Site icon Vistara News

Monsoon Lipsticks : ಮಾನ್ಸೂನ್‌ನಲ್ಲಿ ಬ್ಯೂಟಿ ಲೋಕಕ್ಕೆ ಲಗ್ಗೆ ಇಟ್ಟ ವಾಟರ್‌ ಪ್ರೂಫ್‌ ಲಿಪ್‌ಸ್ಟಿಕ್ಸ್

Monsoon Lipsticks

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಾನ್ಸೂನ್‌ಗೆ (Monsoon Lipsticks) ತಕ್ಕಂತೆ ಲಿಪ್‌ಸ್ಟಿಕ್‌ಗಳು ಕೂಡ ಬದಲಾಗುತ್ತವೆ. ಹೌದು. ಸೀಸನ್‌ಗೆ ತಕ್ಕಂತೆ ವಧನದ ಸೌಂದರ್ಯ ಹೆಚ್ಚಿಸುವ ಬಣ್ಣಬಣ್ಣದ ಲಿಪ್‌ಸ್ಟಿಕ್‌ಗಳು, ಈ ಮಳೆಗಾಲದಲ್ಲಿ ತಮ್ಮ ರೂಪವನ್ನು ಮಾತ್ರವಲ್ಲ, ಗುಣವನ್ನು ಬದಲಿಸಿಕೊಳ್ಳುತ್ತವೆ. ಮಳೆಯ ಹನಿಗೆ ಮಾಸದ, ಒದ್ದೆಯಾದರೂ ಅಳಿಸದ ವಾಟರ್‌ ಪ್ರೂಫ್‌ ಗುಣವನ್ನು ಹೊಂದಿರುತ್ತವೆ. ಅಂತಹ ಲಿಪ್‌ಸ್ಟಿಕ್‌ಗಳು ಈಗಾಗಲೇ ಬ್ಯೂಟಿ ಲೋಕಕ್ಕೆ ನಾನಾ ಬ್ರಾಂಡ್‌ ಹೆಸರಲ್ಲಿ ಕಾಲಿಟ್ಟಿದ್ದು, ಲೆಕ್ಕವಿಲ್ಲದಷ್ಟು ಡಾರ್ಕ್, ಲೈಟ್‌ ಹಾಗೂ ನ್ಯೂಡ್‌ ಶೇಡ್‌ಗಳಲ್ಲಿ ಬಿಡುಗಡೆಗೊಂಡಿವೆ.

ಮಳೆಗಾಲಕ್ಕೆ ವಾಟರ್‌ ಪ್ರೂಫ್‌ ಲಿಪ್‌ಸ್ಟಿಕ್ಸ್

ಈ ಸೀಸನ್‌ನಲ್ಲಿ ಸದ್ಯಕ್ಕೆ ಶೈನಿಂಗ್‌ ಲಿಪ್‌ಸ್ಟಿಕ್‌ಗಳನ್ನು ಸೈಡಿಗಿಡಿ. ಮಾರುಕಟ್ಟೆಯಲ್ಲಿ ಕಾಲಿಟ್ಟಿರುವ ವಾಟರ್‌ಪ್ರೂಫ್‌ ಲಿಪ್‌ಶೇಡ್‌ಗಳನ್ನು ಖರೀದಿಸಿ. ಇವು ಟ್ರೆಂಡಿಯಾಗಿರುವುದು ಮಾತ್ರವಲ್ಲ, ಹಚ್ಚಿದಾಗ ಬಹಳಷ್ಟು ಗಂಟೆಗಳ ಕಾಲ ತುಟಿಯ ಮೇಲೆ ಹಾಗೆಯೇ ಉಳಿದಿರುತ್ತವೆ. ನೀರು ಸೋಕಿದರೂ ಬಣ್ಣ ಅಳಿಸದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಮಂಗಲಾ ಭಾನಸುಧೆ. ಅವರ ಪ್ರಕಾರ, ಈಗೇನಿದ್ದರೂ ಚಿತ್ರ-ವಿಚಿತ್ರ ಡಾರ್ಕ್‌ ಬಣ್ಣಗಳ ಕಾರುಬಾರು. ಗಾಢ ಬಬಲ್‌ಗಮ್‌ ಪಿಂಕ್‌, ಪರ್ಪಲ್‌, ಮಜಂತಾ, ಲೈವ್ಲಿ ಲ್ಯಾವೆಂಡರ್‌, ವೈನ್‌ ರೆಡ್‌, ಹಾಟ್‌ರೆಡ್‌, ಬ್ಲಡ್‌ ರೆಡ್‌, ಡಾರ್ಕ್ ಆರೆಂಜ್‌, ಬ್ರಿಕ್‌ ಆರೆಂಜ್‌ ಶೇಡ್‌ಗಳು ನಮ್ಮಲ್ಲಿ ಟ್ರೆಂಡಿಯಾಗಿವೆ. ಇನ್ನ ಲೈಟ್‌ ಶೇಡ್‌ಗಳಲ್ಲಿ ಎಂದಿನಂತೆ ಲೈಟ್‌ ಪಿಂಕ್‌ ಹಾಗೂ ಬ್ರಿಕ್‌ ರೆಡ್‌ ಚಾಲ್ತಿಯಲ್ಲಿವೆ. ಶೈನಿಂಗ್‌ ಇರುವ ಗ್ಲೋಸಿ ಶೇಡ್‌ಗಳು ಮರೆಯಾಗಿವೆ ಎನ್ನುತ್ತಾರೆ ಸೌಂದರ್ಯ ತಜ್ಞರು.

