Site icon Vistara News

Monsoon Fashion: ಮಳೆಗಾಲದ ಫ್ಯಾಷನ್‌ನಲ್ಲಿ ಹೂಡಿಗೂ ಬಿತ್ತು ಕತ್ತರಿ!

Monsoon Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ನ ಫ್ಯಾಷನ್‌ನಲ್ಲಿ (Monsoon Fashion) ಇದೀಗ ಹುಡುಗಿಯರ ಹೂಡಿಗೂ ಕತ್ತರಿ ಬಿದ್ದಿದೆ. ಇದೇನು! ಎಂದುಕೊಳ್ಳುತ್ತಿದ್ದೀರಾ? ಅಚ್ಚರಿ ಪಡುವಂತದ್ದೇನೂ ಇಲ್ಲ! ಬದಲಿಗೆ ಹೂಡಿ ತನ್ನ ರೂಪ ಬದಲಿಸಿದೆ. ಗ್ಲಾಮರಸ್‌ ಆಗಿದೆ. ಜೆನ್‌ ಜಿ ಹುಡುಗಿಯರಿಗೆ ಇಷ್ಟವಾಗುವಂತೆ ಕ್ರಾಪ್‌ ಆಗಿದೆ. ಹೌದು. ಕ್ರಾಪ್‌ ಹೂಡಿ ಈ ಸೀಸನ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿದ್ದು, ಕಾಲೇಜು ಹುಡುಗಿಯರ ಹಾಟ್‌ ಫ್ಯಾಷನ್‌ನಲ್ಲಿ ಸೇರಿದೆ. ಔಟಿಂಗ್‌, ರೊಮಿಂಗ್‌ ಹೀಗೆ ನಾನಾ ಸಂದರ್ಭಗಳಲ್ಲಿ ಹುಡುಗಿಯರಿಗೆ ಜೊತೆಯಾಗಿದೆ. ಗ್ಲಾಮರಸ್‌ ಲುಕ್‌ ನೀಡಿದೆ.

ಏನಿದು ಕ್ರಾಪ್‌ ಹೂಡಿ ?

ಧರಿಸಿದರೇ ಹೊಟ್ಟೆಯ ಮೇಲ್ಭಾಗಕ್ಕೆ ನಿಲ್ಲುವ ಅಥವಾ ವೆಸ್ಟ್‌ ಲೈನ್‌ ಎಕ್ಸ್‌ಪೋಸ್‌ ಮಾಡುವ ಹೂಡಿ ಇದು. ಸದ್ಯಕ್ಕೆ ಯುವತಿಯರ ಮಾನ್ಸೂನ್‌ ಟಾಪ್‌ ಟ್ರೆಂಡ್‌ನಲ್ಲಿದೆ. ಮಾನೋಕ್ರೋಮ್‌ ಶೇಡ್‌ನಲ್ಲಿ ಬಿಡುಗಡೆಯಾಗಿದ್ದು, ಸಾಕಷ್ಟು ವೈಬ್ರೆಂಟ್‌ ಕಲರ್‌ಗಳಲ್ಲಿ ಕಾಣಿಸಿಕೊಂಡಿವೆ.

ಹಾಲಿವುಡ್‌ಗರ ಟ್ರೆಂಡ್‌

ಹಾಲಿವುಡ್‌ ಮಂದಿಯ ಫೇವರೇಟ್‌ ಲಿಸ್ಟ್‌ನಲ್ಲಿದ್ದ ಕ್ರಾಪ್‌ ಹೂಡಿ ಮೊದಲಿಗೆ ಕಾಲಿಟ್ಟಿದ್ದು, ಬಾಲಿವುಡ್‌ಗೆ, ನಂತರ ಕಾಲೇಜು ಹುಡುಗಿಯರ ವಾರ್ಡ್​ರೋಬ್​ ಸೇರಿಕೊಂಡವು. ಇವುಗಳ ಪ್ಲಸ್‌ ಪಾಯಿಂಟ್‌ ಎಂದರೇ ಇವು ಮಳೆಗಾಲ ಹಾಗೂ ಚಳಿಗಾಲಕ್ಕೆ ಸೂಟ್‌ ಆಗುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಾಕಿ.

