ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿನೂತನ ಶೈಲಿಯ ಲೈಟ್ವೇಟ್ ಯೂನಿಸೆಕ್ಸ್ ಜಾಕೆಟ್ ಗಳು ಮಾನ್ಸೂನ್ ಫ್ಯಾಷನ್ಗೆ ಎಂಟ್ರಿ ನೀಡಿವೆ.
ಫಾರ್ಮಲ್ ಲುಕ್ ನೀಡುವ ಸ್ಲೀಕ್ ಕಟ್ಸ್ , ಕ್ಲಾಸಿಕ್ ಲುಕ್ ನೀಡುವ ವೂಲ್ ಜಾಕೆಟ್, ಟ್ಯಾನ್ ಪ್ಲಸ್ ಫರ್ ಕಾಲರ್ಡ್ ಜಾಕೆಟ್, ಕ್ರೇಜಿ ರೈಡರ್ಗಳ ವಿಟೆಂಜ್ ಎವಿಯೆಟರ್ ಬಾಂಬರ್ ಜಾಕೆಟ್, ರಿಪ್ಪೆಡ್ ಜಾಕೆಟ್, ಕ್ವಿಲ್ಟೆಡ್ ಜಾಕೆಟ್ಸ್, ಪಫರ್, ಡಬ್ಬಲ್, ಶೆರ್ಲಿಂಗ್, ಟೂ ಇನ್ ವನ್ ಜಾಕೆಟ್ಗಳು ಹೊಸ ವಿನ್ಯಾಸಗಳೊಂದಿಗೆ ಮಾನ್ಸೂನ್ ಸೀಸನ್ಗೆ ಕಾಲಿಟ್ಟಿವೆ.
ಮಳೆಗಾಲದಲ್ಲಿ ಮರಳುವ ಟ್ರೆಂಡಿ ಜಾಕೆಟ್ಸ್
ಎಂದಿನಂತೆ ಪ್ರತಿ ಬಾರಿಯೂ ಮಳೆಗಾಲದ ಸೀಸನ್ನಲ್ಲಿ ಬಗೆಬಗೆಯ ಜಾಕೆಟ್ಗಳು ಆಗಮಿಸುತ್ತವೆ. ಈ ಬಾರಿ ಇವುಗಳಲ್ಲಿ ಬಂದಿರುವ ಲೈಟ್ವೇಟ್ ಜಾಕೆಟ್ಗಳು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಈಗೆಲ್ಲ ಸ್ಮಾರ್ಟ್ ಲುಕ್ಗಾಗಿ ಜಾಕೆಟ್ ಧರಿಸುವವರು ಹೆಚ್ಚಾಗಿದ್ದಾರೆ. ಇನ್ನು ಕಾಲೇಜು ಹುಡುಗ-ಹುಡುಗಿಯರು ತಮ್ಮದೇ ಆದ ಮಳೆಗಾಲದ ಲೇಯರ್ ಲುಕ್ ನೀಡುವ ಸ್ಟೈಲ್ ಸ್ಟೇಟ್ಮೆಂಟ್ ಮಾಡಿಕೊಂಡಿದ್ದಾರೆ. ಕ್ಯಾಶುವಲ್ ಉಡುಪುಗಳಿಗೆ ಮಾತ್ರವಲ್ಲ, ಇದೀಗ ಸೆಮಿ ಎಥ್ನಿಕ್ ಉಡುಪುಗಳೊಂದಿಗೂ ಮ್ಯಾಚ್ ಮಾಡತೊಡಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಇನ್ನು ಮಾಡೆಲ್ ವರ್ಷಾ ಪ್ರಕಾರ, ಮೊದಲೆಲ್ಲಾ ಜಾಕೆಟ್ಗಳು ಕೇವಲ ಕಾಲೇಜು ಹುಡುಗ-ಹುಡುಗಿಯರಿಗೆ ಪ್ರಿಯವಾಗಿದ್ದವು. ಚಳಿ-ಮಳೆಯಿಂದ ರಕ್ಷಣೆ ಪಡೆಯಲು ಧರಿಸಲು ಸೀಮಿತವಾಗಿದ್ದವು. ಇದೀಗ ಇದು ಮಾನ್ಸೂನ್ ಸ್ಟೈಲ್ಸ್ಟೇಟ್ಮೆಂಟ್ಗೆ ಸೇರಿದ್ದು, ಎಲ್ಲ ವಯಸ್ಸಿನವರನ್ನು ಆಕರ್ಷಿಸತೊಡಗಿದೆ. ಕಾರಣ, ನಾನಾ ವಿನ್ಯಾಸಗಳಲ್ಲಿ ಸೈಝ್ಗಳಲ್ಲಿ ದೊರೆಯುತ್ತಿರುವುದು.
