ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ಗೆ ಕಲರ್‌ಫುಲ್ ಅಂಬ್ರೆಲ್ಲಾಗಳು (Monsoon Umbrella Trend) ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಷ್ಟೇಕೆ? ಧರಿಸುವ ಪ್ರತಿ ಡ್ರೆಸ್‌ಕೋಡ್‌ಗೂ ಮ್ಯಾಚ್ ಆಗುವಂತಹ ನಾನಾ ವಿನ್ಯಾಸದ ಕೊಡೆಗಳಿಂದಿಡಿದು, ಪುಟಾಣಿಗಳು ಬಳಸುವ ಕಿಡ್ಸ್ ಫಂಕಿ ಅಂಬ್ರೆಲ್ಲಾಗಳು ಎಂಟ್ರಿ ನೀಡಿವೆ. ಇನ್ನು, ವ್ಯಾನಿಟಿಯಲ್ಲೂ ಇರಿಸಬಹುದಾದ ಕಾಂಪಾಕ್ಟ್ ಫೋಲ್ಡಬಲ್ 2-3-4 ಫೋಲ್ಡ್, ಫೋಟೊಶೂಟ್‌ಗೆ ಸಾಥ್ ನೀಡುವ ರೈನ್ಬೋ ಅಂಬ್ರೆಲ್ಲಾ, ವಿಂಡ್ ಪ್ರೂಫ್, ಟ್ರಾನ್ಸಪರೆಂಟ್, ಕ್ಲಾಸಿಕ್, ಆಟೋಮ್ಯಾಟಿಕ್, ಮಿನಿ ಪಾಕೆಟ್, ಲೇಸ್, ಡಬ್ಬಲ್ ಶೇಡ್ ಹೀಗೆ ಲೆಕ್ಕವಿಲ್ಲದಷ್ಟು ಬಗೆಯವು ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ಫ್ಯಾಷನ್ ಆಕ್ಸೆಸರೀಸ್ ಲಿಸ್ಟ್‌ಗೆ ಸೇರಿದ ಕೊಡೆ
ಫ್ಯಾಷನ್ ಪ್ರಿಯರಿಗೆ ಮೆಚ್ಚುಗೆಯಾಗುವಂತಹ ಬಣ್ಣಬಣ್ಣದ ಸ್ಟ್ರೇಟ್ ಹಾಗೂ ಫೋಲ್ಡಿಂಗ್ ಅಂಬ್ರೆಲ್ಲಾಗಳು ಎಂಟ್ರಿ ನೀಡಿದ್ದು, ಅದರಲ್ಲೂ ಆನ್‌ಲೈನ್‌ನಲ್ಲಿ ಊಹೆಗೂ ಮೀರಿದ ಸಾದಾ ಮಾನೋಕ್ರೋಮ್ ಹಾಗೂ ಪ್ರಿಂಟೆಡ್‌ನ ಟ್ರೆಂಡಿ ವಿನ್ಯಾಸದವನ್ನು ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ಜಿನತ್. ಅವರ ಪ್ರಕಾರ, ಕೊಡೆಗಳು ಕೇವಲ ಮಳೆಯಿಂದ ರಕ್ಷಿಸುವ ಸಾಧನವಲ್ಲ, ಇದೀಗ ಇದು ಕೂಡ ಮಾನ್ಸೂನ್‌ನ ಫ್ಯಾಷನ್ ಆ್ಯಕ್ಸೆಸರೀಸ್‌ಗಳಲ್ಲಿಒಂದಾಗಿ ಬೆರೆತಿವೆ. ಇದಕ್ಕೆ ಪೂರಕ ಎಂಬಂತೆ, ಈ ಸೀಸನ್‌ನ ಕಾನ್ಸೆಪ್ಟ್‌ಗೆ ತಕ್ಕಂತೆ ನಾನಾ ಶೇಡ್‌ಗಳಲ್ಲಿ, ಶೇಪ್‌ಗಳಲ್ಲಿಆಗಮಿಸಿವೆ. ಖುಷಿಯ ವಿಚಾರವೆಂದರೇ, ಇದೀಗ ಪರಿಸರ ಸ್ನೇಹಿ ಕೊಡೆಗಳು ಬಂದಿವೆಯಂತೆ.
