ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲದ ರಂಗೇರಿಸಲು (Monsoon Fashion) ಬಣ್ಣಬಣ್ಣದ ಯೂನಿಸೆಕ್ಸ್ ರೇನ್‌ಕೋಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಔಟ್‌ಫಿಟ್ ಮೇಲೆ ಧರಿಸಿದರೂ ಟೈಟಾಗಾದ ಫಿಟ್ಟಿಂಗ್ ರೇನ್‌ಕೋಟ್ಸ್, ಟ್ರಾನ್ಸಪರೆಂಟ್ ರೇನ್‌ಕೋಟ್ಸ್, ಚಿಣ್ಣರ ಫಂಕಿ ಡಬ್ಬಲ್ ಕವರ್ಡ್ ರೇನ್‌ಕೋಟ್‌ಗಳು ಎಂಟ್ರಿ ನೀಡಿವೆ.
ವಾಟರ್ ಪ್ರೂಫ್ ರೇನ್‌ಕೋಟ್ಸ್
ಬಹುತೇಕ ಎಲ್ಲಾ ಶೈಲಿಯ ರೇನ್‌ಕೋಟ್‌ಗಳು ವಾಟರ್ ಪ್ರೂಫ್ ರೇನ್ ಕೋಟ್‌ಗಳಾಗಿರುತ್ತವೆ. ಲಾಂಗ್, ಶಾರ್ಟ್, ಜಾಕೆಟ್ ಶೈಲಿಯವು ದೊರೆಯುತ್ತವೆ. ಇದೀಗ ವೈಬ್ರೆಂಟ್ ಬಣ್ಣಗಳಾದ ಹಳದಿ, ಕೇಸರಿ, ರೆಡ್, ಪಿಸ್ತಾ, ನಿಯಾನ್ ವರ್ಣದ ಕಲರ್‌ಫುಲ್ ರೇನ್‌ಕೋಟ್‌ಗಳು ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಧರಿಸಿದ ಉಡುಪನ್ನು ರಕ್ಷಿಸಬಲ್ಲ ಈ ರೇನ್‌ಕೋಟ್‌ಗಳು ಪುರುಷ ಮಹಿಳೆಯರೆನ್ನದೇ ಎಲ್ಲರಿಗೂ ಮ್ಯಾಚ್ ಆಗುವ ವಿನ್ಯಾಸ ಹೊಂದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
ದ್ವಿ-ಚಕ್ರ ವಾಹನ ಸವಾರರ ರಕ್ಷಾ ಕವಚ
ಮಾನ್ಸೂನ್ ಬಂತೆಂದರೇ ಸಾಕು, ಡಿಸೈನರ್‌ವೇರ್ ಧರಿಸಲು ಹಿಂಜರಿಕೆ, ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚು. ಅದರಲ್ಲೂ ದ್ವಿ- ಚಕ್ರ ವಾಹನದಲ್ಲಿ ಓಡಾಡುವವರು, ಉದ್ಯೋಗಸ್ಥರು, ವ್ಯಾಪಾರಸ್ಥರು ಈ ಬಗ್ಗೆ ಸಾಕಷ್ಟು ಕಾಳಜಿ ವಹಿಸಲೇಬೇಕು. ಇನ್ನು, ಕಾಲೇಜು ವಿದ್ಯಾರ್ಥಿನಿ ರಾಶಿ ಹಾಗೂ ದಿವಿಜಾಗೆ ರೇನ್‌ಕೋಟ್ ಇದೀಗ ಮಾನ್ಸೂನ್‌ನ ಡ್ರೆಸ್‌ಕೋಡ್‌ನಲ್ಲಿ ಸೇರಿದೆಯಂತೆ. ಅವರಿಗೆ ಇಷ್ಟವಾದ ಟ್ರಾನ್ಸಪರೆಂಟ್ ರೇನ್‌ಕೋಟ್ ಧರಿಸುತ್ತಾರಂತೆ. ಇದರಲ್ಲಿ ತಾವು ಧರಿಸಿದ ಉಡುಪು ಕೂಡ ಕಾಣಿಸುತ್ತದೆ ಹಾಗೂ ಫ್ಯಾಷೆನಬಲ್ ಆಗಿಯೂ ಕಾಣಿಸಬಹುದು ಎನ್ನುತ್ತಾರೆ.
