ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಲೇಯರ್ಡ್ ಲುಕ್ ಮರಳಿದೆ. ಆದರೆ, ಈ ಬಾರಿ ಡಲ್ ಲುಕ್ ನೀಡುವ ಡಾರ್ಕ್ ಡಲ್ ಕಲರ್‌ಗಳಿಗೆ ಫುಲ್‌ಸ್ಟಾಪ್ ಸಿಕ್ಕಿದ್ದು, ಕೊಂಚ ಮೂಡನ್ನು ಉಲ್ಲಾಸಮಯವಾಗಿಸಬಲ್ಲ ವೈಬ್ರೆಂಟ್ ಶೇಡ್ಸ್‌ನ ಔಟ್‌ಫಿಟ್‌ಗಳಿಗೆ (Monsoon Fashion) ಪ್ರಾಮುಖ್ಯತೆ ದೊರಕಿದೆ.
ಉದ್ಯಾನನಗರಿಯ ಕಾಲೇಜ್ ಕ್ಯಾಂಪಸ್‌ಗಳಲ್ಲಿ ಇಂಡೋ-ವೆಸ್ಟರ್ನ್ ಸ್ಟೈಲ್‌ನ ಲೇಯರ್ಡ್ ಲುಕ್ ಚಾಲ್ತಿಯಲ್ಲಿದ್ದರೆ, ಐಟಿ-ಬಿಟಿ ಕ್ಯಾಂಪಸ್‌ಗಳಲ್ಲಿ ಶರ್ಟ್ ಮೇಲೆ ವೇಸ್ಟ್ ಕೋಟ್, ಪ್ಯಾಂಟ್ ಸೂಟ್ ಅದಕ್ಕೆ ನೆಕ್ ಮಫ್ಲರ್-ಸ್ಕಾರ್ಫ್ ಧರಿಸುವ ಸ್ಟೈಲ್ ಸಾಮಾನ್ಯವಾಗಿದೆ. ಇನ್ನು, ಜೆಗ್ಗಿಂಗ್ಸ್ ಮೇಲೊಂದು ಫುಲ್ ಸ್ಲೀವ್ ಕ್ರಾಪ್ ಟಾಪ್, ಅದರ ಮೇಲೊಂದು ಸ್ಲೀವ್‌ಲೆಸ್ ಜಾಕೆಟ್, ನೆಕ್ ಸ್ಕಾರ್ಫ್! ಬಕಲ್ ಬೆಲ್ಟ್ ವೀಕೆಂಡ್ ಸ್ಟೈಲಿಂಗ್‌ಗೆ ಎಂಟ್ರಿ ನೀಡಿದೆ. ಟಿನೇಜ್ ಹುಡುಗಿಯರು, ಫುಲ್ ಸ್ಲೀವ್ ಓವರ್‌ಸೈಝ್ ಟೀ-ಶರ್ಟ್, ಅದರ ಮೇಲೊಂದು ಶೀರ್ ಓಪನ್ ಬಟನ್ ಶರ್ಟ್‌ಧರಿಸುವುದು ಹೈ ಫ್ಯಾಷನ್‌ಗೆ ಲಗ್ಗೆ ಇಟ್ಟಿದೆ. ಸ್ಕರ್ಟ್ಸ್ ಪ್ರಿಯರು, ಸ್ಲಿವ್‌ಲೆಸ್ ಕೋಟ್ಸ್, 3 ಲೇಯರ್ಡ್ ಸ್ಕರ್ಟ್ಸ್, 2 ಲೇಯರ್ಡ್ ಗೌನ್ ಸ್ಕರ್ಟ್ಸ್ ಧರಿಸಲಾರಂಭಿಸಿದ್ದಾರೆ. ಇವೆಲ್ಲಾ ಮಾನ್ಸೂನ್ ಫ್ಯಾಷನ್‌ನ ಲಿಸ್ಟ್‌ನಲ್ಲಿರುವ ಲೇಯರ್ಡ್ ಲುಕ್‌ನ ಸ್ಯಾಂಪಲ್ಸ್ ಎನ್ನುತ್ತಾರೆ ಸ್ಟೈಲಿಸ್ಟ್ ಅಕ್ಷಯ್.
