Site icon Vistara News

Health Tips | ಹೊಸ ವರ್ಷದ ಕನಸು ಗುರಿಗಳ ಪೈಕಿ ಇವಿಷ್ಟು ವರ್ಷಪೂರ್ತಿ ಮುಖ್ಯವಾಗಿರಲಿ!

New year Health Tips

ಹೊಸ ವರ್ಷ ಬಂತೆಂದರೆ, ಹೊಸ ಹೊಸ ರೆಸೊಲ್ಯೂಷನ್‌ ಸಿದ್ಧವಾಗುವುದು ನಿಜ. ಎಲ್ಲರೂ, ಈ ವರ್ಷವಾದರೂ ನಾನು ಇಂಥದ್ದನ್ನು ಮಾಡಬೇಕಿದೆ ಎಂದು ಒಂದು ವರ್ಷಕ್ಕೆ ಒಂದಿಷ್ಟು ಕನಸುಗಳನ್ನೂ ಗುರಿಗಳನ್ನೂ ಹಾಕಿಕೊಳ್ಳುವುದು ಸಹಜ. ಐದಾರು ಕೆಜಿ ತೂಕ ಇಳಿಸಿಕೊಳ್ಳಬೇಕು, ಆರೋಗ್ಯಕರ (Health Tips) ಆಹಾರವನ್ನೇ ಆದಷ್ಟೂ ಸೇವಿಸಬೇಕು, ನಿತ್ಯವೂ ವಾಕಿಂಗ್‌ ಮಾಡಬೇಕು, ಜಿಮ್‌ಗೆ ಸೇರಬೇಕು, ಒಂದಿಷ್ಟು ಬಕೆಟ್‌ ಲಿಸ್ಟ್‌ನಲ್ಲಿದ್ದ ಪ್ರವಾಸೀ ತಾಣಗಳಿಗೆ ಹೋಗಬೇಕು, ಒಂದು ಭರ್ಜರಿ ಸೋಲೋ ಟ್ರಿಪ್‌ ಟ್ರೈ ಮಾಡಬೇಕು, ಸಿಗರೇಟನ್ನು ಬಿಡಬೇಕು ಇತ್ಯಾದಿ ಇತ್ಯಾದಿ ಗುರಿಗಳನ್ನು ತಮ್ಮ ಮುಂದಿರಿಸಿಕೊಂಡು ಈ ವರ್ಷ ಇಷ್ಟಾದರೂ ಸಾಧಿಸಬೇಕು ಎಂದು ಕನಸು ಕಾಣುವ ಮಂದಿ ಬಹಳ. ಆದರೆ, ಅಂದುಕೊಂಡದ್ದನ್ನು ಮಾಡಿದವರೆಷ್ಟು ಮಂದಿ ಎಂಬುದನ್ನು ಇಲ್ಲಿ ಕೇಳಬಾರದು. ಯಾಕೆಂದರೆ ಬಹುತೇಕರ ರೆಸೊಲ್ಯೂಷನ್‌ ಹಾಗೆಯೇ ಉಳಿದುಕೊಳ್ಳುವುದು ಮಾತ್ರ ಸತ್ಯ.

ಇರಲಿ. ಹೊಸ ವರ್ಷದಿಂದಲೇ ಆರೋಗ್ಯದ ವಿಚಾರದಲ್ಲಿ ಮಾತ್ರ ತಾನು ಈ ಬಾರಿ ಖಂಡಿತವಾಗಿಯೂ ಉತ್ತಮ ಜೀವನಕ್ರಮವನ್ನು ರೋಢಿಸಿಕೊಳ್ಳಬೇಕು ಎಂದು ಅಂದುಕೊಂಡವರಿಗೆ ಇಲ್ಲಿ ಕೆಲವು ಮುಖ್ಯ ಸೂತ್ರಗಳಿವೆ. ದು ಕೊಂಡದ್ದರಲ್ಲಿ ಯಾವುದು ಅಗತ್ಯ ಎಂಬುದನ್ನು ಮನಗಾಣಿಸುವ ಐದು ವಿಚಾರಗಳಿವೆ. ಇವಕ್ಕೆ ಗಮನ ಕೊಟ್ಟರೆ ೨೦೨೩ ಖಂಡಿವಾಗಿಯೂ ಹರುಷವನ್ನೇ ತಂದೀತು!

