ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್ ಜಿ ಮಾನ್ಸೂನ್ ಫ್ಯಾಷನ್‌ನ್ನಲ್ಲಿ (Monsoon Fashion) ಓವರ್ ಸೈಜ್‌ನ ಶೋಲ್ಡರ್ ಶರ್ಟ್‌ಗಳು ಹಂಗಾಮ ಎಬ್ಬಿಸಿವೆ. ನೋಡಲು ದೊಗಲೆಯಾಗಿ ಕಾಣುವ ಇವು ಫಿಟ್ಟಿಂಗ್ ಡ್ರೆಸ್ ಮೇಲೆ ಜಾಕೆಟ್‌ನಂತೆ ಇಲ್ಲವೇ ಕೋಟ್‌ನಂತೆ ಇಲ್ಲವೇ ಲೇಯರ್ ಲುಕ್ ನೀಡುವ ಮೇಲುಡೆಗೆಯಂತೆ ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ.
ಓವರ್ ಸೈಝ್ ಶೋಲ್ಡರ್ ಶರ್ಟ್
ದೊಡ್ಡದಾಗಿರುವ ಅಥವಾ ಬಾಡಿ ಮಾಸ್ ಇಂಡೆಕ್ಸ್‌ಗಿಂತ ತೀರಾ ಲೂಸಾಗಿರುವ, ಧರಿಸಿದರೇ ಫಿಟ್ಟಿಂಗ್ ಇಲ್ಲದ, ಎಕ್ಸ್ ಎಲ್ ಸೈಝಿನ ಶರ್ಟ್‌ಗಳಿವು. ನೋಡಲು ಪುರುಷರು ಧರಿಸುವ ಶರ್ಟ್‌ಗಳಂತೆ ಕಾಣುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇವು ಧರಿಸಿದಾಗ ಲೂಸು ಲೂಸಾದ ಉಡುಪಿನಂತೆ ಕಾಣುತ್ತವೆ. ಇಂತಹ ಶೋಲ್ಡರ್ ಶರ್ಟ್ ಅನ್ನು ಇದೀಗ ಜೆನ್ ಜಿ ಫ್ಯಾಷನ್ ಪ್ರಿಯರು ಹೊಸ ರೂಪ ನೀಡಿದ್ದಾರೆ. ಕೋ -ಆರ್ಡ್ ಸೆಟ್ ಅಥವಾ ಇನ್ಯಾವುದೇ ಟೈಟ್ ಫಿಟ್ಟಿಂಗ್ ಔಟ್‌ಫಿಟ್‌ಗಳ ಮೇಲೆ ಜಾಕೆಟ್‌ನಂತೆ ಇಲ್ಲವೇ ಕೋಟ್‌ನಂತೆ ಬಟನ್ ಹಾಕದೇ ಧರಿಸುವುದು. ಒಳಗೆ ಧರಿಸಿರುವ ಫಿಟ್ಟಿಂಗ್ ಉಡುಪು ಕೂಡ ಹೈಲೈಟಾಗುತ್ತದೆ. ಮೇಲುಡುಗೆಯಂತೆ ಶೋಲ್ಡರ್ ಶರ್ಟ್ ಕಾಣುತ್ತದೆ. ಫ್ಯಾಷೆನಬಲ್ ಲುಕ್ ಕೂಡ ನೀಡುತ್ತದೆ ಎಂದು ವಿವರಿಸುತ್ತಾರೆ ಫ್ಯಾಷನಿಸ್ಟ್ ರಿಚಾ ಶರ್ಮಾ.
ಬಾಲಿವುಡ್‌ಗರ ಚಾಯ್ಸ್
ಬಾಲಿವುಡ್ ತಾರೆಯರ ಏರ್ಪೋರ್ಟ್ ಲುಕ್‌ನಲ್ಲೂ ಈ ಓವರ್ ಸೈಝ್ ಶೋಲ್ಡರ್ ಶರ್ಟ್ ಸೇರಿದೆ. ಫಿಟ್ಟಿಂಗ್ ಉಡುಪಿನ ಮೇಲೆ ಧರಿಸುವ ಫ್ಯಾಷನ್ ಇದೀಗ ಆವರಿಸಿಕೊಂಡಿದೆ ಎನ್ನುವ ಸ್ಟೈಲಿಸ್ಟ್ ದೀಕ್ಷಾ ಪ್ರಕಾರ, ಇದು ಮಾನ್ಸೂನ್‌ಗೆ ಲೇಯರ್ ಲುಕ್ ಕಲ್ಪಿಸುತ್ತದೆ. ಇನ್ನೂ ವಿವಾಹಿತ ಮಹಿಳೆಯರನ್ನು ಸೆಳೆದಿಲ್ಲ! ಸದಾ ಫಿಟ್ಟಿಂಗ್ ಪ್ಯಾಂಟ್ ಸೂಟ್ ಧರಿಸುವ ಕಾರ್ಪೋರೇಟ್ ಕ್ಷೇತ್ರದ ಮಾನಿನಿಯರನ್ನು ಆಕರ್ಷಿಸಿಲ್ಲ. ಬದಲಿಗೆ ಜೆನ್ ಜಿ ಹುಡುಗಿಯರ ಸ್ವತ್ತಾಗಿದೆ ಎನ್ನುತ್ತಾರೆ.
ಓವರ್ ಸೈಝ್ ಶೋಲ್ಡರ್ ಶರ್ಟ್ ಲೇಯರ್ ಲುಕ್
- ಓವರ್ಸೈಝ್ ಶೋಲ್ಡರ್ ಶರ್ಟ್ ಒಳಗೆ ಫಿಟ್ಟಿಂಗ್ ಔಟ್‌ಫಿಟ್ ಧರಿಸಿರಬೇಕು.
- ಶರ್ಟ್ ಪ್ಯಾಂಟ್ ಮ್ಯಾಚ್ ಮಾಡುವುದಾದಲ್ಲಿ ಫಿಟ್ಟಿಂಗ್ ಇರುವಂತಹ ಸ್ಕಿನ್ ಟೈಟ್ ಅಥವಾ ಪೆನ್ಸಿಲ್ ಸ್ಕರ್ಟ್‌ಗಳನ್ನು ಧರಿಸಬಹುದು.
- ಇದು ಫಂಕಿ ಲುಕ್ ಆಗಿರುವುದರಿಂದ ಮಿನಿಮಲ್ ಜ್ಯುವೆಲರಿಗೆ ಪ್ರಾಮುಖ್ಯತೆ ನೀಡಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Denim Fashion: ಡೆನಿಮ್‌ನಲ್ಲೂ ಬಂತು ಗ್ಲಾಮರಸ್ ಕ್ರಾಪ್ ಟಾಪ್ಸ್