ಕ್ರಾಪ್‌ ಹೂಡಿ ಮಿಕ್ಸ್‌ ಮ್ಯಾಚ್‌ ಹೀಗಿರಲಿ

ಕ್ರಾಪ್‌ ಹೂಡಿ ಲೆಯರ್‌ ಲುಕ್‌ ನೀಡುತ್ತದೆ ಎನ್ನುವ ಫ್ಯಾಷನಿಸ್ಟಾ ರೀನಾ ಹೇಳುವಂತೆ, ಕ್ರಾಪ್‌ ಹೂಡಿ ಜತೆಗೆ ಮ್ಯಾಚ್‌ ಆಗುವಂತಹ ಶೇಡ್ಸ್‌, ಇಲ್ಲವೇ ಪ್ರಿಂಟ್ಸ್‌ ಅಥವಾ ಚೆಕ್ಸ್‌ ಒಳಗೊಂಡ ಪ್ಯಾಂಟ್‌ಗಳೆಲ್ಲವೂ ಸೂಟ್‌ ಆಗುತ್ತವೆ. ಸಾದಾ ಪ್ಯಾಂಟ್‌ಗಳ ಜೊತೆಗೂ ಇವನ್ನು ಧರಿಸಬಹುದು. ಶಾಟ್ರ್ಸ್ ಜೊತೆಗೂ ಹೊಂದಿಸಬಹುದು. ಅಷ್ಟೇಕೇ, ಲಾಂಗ್‌ ಸ್ಕರ್ಟ್ಸ್‌ಗೂ ಧರಿಸಬಹುದು. ಇನ್ನು ಈ ಹೂಡಿಗೆ ಆಕ್ಸೆಸರೀಸ್‌ ಧರಿಸುವುದು ಬೇಕಾಗಿಲ್ಲ. ಉದ್ದವಿರುವ ಸ್ಲಿಮ್‌ ಹುಡುಗಿಯರಿಗಂತೂ ನೋಡಲು ಚೆನ್ನಾಗಿ ಕಾಣುತ್ತದೆ ಮಾತ್ರವಲ್ಲ, ಮತ್ತಷ್ಟು ಎತ್ತರವಾಗಿರುವಂತೆ ಪ್ರತಿಬಿಂಬಿಸುತ್ತದೆ. ನಾರ್ಮಲ್‌ ಪ್ಯಾಂಟ್‌, ಫ್ಲಾಜೂ, ಕೇಪ್ರಿಸ್‌ಗಳಿಗೂ ಕ್ರಾಪ್‌ ಹೂಡಿ ಪರ್ಫೆಕ್ಟ್ ಸೂಟ್‌ ಆಗುತ್ತದೆ. ಆದರೆ, ಪ್ಯಾಂಟ್‌ಗಳ ಕಟ್ಸ್‌ ಹಾಗೂ ಸ್ಟಿಚ್ಚಿಂಗ್‌ ಕ್ರಾಪ್‌ ಟಾಪ್‌ಗಳಿಗೆ ಮ್ಯಾಚ್‌ ಆಗಬೇಕು. ಜಾಕೆಟ್‌ನಂತೆ ಕಾಣುವ ಕ್ರಾಪ್‌ ಹೂಡಿಯೂ ಕೂಡ ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಸೆಮಿ ಫಾರ್ಮಲ್‌ ಉಡುಪುಗಳಿಗೂ ಕ್ರಾಪ್‌ ಹೂಡಿ ಧರಿಸಬಹುದು ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್‌ ರಾಕಿ.

ಹೂಡಿಗೆ ಹೇರ್‌ಸ್ಟೈಲ್‌ ಹೀಗಿರಲಿ

ಈ ಸೀಸನ್‌ನಲ್ಲಿ ಕ್ರಾಪ್‌ ಹೂಡಿ ಧರಿಸಿ ಲೆಯರ್‌ ಲುಕ್‌ ನೀಡುವಾಗ ಆದಷ್ಟೂ ಕಂಫರ್ಟಬಲ್‌ ಹೇರ್‌ಸ್ಟೈಲ್‌ ಮಾಡಿ. ಯಾಕೆಂದರೆ, ಮೊದಲೇ ಬೆಚ್ಚಗಿನ ಉಡುಪು ಧರಿಸಿ ನಂತರ ಫ್ರೀ ಹೇರ್‌ ಬಿಟ್ಟಿದ್ದಲ್ಲಿ ಉಷ್ಣಾಂಶ ಏರಿಕೆಯಾಗಬಹುದು. ಸೆಕೆಯಾಗಬಹುದು. ಹಾಗಾಗಿ ಹೈ ಪೋನಿ, ಫಿಶ್‌ಟೇಲ್‌, ಸೈಡ್‌ ಪೋನಿ, ಲಾಂಗ್‌ ಸೈಡ್‌ ಚೋಟಿಯಂತಹ ಹೇರ್‌ಸ್ಟೈಲ್‌ಗಳು ಪರ್ಫೆಕ್ಟ್ ಸೂಟ್‌ ಆಗುತ್ತವೆ ಎನ್ನುತ್ತಾರೆ ಹೇರ್‌ಸ್ಟೈಲಿಸ್ಟ್‌.

ಕ್ರಾಪ್‌ ಹೂಡಿ ಪ್ರಿಯರಿಗೆ ಟಿಪ್ಸ್

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Pregnancy Gown Fashion: ಪ್ರೆಗ್ನೆನ್ಸಿ ಫೋಟೊಶೂಟ್‌ಗಳಲ್ಲಿ ವೆಸ್ಟರ್ನ್ ಗೌನ್‌ಗಳದ್ದೇ ಕಾರುಬಾರು!

Exit mobile version