ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್ ಲೆಯರ್ಡ್ ಫ್ಯಾಷನ್ (Monsoon Fashion) ಈ ಮಾನ್ಸೂನ್ ಸೀಸನ್‌ಗೆ ಲಗ್ಗೆ ಇಟ್ಟಿದೆ. ಸಮ್ಮರ್ ಸೀಸನ್‌ನಲ್ಲಿ ಪ್ಯಾಷನ್ ಪ್ರಿಯರಿಂದ ದೂರವಾಗಿದ್ದ ಡೆನಿಮ್ ಇದೀಗ ಲೈಟ್‌ವೈಟ್ ಡಿಸೈನ್ಸ್‌ನಲ್ಲಿ ಎಂಟ್ರಿ ನೀಡಿದೆ. ತಕ್ಷಣಕ್ಕೆ ನೋಡಲು ಅದೇ ಹಳೇ ಡಿಸೈನ್ಸ್ ಎಂದೆನಿಸಿದರೂ ಎವರ್‌ಗ್ರೀನ್ ಫ್ಯಾಷನ್ ಲಿಸ್ಟ್‌ನಲ್ಲಿ ಕೊಂಚ ರೂಪ ಬದಲಿಸಿ ಹೊಸ ಕಾನ್ಸೆಪ್ಟ್‌ನಲ್ಲಿ ಆಗಮಿಸಿದೆ.
ನಟಿ ಹುಮಾ ಖುರೇಶಿ ಡೆನಿಮ್ ಪ್ಯಾಂಟ್ ಸೂಟ್ ಟ್ರೆಂಡ್
ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಬಾಲಿವುಡ್ ತಾರೆಯರು ಹಾಗೂ ಫ್ಯಾಷನ್ ಇನ್‌ಫ್ಲೂಯೆನ್ಸರ್ಸ್, ಈ ಡೆನಿಮ್ ಸೂಟ್ ಅಥವಾ ಡೆನಿಮ್ ಲೇಯರ್ಡ್ ಲುಕ್ ಪ್ರಯೋಗಿಸುವುದು ಹೆಚ್ಚಾಗಿದೆ. ಅಷ್ಟೇಕೆ! ನಟಿ ಹುಮಾ ಖುರೇಶಿ ಸಿನಿಮಾ ಪ್ರಮೋಷನ್‌ಗಾಗಿ ಧರಿಸಿದ ಡೆನಿಮ್ ಪ್ಯಾಂಟ್ ಸೂಟ್ ಇದೀಗ ಟ್ರೆಂಡಿಯಾಗಿದೆ.
ಏನಿದು ಡೆನಿಮ್ ಪ್ಯಾಂಟ್ ಸೂಟ್
ಮೊದಲೆಲ್ಲಾ ಡೆನಿಮ್ ಎಂದಾಕ್ಷಣಾ ಭಾರವಾದ ಔಟ್‌ಫಿಟ್ ಎಂದುಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಈ ಕಾನ್ಸೆಪ್ಟ್ ಕಂಪ್ಲೀಟ್ ಬದಲಾಗಿದೆ. ಈ ಜನರೇಷನ್‌ಗೆ ಹೊಂದುವಂತೆ ಹಾಗೂ ಉದ್ಯೋಗಸ್ಥ ಮಹಿಳೆಯರಿಗೆ ಪ್ರಿಯವಾಗುವಂತಹ ವಿನ್ಯಾಸದ ಡೆನಿಮ್ ಔಟ್‌ಫಿಟ್‌ಗಳು ಬಿಡುಗಡೆಗೊಂಡಿವೆ. ಈ ಸೀಸನ್‌ನ ಲೇಯರ್ಡ್ ಲುಕ್‌ಗೆ ಹೊಂದುವಂತಹ ಡಿಸೈನ್‌ನಲ್ಲಿ ಕಾಣಿಸಿಕೊಂಡಿವೆ. ಉದಾಹರಣೆಗೆ., ಜೀನ್ಸ್ ಪ್ಯಾಂಟ್ ಅದಕ್ಕೊಂದು ಕ್ರಾಪ್ ಟಾಪ್ ಅದರ ಮೇಲೊಂದು ಕ್ರಾಪ್ ಅಥವಾ ನಾರ್ಮಲ್ ಡೆನಿಮ್ ವೇಸ್ಟ್‌ಕೋಟ್ ಇಲ್ಲವೇ ಅದೇ ಫ್ಯಾಬ್ರಿಕ್‌ನ ಜಾಕೆಟ್ ಧರಿಸುವುದು ಈ ಟ್ರೆಂಡ್‌ನಲ್ಲಿ ಸೇರಿದೆ. ಕೆಲವು ಸೆಟ್‌ನಲ್ಲಿ ಸೂಟ್ ದೊರೆಯುತ್ತವೆ. ನಿಮ್ಮ ಬಳಿ ಹಳೆಯ ಕಲೆಕ್ಷನ್ ಇದ್ದಲ್ಲಿ , ವಾರ್ಡ್ರೋಬ್‌ನಲ್ಲಿರುವ ಜೀನ್ಸ್ ಪ್ಯಾಂಟ್, ಟಾಪ್ ಹಾಗೂ ಜಾಕೆಟ್ ಮ್ಯಾಚ್ ಮಾಡಿದರೇ ಸಾಕು, ಡೆನಿಮ್ ಪ್ಯಾಂಟ್ ಸೂಟ್ ಸ್ಟೈಲಿಂಗ್ ನಿಮ್ಮದಾಗುವುದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಡೆನಿಮ್ ಪ್ಯಾಂಟ್ ಸೂಟ್ ಟಿಪ್ಸ್
- ಲೈಟ್ವೈಟ್ನದ್ದನ್ನು ಆಯ್ಕೆ ಮಾಡಿ.
- ಬ್ರಾಂಡೆಡ್ ಔಟ್‌ಫಿಟ್ ಕಂಫರ್ಟಬಲ್ ಫೀಲ್ ನೀಡುತ್ತದೆ.
- ಡೆನಿಮ್ ಕ್ರಾಪ್ ಟಾಪ್ ಟ್ರೆಂಡ್ನಲ್ಲಿದೆ.
- ದಪ್ಪನೆಯ ಫ್ಯಾಬ್ರಿಕ್ ಆಯ್ಕೆ ಬೇಡ. ಉಸಿರುಗಟ್ಟಿದಂತಾಗಬಹುದು.
- ತೀರಾ ಟೈಟ್ ಫಿಟ್ಟಿಂಗ್ ಸೆಕೆಯಾಗಬಹುದು.
- ನಿಮ್ಮ ಬಳಿ ಡೆನಿಮ್ವೇರ್ಗಳಿದ್ದಲ್ಲಿ ಮಿಕ್ಸ್ ಮ್ಯಾಚ್ ಮಾಡಿ. ಲೇಯರ್ಡ್ ಲುಕ್ ರೀ-ಕ್ರಿಯೇಟ್ ಮಾಡಿ.
- ಆಕ್ಸೆಸರೀಸ್ ಮಿನಿಮಲ್ ಆಗಿರಲಿ.
- ಇದರೊಂದಿಗೆ ಹಾಫ್ ಶೂ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Travel Fashion: ಮಾಡೆಲ್ – ನಟಿ ಶುಭ್ರಾ ಅಯ್ಯಪ್ಪ ಬಿಂದಾಸ್ ಟ್ರಾವೆಲ್ ಫ್ಯಾಷನ್!