Site icon Vistara News

Mens Fashion | ಫಾರ್ಮಲ್‌ ಔಟ್‌ಫಿಟ್‌ ರೂಲ್ಸ್‌ ಬ್ರೇಕ್‌ ಮಾಡಿದ ನಟ ಪ್ರತೀಕ್‌ ಬಬ್ಬರ್‌

Mens Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪುರುಷರ ಫಾರ್ಮಲ್ಸ್‌ ಔಟ್‌ಫಿಟ್‌ ಕಾನ್ಸೆಪ್ಟನ್ನು ಬದಲಿಸಿ, ಪ್ರಯೋಗಾತ್ಮಕ ಹೊಸ ಲುಕ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್‌ ನಟ ಪ್ರತೀಕ್‌ ಬಬ್ಬರ್‌ ಫ್ಯಾಷನಿಸ್ಟ್‌ಗಳ ಒಲವು ಗಳಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಬಾಲಿವುಡ್‌ ಹಾಟ್‌ ನಟರ ಸಾಲಿಗೆ ಸೇರುವ ಪ್ರತೀಕ್‌, ಇದೀಗ ಔಟ್‌ಫಿಟ್‌ ಮಾತ್ರವಲ್ಲ, ಬ್ಲಾಕ್‌ ನೇಲ್‌ ಕಲರ್‌ ಹಚ್ಚುವುದರ ಮೂಲಕವೂ ಸುದ್ದಿಯಾಗಿದ್ದಾರೆ. ಇದು ನೆಟ್ಟಿಗರ ಹುಬ್ಬೇರಿಸಿದೆ.

ಚಿತ್ರಗಳು : ಪ್ರತೀಕ್‌ ಬಬ್ಬರ್‌, ಬಾಲಿವುಡ್‌ ನಟ

ಪ್ರತೀಕ್‌ ಬಬ್ಬರ್‌ ಪ್ರಯೋಗಾತ್ಮಕ ಫ್ಯಾಷನ್‌

ಹಿರಿಯ ನಟ ರಾಜ್‌ ಬಬ್ಬರ್‌ ಮಗನಾಗಿರುವ ಪ್ರತೀಕ್‌ ಬಬ್ಬರ್‌ ಹಿಟ್‌ ಸಿನಿಮಾಗಳನ್ನು ನೀಡದಿದ್ದರೂ, ಅಲ್ಲೊಂದು ಇಲ್ಲೊಂದು ಸಿನಿಮಾಗಳು ಹಾಗೂ ವೆಬ್‌ ಸೀರಿಸ್‌ಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮದೇ ಆದ ಸ್ಥಾನ ಕಲ್ಪಿಸಿಕೊಂಡಿದ್ದಾರೆ. ಇತ್ತೀಚಿನ ಫೋರ್‌ ಮೋರ್‌ ಶಾಟ್ಸ್‌ ಎಂಬ ವೆಬ್‌ ಸೀರೀಸ್‌ನ ಮೂಲಕ ತಾವೂ ಕೂಡ ಫ್ಯಾಷನೆಬಲ್‌ ಬಿಂದಾಸ್‌ ಹುಡುಗ ಎಂಬುದನ್ನು ಸಾಬೀತುಪಡಿಸಿದ್ದಾರೆ. ಸಾಕಷ್ಟು ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಅವಾರ್ಡ್ ಸಮಾರಂಭವೊಂದರಲ್ಲಿ ಡಿಸೈನರ್‌ ನಿತೀಶ್‌ ಅರೋರಾ ಅವರ ಆಲ್ಟೆರ್‌–ಎಕ್ಸ್‌ ಲೆಬೆಲ್‌ನ ಕ್ರಾಪ್‌ ಜಾಕೆಟ್‌, ಫಿಟ್ಟೆಡ್‌ ಪ್ಯಾಂಟ್‌ನಲ್ಲಿ ಪ್ರಯೋಗಾತ್ಮಕ ಸ್ಟೈಲಿಂಗ್‌ನಲ್ಲಿ, ಪುರುಷರ ರೆಗ್ಯುಲರ್‌ ಸ್ಟೈಲಿಂಗ್‌ಗೆ ಇರುವ ಸ್ಟಿರಿಯೋ ಟೈಪ್‌ ಫ್ಯಾಷನ್‌ಗೆ ಬ್ರೇಕ್‌ ಹಾಕಿ, ಕಾಣಿಸಿಕೊಂಡಿದ್ದಾರೆ. ತಮ್ಮ ಮ್ಯಾನ್ಲಿ ಲುಕ್‌ಗೆ ಒಂದಿಷ್ಟು ಡಿಫರೆಂಟ್‌ ಸ್ಟೈಲಿಂಗ್‌ ಟಚ್‌ ನೀಡಿದ್ದಾರೆ. ನೋಡಿದ ತಕ್ಷಣಕ್ಕೆ ಇದೇನಿದು? ಇದ್ಯಾವ ಬಗೆಯ ಸ್ಟೈಲ್‌ ಎಂದು ಅಭಿಮಾನಿಗಳು ಅಚ್ಚರಿ ಪಡುವ ಹಾಗೆ ಮಾಡಿದ್ದಾರೆ. ಈ ಬಗ್ಗೆ ಯೋಚಿಸುವುದಕ್ಕೂ ಮುನ್ನವೇ, ಮತ್ತೊಂದು ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಅಭಿಮಾನಿಗಳ ಹುಬ್ಬೇರಿಸಿದ ಪ್ರತೀಕ್‌ ನೇಲ್‌ ಪಾಲಿಶ್‌

