ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಯಾಂಟ್,ಜಾಕೆಟ್ ಹಾಗೂ ಫ್ರಾಕ್‌ಗೆ ಸೀಮಿತವಾಗಿದ್ದ ಡೆನಿಮ್ (Monsoon Denim Fashion) ಇದೀಗ ಕ್ರಾಪ್ ಟಾಪ್ ಆಗಿ ಹೊರ ಹೊಮ್ಮಿದೆ. ಅಲ್ಲದೇ, ಟ್ರೆಂಡಿಯಾಗಿದೆ. ಎಲ್ಲ ಸೀಸನ್‌ನಲ್ಲೂ ಎವರ್‌ಗ್ರೀನ್ ಫ್ಯಾಷನ್ ಲಿಸ್ಟ್‌ನಲ್ಲಿರುವ ಈ ಡೆನಿಮ್ ಫ್ಯಾಬ್ರಿಕ್ ಇದೀಗ ಯುವತಿಯರಿಗೆ ಪ್ರಿಯವಾಗುವಂತಹ ಗ್ಲಾಮರಸ್ ಕ್ರಾಪ್ ಟಾಪ್‌ಗಳಾಗಿ ರೂಪಾಂತರಗೊಂಡಿದೆ.
ಆಕರ್ಷಕ ಡೆನಿಮ್ ಕ್ರಾಪ್ ಟಾಪ್
ಡೆನಿಮ್ ಕ್ರಾಪ್ ಟಾಪ್ ಸದ್ಯ ಯುವತಿಯರ ಫೇವರಿಟ್ ಲಿಸ್ಟ್‌ನಲ್ಲಿದೆ. ಜೀನ್ಸ್, ಸ್ಕರ್ಟ್, ಕ್ಯುಲ್ಲೋಟ್ಸ್, ಶಾಟ್ರ್ಸ್ ಹೀಗೆ ನಾನಾ ಬಗೆಯ ಉಡುಪುಗಳೊಂದಿಗೆ ಮಿಕ್ಸ್ ಮ್ಯಾಚ್ ಮಾಡಬಹುದಾದ ಈ ಡೆನಿಮ್ ಕ್ರಾಪ್ ಟಾಪ್ ನೋಡಲು ಸುಂದರವಾಗಿ ಕಾಣುತ್ತದೆ. ಇವುಗಳಲ್ಲಿ ಇದೀಗ ಸ್ಟ್ರಾಪ್ ಕ್ರಾಪ್ ಟಾಪ್ ಅತಿ ಹೆಚ್ಚು ಜನಪ್ರಿಯಗೊಂಡಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಲೈಟ್‌ವೈಟ್‌ನಲ್ಲಿ ಇವು ಬಿಡುಗಡೆಗೊಂಡಿರುವುದು ಹುಡುಗಿಯರನ್ನು ಸೆಳೆಯಲು ಕಾರಣವಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಅಮಿತ್. ಅವರ ಪ್ರಕಾರ, ಈ ಬಾರಿ ಬಿಡುಗಡೆಗೊಂಡಿರುವ ಡೆನಿಮ್ ಕ್ರಾಪ್ ಟಾಪ್‌ಗಳು ನೋಡಲು ದಪ್ಪ ಫ್ಯಾಬ್ರಿಕ್‌ನಿಂದ ಸಿದ್ಧಪಡಿಸಿರುವಂತೆ ಕಾಣುತ್ತವೆ ಅಷ್ಟೇ! ಆದರೆ, ಅವನ್ನು ಧರಿಸಿದಾಗ ಲೈಟ್‌ವೈಟ್ ಫೀಲ್ ಆಗುತ್ತದೆ. ಧರಿಸಿದಾಗ ಬೆಲ್ಲಿಯ ಮೇಲ್ಭಾಗದಲ್ಲಿ ನಿಲ್ಲುತ್ತವೆ. ಹಾಗಾಗಿ ಧರಿಸಿದವರ ಗ್ಲಾಮರಸ್ ಲುಕ್ ಹೆಚ್ಚುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ, ಇತ್ತೀಚೆಗೆ ನಟಿ ಜಾಸ್ಮಿನ್ ಬಾಸಿನ್ ಧರಿಸಿದ ಡೆನಿಮ್ ಕ್ರಾಪ್ ಟಾಪ್ ಸಾಕಷ್ಟು ಸುದ್ದಿ ಮಾಡಿತ್ತು ಹಾಗೂ ಫ್ಯಾಷನ್ ಪ್ರಿಯರನ್ನು ಸೆಳೆದಿತ್ತು ಎನ್ನುತ್ತಾರೆ ಅವರು.
ಡೆನಿಮ್ ಕ್ರಾಪ್ ಟಾಪ್‌ಗೂ ಲೇಯರ್ ಲುಕ್
ಡೆನಿಮ್ ಕ್ರಾಪ್ ಟಾಪ್‌ಗೂ ಲೇಯರ್ ಲುಕ್ ನೀಡಬಹುದು. ಅದರ ಮೇಲೆ ಜಾಕೆಟ್, ಟ್ರೆಂಚ್‌ಕೋಟ್, ಹೂಡಿ ಕೋಟ್, ಬ್ಲೇಝರ್ ಧರಿಸಬಹುದು. ಪ್ಯಾಂಟ್ ಅಥವಾ ಧರಿಸಿರುವ ಸ್ಕರ್ಟ್ ಹೊಂದಬೇಕಷ್ಟೇ! ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಡೆನಿಮ್ ಕ್ರಾಪ್ ಟಾಪ್ ಪ್ರಿಯರಿಗೆ 7 ಟಿಪ್ಸ್
- ಲೈಟ್ವೈಟ್ನದ್ದನ್ನು ಆರಿಸಿ. ಇಲ್ಲವಾದಲ್ಲಿ ಲೇಯರ್ ಲುಕ್ ನೀಡಿದಾಗ ಸೆಕೆಯಾಗಬಹುದು.
- ಹಾಲ್ಟರ್ ನೆಕ್, ಬಾರ್ಡಟ್, ಟೀ ಶರ್ಟ್ ಸ್ಟೈಲ್ ಡೆನಿಮ್ ಕ್ರಾಪ್ ಟಾಪ್ ಕೂಡ ಲಭ್ಯ.
- ಡೆನಿಮ್ ಧರಿಸಿದಾಗ ಮಿನಿಮಲ್ ಜ್ಯುವೆಲರಿ ಧರಿಸಿ.
- ಮಾನೋಕ್ರೋಮ್ ಡೆನಿಮ್ ಲುಕ್ ಕೂಡ ಮಾಡಬಹುದು.
- ಗ್ಲಾಮರಸ್ ಲುಕ್ ಬೇಡದಿದ್ದಲ್ಲಿ ಟಾಪ್ ಮೇಲೆ ಲೇಯರ್ ಲುಕ್ ನೀಡಬಹುದು.
- ವೆಸ್ಟರ್ನ್ ಲುಕ್‌ಗೆ ಟ್ರೆಡಿಷನಲ್ ಮೇಕಪ್ ಬೇಡ.
- ಸ್ಯಾಂಡಲ್ಸ್ ಬದಲು ಸ್ನೀಕರ್ಸ್ ಅಥವಾ ಶೂ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Mens Fashion: ಮಾನ್ಸೂನ್‌ನಲ್ಲಿ ಯುವಕರ ಸ್ಟೈಲಿಶ್ ಲುಕ್‌ಗೆ ಹೂಡಿ ಸಾಥ್!