Site icon Vistara News

Monsoon Beauty Care: ಮಳೆಗಾಲದ ಸೌಂದರ್ಯಕ್ಕೆ 5 ಮ್ಯಾಜಿಕ್‌ ಬ್ಯೂಟಿ ಮಂತ್ರ

Monsoon Beauty Care

::ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ ಸೀಸನ್‌ನಲ್ಲೂ ನಿಮ್ಮ ವದನ ಸುಂದರವಾಗಿ ಹಾಗೂ ಆಕರ್ಷಕವಾಗಿ ಕಾಣಿಸಬೇಕೇ! (Monsoon Beauty care) ಹಾಗಾದಲ್ಲಿ ಸೀಸನ್‌ಗೆ ತಕ್ಕಂತೆ, ಬ್ಯೂಟಿ ಎಕ್ಸ್‌ಪರ್ಟ್ಸ್‌ ತಿಳಿಸಿರುವ 5 ಸಿಂಪಲ್‌ ಮ್ಯಾಜಿಕಲ್‌ ಬ್ಯೂಟಿ ಟಿಪ್ಸ್‌ ಫಾಲೋ ಮಾಡಿ. ಹೌದು. ಬ್ಯೂಟಿ ಎಕ್ಸ್‌ಪರ್ಟ್ ರೋಶನಿ ಅವರ ಪ್ರಕಾರ, ಮಾನ್ಸೂನ್‌ ಸೀಸನ್‌ನಲ್ಲಿ ತ್ವಚೆಗೆ ಆರೈಕೆ ಮಾಡಿದಲ್ಲಿ, ಮುಖ ಸುಂದರವಾಗಿ ಕಾಣುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ.

ಮಿನಿಮಲ್‌ ಮೇಕಪ್‌

ಮಳೆಗಾಲದಲ್ಲಿ ಆದಷ್ಟೂ ಮಿನಿಮಲ್‌ ಮೇಕಪ್‌ ಬಳಕೆ ಮಾಡಿ. ತ್ವಚೆಯು ಉಸಿರಾಡಲು ಅನುವು ಮಾಡಿಕೊಡಿ. ಮೇಕಪ್‌ ಮಾಡಿದ ನಂತರ ಯಾವುದೇ ಕಾರಣಕ್ಕೂ ಮಳೆಯಲ್ಲಿ ಮುಖವನ್ನು ಒಡ್ಡಬೇಡಿ. ಇದು ತ್ವಚೆಯ ಸಮಸ್ಯೆ ಉಂಟು ಮಾಡಬಹುದು. ಉತ್ತಮ ಗುಣಮಟ್ಟದ ಮೇಕಪ್‌ ಐಟಂಗಳನ್ನು ಬಳಸಿ.

ವಾಟರ್‌ ಪ್ರೂಫ್‌ ಮೇಕಪ್‌ಗೆ ಆದ್ಯತೆ

ಮೇಕಪ್‌ ಮಾಡುವುದಾದಲ್ಲಿ, ವಾಟರ್‌ ಪ್ರೂಫ್‌ ಐ ಶ್ಯಾಡೋ, ಐ ಪೆನ್ಸಿಲ್‌, ಮಸ್ಕರಾ, ಐ ಲೈನರ್‌, ಲಿಪ್‌ಸ್ಟಿಕ್‌ಗಳನ್ನು ಈ ಸೀಸನ್‌ನಲ್ಲಿ ಬಳಸಿ. ಆದರೆ, ಮಲಗುವ ಮುನ್ನ ಮೇಕಪ್‌ ತೆಗೆಯುವುದನ್ನು ಮರೆಯಬೇಡಿ. ಯಾಕೆಂದರೆ, ವಾಟರ್‌ಪ್ರೂಫ್‌ ಸೌಂದರ್ಯವರ್ಧಕಗಳು ಲಾಂಗ್‌ ಟೈಮ್‌ ಹಾಗೆಯೇ ಉಳಿಯುವುದರಿಂದ ತ್ವಚೆಗೆ ಹಾನಿ ಉಂಟಾಗಬಹುದು.

