Site icon Vistara News

Nail Art : ಉಗುರಿನ ಮೇಲೆ ಪೋಲ್ಕಾ ಡಾಟ್‌ ಚಿತ್ತಾರ

ನೇಲ್‌ ಆರ್ಟ್‌

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉಗುರಿನ ಮೇಲೆ ಪೋಲ್ಕಾ ಡಾಟ್‌ ಚಿತ್ತಾರ ಮೂಡಿಸುವ ನೇಲ್‌ ಆರ್ಟ್‌(Nail Art Trend ) ಈ ಬಾರಿಯ ಬ್ಯೂಟಿ ಜಗತ್ತಿನ ಟಾಪ್‌ ಲಿಸ್ಟ್‌ನಲ್ಲಿ ಸೇರಿದೆ.

ಅಂದ ಹಾಗೆ, ಬ್ಯೂಟಿ ಜಗತ್ತಿನಲ್ಲಿ ಆಗಾಗ ನೇಲ್‌ ಆರ್ಟ್‌(Nail Art) ಟ್ರೆಂಡ್‌ ಬದಲಾಗುತ್ತಲೇ ಇರುತ್ತದೆ. ಈ ದಿನಗಳಲ್ಲಿ ಪೋಲ್ಕಾ ಡಾಟ್‌ ಚಿತ್ತಾರ ನೇಲ್‌ ಆರ್ಟ್‌(Nail Art ) ಚಾಲ್ತಿಯಲ್ಲಿದೆ. ಇದಕ್ಕೆ ಕಾರಣವೂ ಇದೆ. ಅತಿ ಸುಲಭವಾಗಿ ಪಾಲಿಸಬಹುದಾದ ಈ ನೇಲ್‌ ಆರ್ಟ್‌ ಅನ್ನು ಯಾರೂ ಬೇಕಾದರೂ ಚಿತ್ರಿಸಬಹುದು. Nail Art Trendಹೋಗುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ನೇಲ್‌ ಆರ್ಟ್‌ ತಜ್ಞರು.

ಏನಿದು ಪೋಲ್ಕಾ ಡಾಟ್ಸ್‌ ನೇಲ್‌ ಆರ್ಟ್‌

ಉಗುರಿನ ಸಾದಾ ಬ್ಯಾಕ್‌ಗ್ರೌಂಡ್‌ ಮೇಲೆ ಚುಕ್ಕಿಗಳ ರಾಶಿಯ ಚಿತ್ತಾರ ಎನ್ನಬಹುದು. ಮೂರ್ನಾಲ್ಕು ವರ್ಷಗಳ ಹಿಂದೆ ಪೋಲ್ಕಾ ಡಾಟ್ಸ್ ಡ್ರೆಸ್‌ ಟ್ರೆಂಡ್‌ ಸಾಕಷ್ಟು ತಿಂಗಳುಗಳ ಕಾಲ ಫ್ಯಾಷನ್‌ ಚಾಲ್ತಿಯಲ್ಲಿತ್ತು. ಇದೀಗ ಈ ವಿನ್ಯಾಸ ಔಟ್‌ಫಿಟ್‌ನಿಂದಾಚೆ ಬಂದು ಉಗುರುಗಳನ್ನು ಅಲಂಕರಿಸತೊಡಗಿವೆ.

ಮಿಕ್ಸ್‌ ಮ್ಯಾಚ್‌ ಪೊಲ್ಕಾ ಡಾಟ್‌ ನೇಲ್‌ ಆರ್ಟ್‌

ಈ ಬಾರಿ ನೇಲ್‌ ಆರ್ಟಿಸ್ಟ್‌ಗಳು ಪೋಲ್ಕಾ ಡಾಟ್‌ ಆರ್ಟ್‌ ಡಿಸೈನ್‌ನನ್ನು ಬ್ಯೂಟಿ ಬ್ಲಾಗರ್ಸ್‌ಗಳ ಮುಖಾಂತರ ಬಿಡುಗಡೆಗೊಳಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲೂ ನೇಲ್‌ ಆರ್ಟ್‌ ಪ್ರಿಯರು ನಾನಾ ವಿನ್ಯಾಸದಲ್ಲಿ ಕಲರ್‌ಫುಲ್‌ ಪೋಲ್ಕಾ ಡಾಟ್‌ ಆರ್ಟ್‌ ಮೂಡಿಸಿರುವ ಸುಂದರ ಬೆರಳುಗಳ ಫೋಟೋಗಳನ್ನು ಅಪ್‌ಲೋಡ್‌ ಮಾಡತೊಡಗಿದ್ದಾರೆ.

