ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಿಂದಾಸ್ ಲುಕ್‌ನಲ್ಲಿದ್ದ ಕ್ರಾಪ್ ಟಾಪ್‌ಗಳು (Monsoon Fashion) ಇದೀಗ ಫುಲ್ ಸ್ಲೀವ್‌ಗಳಾಗಿವೆ. ಮಳೆಗಾಲದ ಗಾಳಿ-ಮಳೆಗೆ ಹೊಂದುವಂತಹ ಡಿಸೈನ್‌ನಲ್ಲಿ ಆಗಮಿಸಿವೆ. ನೋಡಲು ಫುಲ್ ಸ್ಲೀವ್ ಆಗಿದ್ದರೂ ಕೂಡ ಬೇಡಿಕೆ ಕಡಿಮೆಯಾಗಿಸಿಕೊಂಡಿಲ್ಲ! ಲೇಯರ್ಡ್ ಲುಕ್ ಸಾಥ್ ನೀಡಬಹುದಾದಂತಹ ವಿನ್ಯಾಸದಲ್ಲಿ ಫ್ಯಾಬ್ರಿಕ್‌ನಲ್ಲಿ ಬಿಡುಗಡೆಗೊಂಡಿದ್ದು, ಅವುಗಳಲ್ಲಿ 3 ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ.
ಬಲೂನ್ ಫುಲ್ ಸ್ಲೀವ್ ಕ್ರಾಪ್ ಟಾಪ್
ಬಾಡಿಕಾನ್ ಕ್ರಾಪ್ ಟಾಪ್‌ಗಳು ಇದೀಗ ಬಲೂನ್ ಸ್ಲೀವ್‌ನಲ್ಲೂ ದೊರೆಯುತ್ತಿವೆ. ಇವು ನೋಡಲು ಕೊಂಚ ಡ್ರಾಮಾಟಿಕ್ ಆಗಿದ್ದರೂ ನೋಡಲು ಕಂಪ್ಲೀಟ್ ಡಿಫರೆಂಟ್ ಲುಕ್ ನೀಡುತ್ತವೆ. ಫಾರ್ಮಲ್ ಪ್ಯಾಂಟ್‌ನಿಂದಿಡಿದು ಕ್ಯೂಲ್ಲೊಟ್ಸ್, ನೀ ಲೆಂಥ್ ಪ್ಯಾಂಟ್ ಹಾಗೂ ಸ್ಕಟ್ರ್ಸ್ ನೊಂದಿಗೂ ಧರಿಸಬಹುದು. ಆದರೆ ಆಯ್ಕೆ ಮಾಡುವಾಗ ಮಾತ್ರ ನಿಮ್ಮ ಬಹುತೇಕ ಉಡುಪಿಗೆ ಹೊಂದುವಂತಹ ಕಾಮನ್ ಕಲರ್‌ನದ್ದನ್ನು ಖರೀದಿಸಬೇಕು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ಜಾಕ್.
ಟೈಟ್ ಸ್ಟ್ರೇಚಬಲ್ ಸ್ಲೀವ್‌ನ ಕ್ರಾಪ್ ಟಾಪ್
ಹೆಚ್ಚು ಡಿಸೈನ್ ಇಲ್ಲದ ಸ್ಟ್ರೇಚಬಲ್ ಫ್ಯಾಬ್ರಿಕ್‌ನ ಕ್ರಾಪ್ ಟಾಪ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಸ್ಲೀಕ್ ಲುಕ್ ನೀಡುವ ಇವು ನಾರ್ಮಲ್ ಹಾಗೂ ಸ್ಲಿಮ್ ಬಾಡಿಟೈಪ್‌ನವರಿಗೆ ಮಾತ್ರ ಸೂಟ್ ಆಗುತ್ತವೆ. ಪ್ಲಂಪಿಯಾಗಿರುವವರಿಗೆ ನಾಟ್ ಓಕೆ. ಈ ಸ್ಟ್ರೆಚಬಲ್ ಸ್ಲೀವ್‌ನ ಕ್ರಾಪ್ ಟಾಪ್‌ಗಳನ್ನು ಲೇಯರ್ಡ್ ಲುಕ್‌ಗಾಗಿ ಧರಿಸುವುದು ಹೆಚ್ಚಾಗಿದೆ. ಈ ಟಾಪ್‌ನ ಮೇಲೆ ಆರಾಮವಾಗಿ ಜಾಕೆಟ್ ಕೋಟ್ ಹಾಗೂ ಯಾವುದೇ ವೇಸ್ಟ್‌ಕೋಟ್ ಧರಿಸಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ನಿಶಾಂತ್ ಆರ್ಯ.
ಟರ್ಟಲ್ ನೆಕ್ ಫುಲ್ ಸ್ಲೀವ್ ಕ್ರಾಪ್ ಟಾಪ್
ಕುತ್ತಿಗೆಯವರೆಗೂ ಇರುವ ಟರ್ಟಲ್ ನೆಕ್‌ನ ಟೀ ಶರ್ಟ್ ಶೈಲಿಯ ಫುಲ್ ಸ್ಲೀವ್ ಕ್ರಾಪ್ ಟಾಪ್‌ಗಳು ಮಾನ್ಸೂನ್ ಹಾಗೂ ವಿಂಟರ್ ಲುಕ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಇವುಗಳ ಮೇಲೆ ಯಾವುದೇ ಬಗೆಯ ಓವರ್‌ಕೋಟ್, ಬ್ಲೇಝರ್ ಧರಿಸಬಹುದು ಎಲ್ಲದಕ್ಕೂ ಸೂಟ್ ಆಗುತ್ತದೆ. ನೋಡಲು ಕಾರ್ಪೋರೆಟ್ ಲುಕ್ ನೀಡುತ್ತದೆ ಎನ್ನುತ್ತಾರೆ ಫ್ಯಾಷನಿಸ್ಟಾ ದಾಮಿನಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Pageant News: ಮಿಸ್ಟರ್ ಮತ್ತು ಮಿಸ್ ಐಕಾನ್ ಸೌಂದರ್ಯ ಸ್ಪರ್ಧೆಯಲ್ಲಿ ಕಾಲೇಜು ಹುಡುಗ-ಹುಡುಗಿಯರ ಸಂಭ್ರಮ