ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್ ಮೆನ್ಸ್ ಫ್ಯಾಷನ್‌ನಲ್ಲಿ (Monsoon Mens Fashion) ಇದೀಗ ಬಗೆಬಗೆಯ ಹೂಡಿ ಔಟ್‌ಫಿಟ್‌ಗಳದ್ದೇ ಕಾರುಬಾರು. ನೋಡಲು ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ವಿನ್ಯಾಸ ಹೊಂದಿರುವ ಈ ಹೂಡಿಗಳು, ಜೆನ್ ಜಿ ಯುವಕರನ್ನು ಸವಾರಿ ಮಾಡತೊಡಗಿವೆ.
ಸ್ಟೈಲಿಶ್ ಲುಕ್‌ಗಾಗಿ ಹೂಡಿ ಔಟ್‌ಫಿಟ್ಸ್
ಸ್ಲಿವ್‌ಲೆಸ್ ಹೂಡಿ, ಜಾಕೆಟ್ ಹೂಡಿ, ಪುಲ್‌ಓವರ್, ಹಾಫ್ ಝಿಪ್, ಫುಲ್ ಝಿಪ್, ಲಾಂಗ್ ಸ್ಲೀವ್, ಶಾರ್ಟ್ ಸ್ಲೀವ್, ಪರ್ಫಮಾನ್ಸ್ ಹೂಡಿ ಸೇರಿದಂತೆ ನಾನಾ ಬಗೆಯ ಹೂಡಿ ಔಟ್‌ಫಿಟ್‌ಗಳು ಈ ಬಾರಿ ಬಗೆಬಗೆಯ ಬಣ್ಣಗಳಲ್ಲಿ ಬಂದಿವೆ. ನೋಡಲು ಒಂದಕ್ಕಿಂತ ಒಂದು ಆಕರ್ಷಕವಾಗಿ ಕಾಣುತ್ತಿವೆ ಎನ್ನುವ ಸ್ಟೈಲಿಸ್ಟ್ ಜಾಕ್ ಪ್ರಕಾರ, ಹೂಡಿ ಧರಿಸುವವರು ಮೊದಲು ಔಟ್‌ಫಿಟ್‌ನೊಂದಿಗೆ ಮಿಕ್ಸ್ ಮ್ಯಾಚ್ ಮಾಡುವುದನ್ನು ಕಲಿಯಬೇಕು. ಅಂದರೆ, ಮಾನ್ಸೂನ್ ಸೀಸನ್‌ಗೆ ಮ್ಯಾಚ್ ಆಗುವಂತೆ ಪ್ಯಾಂಟ್ ಹಾಗೂ ಟೀ ಶರ್ಟ್‌ನೊಂದಿಗೆ ಧರಿಸಬೇಕು. ಆಗಷ್ಟೇ ಹೂಡಿಯಲ್ಲೂ ಸ್ಟೈಲಿಶ್ ಆಗಿ ಕಾಣಿಸಬಹುದು ಎನ್ನುತ್ತಾರೆ.
ಪಾಪ್ಯುಲರ್ ಆದ ಹೂಡೆಡ್ ಜಾಕೆಟ್
ಮೊದಲೆಲ್ಲಾ ಕೇವಲ ವಿಂಟರ್ ಸೀಸನ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಹೂಡಿ ಶೈಲಿಯ ಜಾಕೆಟ್‌ಗಳು ಇದೀಗ ಮಾನ್ಸೂನ್‌ನಲ್ಲೂ ಎಂಟ್ರಿ ನೀಡಿವೆ. ನೋಡಲು ಜಾಕೆಟ್‌ನಂತೆಯೇ ಇರುವ ಈ ಹೂಡಿ ಕ್ಯಾಪ್ ಡಿಫರೆಂಟ್ ಲುಕ್ ನೀಡುತ್ತದೆ. ಇಂತಹ ಹೂಡೆಡ್ ಜಾಕೆಟ್‌ಗಳು ಇದೀಗ ಹೆಚ್ಚು ಟ್ರೆಂಡ್‌ನಲ್ಲಿದ್ದು ಎಲ್ಲ ವರ್ಗದ ಪುರುಷರನ್ನು ಸೆಳೆದಿವೆ. ಶರ್ಟ್ ಹಾಗೂ ಟೀ ಶರ್ಟ್ ಮೇಲೆ ಧರಿಸಬಹುದಾದ ಈ ಜಾಕೆಟ್ ಹೂಡಿ ನಾನಾ ಫ್ಯಾಬ್ರಿಕ್‌ನಲ್ಲೂ ಲಭ್ಯ. ಕೆಲವು ಬ್ರಾಂಡ್‌ಗಳಲ್ಲಿ ಜೆರ್ಸಿ ಮೆಟಿರಿಯಲ್‌ನಲ್ಲೂ ದೊರೆಯುತ್ತವೆ ಎನ್ನುತ್ತಾರೆ ಮಾನ್ಸೂನ್ ಎಕ್ಸ್‌ಪಟ್ರ್ಸ್.
ಹೂಡಿ ಮ್ಯಾಚಿಂಗ್ ಹೀಗೆ ಮಾಡಿ
ಉದಾಹರಣೆಗೆ., ಜೀನ್ಸ್ ಪ್ಯಾಂಟ್ ಟೀ ಶರ್ಟ್ ಮೇಲೆ ಕಾಮನ್ ಶೇಡ್‌ನ ಹೂಡಿ ಜಾಕೆಟ್ ಧರಿಸಬಹುದು. ಶರ್ಟ್ ಮೇಲೂ ಧರಿಸಬಹುದು. ಕಲರ್ ಸೇಮ್ ಆಗಿರಬಾರದು. ಹಾಲಿಡೇ , ವೀಕೆಂಡ್ ಲುಕ್‌ಗಾದಲ್ಲಿ ಶಾರ್ಟ್ಸ್ ಮೇಲೂ ಧರಿಸಬಹುದು. ಲೇಯರ್ ಲುಕ್ ನೀಡಲು ಸ್ಲೀವ್‌ಲೆಸ್ ಹೂಡಿ ಮ್ಯಾಚ್‌ಮಾಡಬಹುದು. ಹೂಡಿ ಟೀ ಶರ್ಟ್ ಕೂಡ ಸೆಮಿ ಫಾರ್ಮಲ್ ಪ್ಯಾಂಟ್‌ನೊಂದಿಗೂ ಧರಿಸಬಹುದು. ಟೋರ್ನ್ ಜೀನ್ಸ್ ಜೊತೆ ಲಾಂಗ್ ಸ್ಲೀವ್ ಹೂಡಿ ಸ್ಟೈಲಿಶ್ ಆಗಿ ಮ್ಯಾಚ್ ಮಾಡಬಹುದು ಎಂದು ಸ್ಟೈಲಿಸ್ಟ್‌ಗಳು ಸಲಹೆ ನೀಡುತ್ತಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಸ್ಯಾಂಡಲ್‌ವುಡ್ ನಟಿ ಮೇಘಾ ಶ್ರೀಗೆ ಪ್ಲೇ ಸೂಟ್ ಮೇಲಾಯ್ತು ಲವ್!