ಕಲರ್‌ಫುಲ್‌ ಡಾಟ್ಸ್‌

ಈ ಚುಕ್ಕಿಗಳ ಚಿತ್ತಾರವೂ ನಾನಾ ರೂಪ ಪಡೆದಿದೆ. ಒಂದಕ್ಕಿಂತ ಒಂದು ಬಗೆಬಗೆಯ ಪೋಲ್ಕಾ ಡಾಟ್ಸ್‌ ಆರ್ಟ್‌ ಅನಾವರಣಗೊಳ್ಳುತ್ತಿವೆ ಎನ್ನುತ್ತಾರೆ ನೇಲ್‌ ಆರ್ಟಿಸ್ಟ್‌ ರೋಮಿ. ಅವರ ಪ್ರಕಾರ, ಇದು ಕೇವಲ ಚುಕ್ಕಿಗಳ ಸಂಗಮವಲ್ಲ. ಇಮ್ಯಾಜಿನೇಷನ್‌ಗೂ ಮೀರಿದ್ದು ಎನ್ನುತ್ತಾರೆ.

ಟ್ರೈ ಮಾಡಿ ನೋಡಿ

ಮೊದಲಿಗೆ ಯಾವ ಬಣ್ಣದ ಚಿತ್ತಾರ ಬಿಡಿಸಬೇಕೆಂದು ಪ್ಲಾನ್‌ ಮಾಡಿಕೊಳ್ಳಬೇಕು. ಬೇಕಾದ ಬಣ್ಣವನ್ನು ಮೊದಲೇ ಆಯ್ಕೆ ಮಾಡಿಕೊಳ್ಳಬೇಕು. ಮೊದಲಿಗೆ ಬ್ಯಾಕ್‌ಗ್ರೌಂಡ್‌ನಲ್ಲಿ ಕಾಣುವ ಬಣ್ಣವನ್ನು ಹಚ್ಚಿ, ಒಣಗಿಸಿ. ನಂತರ ಕಾಂಟ್ರಾಸ್ಟ್‌ ಕಲರ್‌ನ ಉಗುರಿನ ಬಣ್ಣಗಳನ್ನು ಆಯ್ಕೆ ಮಾಡಿ. ಉದಾಹರಣೆಗೆ : ವೈಟ್‌ ಬ್ಯಾಕ್‌ಗ್ರೌಂಡ್‌ ಮೇಲೆ ಕೆಂಪು, ಹಸಿರು, ಕೇಸರಿ, ಪರ್ಪಲ್‌, ಬ್ಲ್ಯೂ ಹೀಗೆ ಡಾರ್ಕ್‌ ಬಣ್ಣವನ್ನು ಆಯ್ಕೆ ಮಾಡಿ. ಬ್ರಶ್‌ನ ತುದಿಯಿಂದ ಉಗುರಿನ ಮೇಲೆ ನಿಮ್ಮ ಊಹೆಗೆ ತಕ್ಕಂತೆ ಚುಕ್ಕಿ ಇಡುತ್ತಾ ಬನ್ನಿ. ಒಣಗಿದ ನಂತರ ಉಗುರಿನ ಮೇಲೆ ಟ್ರಾನ್ಸ್‌ಪರೆಂಟ್‌ ನೇಲ್‌ ಪಾಲಿಷ್‌ ಕೋಟ್‌ ಹಾಕಿ. ನಿಮ್ಮ ಊಹೆಯ ಪೋಲ್ಕಾ ಡಾಟ್‌ ಆರ್ಟ್‌ ಉಗುರಿನ ಮೇಲೆ ಕಂಗೊಳಿಸುವುದು.

ಇದನ್ನೂ ಓದಿ| Star Beauty Secret: ನ್ಯಾಚುರಲ್‌ ಆಗಿರಲು ಬಯಸುವ ರಾಧಿಕಾ ಆಪ್ಟೆ


Exit mobile version