ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಳೆಗಾಲಕ್ಕೆ ತಕ್ಕಂತೆ ಪ್ರತಿಯೊಬ್ಬರ ಫುಟ್‌ವೇರ್ ಸ್ಟೈಲಿಂಗ್ ಕೂಡ ಬದಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ, ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್‌ಗಳು ವಿನೂತನ ಮಾದರಿಯ ಬಗೆಬಗೆಯ ವಿನ್ಯಾಸದ ವಾಟರ್‌ಪ್ರೂಫ್ ಹಾಗೂ ಸ್ಕಿಡ್ ಆಗದ ಫುಟ್ವೇರ್ಗಳು ಲಗ್ಗೆ ಇಟ್ಟಿವೆ.
ವೈವಿಧ್ಯಮಯ ಫುಟ್‌ವೇರ್ಸ್
ಅವುಗಳಲ್ಲಿ ಫಂಕಿ ಕ್ರೂಕ್ಸ್, ಫ್ಲಿಪ್‌ಫ್ಲಾಪ್, ಜೆಲ್ಲಿ ಫ್ಲಾಟ್ಸ್, ವೆಡ್ಜಸ್ ಬೆಲ್ಲಿ ಶೂಸ್, ಸ್ಕಿಪ್ಪರ್ ಕ್ಲಾಗ್ಸ್, ಕ್ಯಾನ್ವಾಸ್, ಬ್ಯಾಲೇರಿನಾ ಫ್ಲಾಟ್ ಸ್ಯಾಂಡಲ್ಸ್, ಮಾನ್ಸೂನ್ ಸ್ನೀಕರ್, ರೈನ್ ಶೂ, ಅಕ್ವಾ ಶೂಸ್, ಗಮ್ ಬೂಟ್ಸ್, ಫೋಮ್ ಕ್ಲಾಗ್ಸ್ ಸೇರಿದಂತೆ ಮೆನ್ಸ್ ಹಾಗೂ ವುಮೆನ್ಸ್ ಕೆಟಗರಿಯಲ್ಲಿ ನಾನಾ ಬಗೆಯವು ಬಿಡುಗಡೆಗೊಂಡಿದ್ದು, ಮಾರಾಟ ಹೆಚ್ಚಾಗಿಯೇ ಸಾಗಿದೆ ಎನ್ನುತ್ತಾರೆ ಫುಟ್‌ವೇರ್ ಶೋರೂಂವೊಂದರ ಮಾರಾಟಗಾರರು.
ಸೀಸನ್‌ಗೆ ಬದಲಾಗುವ ಫುಟ್‌ವೇರ್ಸ್
ಸಮ್ಮರ್ ಸೀಸನ್‌ನಿಂದ ಮಾನ್ಸೂನ್ ಸೀಸನ್‌ಗೆ ಕಾಲಿಡುವಾಗ ಫುಟ್‌ವೇರ್ ಫ್ಯಾಷನ್ ಕೂಡ ಸಾಕಷ್ಟು ಬದಲಾಗುತ್ತದೆ. ಗ್ರ್ಯಾಂಡ್ ಲುಕ್ ನೀಡುವ ಸ್ಯಾಂಡಲ್ಸ್ ಆಗಲಿ, ವೆಲ್ವೆಟ್ ಹಾಗೂ ಡಿಸೈನರ್ ಶೂಗಳನ್ನಾಗಲಿ ಈ ಮಳೆಗಾಲದಲ್ಲಿ ಧರಿಸಿ ಹೊರಾಂಗಣದಲ್ಲಿ ಓಡಾಡಲು ಸಾಧ್ಯವಿಲ್ಲ! ಹಾಗಾಗಿ ಮಳೆಗಾಲಕ್ಕೆ ನೀರಿನಲ್ಲಿ ನೆನೆದರೂ, ತೊಪ್ಪೆಯಾದರೂ, ವಾಶ್ ಮಾಡಿದರೂ ಹಾಳಾಗದ ಮೆಟೀರಿಯಲ್‌ನ ಫುಟ್‌ವೇರ್‌ಗಳನ್ನು ಧರಿಸುವುದು, ವಾಕ್ ಮಾಡುವಾಗ ಸ್ಕಿಡ್ ಆಗದ, ಜಾರದ ಫುಟ್‌ವೇರ್‌ಗಳನ್ನು ಧರಿಸುವುದು ಅವಶ್ಯವಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅದರಲ್ಲೂ ಪ್ರತಿನಿತ್ಯ ಹೆಚ್ಚು ಓಡಾಡುವ ವ್ಯಾಪಾರಸ್ಥರು, ಉದ್ಯೋಗಸ್ಥರು ಹೆಚ್ಚಾಗಿ ಕಂಫರ್ಟಬಲ್ ಜೊತೆಗೆ ಸೀಸನ್ ಮುಗಿಯುವವರೆಗೂ ಬಾಳಿಕೆ ಬರುವಂತಹ ಫುಟ್‌ವೇರ್‌ಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು.
ಬೂಟ್ಸ್-ಶೂ-ಸ್ಯಾಂಡಲ್ಸ್-ಫ್ಲಿಪ್-ಫ್ಲಾಪ್
ಮಳೆಗಾಲದಲ್ಲಿ ಫ್ಯಾಷನ್ ಲುಕ್‌ಗಾಗಿ ಮಾತ್ರವಲ್ಲ, ನಿಮ್ಮ ಕಂಫರ್ಟಬಲಿಟಿಗೆ ತಕ್ಕಂತೆ ಆಯ್ಕೆ ಮಾಡಿಕೊಳ್ಳುವುದು ಜಾಣತನ. ಔಟ್‌ಡೋರ್‌ನಲ್ಲಿ ಹೆಚ್ಚು ಓಡಾಡುವವರು ಹಾಗೂ ಕೆಲಸ ಮಾಡುವವರು ಬೂಟ್ಸ್ಗಎ ಮೊರೆ ಹೋದರೆ, ಮಹಿಳೆಯರು ಸ್ಯಾಂಡಲ್ಸ್ ಹಾಗೂ ಫ್ಲಿಪ್-ಫ್ಲಾಪ್‌ಗಳನ್ನು ಚೂಸ್ ಮಾಡುತ್ತಾರೆ. ಇನ್ನು ಹುಡುಗಿಯರು ಕ್ರೂಕ್ಸ್ ಹಾಗೂ ಬ್ಯಾಲೇರಿನಾ ಶೂಗಳಂತವನ್ನು ಸೆಲೆಕ್ಟ್ ಮಾಡುತ್ತಾರೆ ಎನ್ನುತ್ತಾರೆ ಫುಟ್‌ವೇರ್ ಮಾರಾಟಗಾರರು.
ಫುಟ್‌ವೇರ್ ಸೆಲೆಕ್ಷನ್ ಹೀಗಿರಲಿ
- ಫ್ಯಾಷನ್ಗಿಂತ ಹೆಚ್ಚಾಗಿ ಆರಾಮದಾಯಕವಾಗಿರಲಿ.
- ಫುಟ್‌ವೇರ್ ಒದ್ದೆಯಾಗಿದ್ದಲ್ಲಿ, ಒಣಗಿಸಿ, ಧರಿಸಿ.
- ಗುಣಮಟ್ಟದ ಫುಟ್‌ವೇರ್ ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Factory: ಹಳೆ ಬಟ್ಟೆ, ಶೂ ಕೊಟ್ರೆ, ಹೊಸ ಬಟ್ಟೆ ಕೊಡ್ತಾರೆ! ಇದು ಫ್ಯಾಷನ್ ಫ್ಯಾಕ್ಟರಿ ಕಮಾಲ್