ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬೂಟ್ಸ್ ಫ್ಯಾಷನ್ (Monsoon Boots Fashion) ಹೊಸ ರೂಪದೊಂದಿಗೆ ಮರಳಿದೆ. ಬೇಸಿಗೆಯ ಬೇಗೆಗೆ ದೂರವಾಗಿದ್ದ ಬೂಟ್ಸ್ ಫ್ಯಾಷನ್, ಸಾಕಷ್ಟು ತಿಂಗಳ ನಂತರ ಹೊಸ ರೂಪ, ಕಲರ್ ಹಾಗೂ ಡಿಸೈನ್ಸ್ನೊಂದಿಗೆ ಮರಳಿ ಎಂಟ್ರಿ ನೀಡಿದೆ. ವೆಸ್ಟರ್ನ್ ಹಾಗೂ ಕ್ಯಾಶುವಲ್ ಔಟ್ಫಿಟ್ಗಳೊಂದಿಗೆ ಧರಿಸಬಹುದಾದ ಈ ವೈವಿಧ್ಯಮಯ ಟ್ರೆಂಡಿ ಬೂಟ್ಸ್ಗಳು ಈ ಸೀಸನ್ ಸ್ಟೈಲಿಶ್ ಲುಕ್ಗೆ ಸಾಥ್ ನೀಡಿದೆ.
ಟ್ರೆಂಡಿಯಾಗಿರುವ ಲೇಡೀಸ್ ಬೂಟ್ಸ್
ಬ್ಲಾಕ್, ಬ್ರೌನ್ ಹೀಲ್ಡ್ ಬೂಟ್ಸ್. ನೀ ಲೆಂಥ್, ಆಂಕಲ್ ಲೆಂಥ್, ಕೌ ಬಾಯ್ ಬೂಟ್ಸ್, ಕಾಂಬಾಟ್, ಪಾರ್ಟಿಗೆ ಸೂಟ್ ಆಗುವ ಮೈಕ್ರೋ ಹೀಲ್ಸ್ ಬೂಟ್ಸ್, ಡೆನಿಮ್ ಬೂಟ್ಸ್, ಫ್ಲಾಟ್ ಫಾರ್ಮ್ ಬೂಟ್ಸ್, ಚಂಕಿ ಬೂಟ್ಸ್ ಈ ಸೀಸನ್ನಲ್ಲಿ ವೆಸ್ಟರ್ನ್ ಲೇಯರ್ಡ್ ಲುಕ್ಗೆ ಹಾಗೂ ಕ್ಯಾಶುವಲ್ ಔಟ್ಫಿಟ್ಗೆ ಮ್ಯಾಚ್ ಆಗುವ ರೀತಿಯಲ್ಲಿ ಎಂಟ್ರಿ ನೀಡಿವೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರೆಟ್ರೊ ಫ್ಯಾಷನ್ನ ಲೇಡೀಸ್ ಹೈ ಫ್ಯಾಷನ್ಗೆ ಎಂಟ್ರಿ ನೀಡಿದ್ದ ಬೂಟ್ ಫ್ಯಾಷನ್, 1980ರ ನಂತರ ಗಡಿ ದಾಟಿ ಸಾಮಾನ್ಯ ಮಹಿಳೆಯರ ಫ್ಯಾಷನ್ಗೂ ಎಂಟ್ರಿ ನೀಡಿತು. 1970ರ ನಂತರ ವಿಂಟರ್ ಹಾಗೂ ಮಾನ್ಸೂನ್ ಫ್ಯಾಷನ್ನಲ್ಲಿ ಸೇರಿಕೊಂಡು ತದನಂತರ ಜನರೇಷನ್ ಚಾಯ್ಸ್ಗೆ ತಕ್ಕಂತೆ ಬದಲಾಗುತ್ತಾ ಜತೆಯಾಯಿತು ಎನ್ನುತ್ತಾರೆ ಫ್ಯಾಷನಿಸ್ಟ್ಗಳು.
