ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ಗೆ ಹೊಂದುವಂತಹ ಗ್ರ್ಯಾಂಡ್ ಡಿಸೈನರ್ ಲೆಹೆಂಗಾಗಳನ್ನು ಧರಿಸಿದ ಮಾಡೆಲ್‌ಗಳು ಫ್ಯಾಷನ್ ರ‍್ಯಾಂಪ್ (Monsoon Fashion Show) ಮೇಲೆ ಹೆಜ್ಜೆ ಹಾಕುತ್ತಿದ್ದರೆ, ಥೇಟ್ ಸ್ವರ್ಗವೇ ಧರೆಗಿಳಿದಂತೆ ಕಾಣುತ್ತಿತ್ತು.
ರೆಡ್ ಶೇಡ್‌ನ ವೈವಿಧ್ಯಮಯ ಡಿಸೈನರ್ ಲೆಹೆಂಗಾಗಳು
ಈ ಸೀಸನ್‌ನ ಟ್ರೆಂಡ್ ಲಿಸ್ಟ್‌ನಲ್ಲಿರುವ, ನಾನಾ ರೆಡ್ ವರ್ಣದ ಹೆವ್ವಿ ಡಿಸೈನ್ ಮಾಡಿದ ಗ್ರ್ಯಾಂಡ್ ಲುಕ್ ನೀಡುವ ಲೆಹೆಂಗಾಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ಡಿಜೆ ಮ್ಯೂಸಿಕ್‌ಗೆ ತಕ್ಕಂತೆ ರ‍್ಯಾಂಪ್ ಮೇಲೆ ನವವಧುಗಳಂತೆ ಹೆಜ್ಜೆ ಹಾಕಿದರು. ಜಾಕಿ ಶೋ ಸ್ಟಾಪರ್ ಆಗಿದ್ದರು. ಮಾಡೆಲ್‌ಗಳು ಒಂದೊಂದು ಹೆಜ್ಜೆ ಹಾಕುವಾಗಲೂ ಅವರು ಧರಿಸಿರುವ ಮನಮೋಹಕ ಡಿಸೈನರ್ ಲೆಹೆಂಗಾಗಳ ಬೂಟಾ, ಬಾರ್ಡರ್, ಗೋಲ್ಡನ್ ಎಂಬ್ರಾಯ್ಡರಿ ಡಿಸೈನ್ಸ್ ಹಾಗೂ ಪಲ್ಲುವಿನ ಅಲಂಕಾರ ಎಲ್ಲವೂ ಮಿನುಗುತ್ತಿದ್ದವು. ನೋಡಲು ಎರಡು ಕಣ್ಣು ಸಾಲದು ಎಂಬುವಷ್ಟರ ಮಟ್ಟಿಗೆ ಈ ಡಿಸೈನರ್ ಲೆಹೆಂಗಾಗಳು ಪ್ರೇಕ್ಷಕರ ಮನ ಸೆಳೆದವು. ಚಪ್ಪಾಳೆ ಗಿಟ್ಟಿಸಿದವು.
ಶಿಮ್ಮರ್ ಗ್ರ್ಯಾಂಡ್ ಲೆಹೆಂಗಾ ಜಾದೂ
ಇನ್ನು, ಎರಡನೇ ರೌಂಡ್‌ನಲ್ಲಿ ಮಾಡೆಲ್‌ಗಳು ಧರಿಸಿದ ಒಂದೊಂದು ಶಿಮ್ಮರ್ ಹಾಗೂ ಶೈನಿಂಗ್ ಲೆಹೆಂಗಾಗಳು ಕೂಡ ಫ್ಯಾಷನ್ ಪ್ರಿಯರ ಮನ ಸೆಳೆಯಿತು. ನೋಡಲು ಥೇಟ್ ಬಾಲಿವುಡ್ ಸಿನಿಮಾದಲ್ಲಿ ತಾರೆಯರು ಧರಿಸುವ ಲೆಹೆಂಗಾಗಳಂತಿದ್ದ ಈ ಡಿಸೈನರ್‌ವೇರ್‌ಗಳು ಉದ್ಯಾನನಗರಿಯ ಡಿಸೈನರ್ ಮೀರಜ್ ಅವರ ಕ್ರಿಯಾತ್ಮಕ ಡಿಸೈನಿಂಗ್ ಕಾಳಜಿಯನ್ನು ಎತ್ತಿ ಹಿಡಿದಿತ್ತು. ಗೋಲ್ಡನ್, ಕ್ರಿಸ್ಟಲ್, ಸಿಲ್ವರ್ ಶೇಡ್‌ಗಳಲ್ಲಿ ಕಂಡು ಬಂದು ಈ ಲೆಹೆಂಗಾಗಳು ನೋಡುಗರ ಕಣ್ಣು ಕುಕ್ಕುತ್ತಿದ್ದವು. ಆ ಮಟ್ಟಿಗೆ ಲೆಹೆಂಗಾಗಳು ಟ್ರೆಂಡಿಯಾಗಿರುವುದರೊಂದಿಗೆ ಅತ್ಯಾಕರ್ಷಕವಾಗಿದ್ದವು.
ಸೆಲೆಬ್ರೆಟಿ ಡಿಸೈನರ್ ಮೀರಜ್ ಡಿಸೈನ್ಸ್‌ಗೆ ಪ್ರಶಂಸೆ
ಮೊದಲಿನಿಂದಲೂ ಬ್ರೈಡಲ್ ಡಿಸೈನ್‌ಗಳಿಗೆ ಹೆಸರಾದ ಸೆಲೆಬ್ರೆಟಿ ಡಿಸೈನರ್ ಮೀರಜ್ ಅನ್ವರ್ ಅವರ ಈ ಬ್ರೈಡಲ್ ಕಲೆಕ್ಷನ್ ಈ ಜನರೇಷನ್ ಯುವತಿಯರನ್ನು ಮಾತ್ರವಲ್ಲ, ಎಲ್ಲಾ ವರ್ಗದವರನ್ನು ಸಮ್ಮೋಹನಗೊಳಿಸುವ ಡಿಸೈನ್ಸ್‌ಗಳನ್ನು ಹೊಂದಿತ್ತು ಎನ್ನುತ್ತಾರೆ ಶೋ ವೀಕ್ಷಿಸಿದ ಸ್ಟೈಲಿಸ್ಟ್ ಹರ್ಷ್, ಮಾಡೆಲ್ ಶ್ರುತಿ ಅರುಣ್ ಗೌಡ, ರಂಜಿತಾ ಹಾಗೂ ನಿತ್ಯಾ. “ನನ್ನ ಬ್ರಾಂಡ್‌ನ ಲೆಹೆಂಗಾ ಡಿಸೈನ್ಸ್ ಫ್ಯಾಷನ್ ಪ್ರಿಯರ ಮೆಚ್ಚುಗೆ ಗಳಿಸಿದೆ. ಇದಕ್ಕಿಂತ ಇನ್ನೇನು ಬೇಕು” ಎಂದು ಮೀರಜ್ ಸಂತಸ ವ್ಯಕ್ತಪಡಿಸಿದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Ramp News: ಮಾನ್ಸೂನ್‌ನಲ್ಲಿ ಯಶಸ್ವಿಯಾಗಿ ನಡೆದ ಕರ್ನಾಟಕ ಗ್ರೇಶಿಯಸ್ ಫ್ಯಾಷನ್ ವೀಕ್