೧. ನಿಮ್ಮ ಭಾವನೆಗಳನ್ನು ಗಮನಿಸಿ. ಪ್ರತಿದಿನವೂ ನಮ್ಮ ಭಾವನೆಗಳಲ್ಲಿ ಹೇಗೆ ಏರಿಳಿತಗಳಾಗಿವೆ ಎಂಬ ಲೆಕ್ಕ ನಿಮಗೆ ಸಿಗಬೇಕಾದರೆ ಒಂದು ಪುಟ್ಟ ಡೈರಿಯಲ್ಲಿ ಭಾವನೆಗಳ ವಿಚಾರ ಬರೆಯಲು ಆರಂಭಿಸಿ. ಹೀಗೆ ಮಾಡುವುದರಿಂದ ನಿಮ್ಮ ಭಾವನೆಗಳಲ್ಲಿ ತಾಳ ತಪ್ಪಿದ್ದ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದು. ಅದನ್ನು ಸರಿದಾರಿಗೆ ತರಬಹುದು. ನಿಮ್ಮ ಅವಲೋಕನ ನಿಮಗೆ ಸಾಧ್ಯವಾಗಿ, ಅದನ್ನು ಟ್ಯೂನ್‌ ಮಾಡಿಕೊಳ್ಳಲು ನಿಮಗೇ ಸಾಧ್ಯವಾಗುವುದು. ಉದಾಹರಣೆಗೆ ಸಣ್ಣಪುಟ್ಟ ವಿಚಾರಗಳಿಗೆ ಕೋಪ ಬರುತ್ತಿದ್ದರೆ, ಕೊನೆಗೆ ನಿಜವಾಗಿಯೂ ನೀವು ಕೋಪ ಮಾಡಿಕೊಂಡಿದ್ದು ಕ್ಷುಲ್ಲಕ ವಿಷಯಕ್ಕೋ ಅಲ್ಲವೋ ಎಂಬುದನ್ನು ನೀವೇ ಅವಲೋಕಿಸಲು ಸಾಧ್ಯ. ಸರಿಪಡಿಸುವುದೂ ಸಾಧ್ಯವಿದೆ.

೨. ವ್ಯಾಯಾಮ ಮಾಡುವುದುದ ಸಾಧ್ಯವೇ ಆಗುತ್ತಿಲ್ಲವೇ? ಅಂದುಕೊಂಡಂತೆ ನಡಿಗೆಯೂ ಸಾಧ್ಯವಾಗುತ್ತಿಲ್ಲವೇ? ಸಮಯ ಹೋಂದಿಕೆಯೇ ಕಷ್ಟ ಅನಿಸುತ್ತಿದೆಯೇ? ಹಾಗಾದರೆ, ದಿನಕ್ಕೆ ಹತ್ತೇ ನಿಮಿಷ ಬಿಡುವು ಮಾಡಿಕೊಂಡು ನಿಮಗಾಗಿ ಎತ್ತಿಡಿ. ಆ ಸಮಯವನ್ನು ವಾಕ್‌ ಮಾಡಲು ಬಳಸಿ. ಪ್ರತಿದಿನ ಏನೇ ಆದರೂ ಆಕಾಶ ತಲೆಕಳಚಿ ಬಿದ್ದರೂ ನನ್ನ ವಾಕಿಂಗ್‌ನ ಹತ್ತು ನಿಮಿಷವನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಶಪಥ ಮಾಡಿ. ನಿಮ್ಮ ಬಗ್ಗೆಯೇ ಒಂದು ದಿನ ನಿಮಗೆ ಖುಷಿಯಾದೀತು. ಇಂಥ ನಿರ್ಧಾರ ಕೊನೆಗೂ ನೀವು ನಿಮಗಾಗಿ, ನಿಮ್ಮ ಆರೋಗ್ಯಕ್ಕಾಗಿ ನಡಿಗೆಯನ್ನು ದೈನಂದಿನ ಚಟುವಟಿಕೆಯಂತೆ ಮಾಡಲು ಆರಂಭಿಸುತ್ತೀರಿ!