ಮ್ಯಾನ್ಲಿ ಲುಕ್‌ ಎಂದಾಕ್ಷಣಾ ಬ್ಲೇಝರ್‌, ಕೋಟ್‌ ಧರಿಸಿ ಶಿಸ್ತಿನ ಸಿಪಾಯಿಯಂತೆ ಕಾಣಬೇಕಾಗಿಲ್ಲ ಎಂಬುದನ್ನು ಪ್ರತೀಕ್‌ ಫೋಟೋಶೂಟ್‌ ಮೂಲಕ ಸಾಬೀತುಪಡಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ಅವರು ಧರಿಸಿರುವ ಕ್ರಾಪ್‌ ಜಾಕೆಟ್‌ ಹಾಗೂ ಡೆವಿಲ್‌ ಫಿಂಗರ್‌ ರಿಂಗ್ಸ್‌ ಇವೆಲ್ಲದರ ಜೊತೆಗೆ ಬೆರಳುಗಳಿಗೆ ಹಚ್ಚಿರುವ ಬ್ಲಾಕ್‌ ನೇಲ್‌ ಪಾಲೀಶ್‌, ಈ ಜನರೇಷನ್‌ನ ಪ್ರಯೋಗಾತ್ಮಕ ಫ್ಯಾಷನನ್ನು ಬಿಂಬಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ ಜಯಂತ್‌.

ಪ್ರತೀಕ್‌ ಕೂಲ್‌ ಸ್ಟೈಲ್‌

ಇನ್ನು ಸ್ಟೈಲಿಸ್ಟ್‌ ರಾಜ್‌ ಹೇಳುವಂತೆ, ಪ್ರತೀಕ್‌ ಇತ್ತೀಚೆಗೆ ನಾನಾ ಬಗೆಯ ಕೂಲ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಮೊರೆ ಹೋಗುತ್ತಿದ್ದಾರೆ. ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಕಾಣಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ, ಕೆಲವು ದಿನಗಳ ಹಿಂದೆ ಡಿಸೈನರ್‌ ರಾಜೇಶ್‌ ಪ್ರತಾಪ್‌ ಸಿಂಗ್‌ರ ಮೆಟಾಲಿಕ್‌ ಲೇಸ್‌ ಸೂಟ್‌ ಜತೆಗೆ ಶೀರ್‌ ನೆಟ್ಟೆಡ್ ಶರ್ಟ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದರು. ಇದೇ ರೀತಿ ಡಿಸೈನರ್‌ ಶಾಹಬ್‌ ಡಿಸೈನ್‌ನ ಕ್ರಾಪ್‌ ಬ್ಲೇಝರ್‌ನಲ್ಲೂ ಮಿಂಚಿದ್ದರು. ಹೀಗೆ ಒಂದೊಂದು ಔಟ್‌ಫಿಟ್‌ನಲ್ಲೂ ಹೊಸ ಸ್ಟೈಲ್‌ ಸ್ಟೇಟ್‌ಮೆಂಟನ್ನು ಪಾಲಿಸುತ್ತಿದ್ದಾರೆ ಎನ್ನುತ್ತಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ | Wedding Jewellery Fashion | ವಿಂಟರ್‌ ವೆಡ್ಡಿಂಗ್ ಸೀಸನ್‌ನಲ್ಲಿ ಟ್ರೆಂಡಿಯಾಗುತ್ತಿದೆ ಮದುಮಗಳ ಡಿಸೈನರ್‌ ಮೂಗುತಿ

Exit mobile version