ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟೇಜ್ ಫ್ಯಾಷನ್ಗೆ ಹೊಸ ರೂಪ ನೀಡಿ ಉತ್ತೇಜಿಸಬೇಕು ಎನ್ನುವ ಮಿಸೆಸ್ ಇಂಡಿಯಾ ಕರ್ನಾಟಕ ಪೇಜೆಂಟ್ನ 2ನೇ ರನ್ನರ್ ಅಪ್, ಮಿಸೆಸ್ ಗ್ಲಾಮರ್, ಮಿಸೆಸ್ ಕರ್ನಾಟಕ ಮಸ್ಕಟ್ ಟೈಟಲ್ಗಳನ್ನು ಪಡೆದಿರುವ ವಿಭಾ ಸಿಂಹ ಸಸ್ಟೈನಬಲ್ ಫ್ಯಾಷನ್ ಪ್ರಿಯೆ. ಸುಮಾರು ವರ್ಷಗಳ ಕಾಲ ವಿದೇಶದಲ್ಲಿದ್ದು, ಇದೀಗ ಭಾರತಕ್ಕೆ ಮರಳಿರುವ ವಿಭಾ, ಅವಳಿ-ಜವಳಿ ಮಕ್ಕಳ ತಾಯಿ. ಪ್ರೊಫೆಷನ್ನಲ್ಲಿ ಆರ್ಕಿಟೆಕ್ಟ್ ಆಗಿದ್ದರೂ ರ್ಯಾಂಪ್ ಮೇಲಿನ ಮೋಹ ಕಡಿಮೆಯಾಗಿಲ್ಲ! ಜೊತೆಗೆ ವಿಂಟೇಜ್ ಫ್ಯಾಷನ್ ಅಂದ್ರೆ ಸಖತ್ ಲವ್. ಈ ಬಾರಿಯ ಮಾಡೆಲ್ ಫ್ಯಾಷನ್ ಲೈಫ್ (Model Fashion Life) ಕಾಲಂಗಾಗಿ ವಿಸ್ತಾರ ನ್ಯೂಸ್ನೊಂದಿಗೆ ಮಾತನಾಡಿದ್ದು, ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹೇಗೆಲ್ಲಾ ವಿಂಟೇಜ್ ಫ್ಯಾಷನ್ ಹಾಗೂ ಸಸ್ಟೈನಬಲ್ ಫ್ಯಾಷನ್ ಫಾಲೋ ಮಾಡಬಹುದು ಎಂಬುದರ ಬಗ್ಗೆ ಟಿಪ್ಸ್ ಕೂಡ ನೀಡಿದ್ದಾರೆ.
ವಿದೇಶದಲ್ಲಿದ್ದು ಮರಳಿರುವ ನಿಮ್ಮ ಫ್ಯಾಷನ್ ಬಗ್ಗೆ ಹೇಳಿ?
ನನ್ನ ಚಾಯ್ಸ್ ಡಿಫರೆಂಟ್. ನಾನು ವಿಂಟೇಜ್ ಫ್ಯಾಷನ್ ಪ್ರಿಯೆ. ಎಲ್ಲದಕ್ಕಿಂತ ಹೆಚ್ಚಾಗಿ ವಿಂಟೇಜ್ ಸೀರೆ, ಡ್ರೆಸ್ ಹಾಗೂ ಡೆನೀಮ್ ಪ್ರಯೋಗಿಸಲು ಇಷ್ಟಪಡುತ್ತೇನೆ. ಹೊಸ ಟ್ರೆಂಡ್ಗಿಂತ, ಮನೆಯವರ ಉಡುಪುಗಳನ್ನೇ ಹೊಸದಾಗಿ ಹೊಸ ರೂಪದಲ್ಲಿ ಪ್ರಯೋಗಿಸಲು ಇಷ್ಟಪಡುತ್ತೇನೆ.
ನಿಮ್ಮ ಸ್ಟೈಲ್ ಸ್ಟೇಟ್ಮೆಂಟ್ ಏನು?
