Site icon Vistara News

Mysore Fashion week | ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್‌ ಆಗಿ ಹೆಜ್ಜೆ ಹಾಕಿದ ಜಯಪ್ರದಾ

Mysore Fashion week

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪ್ರತಿಷ್ಠಿತ ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ಸೆಲೆಬ್ರಿಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರೊಂದಿಗೆ ಬಹುಭಾಷಾ ತಾರೆ ಜಯಪ್ರದಾ ಸೆಲೆಬ್ರಿಟಿ ಶೋ ಸ್ಟಾಪರ್‌ ಆಗಿ ರ್ಯಾಂಪ್‌ ವಾಕ್‌ ಮಾಡಿದರು. ಸೆಲೆಬ್ರಿಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರ ಅತ್ಯಾಕರ್ಷಕ ಡಿಸೈನರ್‌ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ನಟಿ ಜಯಪ್ರದಾ ಸ್ವರ್ಗದಿಂದ ಇಳಿದು ಬಂದ ದೇವತೆಯಂತೆ ಕಾಣುತ್ತಿದ್ದರು. ಇತರೇ ಮಾಡೆಲ್‌ಗಳ ಮಧ್ಯೆ ಕಂಗೊಳಿಸುತ್ತಿದ್ದರು. ಕೆಂಪು, ಹಸಿರು ಹೀಗೆ ಕಲರ್‌ ಡಿಸೈನರ್‌ ರೇಷ್ಮೆ ಸೀರೆಗಳ ಸಮಾಗಮವೇ ರ್ಯಾಂಪ್‌ ಮೇಲೆ ನೆರೆದಿತ್ತು.

ಬಹುಭಾಷಾ ತಾರೆ ಜಯಪ್ರದಾ ಮಾತು

ನಟಿ ಜಯಪ್ರದಾ ಮಾತನಾಡಿ, ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ರ್ಯಾಂಪ್‌ ವಾಕ್‌ ಮಾಡಿರುವುದು ನನಗೆ ಅತಿಯಾದ ಖುಷಿ ತಂದಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಜಯಂತಿ ಬಲ್ಲಾಳ್‌ ಅವರ ಪ್ರತಿಯೊಂದು ಸೀರೆಯ ಡಿಸೈನ್ಸ್‌ ಮನಮೋಹಕವಾಗಿದೆ ಎಂದು ಹಾಡಿ ಹೊಗಳಿದರು.

ಯಶಸ್ವಿಯಾದ ಫ್ಯಾಷನ್‌ ಶೋ

ಸೆಲೆಬ್ರಿಟಿ ಡಿಸೈನರ್‌ ಜಯಂತಿ ಬಲ್ಲಾಳ್‌ ಅವರು ಮಾತನಾಡಿ, ಪ್ರತಿ ಬಾರಿಯೂ ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ವಿಶೇಷವಾಗಿ ಸೆಲೆಬ್ರಿಟಿಗಳು ಶೋ ಸ್ಟಾಪರ್‌ ಆಗಿ ವಾಕ್‌ ಮಾಡುತ್ತಾರೆ. ಇಷ್ಟೆಲ್ಲಾ ಬ್ಯುಝಿ ಶೆಡ್ಯೂಲ್‌ಗಳ ನಡುವೆಯೂ ಸಂಸದೆ ಹಾಗೂ ನಟಿ ಜಯಪ್ರದಾ ಅವರು ನಮ್ಮ ಶೋಗೆ ಆಗಮಿಸಿರುವುದು ಸಂತಸ ತಂದಿದೆ. ಮೈಸೂರು ಫ್ಯಾಷನ್‌ ವೀಕ್‌ನ ಶೋಭೆ ಮತ್ತಷ್ಟು ಹೆಚ್ಚಿಸಿದೆ ಎಂದು ಧನ್ಯವಾದ ತಿಳಿಸಿದರು.

ಪವರ್‌ಸ್ಟಾರ್‌ ನೆನಪು ಅಮರ

ಈ ಫ್ಯಾಷನ್‌ ವೀಕ್‌ನಲ್ಲಿ ನಟಿ ಜಯಪ್ರದಾ ಅವರು ಪವರ್‌ಸ್ಟಾರ್‌ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು. ಫ್ಯಾಷನ್‌ ವೀಕ್‌ನಲ್ಲೂ ಪವರ್‌ಸ್ಟಾರ್‌ ಅವರನ್ನು ನೆನಪು ಮಾಡಿಕೊಂಡದ್ದು, ಎಲ್ಲರ ಮೆಚ್ಚುಗೆ ಗಳಿಸಿತು.

ಸತತ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆದ ಪ್ರತಿಷ್ಠಿತ ಮೈಸೂರು ಫ್ಯಾಷನ್‌ ವೀಕ್‌ನಲ್ಲಿ ನಾನಾ ಸೆಲೆಬ್ರಿಟಿ ಡಿಸೈನರ್‌ಗಳು, ಪ್ರೊಫೆಷನಲ್‌ ಮಾಡೆಲ್‌ಗಳು, ಕೊರಿಯಗ್ರಾಫರ್‌ಗಳು ಸೇರಿದಂತೆ ನಾನಾ ಗಣ್ಯರು ಭಾಗವಹಿಸಿದ್ದರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Fashion News | ಜಪಾನಿಯರ ಮನ ಗೆದ್ದ ಕನ್ನಡತಿ ಶರಧಿ ಶೆಟ್ಟಿಯ ಒರಿಗಾಮಿ ಡಿಸೈನರ್‌ ವೇರ್‌

Exit mobile version