ಶೀಲಾ ಸಿ. ಶೆಟ್ಟಿ, ಬೆಂಗಳೂರು
ವ್ಯಾಲೆಂಟೈನ್ಸ್ ವೀಕ್ ಸೆಲೆಬ್ರೇಷನ್‌ಗೆ ಸಾಥ್ ನೀಡಲು ಇದೀಗ ನಾನಾ ಬಗೆಯ ನೇಲ್ ಆರ್ಟ್ ಡಿಸೈನ್‌ಗಳು ಬ್ಯೂಟಿ ಲೋಕಕ್ಕೆ ಲಗ್ಗೆ ಇಟ್ಟಿವೆ. ನೋಡಲು ಆಕರ್ಷಕ ವಿನ್ಯಾಸದ ಇವುಗಳಲ್ಲಿ ನಾನಾ ಬಗೆಯ ಹಾರ್ಟ್ ಶೇಪ್ ಡಿಸೈನ್‌ನವು, ಲವ್ ಸಿಂಬಲ್ಸ್, ಟೆಕ್ಸ್ಟ್ ಸಂದೇಶ, ಲವ್ ಅಕ್ಷರಗಳ ವಿನ್ಯಾಸಗಳು ಈಗಾಗಲೇ ಹುಡುಗಿಯರ ಕೈಗಳನ್ನು ಸಿಂಗರಿಸತೊಡಗಿವೆ.
ಹೃದಯಾಕಾರದ ಡಿಸೈನ್ಸ್‌ಗೆ ಆದ್ಯತೆ
ನೇಲ್ ಆರ್ಟ್ ಡಿಸೈನರ್ ದಾಮಿನಿ ಪ್ರಕಾರ, ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಪ್ರತಿ ವರ್ಷವೂ ಬಗೆಬಗೆಯ ಕಾನ್ಸೆಪ್ಟ್ ಬಿಡುಗಡೆಗೊಳ್ಳುತ್ತವೆ. ಉಗುರಿನ ಮೇಲೆ ಹೃದಯ, ಲವ್ ವರ್ಡ್ಸ್, ಬಡ್ರ್ಸ್, ಲವ್ ಸಿಂಬಲ್, ಹಾರ್ಟ್ ಸಿಂಬಲ್ಸ್ ಹೀಗೆ ನಾನಾ ಬಗೆಯವು ಊಹೆಗೂ ಮೀರಿದ ಡಿಸೈನ್‌ನಲ್ಲಿ ಎಂಟ್ರಿ ನೀಡುತ್ತವೆ. ಕೆಲವು ಹುಡುಗಿಯರು ಹಾರ್ಟ್ ಸಿಂಬಲ್ ಇರುವಂತವಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಾರೆ. ಕೆಲವರು ಹೆವ್ವಿ ಡಿಸೈನ್ ಇಷ್ಟಪಟ್ಟರೇ ಮತ್ತೆ ಕೆಲವರು ಸಿಂಪಲ್ ಡಿಸೈನ್ ಇಷ್ಟಪಡುತ್ತಾರೆ. ಅವರವರ ಅಭಿರುಚಿಗೆ ತಕ್ಕಂತೆ ವಿನ್ಯಾಸ ಮಾಡುತ್ತೇವೆ ಎನ್ನುತ್ತಾರೆ.
ಮಿನುಗುವ ಕ್ರಿಸ್ಟಲ್ ನೇಲ್ ಹಾರ್ಟ್
ಒಂದೆರೆಡು ಶೈನಿಂಗ್ ನೇಲ್ ಪಾಲಿಶ್ ಕೋಟ್ ಹಚ್ಚಿದ ನಂತರ, ಮಿನುಗುವ ನಕ್ಷತ್ರಗಳಂತೆ ಕ್ರಿಸ್ಟಲ್ ಹಾರ್ಟ್‌ಗಳನ್ನು ಚಿತ್ರಿಸಲಾಗುತ್ತದೆ.ಈ ಡಿಸೈನ್ ಕೂಡ ಚಾಲ್ತಿಯಲ್ಲಿದೆ.