ಲೇಯರ್ಡ್ ಲುಕ್‌ಗೆ ಸಾಥ್
ಕಲರ್‌ಫುಲ್ ಪುಲ್ ಒವರ್ಸ್, ಸ್ಟೋಲ್ಸ್, ಜಾಕೆಟ್ಸ್, ಸ್ವೆಟರ್ಸ್, ಸ್ಟಾಕಿನ್ಸ್, ಗ್ಲೌಸ್, ಕ್ಯಾಪ್, ಶಾಲ್ಸ್ , ರಿವರ್ಸಿಬಲ್ ಜಾಕೆಟ್ಸ್ , ಕಲರ್‌ಫುಲ್ ಸ್ಟ್ರೈಫ್ಸ್ ವುಲ್ಲನ್ ಟೀ-ಶರ್ಟ್ ಸೇರಿದಂತೆ ನಾನಾ ಬಗೆಯವು ಈ ಮಳೆಗಾಲದ ಕ್ಯಾಶುವಲ್ ಲೇಯರ್ಡ್ ಲುಕ್‌ಗೆ ಸಾಥ್ ನೀಡುತ್ತಿವೆ. ಇನ್ನು ಪುಶ್ ಬ್ಯಾಕ್, ವೈಬ್ರೆಂಟ್ ಬಣ್ಣಗಳ ಲೆಗ್ಗಿಂಗ್ಸ್, ಜೆಗ್ಗಿಂಗ್ಸ್, ಟ್ರೆಗ್ಗಿಂಗ್ಸ್ ಹಾಗೂ ಸ್ಕಿನ್ ಟೈಟ್ ಪ್ಯಾಂಟ್‌ಗಳು ಕಲರ್‌ಫುಲ್ ಕಾಂಟ್ರಸ್ಟ್ ಲೇಯರ್ಡ್ ಲುಕ್ ಕಾಂಬೀನೇಷನ್‌ನಲ್ಲಿ ರಾರಾಜಿಸುತ್ತಿವೆ.
ಫಾರ್ಮಲ್ ಲೇಯರ್ಡ್ ಲುಕ್
ಫಾರ್ಮಲ್ ಅಥವಾ ಎಥ್ನಿಕ್ ಲೇಯರ್ಡ್ ಲುಕ್‌ನಲ್ಲಿ ಟ್ರಾಪಿಕಲ್, ಫ್ಲೋರಲ್ ಹಾಗೂ ಅನಿಮಲ್ ಪ್ರಿಂಟ್ ಇರುವ ಮಹಿಳೆಯರ ಸಲ್ವಾರ್ ಹಾಗೂ ಕುರ್ತಾಗಳು ಹಾಗೂ ಇದರ ಮೇಲೆ ಧರಿಸುವ ಎಂಬ್ರಾಯ್ಡರಿ ಹಾಗೂ ಹೆವ್ವಿ ಡಿಸೈನ್‌ನ ಓವರ್‌ಕೋಟ್-ಜಾಕೆಟ್‌ಗಳು ಸೇರಿವೆ, ಅಷ್ಟೇಕೆ! ತಿಳಿ ವರ್ಣದ ಶಾರ್ಟ್ ಕುರ್ತಾ-ಜೀನ್ಸ್ ಮೇಲೊಂದು ವೇಸ್ಟ್ ಕೋಟ್, ಜತೆಗೆ ಸುತ್ತುವರಿದ ಮಫ್ಲರ್ ಇಲ್ಲವೇ ಸ್ಕಾರ್ಫ್ ಕಾಣಿಸಿಕೊಳ್ಳುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜಿಯಾ.
ಹೀಗಿರಲಿ ನಿಮ್ಮ ಲೇಯರ್ಡ್ ಲುಕ್
- ಔಟ್ಫಿಟ್ಗಳ ಬಣ್ಣ ಒಂದಕ್ಕೊಂದು ಹೊಂದುವಂತಿರಬೇಕು.
- ಆಯ್ಕೆ ವಾತಾವರಣಕ್ಕೆ ತಕ್ಕಂತಿರಬೇಕು.
- ಆದಷ್ಟು ಮಿಕ್ಸ್ ಹಾಗೂ ಮ್ಯಾಚಿಂಗ್ ಮಾಡುವುದು ಒಳಿತು.
- ಲೇಯರ್ಡ್ನಲ್ಲಿ ಇದೀಗ ಪ್ರಿಂಟೆಡ್ವೇರ್ ಕೂಡ ಸೇರಿವೆ.
- ಮಾನ್ಸೂನ್ಗೆ ಓಕೆ. ಬಿಸಿಲಿಗೆ ನಾಟ್ ಓಕೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಾನ್ಸೂನ್ ರಂಗೇರಿಸಿದ ಕಲರ್‌ಫುಲ್ ಯೂನಿಸೆಕ್ಸ್ ರೇನ್‌ಕೋಟ್ಸ್