Site icon Vistara News

Monsoon Makeup Care: ಮಳೆಗಾಲಕ್ಕೆ ವಾಟರ್‌ಪ್ರೂಫ್‌ ಕಾಸ್ಮೆಟಿಕ್ಸ್‌ ಬಳಸುತ್ತೀರಾ! ಹಾಗಾದಲ್ಲಿ ಎಚ್ಚರ ವಹಿಸಿ!

#image_title

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಳೆಗಾಲದಲ್ಲಿ ವಾಟರ್‌ಪ್ರೂಫ್‌ (Monsoon Makeup Care) ಕಾಸ್ಮೆಟಿಕ್ಸ್‌ ಬಳಸುವವರು ಎಚ್ಚರವಹಿಸುವುದು ಅವಶ್ಯ. ಇವುಗಳ ನಿರಂತರ ಬಳಕೆ ಚರ್ಮದ ಸಮಸ್ಯೆಗಳನ್ನು ಹುಟ್ಟುಹಾಕಬಹುದು, ಇಲ್ಲವೇ, ತ್ವಚೆ ನಿಸ್ತೇಜವಾಗಬಹುದು. ಬಳಸಲೇಬೇಕಾದಲ್ಲಿ, ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಉತ್ತಮ. ಇದಕ್ಕಾಗಿ ಒಂದಿಷ್ಟು ಆರೈಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿದಲ್ಲಿ ಈ ಸಮಸ್ಯೆಗಳಿಂದ ಬಚಾವಾಗಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್‌ ರಿಚಾ ಶರ್ಮಾ.

ಕಾಸ್ಮೆಟಿಕ್ಸ್‌ ಬ್ಯೂಟಿ ಇನ್ಸ್​ಟಿಟ್ಯೂಟ್​ ಒಂದರ ಸಮೀಕ್ಷೆಯ ಪ್ರಕಾರ, ಮಳೆಗಾಲದಲ್ಲಿ ವಾಟರ್‌ಪ್ರೂಫ್‌ ಕಾಸ್ಮೆಟಿಕ್ಸ್‌ ಬಳಸುವವರ ಸಂಖ್ಯೆ ಅತಿ ಹೆಚ್ಚಂತೆ. ಅದರಲ್ಲೂ ಗುಣಮಟ್ಟ ನೋಡದೇ ಹಿಂದೂ ಮುಂದೂ ಯೋಚಿಸಿದೇ ಬಳಕೆ ಮಾಡಿ ಸಮಸ್ಯೆಗೊಳಗಾಗುವವರು ಅಧಿಕ ಎನ್ನಲಾಗಿದೆ. ಇದರ ಬದಲು ಮೊದಲೇ ಈ ವಾಟರ್‌ಪ್ರೂಫ್‌ ಕಾಸ್ಮೆಟಿಕ್ಸ್‌ ಬಗ್ಗೆ ತಿಳಿದುಕೊಂಡು ಆರೈಕೆ ಮಾಡಿದಲ್ಲಿ, ತ್ವಚೆಯ ಸಮಸ್ಯೆ ಎದುರಿಸಬೇಕಾಗುವ ಅಗತ್ಯವಿರುವುದಿಲ್ಲ ಎನ್ನುತ್ತಾರೆ.

ವಾಟರ್‌ಪ್ರೂಫ್‌ ಐ ಮೇಕಪ್‌

ವಾಟರ್‌ ಪ್ರೂಫ್‌ ಮಸ್ಕರಾ, ಐಬ್ರೋ ಹಾಗೂ ಐ ಶೇಡ್ಸ್‌ ಬಳಸುವಾಗ ಆದಷ್ಟೂ ನಿಮ್ಮ ತ್ವಚೆಗೆ ಮ್ಯಾಚ್‌ ಆಗುವಂತಹ ಮಾಯಿಶ್ಚರೈಸರ್‌ ಬಳಸಿ. ಲೈಟಾಗಿ ಮೇಕಪ್‌ ಮಾಡಿ. ಇಲ್ಲವಾದಲ್ಲಿ ಕಣ್ಣಿನ ಚರ್ಮದ ಸುತ್ತಮುತ್ತ ನೆರಿಗೆ ಮೂಡಬಹುದು.

