ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಫ್ಯಾಷನ್‌ನಲ್ಲಿ ಇದೀಗ ಮೆನ್ಸ್ ಕೋ-ಆರ್ಡ್ ಪ್ಯಾಂಟ್ (Mens Co-Ord Suit Fashion) ಸೂಟ್‌ಗಳು ಲಗ್ಗೆ ಇಟ್ಟಿವೆ. ಹೌದು, ಇಷ್ಟು ದಿನ ಕೋ-ಆರ್ಡ್ ಸೂಟ್‌ಗಳು ಕೇವಲ ಯುವತಿಯರ ವಾರ್ಡ್ರೋಬ್ ಸೇರಿದ್ದವು. ಇದೀಗ ಯುವಕರನ್ನು ಆವರಿಸಿಕೊಂಡು, ಸವಾರಿ ಮಾಡತೊಡಗಿವೆ. ವಿಶೇಷವೆಂದರೇ, ಮಾನೋಕ್ರೋಮ್ ಶೇಡ್‌ಗಳವು ಮಾತ್ರವಲ್ಲ, ಪ್ರಿಂಟೆಡ್‌ನವು ಕೂಡ ಎಂಟ್ರಿ ನೀಡಿವೆ.
ಯುವಕರ ಟ್ರೆಂಡ್‌ನಲ್ಲಿರುವ ಕೋ-ಆರ್ಡ್ ಸೂಟ್
ಯುವಕರು ಅದರಲ್ಲೂ ಎಂಟರ್ಟೈನ್ಮೆಂಟ್ ಹಾಗೂ ಮೀಡಿಯಾ ಮತ್ತು ಫ್ಯಾಷನ್ ಕ್ಷೇತ್ರದವರು ಈ ಕೋ-ಆರ್ಡ್ ಸೆಟ್ ಸೂಟ್ ಪ್ರೇಮಿಗಳು. ಇನ್ನು ಟೀನೇಜ್ ಹುಡುಗರು ಇವುಗಳಿಂದ ಕಂಪ್ಲೀಟ್ ದೂರ. ಮಧ್ಯ ವಯಸ್ಸಿನ ಪುರುಷರು ಕೂಡ ಇತ್ತೀಚೆಗೆ ಈ ವಿನ್ಯಾಸಗಳತ್ತ ಒಲವು ತೋರಿಸಲಾರಂಭಿಸಿದ್ದಾರೆ. ಜೊತೆಗೆ ಮಾನೋಕ್ರೋಮ್ ಶೇಡ್‌ಗಳತ್ತ ವಾಲಿದ್ದಾರೆ. ಇನ್ನು ಫಂಕಿ ಹಾಗೂ ಹೊಸ ಫ್ಯಾಷನ್ ಸ್ಟೇಟ್ಮೆಂಟ್ ಪ್ರಯೋಗಿಸುವವರು ಹಾಗೂ ಫ್ಯಾಷನ್ ಲವರ್ಸ್ ಈ ಪ್ರಿಂಟೆಡ್ ಕೋ-ಆರ್ಡ್ ಸೆಟ್ ಸೂಟ್‌ಗಳನ್ನು ಧರಿಸಲಾರಂಭಿಸಿದ್ದಾರೆ. ಪಾರ್ಟಿಗಳಲ್ಲಿ ಮಾತ್ರವಲ್ಲ, ಸಭೆ-ಸಮಾರಂಭಗಳಲ್ಲೂ ಇವುಗಳ ಛಾಯೆ ಇದೀಗ ಹೆಚ್ಚಾಗತೊಡಗಿದೆ ಎನ್ನುತ್ತಾರೆ ನಟ ಹರ್ಷವರ್ಧನ್ ಕಪೂರ್. ಇವರು ಕೂಡ ಕೋ-ಆರ್ಡ್ ಸೆಟ್ ಸೂಟ್ ಪ್ರೇಮಿಯಂತೆ. ಇವು ಕಂಪ್ಲೀಟ್ ಮ್ಯಾನ್ಲಿ ಲುಕ್‌ನೊಂದಿಗೆ ಹೊಸ ಫ್ಯಾಷನ್ ಸ್ಟೇಟ್ಮೆಂಟ್ ಕ್ರಿಯೇಟ್ ಮಾಡುತ್ತವೆ ಎನ್ನುತ್ತಾರೆ.