ತಾರೆಯರ ನೆಚ್ಚಿನ ಬೂಟ್ಸ್ ಫ್ಯಾಷನ್
ಹಾಲಿವುಡ್ ಹಾಗೂ ಬಾಲಿವುಡ್ ತಾರೆಯರು ಬೂಟ್ಸ್ ಪ್ರೇಮಿಗಳೆಂದರೂ ಅತಿಶಯೋಕ್ತಿಯಾಗದು. ಯಾಕೆಂದರೇ, ಔಟಿಂಗ್ ಹಾಗೂ ಏರ್ಪೋರ್ಟ್ ಲುಕ್ನಲ್ಲಿ ಅವರು ಬೂಟ್ಸ್ ಧರಿಸದೇ ಕಾಣಿಸಿಕೊಳ್ಳುವುದು ಅಪರೂಪ ಎನ್ನುವ ಸ್ಟೈಲಿಸ್ಟ್ ಜಾನಿ ಅವರ ಪ್ರಕಾರ, ಬೂಟ್ಸ್ ಧರಿಸುವವರ ಲುಕ್ ಕಂಪ್ಲೀಟ್ ಹೈ ಫ್ಯಾಷನ್ಗೆ ಸೇರುತ್ತದೆ ಎನ್ನುತ್ತಾರೆ.
ಬೂಟ್ಸ್ ಮ್ಯಾಚ್ ಹೀಗೆ ಮಾಡಿ
- ಎಥ್ನಿಕ್ ಡ್ರೆಸ್ಗೆ ಬೂಟ್ಸ್ ಧರಿಸುವುದು ಫ್ಯಾಷನ್ನಲ್ಲಿಲ್ಲ!
- ವೆಸ್ಟರ್ನ್ ಔಟ್ಫಿಟ್ ಯಾವುದಾದರೂ ಸರಿಯೇ ಶೇಡ್ ಮ್ಯಾಚ್ ಆಗುವುದು ಅಗತ್ಯ.
- ಫಂಕಿ ಲುಕ್ ಬೇಕಿದ್ದಲ್ಲಿ ಚಂಕಿ ಬೂಟ್ಸ್ ಧರಿಸಬಹುದು.
- ನೀ ಲೆಂತ್ ಫ್ಲಾಟ್ ಬೂಟ್ಸ್, ಟ್ರೆಕ್ಕಿಂಗ್ ಹಾಗೂ ಟ್ರಾವೆಲ್ ಟೈಮ್ಗೆ ಬೆಸ್ಟ್.
- ಔಟಿಂಗ್ಗೆ ಧರಿಸುವುದಾದಲ್ಲಿ ಫೂಟ್ ಸಾಕ್ಸ್ ಜೊತೆಗೆ ಧರಿಸಿ.
- ಮಿಡಿ, ಫ್ರಾಕ್ ಹಾಗೂ ಡ್ರೆಸ್ಗಳೊಂದಿಗೂ ಧರಿಸಬಹುದು.
- ಬ್ಲೇಜರ್, ಜಾಕೆಟ್ನೊಂದಿಗೆ ಬ್ಲಾಕ್ ಬೂಟ್ಸ್ ಚೆನ್ನಾಗಿ ಮ್ಯಾಚ್ ಆಗುತ್ತದೆ.
- ಇಡೀ ದಿನ ಬೂಟ್ಸ್ ಹಾಕುವುದರಿಂದ ಪಾದಗಳಿಗೆ ಕಿರಿಕಿರಿಯಾಗಬಹುದು. ಮಧ್ಯೆ ತೆಗೆದು ಹಾಕಿ ರಿಲಾಕ್ಸ್ ಮಾಡಿ.
- ಮಳೆಯಲ್ಲಿ ವೆಲ್ವೆಟ್, ಡೆನಿಮ್ ಹಾಗೂ ಲೆದರ್ ಬೂಟ್ಸ್ ಆವಾಯ್ಡ್ ಮಾಡಿ. ಇವು ಟ್ರೆಂಡ್ ಹಾಗೂ ಫ್ಯಾಷನ್ನಲ್ಲಿ ಇಲ್ಲ
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Denim Gown Fashion : ಡೆನಿಮ್ ಪ್ರೇಮಿಗಳ ಸ್ಟೈಲಿಂಗ್ಗೆ ಬಂತು ಟ್ರೆಂಡಿ ಗೌನ್ಸ್