ಮೇಕಪ್‌ ರಿಮೂವಿಂಗ್‌

ವಾಟರ್‌ ಪ್ರೂಫ್‌ ಮೇಕಪ್‌ ಮಾಡಿದಾಗ ಯಾವುದೇ ಕಾರಣಕ್ಕೂ ಮೇಕಪ್‌ ತೆಗೆಯದೇ ಮಲಗಕೂಡದು. ಮೇಕಪ್‌ ರಿಮೂವರ್‌ನಿಂದ ತೆಗೆಯುವುದು ಅಗತ್ಯ. ಇಲ್ಲವಾದಲ್ಲಿ ಚರ್ಮದ ರಂಧ್ರಗಳು ಮುಚ್ಚಿ, ಮೊಡವೆಗಳು ಮೂಡಬಹುದು.

ಲಾಂಗ್‌ ಲಿಪ್‌ಸ್ಟಿಕ್‌ ಮೋಹ

ಲಾಂಗ್‌ ಲಾಸ್ಟಿಂಗ್‌ ಲಿಪ್‌ಸ್ಟಿಕ್‌ಗಳು ಮಾನ್ಸೂನ್‌ನಲ್ಲಿ ಆಕರ್ಷಕ ಲುಕ್‌ ನೀಡುತ್ತವೆ. ನಿಜ. ಆದರೆ, ಇದನ್ನು ಪ್ರತಿದಿನ ಬಳಸುವವರು ಮಲಗುವ ಮುನ್ನ ರಾತ್ರಿಯಿಡಿ ಉಳಿಯುವಂತಹ ಮಾಯಿಶ್ಚರೈಸರ್‌ ಅಂಶವಿರುವ ಲಿಪ್‌ಬಾಮ್‌ ಹಚ್ಚುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಬೆಸ್ಟ್‌. ಹೀಗಿದ್ದೂ ತುಟಿಯ ಚರ್ಮ ಒಣಗಲಾರಂಭಿಸಿದಲ್ಲಿ ಹಚ್ಚುವುದನ್ನು ಆವಾಯ್ಡ್‌ ಮಾಡಿ.

ಫೌಂಡೇಷನ್‌ ಬಳಕೆ

ವಾಟರ್‌ ಪ್ರೂಫ್‌ ಫೌಂಡೇಷನ್‌ನಲ್ಲಿ ಸಿಲಿಕಾನ್‌ ಅಂಶವಿರುವುದರಿಂದ ಇದು ಚರ್ಮಕ್ಕೆ ಉಸಿರಾಡಲು ಅನುವು ಮಾಡಿಕೊಡುವುದಿಲ್ಲ. ಪ್ರತಿದಿನ ವಾಟರ್‌ಪ್ರೂಫ್‌ ಮೇಕಪ್‌ ಹಚ್ಚುವುದರಿಂದ ಮುಖದ ಮೇಲೆ ಅತಿ ಬೇಗ ನೆರಿಗೆಗಳು ಮೂಡಬಹುದು, ಅಲ್ಲದೇ, ಚರ್ಮದ ಅಲರ್ಜಿಯುಂಟಾಗಬಹುದು. ಹಾಗಾಗಿ ಕೆಮಿಕಲ್‌ ಫ್ರೀ ಅಥವಾ ಹರ್ಬಲ್‌ ಕಾಸ್ಮೆಟಿಕ್ಸ್‌ ಬಳಕೆ ಮಾಡುವುದು ಸೂಕ್ತ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Monsoon kids Fashion: ಮಾನ್ಸೂನ್‌ನಲ್ಲೂ ಮಕ್ಕಳು ಮುದ್ದುಮುದ್ದಾಗಿ ಕಾಣಿಸಬೇಕೇ! ಕ್ಯೂಟ್‌ ಔಟ್‌ಫಿಟ್ಸ್ ಸೆಲೆಕ್ಟ್‌ ಮಾಡಿ

Exit mobile version