ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಹಾಗೂ ಮಾಡೆಲ್ ಭೂಮಿಕಾಗೆ ಮಾನ್ಸೂನ್ ಅಂದ್ರೆ ಸಖತ್ ಇಷ್ಟವಂತೆ. ಈ ಸೀಸನ್‌ನಲ್ಲಿ ವೈಬ್ರೆಂಟ್ ಹಾಗೂ ಲೇಯರ್ ಡ್ರೆಸ್‌ಕೋಡ್ ಫಾಲೋ ಮಾಡುವುದು, ಇದರೊಂದಿಗೆ ಹನಿ ಹನಿ ಬೀಳುವ ಮಳೆಯಲ್ಲಿ ನೆನೆಯುವುದು ಹಾಗೂ ಟ್ರಾವೆಲ್ ಎಂಜಾಯ್ ಮಾಡುವುದು ಅವರ ಇಷ್ಟದ ಸಂಗತಿಗಳಲ್ಲೊಂದಂತೆ. ಹಾಗೆಂದು ಅವರೇ ಹೇಳುತ್ತಾರೆ. ಮಾನ್ಸೂನ್ ಫ್ಯಾಷನ್ ಕುರಿತಂತೆ ಮಾತನಾಡಿರುವ ಅವರು ಓದುಗರಿಗೆ ಒಂದಿಷ್ಟು ಟಿಪ್ಸ್ (Monsoon celebrity tips) ಕೂಡ ನೀಡಿದ್ದಾರೆ.
ಮಾನ್ಸೂನ್ ಫ್ಯಾಷನ್‌ನಲ್ಲಿ ವೆಸ್ಟರ್ನ್ ಲುಕ್
ಮಾನ್ಸೂನ್‌ನಲ್ಲಿ ಆದಷ್ಟೂ ವೆಸ್ಟ್‌ರ್ನ್ ಲುಕ್ ನೀಡುವ ಟ್ರೆಂಚ್ ಕೋಟ್‌ಗಳು ನನಗಿಷ್ಟ. ಅದರಲ್ಲೂ ಸ್ಲೀಕ್ ಲುಕ್ ನೀಡುವಂತವು ನನಗಿಷ್ಟ. ಮಳೆಗಾಲದಲ್ಲಿ ಆದಷ್ಟೂ ಬೆಚ್ಚಗಿರಲು ನಾನು ಬಯಸುವುದರಿಂದ ಲೇಯರ್ ಲುಕ್‌ಗೆ ಸೈ ಎನ್ನುತ್ತೇನೆ. ಕಾಟನ್ ಹಾಗೂ ವೆಲ್ವೆಟ್ ಫ್ಯಾಬ್ರಿಕ್ ಡ್ರೆಸ್ ಧರಿಸುತ್ತೇನೆ. ಸೀಸನ್‌ಗೆ ತಕ್ಕಂತೆ ಫ್ಯಾಷನ್ ಫಾಲೋ ಮಾಡುತ್ತೇನೆ. ಇದು ಅತ್ಯಗತ್ಯ ಕೂಡ.
ಮಾನ್ಸೂನ್ ಬ್ಯೂಟಿಕೇರ್
ಬಿಸಿಲು ಇಲ್ಲದೇ ಇರುವುದರಿಂದ ಮಳೆಗಾದಲ್ಲಿ ಸ್ಕಿನ್ ಸಮಸ್ಯೆಗಳು ಹೆಚ್ಚು. ಹಾಗಾಗಿ, ನಾನಂತೂ ಸಾಬೂನನ್ನು ಬಳಸುವುದಿಲ್ಲ. ಬದಲಿಗೆ ಫೇಸ್‌ವಾಶ್ ಬಳಸುತ್ತೇನೆ. ಮಾಯಿಶ್ಚರೈಸರ್, ನೈಟ್ ಕ್ರೀಮ್ ಬಳಸುತ್ತೇನೆ. ಮಾನ್ಸೂನ್‌ನಲ್ಲಿ ಬ್ಯೂಟಿ ಕೇರ್ ಮಾಡುವುದು ಅಗತ್ಯ. ನಿಮ್ಮ ತ್ವಚೆಗೆ ತಕ್ಕಂತೆ ಆರೈಕೆ ಮಾಡಿ ಎನ್ನುವ ಭೂಮಿಕಾ, ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚೆಚ್ಚು ನೀರು ಕುಡಿಯಬೇಕು. ಜೊತೆಗೆ ತ್ವಚೆಯನ್ನು ಮಾಯಿಶ್ಚರೈಸ್ ಮಾಡಬೇಕು ಎಂದು ಸಲಹೆ ನೀಡುತ್ತಾರೆ.
ಟ್ರಾವೆಲ್ ಫ್ಯಾಷನ್ ಲವ್ವರ್
ಗ್ರೀನರಿ ಇರುವಂತಹ ಸ್ಥಳಗಳಿಗೆ ಹೋಗುವುದು ನನಗಿಷ್ಟ. ಮಳೆಗಾಲದಲ್ಲಿ ಟ್ರಾವೆಲಿಂಗ್ ಹೋಗುವಾಗ ಎಷ್ಟೇ ಫ್ಯಾಷೆನಬಲ್ ಆಗಿರಲಿ, ಬಿಂದಾಸ್ ಆಗಿ ಓಡಾಡಲು ಆದಷ್ಟೂ ರೇನ್‌ಕೋಟ್ ಹಾಗೂ ಉಡುಪಿಗೆ ಮ್ಯಾಚ್ ಆಗುವಂತಹ ಕಲರ್‌ಫುಲ್ ಅಂಬ್ರೆಲ್ಲಾ ಜೊತೆಗಿರಿಸಿಕೊಳ್ಳುತ್ತೇನೆ ಎನ್ನುತ್ತಾರೆ.
ಮಾನ್ಸೂನ್ ಸ್ಟೈಲಿಂಗ್ ಸಲಹೆ
- ವೈಬ್ರೆಂಟ್ ಶೇಡ್ಸ್ ಲೇಯರ್ ಲುಕ್ ಫಾಲೋ ಮಾಡಿ.
- ದಪ್ಪನೆಯ ಜೀನ್ಸ್ ಧರಿಸುವುದನ್ನು ಆವಾಯ್ಡ್ ಮಾಡಿ.
- ವೆಸ್ಟೆರ್ನ್ ಲುಕ್ಗಾದಲ್ಲಿ ಬೂಟ್ಸ್ ಧರಿಸಿ.
- ಎಥ್ನಿಕ್ ಲುಕ್ ಇದ್ದಲ್ಲಿ ಲಾಂಗ್ ಸೆಮಿ ಫಾರ್ಮಲ್ ಶ್ರಗ್ಸ್, ಕಾರ್ಡಿಗಾನ್ ಧರಿಸಬಹುದು.
- ಮಳೆಯಲ್ಲಿ ಸಮಾರಂಭಕ್ಕೆ ಹೋಗುವುದಾದಲ್ಲಿ ವಾಟರ್ ಪ್ರೂಫ್ ಮೇಕಪ್ ಮಾಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Menʼs Co-Ord Suit Fashion: ಯುವಕರ ಫ್ಯಾಷನ್‌ಗೂ ಸೇರಿದ ಕೋ-ಆರ್ಡ್ ಪ್ಯಾಂಟ್ ಸೂಟ್