ಉಗುರಿನ ಮೇಲೆ ಲವ್ ಸಿಂಬಲ್ಸ್
ಇನ್ನು ಉಗುರಿನ ಮೇಲೆ ಲವ್ ಸಿಂಬಲ್ಸ್ ಇರುವಂತಹ ನೇಲ್ ಆರ್ಟ್‌ಗಾಗಿ ನೇಲ್ ಡಿಸೈನರ್ ಬಳಿ ಹೋಗಬೇಕಾಗಿಲ್ಲ. ಕಲಾವಿದರ ಮನಸ್ಸಿದ್ದರೆ ಸಾಕು ಎನ್ನುತ್ತಾರೆ ಡಿಸೈನರ್ ತಾರಾ. ಅವರ ಪ್ರಕಾರ, ನೇಲ್ ಆರ್ಟ್ ಕಿಟ್ ಇದ್ದಲ್ಲಿ ಒಂದಿಷ್ಟು ಉತ್ತಮ ಶೇಡ್‌ಗಳಿದ್ದಲ್ಲಿ ಈ ಡಿಸೈನ್ ಅನ್ನು ನೀವೇ ಚಿತ್ರಿಸಬಹುದು ಎನ್ನುತ್ತಾರೆ.
೩ಡಿ ರೆಡ್ ನೇಲ್ ಆರ್ಟ್
ಇನ್ನು ಈ ಸೀಸನ್‌ನಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವುದು ರೆಡ್ ಶೇಡ್‌ನ ನೇಲ್ ಆರ್ಟ್. ಈ ಶೇಡ್ ಮೇಲೆ ನಾನಾ ಬಗೆಯಲ್ಲಿ ಇಲ್ಯೂಷನ್ ಕ್ರಿಯೇಟ್ ಮಾಡುವಂತಹ ೩ ಡಿ ನೇಲ್ ವಿನ್ಯಾಸ ಮಾಡಲಾಗುತ್ತದೆ. ಇದು ಅತ್ಯಾಕರ್ಷಕವಾಗಿ ಕಾಣುತ್ತದೆ. ಇನ್ನು ಇದರ ಮೇಲೆ ಚಿತ್ರಿಸಲಾಗುವ ಶೈನಿಂಗ್ ಹಾರ್ಟ್ ಡಿಸೈನ್ ಕಾರ್ಪೋರೇಟ್ ಕ್ಷೇತ್ರದ ಹುಡುಗಿಯರನ್ನು ಬರಸೆಳೆಯುತ್ತಿದೆ. ಇದು, ಸಾಕಷ್ಟು ದಿನಗಳ ಕಾಲ ಇರುವುದರಿಂದ ಇದಕ್ಕೆ ಪ್ರಾಮುಖ್ಯತೆ ಹೆಚ್ಚಾಗಿದೆ ಎನ್ನುತ್ತಾರೆ
ನೇಲ್ ಆರ್ಟ್ ಪ್ರಿಯರಿಗೆ ಒಂದಿಷ್ಟು ಸಲಹೆ
- ಹಾರ್ಟ್ ಚಿತ್ತಾರ ಟ್ರೆಂಡಿಯಾಗಿರಲಿ. ಕಾಂಟ್ರಾಸ್ಟ್ ಶೇಡ್ಸ್ ಬಳಸಿ.
- ಗುಣಮಟ್ಟದ ನೇಲ್ ಆರ್ಟ್ ಮಾಡಿಸಿ.
- ನೇಲ್ಆರ್ಟ್ಗೂ ಮುನ್ನ ಮೆನಿಕ್ಯೂರ್ ಮಾಡಿಸಿಕೊಳ್ಳಿ.
- ನೀರು ಹೆಚ್ಚು ಸೋಕಿದಲ್ಲಿ ಬಾಳಿಕೆ ಕಡಿಮೆ ಎಂಬುದು ನೆನಪಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಸ್ಟೈಲಿಶ್ ಕಿರುತೆರೆ ನಟಿ ದೀಪಿಕಾ ದಾಸ್ ಬಿಂದಾಸ್ ಫ್ಯಾಷನ್‌ಗೆ ಅಭಿಮಾನಿಗಳು ಫಿದಾ