Site icon Vistara News

Mid Season Sale: ಮಿಡ್‌ ಸೀಸನ್‌ ಸೇಲ್‌ನಲ್ಲಿ ಶಾಪಿಂಗ್‌ಗೂ ಮುನ್ನ ಗಮನದಲ್ಲಿಟ್ಟುಕೊಳ್ಳಬೇಕಾದ 5 ಸಿಂಪಲ್‌ ಸಂಗತಿಗಳು

Mid Season Sale

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಿಡ್‌ ಸೀಸನ್‌ ಸೇಲ್‌ ಶಾಪಿಂಗ್‌ (Mid Season Sale) ಬಹುತೇಕ ಮಾಲ್‌ಗಳಲ್ಲಿ ಈಗಾಗಲೇ ಶುರುವಾಗಿದೆ. ಇನ್ನು, ವೀಕೆಂಡ್‌ನಲ್ಲಿ ಇದರ ಅರ್ಭಟ ಮತ್ತಷ್ಟು ಏರಲಿದೆ. ಈಗಾಗಲೇ ಆರಂಭಗೊಂಡಿರುವ ಮಿಡ್‌ ಸೀಸನ್‌ ಸೇಲ್‌ ಶಾಪಿಂಗ್‌, ಉದ್ಯಾನನಗರಿಯ ಎಲ್ಲಾ ಮಾಲ್‌ಗಳಲ್ಲೂ ಹೆಚ್ಚಾಗಿದ್ದು, ವಿಶೇಷವಾಗಿ ಫ್ಯಾಷನ್‌ವೇರ್ಸ್ ಹಾಗೂ ಆಕ್ಸೆಸರೀಸ್‌ಗಳ ಮೇಲೆ ಶೇಕಡಾ 50, 65, 70ರಷ್ಟು ಸೇಲ್ಸ್ ನೋಟ್‌ ಬೋರ್ಡ್‌ಗಳನ್ನು ಹಾಕಲಾಗಿದೆ. ಇದು ಗ್ರಾಹಕರನ್ನು ಆಕರ್ಷಿಸುವ ಟ್ರಿಕ್ಸ್. ಇದರೊಂದಿಗೆ ರೆಗ್ಯುಲರ್‌ ಗ್ರಾಹಕರಿಗೆ ಡಿಸ್ಕೌಂಟ್ಸ್‌ ಕೂಡ ಘೋಷಿಸಲಾಗುತ್ತಿದೆ. ಇವೆಲ್ಲಾ ಮಿಡ್‌ ಸೀಸನ್‌ ಸೇಲ್‌ ತಂತ್ರ ಎನ್ನುತ್ತಾರೆ ಮಾಲ್‌ವೊಂದರ ಹೆಸರನ್ನೇಳಲು ಇಚ್ಛಿಸದ ಮ್ಯಾನೇಜರ್‌. ಇನ್ನು, ಇಂತಹ ಸೌಲಭ್ಯವನ್ನು ಯಾವುದೇ ನಷ್ಟವಿಲ್ಲದೇ ಬಳಸಿಕೊಳ್ಳಬೇಕೆಂದುಕೊಂಡವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಾಪಿಂಗ್‌ ಮಾಡಬೇಕು ಎಂದು ಉಚಿತ ಸಲಹೆ ನೀಡುತ್ತಾರೆ ಶಾಪಿಂಗ್‌ ಎಕ್ಸ್‌ಪಟ್ರ್ಸ್.

ಮೊದಲು ವಿಂಡೋ ಶಾಪಿಂಗ್‌ ಮಾಡಿ

ಯಾವುದೇ ಫ್ಯಾಷನ್‌ವೇರ್ಸ್‌ ಖರೀದಿಸಬೇಕಿದ್ದಲ್ಲಿ ಮೊದಲು ಏನೂ ಕೊಳ್ಳದೇ ಬರೀ ಹಾಗೆಯೇ ಗಮನಿಸುವ ವಿಂಡೋ ಶಾಪಿಂಗ್‌ ಮಾಡಿ. ನಂತರ ನಿಮಗೆ ಅಗತ್ಯವಿರುವಿಕೆಯ ಬಗ್ಗೆ ಯೋಚಿಸಿ, ಖರೀದಿಸಿ.

ರಿಪಿಟೇಷನ್‌ ಫ್ಯಾಷನ್‌ವೇರ್ಸ್ ಪರಿಶೀಲಿಸಿ

ಮಿಡ್‌ ಸೀಸನ್‌ನಲ್ಲಿ ಆದಷ್ಟೂ ಕಳೆದ ಸೀಸನ್‌ನ ಅಳಿದುಳಿದ ಫ್ಯಾಷನ್‌ವೇರ್‌ಗಳ ಸಂಗಮವೇ ಇರುತ್ತದೆ. ಹಾಗಾಗಿ ರಿಪಿಟೇಷನ್‌ ಫ್ಯಾಷನ್‌ವೇರ್ಸ್ ಖರೀದಿ ಆವಾಯ್ಡ್‌ ಮಾಡಿ.

ಗಿಫ್ಟ್‌ ವೋಚರ್‌ ಅಮಿಷಕ್ಕೆ ಮನಸೋಲಬೇಡಿ

ಇಂತಿಷ್ಟು ಹೆಚ್ಚು ಖರೀದಿಸಿದಲ್ಲಿ ಗಿಫ್ಟ್‌ ವೋಚರ್‌ ದೊರೆಯುತ್ತದೆ ಎಂಬ ಅಮಿಷಕ್ಕೆ ಬಲಿಯಾಗಬೇಡಿ. ಇದು ಸುಮ್ಮನೆ ದುಂದು ವೆಚ್ಚಕ್ಕೆ ಕಾರಣವಾಗುತ್ತದೆ.

ಕಡಿಮೆ ಬೆಲೆಗೆ ಸಿಕ್ಕಿತೆಂದು ಆಯ್ಕೆ ಮಾಡಬೇಡಿ

ಸಮ್ಮರ್‌ ಸೀಸನ್‌ನ ಉಡುಪುಗಳನ್ನು ಖರೀದಿಸಬೇಡಿ. ಮುಂದಿನ ವರ್ಷದವರೆಗೂ ಧರಿಸಲಾಗುವುದಿಲ್ಲ! ಅಲ್ಲದೇ ನಿಮ್ಮ ತೂಕದಲ್ಲೂ ಏರಿಳಿತವಿದ್ದಲ್ಲಿ ಸುಮ್ಮನೆ ವಾರ್ಡ್ರೋಬ್‌ನಲ್ಲಿ ಶೋ ಇಡಬೇಕಾದೀತು!

ಎಥ್ನಿಕ್‌ ಡಿಸೈನರ್‌ವೇರ್ಸ್ ಪರಿಶೀಲಿಸಿ ಕೊಳ್ಳಿ

ಎಥ್ನಿಕ್‌ ವೇರ್‌ಗಳಾದಲ್ಲಿ ಸಮಾರಂಭ ಹಾಗೂ ಹಬ್ಬಗಳಿಗೆ ಧರಿಸಬಹುದು. ಕಡಿಮೆ ಬೆಲೆಗೆ ದೊರೆತಲ್ಲಿ, ಪರಿಶೀಲಿಸಿ ಖರೀದಿ ಮಾಡಿ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Babies Frock Fashion: ಮಾನ್ಸೂನ್‌ ಸೀಸನ್‌ಗೆ ಕಾಲಿಟ್ಟ ಕ್ಯೂಟ್‌ ಬೇಬಿ ಪಾರ್ಟಿ ಫ್ರಾಕ್ಸ್

Exit mobile version