ಮ್ಯಾಟ್‌ ಲಿಪ್‌ಸ್ಟಿಕ್‌ ಜಾದೂ

ಇನ್ನು, ಮ್ಯಾಟ್‌ ಲಿಪ್‌ಸ್ಟಿಕ್‌ಗಳು ಶೈನಿಂಗ್‌ ಇಲ್ಲದಿದ್ದರೂ ನೋಡಲು ಆಕರ್ಷಕವಾಗಿ ಕಾಣುತ್ತವೆ. ಅದರಲ್ಲೂ ಎಥ್ನಿಕ್‌ ಲುಕ್‌ಗೆ ಹೇಳಿ ಮಾಡಿಸಿದ ಲಿಪ್‌ಸ್ಟಿಕ್‌ಗಳಿವು.

ಮಾನ್ಸೂನ್‌ ಲಿಪ್‌ಸ್ಟಿಕ್‌ ಶೇಡ್ಸ್‌ ಆಯ್ಕೆ

ಗುಲಾಬಿ ಬಣ್ಣ ಎಲ್ಲರಿಗೂ ಹೊಂದುವುದಿಲ್ಲ, ಸೋ, ಕೊಂಚ ಡಾರ್ಕ್ ಸ್ಕಿನ್‌ ಟೋನ್‌ ಹೊಂದಿರುವವರು ಆದಷ್ಟು ಮಜಂತಾ ಮಿಶ್ರಿತಾ ತಿಳಿ ಗುಲಾಬಿ ಮ್ಯಾಟ್‌ ಶೇಡ್ಸ್‌ ಬಳಸಬಹುದು. ಪಾರ್ಟಿಗೆ ಹೋಗುವವರು ಈ ಸೀಸನ್‌ನ ಕೂಲ್‌ ಕಲರ್‌ಗಳಲ್ಲಿ ಲಭ್ಯವಿರುವ ಬಗೆಬಗೆಯ ಮ್ಯಾಟ್‌ ಲಿಪ್‌ಸ್ಟಿಕ್‌ಗಳನ್ನು ಬಳಸಬಹುದು. ಇನ್ನು ಬ್ರಷ್‌ ಮಾದರಿಯಲ್ಲಿ ದೊರೆಯುವ ವಾಟರ್‌ಪ್ರೂಫ್‌ ಲಿಪ್‌ ಶೇಡ್‌ಗಳು ಕೂಡ ಸಾಕಷ್ಟು ಶೇಡ್‌ಗಳಲ್ಲಿ ಲಭ್ಯವಿದೆ.

ಮಾನ್ಸೂನ್‌ ಲಿಪ್‌ಸ್ಟಿಕ್‌ ಪ್ರಿಯರಿಗೆ ತಿಳಿದಿರಲಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Fashion: ಸ್ಯಾಂಡಲ್‌ವುಡ್‌ ನಟಿ ಮೇಘಾ ಶ್ರೀಗೆ ಪ್ಲೇ ಸೂಟ್‌ ಮೇಲಾಯ್ತು ಲವ್‌!

Exit mobile version