ಕೋ-ಆರ್ಡ್ ಸೂಟ್ ಆಯ್ಕೆ ಹೇಗೆ?
ಆಯಾ ಹುದ್ದೆ ಹಾಗೂ ಸಂದರ್ಭಕ್ಕೆ ತಕ್ಕಂತೆ ಆಯ್ಕೆ ಮಾಡುವುದು ಉತ್ತಮ ಎನ್ನುತ್ತಾರೆ ಸೆಲೆಬ್ರೆಟಿ ಸ್ಟೈಲಿಸ್ಟ್ ಅಮಿತ್. ಅವರ ಪ್ರಕಾರ, ಉನ್ನತ ಸ್ಥಾನದಲ್ಲಿರುವವರು ಆದಷ್ಟೂ ಮಾನೋಕ್ರೋಮ್ ಶೇಡ್‌ಗಳ ಆಯ್ಕೆ ಮಾಡುವುದು ಬೆಸ್ಟ್. ಇನ್ನು ಕಾಲೇಜು ಹುಡುಗರು ಹಾಗೂ ಎಂಟರ್ಟೈನ್ಮೆಂಟ್ ಕ್ಷೇತ್ರದಲ್ಲಿರುವವರು, ಪಾರ್ಟಿ ಪ್ರಿಯರು ಪ್ರಿಂಟೆಡ್ ಹಾಗೂ ಫಂಕಿ ಪ್ರಿಂಟ್ಸ್ ಇರುವಂತಹ ಕೋ-ಆರ್ಡ್ ಸೆಟ್ ಆಯ್ಕೆ ಮಾಡಬಹುದು ಎಂದು ಸಲಹೆ ನೀಡುತ್ತಾರೆ.
ಯುವಕರ ಕೋ-ಆರ್ಡ್ ಸೆಟ್/ಸೂಟ್ ಟಿಪ್ಸ್
- ಟ್ರೆಂಡಿ ಶೇಡ್ಸ್ ಆಯ್ಕೆ ಮಾಡಿ.
- ಫಂಕಿ ಲುಕ್ಗಾಗಿ ಪ್ರಿಂಟ್ಸ್ ಓಕೆ.
- ಆಕ್ಸೆಸರೀಸ್ ಧರಿಸಬೇಡಿ. ಇದ್ದರೂ ಮಿನಿಮಲ್ ಆಗಿರಲಿ.
- ನಿಮ್ಮ ಎತ್ತರಕ್ಕೆ ತಕ್ಕಂತೆ ಸೂಟ್ ಪ್ಯಾಟರ್ನ್ ಇರಲಿ.
- ಹೈ ಫ್ಯಾಷನ್ಗೆ ಈ ಟ್ರೆಂಡ್ ಸೇರುತ್ತದೆ.
- ಪಾರ್ಟಿಗೆ ಹೇಳಿ ಮಾಡಿಸಿದ ಫಾರ್ಮಲ್ ಸೂಟ್.
- ಮಿಕ್ಸ್ ಮ್ಯಾಚ್ ಮಾಡುವ ಆಪ್ಷನ್ ಇದ್ದಲ್ಲಿ ಮುಂದಿನ ಸೀಸನ್ನ್ನಲ್ಲೂ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Colour torn jeans Fashion: ಕಾಲೇಜ್ ಹುಡುಗಿಯರ ಫಂಕಿ ಲಿಸ್ಟ್ ಗೆ ಸೇರಿದ ಕಲರ್ ಟೊರ್ನ್ ಜೀನ್ಸ್