ತ್ವಚೆಯ ಸಂರಕ್ಷಣೆ ಅಗತ್ಯ

ಮಳೆಗಾಲದಲ್ಲಿ ತ್ವಚೆಯ ರಕ್ಷಣೆ ಬಗ್ಗೆ ಗಮನ ನೀಡಬೇಕು. ಇದಕ್ಕಾಗಿ ನೀವು ಮೊದಲು ನಿಮ್ಮ ತ್ವಚೆಯ ಚರ್ಮವನ್ನು ಪರೀಕ್ಷಿಸಿಕೊಳ್ಳಿ. ಒಣ, ಸಾಮಾನ್ಯ, ಜಿಡ್ಡಿನ ಹಾಗೂ ಕಾಂಬಿನೇಷನ್‌ ಸ್ಕಿನ್‌ ಎಂಬುದನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಹರ್ಬಲ್‌ ಸ್ಕ್ರಬ್‌, ಮಾಯಿಶ್ಚರೈಸರ್‌ ಮತ್ತು ಫೇಸ್‌ ಪ್ಯಾಕ್‌ ಲೇಪಿಸಿ.

ಅಲರ್ಜಿಗಳಿಂದ ಮುಕ್ತವಾಗಿರಲಿ

ಸೌಂದರ್ಯ ವರ್ಧಕಗಳ ಹೊಸ ಉತ್ಪನ್ನಗಳ ಪ್ರಯೋಗ ಮಾಡಬೇಡಿ. ಇದು ವದನದ ಅಲರ್ಜಿಗೆ ನಾಂದಿ ಹಾಡಬಹುದು. ರ್ಯಾಶಸ್‌, ಸಣ್ಣ ಗುಳ್ಳೆಗಳು, ಚರ್ಮ ಕೆಂಪಾಗುವುದು ಸೇರಿದಂತೆ ಈ ಸೀಸನ್‌ನಲ್ಲಿ ಚರ್ಮ ಅತಿ ಬೇಗ ಬ್ಯಾಕ್ಟೀರಿಯಲ್‌ ಇನ್‌ಫೆಕ್ಷನ್‌ಗೊಳಗಾಗುತ್ತದೆ. ಮನೆಯಲ್ಲೆ ದೊರೆಯುವ ಶ್ರೀಗಂಧ, ಅರಿಷಿಣ ಪುಡಿಯ ಪ್ಯಾಕ್‌ಗಳನ್ನು ಬಳಸಿ ಆರೈಕೆ ಮಾಡಿ.

ಮಾಯಿಶ್ಚರೈಸರ್‌ ಅಂಶ ಅಗತ್ಯ

ತ್ವಚೆಗೆ ಮಳೆಗಾಲದಲ್ಲೂ ಮಾಯಿಶ್ಚರೈಸರ್‌ ಅಂಶ ಅಗತ್ಯ. ಪ್ರತಿನಿತ್ಯ ಲಿಪ್‌ ಬಾಮ್‌ ಹಚ್ಚಿಕೊಳ್ಳಿ. ಇದರಿಂದ ತುಟಿಗಳು ಮೃದುವಾಗಿರುತ್ತವೆ. ಮಾಯಿಶ್ಚರೈಸ್‌ನಿಂದ ಕೂಡಿರುತ್ತದೆ. ಇನ್ನು, ಮೇಕಪ್‌ ಮಾಡುವ ಮೊದಲು ಕೊಂಚ ಐಸ್‌ ಕ್ಯೂಬ್‌ನಿಂದ ನಿಮ್ಮ ಚರ್ಮವನ್ನು ಮಸಾಜ್‌ ಮಾಡಿ. ಇದರಿಂದ ಮೇಕಪ್‌ ಹೆಚ್ಚು ಹೊತ್ತು ಹಾಗೆಯೇ ಇರುತ್ತದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion 2023: ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟ ಮಾನ್ಸೂನ್‌ ಸೀಸನ್‌ ವೈಬ್ರೆಂಟ್‌ ಔಟ್‌ಫಿಟ್ಸ್!

Exit mobile version