ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸೀಸನ್‌ನ ಫ್ಯಾಷನ್‌ನಲ್ಲಿ ಇದೀಗ ಮೆನ್ಸ್ ಫ್ಯಾಷನ್‌ಗೆ (Mens Fashion) ಸಾಥ್ ನೀಡುವ ಲಿನನ್ ಶರ್ಟ್ ಜಾಕೆಟ್‌ಗಳು ಎಂಟ್ರಿ ನೀಡಿವೆ. ಯುವಕರ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ತಕ್ಕಂತೆ ಧರಿಸಬಹುದಾದ ಈ ಶರ್ಟ್ ಜಾಕೆಟ್‌ಗಳು ಇದೀಗ ಯುವಕರನ್ನು ಮಾತ್ರವಲ್ಲ, ಎಲ್ಲಾ ವಯಸ್ಸಿನ ಪುರುಷರನ್ನು ಬರಸೆಳೆಯುತ್ತಿವೆ.
ಆದರೆ, ಇದೀಗ ಮಲ್ಟಿಪಲ್ ಪಾಕೆಟ್ ಹೊಂದಿರುವ ಸಾಲಿಡ್ ಶೇಡ್‌ನ ಲಿನನ್ ಶರ್ಟ್ ಜಾಕೆಟ್‌ಗಳು ಟ್ರೆಂಡ್‌ನಲ್ಲಿದ್ದು, ನೋಡಲು ಆಕರ್ಷಕವಾಗಿ ಕಾಣುತ್ತಿವೆ. ಸಾಲಿಡ್ ಕಲರ್‌ಗಳಲ್ಲಿ ಲಭ್ಯವಿರುವ ಈ ಶರ್ಟ್ ಜಾಕೆಟ್‌ಗಳು ಪುರುಷರ ಫ್ಯಾಷನ್‌ನಲ್ಲಿ ನಾನಾ ಶೇಡ್‌ಗಳಲ್ಲೂ ಲಭ್ಯವಿದೆ. ಲೈಟ್ ಶೇಡ್ಸ್ ಪಾಸ್ಟೆಲ್ ಶೇಡ್ಸ್ ಹಾಗೂ ಫೆಮಿನೈನ್ ಜಾಕೆಟ್ ಶೇಡ್‌ಗಳು ದೊರೆಯುತ್ತಿವೆ. ಅಚ್ಚರಿ ಎಂಬಂತೆ ಯೂನಿಸೆಕ್ಸ್ ಡಿಸೈನ್‌ನ ಶರ್ಟ್ ಜಾಕೆಟ್‌ಗಳು ಕೂಡ ದೊಡ್ಡ ಬ್ರಾಂಡ್‌ಗಳಲ್ಲಿ ಸಿಗುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕೂಲ್ ಲುಕ್
“ಲಿನನ್ ಶರ್ಟ್‌ಗಳು ಹಾಗೂ ಪ್ಯಾಂಟ್ ಸೂಟ್‌ಗಳು ಟ್ರೆಂಡಿಯಾಗಿದ್ದವು, ಇದೀಗ ಲಿನನ್ ಶರ್ಟ್ ಜಾಕೆಟ್ ಲಗ್ಗೆ ಇಟ್ಟಿದ್ದು, ಈ ಜಾಕೆಟ್ ಕೇವಲ ಈ ಸೀಸನ್‌ನಲ್ಲಲ್ಲ, ಇತರೇ ಯಾವುದೇ ಸೀಸನ್‌ನಲ್ಲೂ ಧರಿಸಬಹುದು. ನಟ ಅಭಿಮನ್ಯು ದಾಸನಿ ಧರಿಸಿರುವ ಈ ಜಾಕೆಟ್ ಸಾಕಷ್ಟು ಫ್ಯಾಷನ್ ಪ್ರಿಯರನ್ನು ಸೆಳೆದಿತ್ತು. ನೋಡಲು ಫಾರ್ಮಲ್ ಕೂಲ್ ಲುಕ್ ನೀಡುವ ಈ ಜಾಕೆಟನ್ನು ಆಫೀಸ್‌ವೇರ್ ಆಗಿಯೂ ಬಳಸಬಹುದು. ಔಟಿಂಗ್‌ನಲ್ಲೂ ಬಳಬಹುದು” ಎನ್ನುತ್ತಾರೆ ಮೆನ್ಸ್ ಸ್ಪೆಷಲ್ ಸ್ಟೈಲಿಸ್ಟ್ ರಿಚರ್ಡ್.
ಲಿನನ್ ಶರ್ಟ್ ಜಾಕೆಟ್ ಮಿಕ್ಸ್-ಮ್ಯಾಚ್
ಲಿನನ್ ಶರ್ಟ್ ಜಾಕೆಟನ್ನು ಪ್ಯಾಂಟ್ ಹಾಗೂ ಶರ್ಟ್ ಜೊತೆಗೆ ಸೆಟ್ ತೆಗೆದುಕೊಂಡಿದ್ದಲ್ಲಿ, ಮುಂದಿನ ಬಾರಿ ಧರಿಸುವಾಗ ಇತರೇ ಪ್ಯಾಂಟ್ ಹಾಗೂ ಶರ್ಟ್ ಜೊತೆಗೂ ಮ್ಯಾಚ್ ಮಾಡಬಹುದು. ಫಾರ್ಮಲ್ ಲುಕ್ ಜೊತೆಗೆ ಫಂಕಿ ಲುಕ್ ಕೂಡ ನೀಡಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ರಾಜನ್. ಅವರ ಪ್ರಕಾರ, ಶರ್ಟ್ ಜಾಕೆಟ್ ಖರೀದಿಸುವಾಗ ಆದಷ್ಟೂ ಎಲ್ಲಾ ಬಗೆಯ ಶರ್ಟ್, ಟೀ ಶರ್ಟ್ ಅಥವಾ ಪ್ಯಾಂಟ್‌ಗೆ ಹೊಂದುವಂತಹ ಶೇಡ್‌ನದ್ದನ್ನು ಆಯ್ಕೆ ಮಾಡಬೇಕು ಎನ್ನುತ್ತಾರೆ.
ಬರ್ಮಡಾ ಜೊತೆಗೆ ಔಟಿಂಗ್ ಲುಕ್
ಬರ್ಮಡಾ ಅಥವಾ ಜೀನ್ಸ್ ಶಾರ್ಟ್ಸ್ ಜೊತೆ ಧರಿಸಿದಲ್ಲಿ ಔಟಿಂಗ್ ಲುಕ್ ಪಡೆಯಬಹುದು. ಡಿಫರೆಂಟ್ ಲುಕ್ ನೀಡುವ ಇದು ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟನ್ನು ಎತ್ತಿ ಹಿಡಿಯುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಲಿನಿನ್ ಶರ್ಟ್ ಜಾಕೆಟ್ ಟಿಪ್ಸ್
- ಫಿಟ್ಟಿಂಗ್ ಇರುವಂತಹ ಲಿನನ್ ಶರ್ಟ್ ಜಾಕೆಟ್ ಆಯ್ಕೆ ಮಾಡಿ.
- ಹಾಫ್ ವೈಟ್ಮ ಕ್ರೀಮಿಶ್, ಐವರಿ ವೈಟ್ ಟ್ರೆಂಡ್ನಲ್ಲಿದೆ.
- ಸಂದರ್ಭಕ್ಕೆ ತಕ್ಕಂತೆ ಮ್ಯಾಚ್ ಮಾಡುವುದನ್ನು ಕಲಿಯಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Pageant: ಯಶಸ್ವಿಯಾದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