ನನ್ನದು ಕಂಪ್ಲೀಟ್ ವಿಂಟೇಜ್ ಸ್ಟೈಲ್ ಸ್ಟೇಟ್ಮೆಂಟ್ಗೆ ಸಾಥ್ ನೀಡುತ್ತದೆ. ಇನ್ನು ಸಸ್ಟೈನಬಲ್ ಫ್ಯಾಷನ್ಗೆ ಒಳಪಡುತ್ತದೆ.
ವಿಂಟರ್ನಲ್ಲಿ ವಿಂಟೇಜ್ ಫ್ಯಾಷನ್ ಹೇಗೆ ಮಾಡಬಹುದು?
ಸೀರೆಯೊಂದಿಗೆ ಲಾಂಗ್ ಕಾರ್ಡಿಗಾನ್ ಧರಿಸಬಹುದು. ಯಾವುದೇ ಮಾಡರ್ನ್ ಡ್ರೆಸ್ ಜೊತೆ ಪ್ರಯೋಗ ಮಾಡಬಹುದು. ಹೇರ್ಸ್ಟೈಲ್ ಓಲ್ಡ್ ಸ್ಟೈಲ್ನಲ್ಲಿ ಮಾಡಬಹುದು. ಸೀರೆಯೊಂದಿಗೆ ಪಫ್ ಸ್ಲಿವ್ ಬ್ಲೌಸ್ ವಿಂಟೇಜ್ ಲುಕ್ ನೀಡುವುದು. ಫುಟ್ವೇರ್ಗಳು ನಿಮ್ಮ ಲುಕ್ ಬದಲಿಸಬಹುದು. ಲೆದರ್ ಬ್ಯಾಗ್ ಬದಲು ಟೈಲರ್ ಮೇಡ್ ಹೋಮ್ ಪ್ರಾಡಕ್ಟ್ ಬಳಸಬಹುದು.
ವಿಂಟರ್ಗೆ ಯಾವ ರೀತಿ ಬ್ಯೂಟಿ ಕೇರ್ ಮಾಡುತ್ತೀರಾ?
ಪ್ರತಿವಾರ ತಪ್ಪದೇ ಕೂದಲಿಗೆ ಎಣ್ಣೆ ಹಚ್ಚುತ್ತೇನೆ. ಇನ್ನು ಮುಖಕ್ಕೆ ಹೊರಗೆ ಹೋಗುವಾಗ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯುವುದಿಲ್ಲ. ತುಟಿಗೆ ಲಿಪ್ಬಾಮ್ ಹಚ್ಚುವುದು ಹಾಗೂ ಕೆಮಿಕಲ್ರಹಿತ ಮುಖದ ಆರೈಕೆ ಕೂಡ ಮರೆಯುವುದಿಲ್ಲ.
ಸಸ್ಟೈನಬಲ್ ಫ್ಯಾಷನ್ ಫಾಲೋ ಮಾಡುವವರಿಗೆ ಒಂದಿಷ್ಟು ಸಲಹೆ ನೀಡಿ?
ಆದಷ್ಟೂ ವಾರ್ಡ್ರೋಬ್ನಲ್ಲಿರುವ ಔಟ್ಫಿಟ್ಗಳನ್ನು ಮರುಬಳಕೆ ಮಾಡಿ, ಹೊಸ ರೂಪದಲ್ಲಿ ಧರಿಸಿ. ನಿಮ್ಮ ಕುಟುಂಬದವರ ಔಟ್ಫಿಟ್ಗಳನ್ನು ಪ್ರಯೋಗಿಸಿ. ಬ್ರಾಂಡೆಡ್ ಖರೀದಿಸುವ ಬದಲು ಸ್ಥಳೀಯರು ಸಿದ್ಧಪಡಿಸಿದ ದೇಸಿ ಉಡುಪುಗಳನ್ನು ಕೊಂಡು ಪ್ರೋತ್ಸಾಹಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Velvet Lehenga Fashion: ವಿಂಟರ್ ವೆಡ್ಡಿಂಗ್ ಫ್ಯಾಷನ್ನಲ್ಲಿ ವೆಲ್ವೆಟ್ ಲೆಹೆಂಗಾ ಜಾದೂ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