ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೀವು ಐ ಮೇಕಪ್ (Monsoon Eyemakep) ಪ್ರಿಯರೇ! ಪ್ರತಿ ದಿನ ಒಂದಲ್ಲ ಒಂದು ಬಗೆಯ ಐ ಮೇಕಪ್ ಮಾಡುತ್ತೀರಾ! ಹಾಗಾದಲ್ಲಿ ಮಳೆಗಾಲದಲ್ಲಿ ಯಾವ್ಯಾವ ಬಗೆಯ ಕಣ್ಣಿನ ಮೇಕಪ್ ಮಾಡಬಹುದು? ಮಳೆಯಲ್ಲಿ ತೋಯ್ದರೂ ಹಾಳಾಗದೇ ಹೇಗೆಲ್ಲಾ ಆಕರ್ಷಕವಾಗಿ ಕಾಣಬಹುದು ಎಂಬುದರ ಬಗ್ಗೆ ಮೇಕಪ್ ತಜ್ಞರು ಒಂದಿಷ್ಟು ಸಲಹೆ ನೀಡಿದ್ದಾರೆ.
ಗೋಲ್ಡನ್ ವಿಂಗ್ಡ್ ಐ ಲೈನರ್
ಮಳೆಗಾಲದಲ್ಲಿ ಒಂದೇ ಬಗೆಯ ಐ ಶ್ಯಾಡೋಗಳು ಡಲ್ ಫಿನಿಶಿಂಗ್ ನೀಡುತ್ತವೆ. ಮುಖ ಡಲ್ ಆಗಿ ಬಿಂಬಿಸುತ್ತವೆ. ಇದನ್ನು ಬದಲಿಸಬೇಕೆಂದುಕೊಂಡವರು ಬ್ಲಾಕ್ ಶೇಡ್ ಮೇಲೆ ಇದೀಗ ಟ್ರೆಂಡಿಯಾಗಿರುವ ವಾಟರ್ ಪ್ರೂಫ್ ಗೋಲ್ಡನ್ ಐ ಲೈನರ್ ಹಚ್ಚಬಹುದು. ಜೊತೆಗೆ ವಿಂಗ್ಡ್ ಲೈನ್ ಕೂಡ ಬರೆಯಬಹುದು. ಇದು ಕಣ್ಣು ಮಿಟುಕಿಸಿದಾಗ ಮಿನುಗುತ್ತದೆ.
ಶಿಮ್ಮರಿ ಗೋಲ್ಡನ್ ಐ ಶ್ಯಾಡೋ
ಇದು ಕೂಡ ಅಷ್ಟೇ! ಕಣ್ಣುಗಳ ರೆಪ್ಪೆಯ ಮೇಲೆ ಹಚ್ಚಿದಾಗ ಮಿನುಗುತ್ತದೆ. ಪಾರ್ಟಿಗಳಿಗೆ ಸೂಕ್ತವೆನಿಸುವ ಈ ಗೋಲ್ಡನ್ ಶಿಮ್ಮರ್ ಐ ಶ್ಯಾಡೋ, ವಧನದ ಇಡೀ ಲುಕ್ಕನ್ನು ಬದಲಿಸುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಂಗಳನ್ನು ಆಕರ್ಷಕವಾಗಿ ಬಿಂಬಿಸುತ್ತದೆ. ಆದರೆ, ಮಳೆಗಾಲದಲ್ಲಿ ಇವು ನೀರು ಸೋಕಿದಲ್ಲಿ ಕದಡುವ ಸಾಧ್ಯತೆ ಇರುವುದರಿಂದ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ವಾಟರ್‌ಪ್ರೂಫ್ ಶೇಡ್ಸ್‌ನಲ್ಲಿ ಬಳಸುವುದು ಉತ್ತಮ.
ಎಲೆಕ್ಟ್ರಿಕ್ ಬ್ಲ್ಯೂ ಸ್ಮೋಕಿ ಶೇಡ್ಸ್
ಈ ಶೇಡ್ ಫಂಕಿ ಲುಕ್‌ನೊಂದಿಗೆ ಕಣ್ಣುಗಳನ್ನು ಎದ್ದುಕಾಣುವಂತೆ ಮಾಡಬಲ್ಲದು. ಆದಷ್ಟೂ ವೈಟ್, ನೀಲಿ ಹಾಗೂ ಲೈಟ್ ಬ್ಲ್ಯೂ ಶೇಡ್‌ಗಳ ಉಡುಪುಗಳಿಗೆ ಮ್ಯಾಚ್ ಆಗುವ ಈ ಶೆಡ್ಸ್ ನೊಂದಿಗೆ ಬ್ಲಾಕ್ ಐ ಲೈನರ್ ಹಾಗೂ ಕಾಜಲ್ ಹಚ್ಚಿದರೇ ಅದರ ಲುಕ್ಕೇ ಬದಲಾಗುತ್ತದೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಸಿಲ್ವರ್ ಐ ಶ್ಯಾಡೋ ಕ್ರೇಝ್
ಇದೀಗ ಕಾರ್ಪೋರೇಟ್ ಕ್ಷೇತ್ರದವರು ಹಾಗೂ ಟೀನೇಜ್ ಹುಡುಗಿಯರು ಪ್ರಯೋಗಾತ್ಮಕವಾಗಿ ಸಿಲ್ವರ್ ಅಥವಾ ಬೂದು ಬಣ್ಣದ ಐ ಶೇಡ್‌ಗಳನ್ನು ಬಳಸಲಾರಂಭಿಸಿದ್ದಾರೆ. ಇದು ಫ್ರೆಶ್ ಲುಕ್ ನೀಡುತ್ತದೆ. ಜೊತೆಗೆ ಡಿಫರೆಂಟ್ ಆಗಿ ಕಾಣಿಸುತ್ತದೆ.
ಐ- ಮೇಕಪ್‌ಗೆ ಸಿಂಪಲ್ ಟ್ರಿಕ್ಸ್
- ಪ್ರೈಮರ್ ಬಳಸಿ, ನಂತರ ಐ ಮೇಕಪ್ ಮಾಡಿ.
- ಬಳಸುವ ಶೇಡ್ಗಳು ಎಲ್ಲವೂ ವಾಟರ್ ಪ್ರೂಫ್ ಆಗಿರಲಿ.
- ಮಸ್ಕರಾ ಕೊನೆಯಲ್ಲಿ ಹಚ್ಚಿ.
- ಎರಡೂ ಕಡೆ ಕಣ್ಣಿನ ಐ ಲೈನರ್ ಒಂದೇ ಸಮನಾಗಿರಲಿ.
- ಕಾಡಿಗೆ ಲೈನ್ನಂತೆ ಹಚ್ಚಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಾನ್ಸೂನ್ ಶಿಮ್ಮರ್ ಪಾರ್ಟಿವೇರ್ಸ್‌ಗೂ ಸಿಕ್ತು ಲೇಯರ್ಡ್ ಲುಕ್!