡುಗಡೆಗೊಂಡವು. ಮೇಕಪ್‌ನ ಒಂದು ಚಿಕ್ಕ ಭಾಗವಾಗಿದ್ದ ಮಸ್ಕರಾ ಇಡೀ ಕಂಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಬ್ಯೂಟಿ ಟ್ರೆಂಡ್‌ನಲ್ಲಿ ವಾಲ್ಯೂಮೈಸಿಂಗ್ ಹಾಗೂ ಕರ್ಲಿ ಮಸ್ಕರಾಗಳು ಸ್ತ್ರೀಯರ ಮನಗೆದ್ದಿದ್ದು, ಮೇಕಪ್‌ನ ಭಾಗವಾಗಿ ಹೋಗಿವೆ.
ವಾಲ್ಯೂಮ್ ಹೆಚ್ಚಿಸುವ ಮಸ್ಕರಾ
ಈ ಮಸ್ಕರಾವನ್ನು ರೆಪ್ಪೆಗೆ ಒಂದು ಕೋಟ್ ಹಚ್ಚಿದರೇ ಸಾಕು, ಒಣಗಿದಾಕ್ಷಣ ದಪ್ಪನಾಗಿದ್ದಂತೆ ಗಾಢವಾಗಿ ಬಿಂಬಿಸುತ್ತವೆ. ಇನ್ನು ಕರ್ಲಿಂಗ್ ಮಸ್ಕರಾ ಇರುವ ರೆಪ್ಪೆಗಳನ್ನು ಉದ್ದನಾಗಿರುವಂತೆ ಕಾಮನಬಿಲ್ಲಿನಂತೆ ಭಾಗಿರುವಂತೆ ಬಿಂಬಿಸುತ್ತವೆ. ಸಿಂಪಲ್ ಆಗಿ ಹಚ್ಚಬಹುದಾದ ಈ ಮಸ್ಕರಾಗಳು ಮೇಕಪ್ ಪ್ರಿಯರ ಮಸ್ಟ್ ಮೇಕಪ್ ಸಾಧನಗಳ ಲಿಸ್ಟ್‌ನಲ್ಲಿ ಸೇರಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ರಿಯಾ.
ತೆಳ್ಳಗಿನ ರೆಪ್ಪೆಗಳಿಗೆ ವರದಾನ
ಕೆಲವರಿಗೆ ಕೃತಕ ಐ ಲ್ಯಾಶಸ್ ಹಾಕಿಕೊಳ್ಳುವ ಮನಸ್ಸಿರುವುದಿಲ್ಲ! ಅಂತಹವರು ಈ ಶೈಲಿಯ ಮಸ್ಕರಾಗಳನ್ನು ಬಳಸುತ್ತಾರೆ. ಇರುವ ರೆಪ್ಪೆಗೆ ಈ ಲಿಕ್ವಿಡ್ ಮಸ್ಕರಾ ಹಚ್ಚಿದಾಗ ಅವುಗಳ ಮೇಲೆ ಮತ್ತಷ್ಟು ಕೋಟಿಂಗ್ ಆಗಿ ದಪ್ಪನಾಗಿ ಕಾಣುವುದರಿಂದ ಆಕರ್ಷಕ ಕಂಗಳು ಇಲ್ಯೂಷನ್ ಸೃಷ್ಟಿಸುತ್ತವೆ ಎನ್ನುತ್ತಾರೆ ಸೌಂದರ್ಯ ತಜ್ಞರು.
ಮಸ್ಕರಾ ಪ್ರಿಯರಿಗೆ 3 ಸಲಹೆ
- ತೀರಾ ಹೆಚ್ಚು ಕೋಟ್ ಹಾಕಬೇಡಿ. ಉದುರುವ ಸಾಧ್ಯತೆ ಇರುತ್ತದೆ.
- ಹಚ್ಚಿದ ನಂತರ ಒಂದು ನಿಮಿಷ ಒಣಗಲು ಬಿಡಿ.
- ಗುಣ ಮಟ್ಟದ ಮಸ್ಕರಾ ಖರೀದಿಸಿ.
(ಲೇಖಕಿ : ಫ್ಯಾಷನ್ ಲೇಖಕಿ )
ಇದನ್ನೂ ಓದಿ: Fashion Pageant Awareness: ಫ್ಯಾಷನ್ ಪೇಜೆಂಟ್‌ನಲ್ಲಿ ಭಾಗವಹಿಸುತ್ತಿದ್ದೀರಾ! ಹೆಸರು ನೊಂದಾಯಿಸುವ ಮುನ್ನಇದನ್ನು ಓದಿ ಬಿಡಿ