Site icon Vistara News

Mehandi Awareness: ಬೀದಿ ಬದಿ ಮದರಂಗಿ ಹಾಕಿಕೊಳ್ಳುವ ಮುನ್ನ ಈ ಸಂಗತಿ ತಿಳಿದುಕೊಂಡಿರಿ

Mehandi Awareness

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬೀದಿ ಬದಿ ಮದರಂಗಿ ಅಥವಾ ಮೆಹೆಂದಿ (Mehandi awareness) ಚಿತ್ತಾರ ಕೈಗಳ ಮೇಲೆ ಮೂಡಿಸುವ ಕಲಾಕಾರರು ಇಂದು ಮೊದಲಿಗಿಂತ ಹೆಚ್ಚಾಗಿದ್ದಾರೆ. ಹೌದು. ಉದ್ಯಾನನಗರಿಯ ಪ್ರಮುಖ ಶಾಪಿಂಗ್‌ ಸೆಂಟರ್‌ಗಳಲ್ಲಿ, ಅಲ್ಲಲ್ಲಿ ತಮ್ಮದೇ ಆದ ಇನ್‌ಸ್ಟಂಟ್‌ ಸ್ಟಾಲ್‌ ಹಾಗೂ ಶಾಪ್‌ಗಳನ್ನು ಇರಿಸಿಕೊಂಡಿರುವ ಇವರು, ತಮ್ಮ ಬಳಿ ಬರುವ ಸ್ತ್ರೀಯರಿಗೆ ಫಟಾಫಟ್‌ ಮೆಹೆಂದಿ ಚಿತ್ತಾರ ಮೂಡಿಸುತ್ತಾ ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳತೊಡಗಿದ್ದಾರೆ.

For the attention of street-side Madarangi Chittar

ಬೀದಿ ಬದಿಯ ಮೆಹೆಂದಿ ಕಲಾಕಾರರು

ಉತ್ತರ ಭಾರತದಿಂದ ಬಂದಂತಹ ಇಂತಹ ಸಾಕಷ್ಟು ಮಂದಿ ಮೆಹೆಂದಿ ಕಲಾಕಾರರು ಇದೀಗ ಬೆಂಗಳೂರಿನಲ್ಲಿ ಸ್ಟ್ರೀಟ್‌ ಶಾಪಿಂಗ್‌ ಪ್ರಿಯರನ್ನು ಸೆಳೆಯತೊಡಗಿದ್ದಾರೆ. ಮಹಿಳೆಯರನ್ನು ಹೆಚ್ಚು ಕಾಯಿಸದೇ, ಕೈಗೆಟಕುವ ದರದಲ್ಲಿ ಚಿತ್ತಾರ ಮೂಡಿಸುವ ಇವರ ಕಲಾ ಪ್ರದರ್ಶನದಿಂದಾಗಿ ದಿನದಿಂದ ದಿನಕ್ಕೆ ಹೆಚ್ಚು ಮೆಹೆಂದಿ ಹಾಕಿಸಿಕೊಳ್ಳುವವರು ಹೆಚ್ಚಾಗಿದ್ದಾರೆ. ಎಲ್ಲದಕ್ಕಿಂತ ಖುಷಿ ವಿಚಾರ ಎಂದರೇ, ಮೆಹೆಂದಿ ಹಾಕಿಸಿಕೊಳ್ಳಲು ಇವರ ಬಳಿ ಹೆಚ್ಚು ಕಾಯುವ ಅಗತ್ಯವಿಲ್ಲ. ರಸ್ತೆಯ ಪುಟ್‌ಪಾತ್‌ನಲ್ಲೆ ಕುರ್ಚಿ ಹಾಕಿ ಕುಳ್ಳಿರಿಸಿ, ಕೆಲ ಗಂಟೆಯೊಳಗೆ ಕೈಕಾಲುಗಳಿಗೆ ಸುಂದರ ಚಿತ್ತಾರ ಮೂಡಿಸುತ್ತಾರೆ. ಯಾವುದೇ ತಲೆಬಿಸಿಯಿಲ್ಲದೇ ಸ್ತ್ರೀಯರ ಮನೋಭಿಲಾಷೆಗೆ ತಕ್ಕಂತೆ ಸುಂದರವಾದ ಮೆಹೆಂದಿ ಚಿತ್ತಾರಗಳನ್ನು ಕೈಗಳ ಮೇಲೆ ಅನಾವರಣಗೊಳಿಸುತ್ತಾರೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್.

ಕೈಗೆಟಕುವ ದರದಲ್ಲಿ ಮದರಂಗಿ ಚಿತ್ತಾರ

ಬ್ಯೂಟಿ ಪಾರ್ಲರ್‌ಗಳಿಗೆ ಹೋಲಿಸಿದಲ್ಲಿ ಇವರ ಬಳಿ ತೀರಾ ಕಡಿಮೆ ದರದಲ್ಲಿ ಚಿತ್ತಾರ ಮೂಡಿಸಿಕೊಳ್ಳಬಹುದು. ಇವರ ಬಳಿ ಒಂದು ಕೈಗಳಿಗೆ 200 ರೂ. ಗಳಿಂದ ಆರಂಭವಾಗುವ ಶುಲ್ಕ ಅದೇ ಪಾರ್ಲರ್‌ಗಳಲ್ಲಿ ಐನೂರು ರೂ. ಗಳವರೆಗೂ ಚಾರ್ಜ್ ಮಾಡುತ್ತಾರೆ ಎನ್ನುತ್ತಾರೆ ಮೆಹೆಂದಿ ಎಕ್ಸ್ಪರ್ಟ್.

ಕಸ್ಟಮೈಸ್ ಮದರಂಗಿ ಸೊಬಗು

ಪಾಪ್ಯುಲರ್‌ ಮದರಂಗಿ ಚಿತ್ತಾರವನ್ನೊಳಗೊಂಡ ಆಲ್ಬಂಗಳನ್ನು ಪ್ರದರ್ಶಿಸುವ ಈ ಮೆಹೆಂದಿ ಕಲಾಕಾರರು, ಇತ್ತೀಚೆಗೆ ತಮ್ಮಲ್ಲಿ ಬರುವ ಗ್ರಾಹಕರುಗಳ ಆರ್ಡರ್‌ ಮೇರೆಗೂ ಮದುವೆ ಮನೆಗೂ ಹೋಗಿ ಚಿತ್ತಾರ ಮೂಡಿಸುತ್ತಾರೆ. ಯಾವುದೇ ಸಮಾರಂಭಗಳಿಗೂ ಒಂದು ಕರೆಗೆ ಒಗೊಟ್ಟು ತೆರಳುವ ಇವರು ಸದ್ಯ ಮೆಹೆಂದಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೀದಿ ಬದಿ ಮದರಂಗಿ ಚಿತ್ತಾರ ಮೂಡಿಸಿಕೊಳ್ಳುವವರ ಗಮನಕ್ಕೆ

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Hairpin Fashion: ಹುಡುಗಿಯರ ಫಂಕಿ ಲುಕ್‌ಗೆ ಬಂತು ಜಂಕ್‌ ಹೇರ್‌ ಪಿನ್ಸ್

Exit mobile version