ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದರ್ಸ್ ಡೇ ವಿಶೇಷವಾಗಿ ಅಮ್ಮಂದಿರಿಗೆಂದೇ (Mothers Day Special) ನಾನಾ ಬ್ಯೂಟಿ ಸ್ಪಾ ಹಾಗೂ ಬ್ಯೂಟಿ ಪಾರ್ಲರ್‌ಗಳು ಬಗೆಬಗೆಯ ಬ್ಯೂಟಿ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಪ್ಯಾಕೇಜ್‌ನಲ್ಲಿ ಮೂರ್ನಾಲ್ಕು ಬಗೆಯ ಸೇವೆ ಪಡೆಯಬಹುದಾದ ಕಾಂಬೊ ಆಫರ್ಸ್ ಪ್ರಕಟಿಸಿವೆ.
ಮದರ್ಸ್ ಡೇ ಬ್ಯೂಟಿ ಪ್ಯಾಕೇಜ್
ಸಾಮಾನ್ಯ ಐಬ್ರೋ ಶೇಪಿಂಗ್‌ನಿಂದಿಡಿದು ನಾನಾ ಬಗೆಯ ಥ್ರೆಡ್ಡಿಂಗ್, ಕ್ಲಿನ್‌ಅಪ್, ಬ್ಲೀಚಿಂಗ್, ಫೇಶಿಯಲ್, ವ್ಯಾಕ್ಸಿಂಗ್, ಹೇರ್ ಸ್ಪಾ, ಹೇರ್ ಕಲರಿಂಗ್, ಪೆಡಿಕ್ಯೂರ್, ಮೆನಿಕ್ಯೂರ್, ಬಾಡಿ ಪಾಲಿಶಿಂಗ್ ಸೇರಿದಂತೆ ಲೆಕ್ಕವಿಲ್ಲದಷ್ಟು ಬಗೆಯ ಸೌಂದರ್ಯ ವರ್ಧಕ ಸೇವೆಗಳನ್ನು ಒಟ್ಟಾರೆ ಸೇರಿಸಿ, ರಿಯಾಯಿತಿ –ವಿನಾಯತಿಗಳನ್ನು ಘೋಷಿಸಿವೆ. ಹಾಗೆಂದು ಎಲ್ಲಾ ಬ್ಯೂಟಿ ಪಾರ್ಲರ್ ಹಾಗೂ ಸ್ಪಾಗಳಲ್ಲಿ ಇವು ಲಭ್ಯವಿಲ್ಲ! ಕೆಲವು ಬ್ರಾಂಡೆಡ್ ಹಾಗೂ ಮಹಿಳಾ ಸ್ಪಾ ಹಾಗೂ ಪಾರ್ಲರ್‌ಗಳಲ್ಲಿ ಮಾತ್ರ ಈ ಸೇವೆ ಲಭ್ಯ ಎನ್ನಬಹುದು.
ಗ್ರೂಮಿಂಗ್ ಸೇವೆ
ಇನ್ನು ಮಹಿಳೆಯರ ಆತ್ಮ ವಿಶ್ವಾಸವನ್ನು ಹೆಚ್ಚಿಸುವ ಗ್ರೂಮಿಂಗ್ ಪ್ಯಾಕೇಜ್‌ಗಳನ್ನು ಕೆಲವು ಖಾಸಗಿ ಬ್ಯೂಟಿ ಪಾರ್ಲರ್ ಹಾಗೂ ಸ್ಪಾಗಳು ನೀಡುತ್ತಿವೆ. ಅಷ್ಟೇಕೆ! ಪೇಜೆಂಟ್‌ಗಳನ್ನು ಆಯೋಜಿಸುವ ಕಂಪನಿಗಳು ಕೂಡ ಈ ವಿಶೇಷ ದಿನದಂದು ಗ್ರೂಮಿಂಗ್ ಕ್ಯಾಂಪ್‌ಗಳನ್ನು ಆಯೋಜಿಸಿ, ಗೃಹಿಣಿಯರ, ಅಮ್ಮಂದಿರ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಕಾರ್ಯನಿರತವಾಗಿವೆ ಎನ್ನುತ್ತಾರೆ ಪೇಜೆಂಟ್‌ವೊಂದರ ಮುಖ್ಯಸ್ಥೆ ಅನಿ ಥಾಮಸ್.
ಹಾಗೆಂದು ಅಮ್ಮಂದಿರ ದಿನಾಚರಣೆಗೆ ಮಾತ್ರ ಈ ಬ್ಯೂಟಿ ಸೇವೆ ಪ್ಯಾಕೇಜ್‌ಗಳು ಸೀಮಿತವೇ ಎಂದು ನೀವಂದುಕೊಂಡಲ್ಲಿ, ಬಹುತೇಕ ನಿಜ. ಯಾಕೆಂದರೇ, ಇಂತಹ ಪ್ಯಾಕೇಜ್‌ಗಳು ತಾತ್ಕಲಿಕವಾಗಿ ಇಷ್ಟು ದಿನ ಎಂದು ನಿಗಧಿಪಡಿಸಿ ನೀಡಲಾಗಿರುತ್ತದೆ. ಆಯಾ ನಿಗದಿಯಾದ ದಿನಗಳಲ್ಲಿ ಮಾತ್ರ ಇವುಗಳ ಸೌಲಭ್ಯ ಪಡೆಯಬಹುದು ಎನ್ನುತ್ತಾರೆ ಬ್ಯೂಟಿ ತಜ್ಞೆ ರಿಯಾ.
ಬ್ಯೂಟಿ ಪ್ಯಾಕೇಜ್ ಆಯ್ಕೆಗೂ ಮುನ್ನ ಗಮನದಲ್ಲಿಡಿ
- ಮೊದಲು ಬ್ಯೂಟಿ ಸೇವೆಯ ಪ್ಯಾಕೇಜ್ ದರ ತಿಳಿದುಕೊಂಡು ಮುಂದುವರಿಯಿರಿ.
- ಕಾಂಬೊ ಆಫರ್ ಇರುವ ಪ್ಯಾಕೇಜ್ ಇಡೀ ದಿನ ತೆಗೆದುಕೊಳ್ಳಬಹುದು ಎಂಬುದು ಮೊದಲೇ ತಿಳಿದಿರಲಿ.
- ಡಿಸ್ಕೌಂಟ್ಸ್ ದೊರೆಯುತ್ತಿದೆ ಎಂಬ ಭರದಲ್ಲಿ ಸಿಕ್ಕ ಸಿಕ್ಕ ಬ್ಯೂಟಿ ಟ್ರೀಟ್ಮೆಂಟ್ ತೆಗೆದುಕೊಂಡು ಸ್ಕಿನ್ ಹಾಳುಮಾಡಿಕೊಳ್ಳದಿರಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Mothers Day Twinning Fashion: ಮದರ್ಸ್ ಡೇಗೆ ಅಮ್ಮನೊಂದಿಗೆ ಟ್ವಿನ್ನಿಂಗ್ ಫ್ಯಾಷನ್!