ಉದ್ಯೋಗಸ್ಥರ ಚಾಯ್ಸ್
ವರ್ಕಿಂಗ್ ಮೆನ್-ವುಮೆನ್ ಕೆಟಗರಿಗೆಂದೇ ಬಾಳಿಕೆ ಬರುವ ಅಂಬ್ರೆಲ್ಲಾಗಳು ನಾನಾ ಬ್ರಾಂಡ್‌ಗಳಲ್ಲಿ ಬಿಡುಗಡೆಯಾಗಿದ್ದು, ಬ್ಲಾಕ್ ಶೇಡ್ ಎಂದಿನಂತೆ ಎವರ್‌ಗ್ರೀನ್ ಚಾಯ್ಸ್ ಆಗಿ ಉಳಿದಿದೆ. ಇನ್ನು ವರ್ಕಿಂಗ್ ವುಮೆನ್ ಇದೀಗ ಕಲರ್ಸ್ ಕೊಡೆಗಳತ್ತ ವಾಲಿದ್ದಾರೆ. ಕಾರ್ಪೊರೇಟ್ ಕ್ಷೇತ್ರದ ಮಾನಿನಿಯರಿಗೆ ಪ್ರಿಯವಾಗುವಂತಹ ರೈನ್‌ಬೋ ಶೇಡ್ಸ್, ಫ್ಲೋರಲ್, ಟ್ರಾಫಿಕಲ್ ಪ್ರಿಂಟ್ಸ್, ಕೊಬಾಲ್ಟ್ ಬ್ಲ್ಯೂ, ನಿಯಾನ್, ಬ್ಲಡ್‌ರೆಡ್, ರೆಡ್ ವೈನ್ ವರ್ಣಗಳಲ್ಲಿ ತ್ರೀ ಫೋಲ್ಡ್‌ನಲ್ಲಿ ಕೊಡೆಗಳು ಬಂದಿವೆ. ಇದರೊಂದಿಗೆ ಫ್ಲೋರಲ್ ಪ್ರಿಂಟ್ಸ್ ಅಂಬ್ರೆಲ್ಲಾಗಳು ಇದೀಗ ಅತಿ ಹೆಚ್ಚು ಯುವತಿಯರನ್ನು ಸೆಳೆದಿವೆ. ಅದರಲ್ಲೂ ಮಲ್ಟಿ ಕಲರ್ ಫ್ಲೋರಲ್ ಕೊಡೆಗಳು ಯುವತಿಯರ ಕೈ ಸೇರುತ್ತಿವೆ. ಇದಕ್ಕೆ ನಾನು ಹೊರತಾಗಿಲ್ಲ ಎನ್ನುತ್ತಾರೆ ಫ್ಯಾಷನ್ ಪ್ರಿಯೆ, ಕಾಲೇಜು ವಿದಾರ್ಥಿನಿ ರಿಯಾ.
ಮಕ್ಕಳಿಗೆ ಫಂಕಿ ಅಂಬ್ರೆಲ್ಲಾ
ಮಕ್ಕಳಿಗೆ ಇಷ್ಟವಾಗುವಂತಹ ಕಾರ್ಟೂನ್ ಚಿತ್ತಾರ ಮಾತ್ರವಲ್ಲ, ಕಲರ್ಸ್ ಬ್ರಷ್ ಸ್ಟೋಕ್, ಪೇಂಟಿಂಗ್ಸ್ ಚಿತ್ತಾರದವು, ಬಾರ್ಬಿಡಾಲ್, ಆವೆಂಜರ್ಸ್ ಚಿತ್ರದ ಕೊಡೆಗಳು, ಟೀನೇಜ್‌ನವರಿಗೆ ಇಷ್ಟವಾಗುವಂತಹ ಸ್ಟ್ರೈಫ್ಸ್, ಸ್ಟಾರ್ಸ್, ಗ್ಯಾಲಕ್ಸಿಯವು ಹೊಸ ಬಣ್ಣಗಳಲ್ಲಿ ಆಗಮಿಸಿದ್ದು, ಸದ್ಯ ಪ್ರಚಲಿದಲ್ಲಿವೆ.
ಅಂಬ್ರೆಲ್ಲಾ ಆಯ್ಕೆ ಹೀಗಿರಲಿ
- ಸ್ಥಳೀಯ ಹವಾಮಾನಕ್ಕೆ ಹೊಂದುವಂತದ್ದನ್ನು ಕೊಳ್ಳಬೇಕು.
- ಬ್ಲಾಕ್ ಹಾಗೂ ಕಲರ್‌ಫುಲ್ ಕೊಡೆಗಳನ್ನು ಎಲ್ಲಾ ಉಡುಪಿನೊಂದಿಗೆ ಧರಿಸಬಹುದು.
- ಫೋಟೊಗ್ರಫಿಗೆ ಬಳಸುವವರು ಆದಷ್ಟೂ ಲೈಟ್ವೇಟ್ ಹಾಗೂ ಡಬ್ಬಲ್ ಶೇಡ್ ಕಲರ್ ಛತ್ರಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು.
- ಉದ್ಯೋಗಸ್ಥರು ತಮ್ಮ ಬ್ಯಾಗ್ನಲ್ಲೆ ಇರಿಸಬಹುದಾದ ಕಾಂಪಾಕ್ಟ್ ಫೋಲ್ಡಬಲ್ ಅಂಬ್ರೆಲ್ಲಾಗಳನ್ನು ಆರಿಸಿಕೊಳ್ಳಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Star Fashion: ಬದಲಾಯ್ತು ರಾಮಾಚಾರಿ ಸೀರಿಯಲ್ ಖ್ಯಾತಿಯ ನಟ ಋತ್ವಿಕ್ ಲುಕ್!