Site icon Vistara News

Monsoon Fashion: ಮಾನ್ಸೂನ್‌ ಸೀರೆ ಸ್ಟೈಲಿಂಗ್‌ಗೆ ಸಾಥ್‌ನೀಡಲು ಬಂತು ಕಾಲರ್‌ ನೆಕ್‌ ಬ್ಲೌಸ್‌

Monsoon Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ ಸೀರೆ ಫ್ಯಾಷನ್‌ನಲ್ಲಿ (Monsoon Fashion) ಇದೀಗ ಕಾಲರ್‌ ನೆಕ್‌ ಇರುವ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ನೋಡಲು ಎಲಿಗೆಂಟ್‌ ಲುಕ್‌ ನೀಡುವ ಈ ಬ್ಲೌಸ್‌ ಡಿಸೈನ್‌ಗಳು ಇಂಡೋ-ವೆಸ್ಟರ್ನ್ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ.

ಸೀರೆ ಫ್ಯಾಷನ್‌ನಲ್ಲಿ ಕಾಲರ್‌ ಬ್ಲೌಸ್‌

ಕಾಲರ್‌ ಬ್ಲೌಸ್‌ ಫ್ಯಾಷನ್‌ ಇಂದಿನದಲ್ಲ! ಮೊದಲಿನಿಂದಲೂ ಈ ಫ್ಯಾಷನ್‌ ಇತ್ತು. ಹೊಸ ಫ್ಯಾಷನ್‌ ಬಂದಂತೆ ಕೆಲ ಕಾಲ ಮರೆಯಾಗಿ ಆಗಾಗ್ಗೆ ಮರುಕಳಿಸುತ್ತಿತ್ತು. ರೆಟ್ರೋ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿತ್ತು. 70-80ರ ದಶಕದಲ್ಲಂತೂ ಸಖತ್‌ ಹಿಟ್‌ ಆಗಿತ್ತು ಕೂಡ. ಹಳೆಯ ಸಿನಿಮಾದಲ್ಲಿ ನಟಿಯರು ಧರಿಸುವ ಸೀರೆಗಳೊಂದಿಗೆ ಇವು ಕಾಣಿಸಿಕೊಳ್ಳುತ್ತಿತ್ತು. ಬರಬರುತ್ತಾ ಇವುಗಳ ರೂಪ ಸಾಕಷ್ಟು ಬದಲಾಯಿತು. ಮೊದಲೆಲ್ಲಾ ಕ್ರಾಪ್‌ ಆಗಿದ್ದ ಕಾಲರ್‌ ಸೀರೆ ಬ್ಲೌಸ್‌ಗಳು, ಇತ್ತೀಚೆಗೆ ಲಾಂಗ್‌ ಆಗಿವೆ, ಅಷ್ಟೇ! ಜೊತೆಗೆ ಇಂಡೋ-ವೆಸ್ಟರ್ನ್ ಶೈಲಿಯಲ್ಲಿ ಮಾತ್ರವಲ್ಲ, ವೆಸ್ಟರ್ನ್ ಶೈಲಿಯ ಲಾಂಗ್‌ ಟಾಪ್‌ಗಳಂತೆ ಬದಲಾಗಿವೆ. ವೇಸ್ಟ್‌ಲೈನ್‌ವರೆಗೂ ಬರುವ ಇವು ಸೀರೆಯೊಂದಿಗೆ ಡಿಫರೆಂಟ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ ಬ್ಲೌಸ್‌ ಡಿಸೈನರ್‌ ಜಯಾ.

ರೂಪಾಂತರಗೊಂಡ ಕಾಲರ್‌ ಬ್ಲೌಸ್‌

ಈ ಸೀಸನ್‌ನಲ್ಲಿ ಈ ರೂಪಾಂತರಗೊಂಡ ಕಾಲರ್‌ ಬ್ಲೌಸ್‌ಗಳು ಹೆಚ್ಚು ಚಾಲ್ತಿಯಲ್ಲಿವೆ. ಅದರಲ್ಲೂ ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರು, ಟೀನೇಜ್‌ ಹುಡುಗಿಯರು ಈ ರೀತಿಯ ಲಾಂಗ್‌ ಕಾಲರ್‌ ನೆಕ್‌ ಬ್ಲೌಸ್‌ಗಳನ್ನು ಸೀರೆಗೆ ಧರಿಸಿ ಪ್ರಯೋಗ ಮಾಡತೊಡಗಿದ್ದಾರೆ. ಇದು ನೋಡಲು ಹೊಸ ಲುಕ್‌ ನೀಡುವುದರೊಂದಿಗೆ ಸೀರೆ ಪ್ರೇಮವನ್ನು ತೋರ್ಪಡಿಸುತ್ತದೆ ಎನ್ನುತ್ತಾರೆ ಸೀರೆ ಡಿಸೈನರ್‌ ರಾಣಿ. ಅವರ ಪ್ರಕಾರ, ಈ ರೀತಿಯ ಬ್ಲೌಸ್‌ ಎಲ್ಲರಿಗೂ ಮ್ಯಾಚ್‌ ಆಗುವುದಿಲ್ಲ! ಹಾಗಾಗಿ ಧರಿಸಲು ಬಯಸುವರು ಮೊದಲು ಟ್ರಯಲ್‌ ನೋಡಿ, ಸೆಕೆಂಡ್‌ ಒಪಿನಿಯನ್‌ ಪಡೆದು ಮುಂದುವರೆಯುವುದು ಉತ್ತಮ ಎನ್ನುತ್ತಾರೆ.

ಕಾಲರ್‌ ಬ್ಲೌಸ್‌ ಸೀರೆಗೆ ಧರಿಸುವವರು ಗಮನಿಸಬೇಕಾದ ಅಂಶಗಳು

(ಲೇಕಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon Fashion: ಮಾನ್ಸೂನ್‌ ಫ್ಯಾಷನ್‌ಗೆ ಮರಳಿದ ಮಲ್ಟಿ ಲೇಯರ್ಡ್ ಲುಕ್‌

Exit mobile version