ಜಾಕೆಟ್ ರೂಪ ಹಲವು
ಸಿಂಪಲ್ ಆಗಿ ಹೇಳಬೇಕೆಂದರೆ, ಜಾಕೆಟ್ಗಳಲ್ಲೂ ನಾನಾ ವೆರೈಟಿ ಹಾಗೂ ಡಿಸೈನ್ಸ್ ಲಭ್ಯ. ಕೆಲವು ಫುಲ್ ಲೆಂಥ್ ಇದ್ದರೆ, ಇನ್ನು ಕೆಲವು ಸೊಂಟದವರೆಗೆ, ಸೊಂಟದ ಮೇಲೆ-ಕೆಳಗೆ ನಿಲ್ಲುತ್ತವೆ. ಒಟ್ಟಿನಲ್ಲಿ ಜಾಕೆಟ್ನ ಔಟ್ಲುಕ್ ಅದನ್ನು ವಿನ್ಯಾಸಗೊಳಿಸಿರುವ ರೀತಿಯು ಕಟ್, ಕಲರ್ ಮೇಲೆ ಡಿಪೆಂಡ್ ಆಗಿರುತ್ತದೆ. ಇಲ್ಲಿ ಪಾಕೆಟ್ಗಳಿಗೂ ಪ್ರಾಮುಖ್ಯತೆ ನೀಡಲಾಗಿರುತ್ತದೆ. ಜಾಕೆಟ್ನ ಸಂಪೂರ್ಣ ಲುಕ್ ಬದಲಿಸುವ ಸಾಮರ್ಥ್ಯ ಡಿಸೈನರ್ಸ್ ಬಟನ್ಗಳಲ್ಲಿದೆ. ಅದರಲ್ಲೂ ಮೆಟಲ್, ವಿಟೆಂಜ್ ಹಾಗೂ ರಾಯಲ್ ಶೈಲಿಯ ಬಟನ್ಸ್ ಇರುವ ಜಾಕೆಟ್ಗಳು ರಾಯಲ್ ಲುಕ್ ನೀಡುತ್ತವೆ. ಪಿಕ್ನಿಕ್ ಹಾಗೂ ಪಾರ್ಟಿಗಳಲ್ಲಿಇವನ್ನು ಧರಿಸಬಹುದು.
ರೈಡರ್ಸ್ ಜಾಕೆಟ್ ಆಯ್ಕೆ ಹೀಗಿರಲಿ
- ಕಚೇರಿಗೆ ತೆರಳುವವರು ಹಾಗೂ ದ್ವಿಚಕ್ರವಾಹನ ಚಾಲನೆ ಮಾಡುವವರು ಆದಷ್ಟೂ ಮಳೆಗೆ ನೆನೆಯದ ವಾಟರ್ ಪ್ರೂಫ್ ಫ್ಯಾಬ್ರಿಕ್ನ ಜಾಕೆಟ್ಗೆ ಪ್ರಾಮುಖ್ಯತೆ ನೀಡಿ.
- ಬಟನ್ಗಿಂತ ಜಿಪ್ ಹಾಗೂ ಹೈ ಕಾಲರ್ಡ್ ನೆಕ್ ಜಾಕೆಟ್ ಖರೀದಿಸಿ.
- ಮಳೆ-ಗಾಳಿಯಿಂದ ರಕ್ಷಣೆ ಪಡೆದುಕೊಳ್ಳಬಹುದು. ಇದನ್ನು ಗಮನದಲ್ಲಿಟ್ಟುಕೊಂಡೇ ಮಾರುಕಟ್ಟೆಯಲ್ಲಿ ಸ್ಪೋರ್ಟ್ಸ್, ರೈಡರ್ಗಳಿಗೆಂದೇ ನಾನಾ ಬಗೆಯ ಜಾಕೆಟ್ಸ್ ಲಭ್ಯವಿದೆ.
ಜಾಕೆಟ್ ಪ್ರಿಯರಿಗೆ ಸಲಹೆ
- ಉದ್ದಗಿರುವವರಿಗೆ ಎಲ್ಲಾ ಶೈಲಿಯ ಜಾಕೆಟ್ಗಳೂ ಸೂಟ್ ಆಗುತ್ತವೆ.
- ಪ್ಲಂಪಿಯಾಗಿರುವವರು ಆದಷ್ಟೂ ಲಾಂಗ್ ಜಾಕೆಟ್ ಆಯ್ಕೆ ಮಾಡಿ. ಫರ್, ಸ್ಪೋಟ್ಸ್, ಬಾಂಬರ್ ಜಾಕೆಟ್ ನಾಟ್ ಓಕೆ.
- ಡೆನಿಮ್ಸ್, ಖಾಕಿ, ಜೋಧ್ಪುರ್ ಪ್ಯಾಂಟ್-ಲಿನೆನ್ ಕುರ್ತಾಗಳ ಜತೆ ಜಾಕೆಟ್ ಪ್ರಯೋಗ ಮಾಡಿ. ನ್ಯಾರೋ ಕಟ್, ಬೂಟ್ ಕಟ್ ಪ್ಯಾಂಟ್ಗಳ ಜತೆ ಬೇಡ.
- (ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Weekend Fashion: ಔಟಿಂಗ್ಗೆ ಸ್ಟ್ರಾಪ್ ಡ್ರೆಸ್ ಬೆಸ್ಟ್