ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಲಾನ್ ಫ್ಯಾಷನ್ ವೀಕ್‌ನಲ್ಲಿ (Milan Fashion Week) ಈ ಬಾರಿ ಸ್ಟ್ರೀಟ್‌ವೇರ್‌ಗೆ ಆದ್ಯತೆ ನೀಡಲಾಗಿದೆ. ಅಲ್ಲದೇ, ಮುಂಬರುವ ಸೀಸನ್‌ಗಳಲ್ಲಿ ಡಿಕ್ಲೇರ್ ಆಗಬಹುದಾದ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್‌ವೇರ್‌ಗಳನ್ನು ಪ್ರದರ್ಶಿಸಲಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ವರ್ಷಕ್ಕೆ ಮೂರ್ನಾಲ್ಕು ಬಾರಿ ನಡೆಯುವ ಮಿಲಾನ್ ಫ್ಯಾಷನ್ ವೀಕ್, ಪ್ಯಾರೀಸ್ ಫ್ಯಾಷನ್ ವೀಕ್ ನಂತರದ ಸ್ಥಾನವನ್ನು ಗಳಿಸಿಕೊಂಡಿದೆ. ಇಲ್ಲಿ ನಡೆಯುವ ಫ್ಯಾಷನ್ ವೀಕ್‌ಗಳಲ್ಲಿ ಪಾಲ್ಗೊಳ್ಳುವುದೇ ಡಿಸೈನರ್‌ಗಳ ಹೆಗ್ಗಳಿಕೆ. ಇನ್ನು ಮಾಡೆಲ್‌ಗಳು ರ್ಯಾಂಪ್ ವಾಕ್ ಮಾಡುವುದು ಕೂಡ ಒಂದು ಸಾಧನೆಯೇ! ಆ ಮಟ್ಟಿಗೆ ಮಿಲಾನ್ ಫ್ಯಾಷನ್ ವೀಕ್ ಹೆಸರು ಗಳಿಸಿದೆ ಎನ್ನುತ್ತಾರೆ ಫ್ಯಾಷನಿಸ್ಟ್ ರೀಟಾ. ಅವರ ಪ್ರಕಾರ, ಈ ಬಾರಿ ಎಂದಿನಂತೆ ಊಹೆಗೂ ಮೀರಿದ ವೈವಿಧ್ಯಮಯ ವೇರಬಲ್ ಹಾಗೂ ನಾನ್ ವೇರಬಲ್ ಫ್ಯಾಷನ್‌ವೇರ್‌ಗಳ ಪ್ರದರ್ಶನಗೊಂಡಿವೆ.
ಭಾರತೀಯ ಧ್ರುವ ಕುಮಾರ್ ಡಿಸೈನರ್‌ವೇರ್ಸ್
ಮಿಲಾನ್ ಫ್ಯಾಷನ್ ವೀಕ್‌ನಲ್ಲಿ ಡಿಸೈನರ್ ಧ್ರುವ ಕುಮಾರ್‌ರ, ಸೈನ್ಸ್ ಹಾಗೂ ಫಿಕ್ಷನ್ ಕಾನ್ಸೆಪ್ಟ್‌ನ ಫ್ಯಾನ್ಟಸಮ್ ಹೆಸರಿನಲ್ಲಿ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ರ್ಯಾಂಪ್ ವಾಕ್ ಮಾಡಿದರು. 1970ರ ದಶಕದ ಸ್ಕೈ –ಫೈ ಪ್ರಿಂಟ್ಸ್, ಕ್ರಾಪ್ ಸರ್ಕಲ್ ಪ್ಯಾಟರ್ನ್, ವೈಬ್ರೆಂಟ್ ಫ್ಲೋರಲ್ಸ್‌ನ ಯೂನಿಸೆಕ್ಸ್ ಡಿಸೈನರ್‌ವೇರ್‌ಗಳು ಹೈಲೈಟಾಗಿದ್ದವು.
ಇನ್ನು ನ್ಯಾಚುರಲ್ ಫ್ಯಾಬ್ರಿಕ್ ಜೊತೆಗೆ ರಿಸೈಕಲ್ ಮಾಡಿದ ಫ್ಯಾಬ್ರಿಕ್ ಮಿಕ್ಸ್ ಮ್ಯಾಚ್ ಒಳಗೊಂಡ ಡಿಸೈನರ್‌ವೇರ್‌ಗಳು ಸೇರಿದ್ದವು. “ಭಾರತ ಇದೀಗ ಫ್ಯಾಷನ್ ಕ್ಷೇತ್ರದಲ್ಲಿ ದಾಪುಗಾಲಿನಲ್ಲಿ ಮುನ್ನೆಡೆಯುತ್ತಿದೆ. ಇದಕ್ಕೆ ತಕ್ಕಂತೆ ಡಿಸೈನರ್‌ಗಳು ಕೂಡ ಪ್ರಯೋಗಾತ್ಮಕ ಫ್ಯಾಷನ್‌ವೇರ್‌ಗಳನ್ನು ಸಿದ್ಧಪಡಿಸುತ್ತಿದ್ದಾರೆ. ವಿದೇಶಿ ಡಿಸೈನರ್‌ವೇರ್‌ಗಳೊಂದಿಗೆ ಕಾಂಪಿಟೇಷನ್ ನೀಡುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆ“ ಎಂದು ಮಾಧ್ಯಮದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳ ಪಾಲ್ಗೊಳ್ಳುವಿಕೆ
ಇನ್ನು ನಮ್ಮ ರಾಷ್ಟ್ರದ ಸೀಸನ್‌ಗೆ ತದ್ವಿರುದ್ಧವಾಗಿ ಸಾಕಷ್ಟು ರಾಷ್ಟ್ರಗಳ ಸೀಸನ್ ಇರುವುದರಿಂದ ಸಮ್ಮರ್-ಸ್ಪ್ರಿಂಗ್ ಕಲೆಕ್ಷನ್‌ಗಳೇ ಹೆಚ್ಚಾಗಿ ಕಂಡು ಬಂದವು. ಇನ್ನು ವ್ಯಾಲೆಂಟೀನೊ. ಗಬಾನಾ, ಡಿಸ್ಕೌರ್ಡ್, ಅರ್ಮಾನಿ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಬ್ರಾಂಡ್‌ಗಳು ಭಾಗವಹಿಸಿದ್ದವು. ಈ ಮಧ್ಯ ವರ್ಷದ ಮಿಲಾನ್ ಫ್ಯಾಷನ್ ವೀಕ್‌ಗೆ ಕೊನೆಗೂ ತೆರೆ ಬಿದ್ದಿತು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Ramp News: ಲಿಟಲ್ ಐಕಾನ್ ಇಂಡಿಯಾ ಫ್ಯಾಷನ್ ರ‍್ಯಾಂಪ್‌ನಲ್ಲಿ ಮಕ್ಕಳ ಕಲರವ