ಯಾರಿಗೆ ಯಾವುದು?
ನೀವು ರೇನ್‌ಕೋಟ್ ಕೊಳ್ಳಬೇಕಾದಲ್ಲಿ ಆದಷ್ಟೂ ಲಾಂಗ್ ರೇನ್‌ಕೋಟ್‌ಗಳನ್ನೇ ಪ್ರಿಫರ್ ಮಾಡಿ. ಅದಷ್ಟು ರೆಕ್ಸಿನ್ ಇಲ್ಲವೇ ನೀರು ಜಾರಿ ಹೋಗುವಂತಹ ರೇನ್‌ಕೋಟನ್ನು ಸೆಲೆಕ್ಟ್, ಮಾಡಿ. ಕಾಲೇಜು ತೆರಳುವ ಹುಡುಗಿಯರಾದಲ್ಲಿ ಟ್ರೆಂಚ್ ಕೋಟ್ ಶೈಲಿಯಲ್ಲಿ ಇರುವಂತದ್ದನ್ನು ಆಯ್ದುಕೊಳ್ಳಿ. ಸೀರೆ ಧರಿಸುವ ಮಹಿಳೆಯರಾದಲ್ಲಿ ಆದಷ್ಟು ಸೆಂಟರ್ ಸ್ಲಿಟ್ಸ್ ಇರುವ ರೇನ್‌ಕೋಟನ್ನು ಧರಿಸುವುದು ಉತ್ತಮ. ಯಾಕೆಂದರೇ ಇದು ವಾಕ್ ಮಾಡಲು ಸಹಕಾರಿ. ಎನ್ನುತ್ತಾರೆ ಡಿಸೈನರ್ ರೀತು. ಪುರುಷರಿಗೆ ಆದಷ್ಟು ಬ್ಲಾಕ್ ಇಲ್ಲವೇ ಬ್ರೌನ್ ವರ್ಣದ ರೇನ್‌ಕೋಟ್ ಉತ್ತಮ ಆಯ್ಕೆ. ಕಾಲೇಜು ಹೈದರಿಗೆ ಕೊಂಚ ಫನ್ನಿ ಲುಕ್ ಅಥವಾ ಫಂಕಿ ಲುಕ್ ನೀಡುವ ಕ್ವಿರ್ಕ್ ಕಾನ್ಸೆಪ್ಟ್‌ನದ್ದು ಓಕೆ. ಕಲರ್‌ನದ್ದು ಟ್ರೈ ಮಾಡಬಹುದು. ಎನ್ನುತ್ತಾರೆ ಡಿಸೈನರ್ ಧೀರಜ್.
ಕಿಡ್ಸ್ ರೇನ್‌ಕೋಟ್
ಶಾಲಾ ಮಕ್ಕಳಿಗೆ ಕಲರ್‌ಫುಲ್ ಕಾಮಿಕ್ಸ್ ಪ್ರಿಂಟ್ ಹಾಗೂ ಚೋಟಾ ಭೀಮ್ ಇರುವಂತಹ ಕ್ಯಾಪ್ ರೇನ್‌ಕೋಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ.
- ದಪ್ಪ ಮೆಟೀರಿಯಲ್ನ ರೇನ್‌ಕೋಟ್ ಬೇಡ.
- ನೀರು ಹೀರದಂತಿರುವ ಮೆಟೀರಿಯಲ್ನದ್ದು ಕೊಳ್ಳಿ.
- ರೇನ್‌ಕೋಟ್ ಧರಿಸಿದಾಗ ಹೆಚ್ಚು ಆಕ್ಸೆಸರೀಸ್ ಧರಿಸಬೇಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Ramp News: ಲಿಟಲ್ ಐಕಾನ್ ಇಂಡಿಯಾ ಫ್ಯಾಷನ್ ರ‍್ಯಾಂಪ್‌ನಲ್ಲಿ ಮಕ್ಕಳ ಕಲರವ