ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆಟ್ ಗಾಲಾದಲ್ಲಿ (Met Gala Kerala Carpet) ಸೆಲೆಬ್ರಿಟಿಗಳು ಓಡಾಡಿದ ಮೃದುವಾದ ಆಕರ್ಷಕ ಕಾರ್ಪೆಟ್ ಎಲ್ಲಿಯದ್ದು ಎಂದುಕೊಂಡಿದ್ದೀರಾ! ನಮ್ಮ ಪಕ್ಕದ ಕೇರಳದ ಇಂಡಸ್ಟ್ರೀಯಲ್ ಟೌನ್ ಚೆರ್ತಾಲದಿಂದ ಕಳುಹಿಸಿದ್ದು. ಈ ಬಾರಿ ವುಲ್ಲನ್ ಕಾರ್ಪೆಟ್ ಬದಲು ನ್ಯಾಚುರಲ್ ಫೈಬರ್‌ನಿಂದ ಸಿದ್ಧಪಡಿಸಿದ ಕಾರ್ಪೆಟ್ ಅನ್ನು ಬಳಸಲಾಯಿತು. ನಮ್ಮ ರಾಷ್ಟ್ರದಿಂದ ವಿಶೇಷವಾಗಿ ಅಮದು ಮಾಡಿ ಕೊಳ್ಳಲಾಯಿತು ಎನ್ನುತ್ತಾರೆ ಫ್ಯಾಷನ್ ತಜ್ಞರು.
ತಾರೆಯರ ವಾಕ್‌ಗಾಗಿ ವಿಶೇಷ ಕಾರ್ಪೆಟ್
ಸದಾ ಉಲ್ಲನ್ ಕಾರ್ಪೆಟ್ ಮೇಲೆ ವಾಕ್ ಮಾಡುತ್ತಿದ್ದ ತಾರೆಯರು ಈ ಬಾರಿ ಮಾತ್ರ ಡಿಫರೆಂಟ್ ಫ್ಯಾಬ್ರಿಕ್‌ನ ಕಾರ್ಪೆಟ್ ಮೇಲೆ ನಡೆದಾಡಿದ್ದಾರೆ. ಈ ಬಗ್ಗೆ ಎಲ್ಲರ ಮೆಚ್ಚುಗೆಯೂ ವ್ಯಕ್ತವಾಗಿದೆ. ಅಂದಹಾಗೆ, ಹೆಸರಿಗೆ ಮಾತ್ರ ರೆಡ್ ಕಾರ್ಪೆಟ್ ಎನ್ನುವ ಫ್ಯಾಷನ್ ವಾಕ್ ಕಾರ್ಪೆಟ್ ಬಣ್ಣವೂ ಈ ಬಾರಿ ಬದಲಾಗಿದೆ. ನೋಡಲು ಹಾಫ್ ವೈಟ್‌ನಂತೆ ಕಾಣುವ ಶೇಡ್ ಡಿಫರೆಂಟ್ ಲುಕ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
ನ್ಯಾಚುರಲ್ ಫೈಬರ್ ಕಾರ್ಪೆಟ್‌ಗೆ ಮಣೆ
ಅಂದಹಾಗೆ, ಕಳೆದ 2022ರಲ್ಲಿ ಮೆಟ್ ಗಾಲ ಆಯೋಜಕರು ಪರಿಸರ ಸ್ನೇಹಿ ನ್ಯಾಚುರಲ್ ಫೈಬರ್‌ನಿಂದ ತಯಾರಾಗುವ ಕಾರ್ಪೆಟ್‌ಗೆ ಆದ್ಯತೆ ನೀಡಲು ನಿರ್ಧರಿಸಿದರು. ಇದಕ್ಕಾಗಿ ಅವರು ಕೇರಳದ ಚಿಕ್ಕ ಟೌನ್‌ನ ಚರ್ತಾನ್ ಮೂಲದ ಕಾರ್ಪೆಟ್ ಸ್ಪೆಷಲಿಸ್ಟ್, ಇಂಡಸ್ಟ್ರಿಯಲಿಸ್ಟ್ ಸಿವನ್ ಸಂತೋಷ್ ಅವರನ್ನು ಸಂಪರ್ಕಿಸಿದರು. ಕಳೆದ 1917ರಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಅವರ ಕುಟುಂಬ ಸ್ಥಳೀಯ ಉತ್ಪನ್ನಗಳಿಂದ ವೆರೈಟಿ ಕಾರ್ಪೆಟ್‌ಗಳನ್ನು ನಿರಂತರವಾಗಿ ಸಿದ್ಧಪಡಿಸುತ್ತಿದೆ. ರಫ್ತು ಕೂಡ ಮಾಡುತ್ತಿದೆ.
ಸುಮಾರು 2000 ಮೀಟರ್‌ನ ಈ ಕಾರ್ಪೆಟ್ ಸಿದ್ಧಪಡಿಸಲು 70 ದಿನಗಳು ಬೇಕಾಗಿದೆ ಎನ್ನಲಾಗಿದೆ. ನ್ಯೂಯಾರ್ಕ್‌ಗೆ ಕಳುಹಿಸಿದ ನಂತರ ಅಲ್ಲಿನ ಆರ್ಟಿಸ್ಟ್‌ಗಳು ಮತ್ತೆ ಸುಮಾರು 100 ದಿನಗಳನ್ನು ತೆಗೆದುಕೊಂಡಿದ್ದು, ರೆಡ್, ಬ್ಲ್ಯೂ ಸ್ಟ್ರೈಪ್ಸ್ ಚಿತ್ರಿಸಿ, ಅಂತಿಮ ರೂಪ ನೀಡಿ ಮತ್ತಷ್ಟು ಆಕರ್ಷಕವಾಗಿಸಿದ್ದಾರೆ. ಈ ಬಾರಿ ಫ್ಯಾಷನಿಸ್ಟಾ ಲಾಗರ್ ಫೆಲ್ಡ್‌ರವರ ಎ ಲೈನ್ ಆಫ್ ಬ್ಯೂಟಿ ಕಾನ್ಸೆಪ್ಟ್‌ಗೆ ಅನುಗುಣವಾಗಿ ಮ್ಯಾಚ್ ಆಗುವ ರೀತಿಯಲ್ಲಿ ಕಾರ್ಪೆಟ್‌ಗೆ ಅಂತಿಮ ಟಚ್ ನೀಡಲಾಯಿತು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Summer Fashion: ಮಿನಿ ವೈಟ್ ಫ್ರಾಕ್‌ನಲ್ಲಿ ಬೇಸಿಗೆ ಬಿಂದಾಸ್ ಫ್ಯಾಷನ್‌ಗೆ ಸೈ ಎಂದ ನಟಿ ತೇಜಸ್ವಿನಿ ಶರ್ಮಾ