೩. ಬದಲಾವಣೆ ತರುವುದು ಕಷ್ಟವಲ್ಲ. ಮನಸ್ಸಿದ್ದರೆ ಖಂಡಿತ ನಿಮ್ಮಲ್ಲಿ ನೀವು ಅಂದುಕೊಂಡ ಬದಲಾವಣೆ ಮಾಡಿಕೊಳ್ಳಬಹುದು. ಆದರೆ, ಒಮ್ಮೆಯೇ ಹತ್ತು ವಿಚಾರವನ್ನು ಮಾಡಲು ಹೋಗುವುದುದ ಖಂಡಿತ ಸಾಧ್ಯವಿಲ್ಲ. ಒಂದೊಂದಾಗಿ ಅಂದುಕೊಂಡದ್ದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ. ಒಮ್ಮೆ ಒಂದೇ ವಿಚಾರವನ್ನು ಸರಿಪಡಿಸಲು ಸಾಧ್ಯ, ಅದನ್ನು ಸಾಧಿಸಿದ ಮೇಲೆ ಮತ್ತೊಂದು ಮಾಡಿ. ಎರಡು ದೋಣಿಯಲ್ಲಿ ಒಟ್ಟಿಗೆ ಕಾಲಿಡಬೇಡಿ.

೪. ಪ್ರತಿನಿತ್ಯ ಹೆಚ್ಚು ಸ್ಕ್ರೀನ್‌ ಟೈಂ ಕೊಡುವುದು ಒಳ್ಳೆಯದಲ್ಲ. ಇದು ನಮ್ಮ ಕಣ್ಣಿಗೆ ಅತ್ಯಂತ ಹಾನಿಕಾರಕ. ಇದನ್ನು ಮೊದಲು ನಿಮ್ಮ ಮುಖ್ಯ ಗುರಿಯನ್ನಾಗಿಸಿ. ಪ್ರತಿನಿತ್ಯ ಉತ್ತಮ ನಿದ್ರೆ ಹಾಗೂ ಕಡಿಮೆ ಡಿಜಿಟಲ್‌ ಸಮಯ ಎಂಬ ಮಂತ್ರ ನಿಮ್ಮದಾಗಿರಲಿ.

೫. ಮಾನಸಿಕ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿ. ದೇಹಾರೋಗ್ಯದಷ್ಟೇ ಮುಖ್ಯ ಮಾನಸಿಕ ಆರೋಗ್ಯ ಎಂಬುದು ನಿಮಗೆ ಗೊತ್ತಿರಲಿ. ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಸ್ವಾತಂತ್ರ್ಯ ಇನ್ನೊಬ್ಬರಿಗೆ ಕೊಡಬೇಡಿ. ಎಲ್ಲಕ್ಕಿಂತ ಮುಖ್ಯ ಆರೋಗ್ಯ ಎಂಬುದು ನಿಮಗೆ ಗೊತ್ತಿರಲಿ. ೨೦೨೩ರ ಅವಧಿಯಲ್ಲಿ ಇವಿಷ್ಟು ಆರೋಗ್ಯಕರ ವಿಚಾರಗಳು ನಮ್ಮ ಮನಸ್ಸಲ್ಲಿದ್ದರೆ ಅಂದುಕೊಂಡದ್ದನ್ನು ಸಾಧಿಸಲು ಕಷ್ಟವಿಲ್ಲ.

ಇದನ್ನೂ ಓದಿ | Coriander Benefits | ಕೊತ್ತಂಬರಿ ಬೀಜ ಮತ್ತು ಸೊಪ್ಪು- ಅಡುಗೆಗೆ ರುಚಿ, ಆರೋಗ್ಯಕ್ಕೂ ಹಿತ

Exit mobile version