Site icon Vistara News

Nail Colour Trend: ಉಗುರಿಗೊಂದು ಬಣ್ಣಹಚ್ಚುವ ಟ್ರೆಂಡ್‌ ಫಾಲೋ ಮಾಡಲು ಹೀಗೆ ಮಾಡಿ!

Nail Colour Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಒಂದೇ ಕೈ ಬೆರಳುಗಳಿಗೆ ಭಿನ್ನ-ವಿಭಿನ್ನ ಶೇಡ್ಸ್. ನೋಡಲು ಕಲರ್ಫುಲ್‌ ಆಗಿ ಕಾಣಿಸುವ ನೇಲ್‌ ಕಲರ್ಸ್ (Nail Colour Trend). ಇದು ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಟ್ರೆಂಡಿಯಾಗಿರುವ ನೇಲ್‌ ಶೇಡ್ಸ್ ಟ್ರೆಂಡ್‌. ಹೌದು. ಒಂದೊಂದು ಉಗುರಿಗೂ ಒಂದೊಂದು ಬಗೆಯ ಬಣ್ಣ. ಒಂದು ಕೈಯಲ್ಲಿ ಐದಾರು ಬಗೆಯ ನೇಲ್‌ ಕಲರ್ಸ್. ಸಿಂಪಲ್ಲಾಗಿ ಹೇಳುವುದಾದಲ್ಲಿ, ಕೈ ಒಂದು, ಉಗುರಿನ ಬಣ್ಣ ಹಲವು ಎನ್ನಬಹುದು.

ಆಕರ್ಷಕವಾಗಿ ಕಾಣುವ ಸಿಂಪಲ್‌ ಕಾನ್ಸೆಪ್ಟ್

ಅಂದ ಹಾಗೆ, ಇದೇನು ನೇಲ್‌ ಆರ್ಟ್ ಅಲ್ಲ! ಹಚ್ಚುವುದು ಕಷ್ಟವೂ ಅಲ್ಲ! ಇದಕ್ಕಾಗಿ ಹೆಚ್ಚು ಸಮಯ ವ್ಯಯಿಸುವುದು ಬೇಕಾಗಿಲ್ಲ! ನಮ್ಮಿಷ್ಟದಂತೆ ನಮಗಿಷ್ಟವಾದ ಬಣ್ಣವನ್ನು ಲೇಪಿಸುವುದು. ಬೇಕಿದ್ದಲ್ಲಿ ಮಧ್ಯ ಮಧ್ಯ ಯಾವುದಾದರೂ ಉಗುರಿಗೆ ಕೊಂಚ ಚಿತ್ತಾರ ಮೂಡಿಸುವುದು. ಹೀಗೆ ಮನಸ್ಸಿಗೆ ಬಂದಂತಹ ವಿನ್ಯಾಸ ಅಥವಾ ಬಣ್ಣ ಹಚ್ಚುವುದೇ ಈ ಟ್ರೆಂಡ್‌ನ ಥೀಮ್‌ ಎನ್ನುತ್ತಾರೆ ನೇಲ್‌ ಆರ್ಟ್ ಡಿಸೈನರ್‌ ರೇಷ್ಮಾ. ಅವರ ಪ್ರಕಾರ, ನೇಲ್‌ ಆರ್ಟ್ ಎಂದು ಇದಕ್ಕೆ ಹೆಸರು ನೀಡಬೇಕಾಗಿಲ್ಲ! ಯಾರೂ ಬೇಕಾದರೂ ಖುದ್ದು ನೇಲ್‌ ಕಲರ್‌ ಹಾಕಿ ಆಕರ್ಷಕವಾಗಿ ಮೂಡಿಸಬಹುದು ಎನ್ನುತ್ತಾರೆ.

ಏನಿದು ಮಲ್ಟಿ ಕಲರ್‌ ನೇಲ್‌ ಟ್ರೆಂಡ್‌?

ಐದು ಬೆರಳಿನ ಉಗುರಿಗೂ ಒಂದೊಂದು ಬಗೆಯ ಉಗುರು ಬಣ್ಣವನ್ನು ಲೇಪಿಸುವುದನ್ನು ಮಲ್ಟಿ ಕಲರ್‌ ನೇಲ್‌ ಟ್ರೆಂಡ್‌ ಎನ್ನಲಾಗುತ್ತದೆ. ಮಾನೋಕ್ರೋಮ್‌ ಶೇಡ್ಸ್‌ನಲ್ಲಿ ಮೊದಲು ಪರಿಚಯಗೊಂಡ ಈ ಕಾನ್ಸೆಪ್ಟ್‌ ಇದೀಗ ಆಯಾ ನೇಲ್‌ ಪಾಲಿಶ್‌ ಪ್ರಿಯರ ಮನೋಭಿಲಾಷೆಗೆ ತಕ್ಕಂತೆ ಬದಲಾಗುತ್ತಿದೆ. ಪರಿಣಾಮ, ಊಹೆಗೂ ಮೀರಿದ ಕಾಂಬಿನೇಷನ್‌ನಲ್ಲಿ ಅನಾವರಣಗೊಳ್ಳುತ್ತಿದೆ.

ಬಣ್ಣದ ಬಣ್ಣದ ನೇಲ್‌ ಶೇಡ್ಸ್ ಹಚ್ಚುವಾಗ ಹೀಗೆ ಮಾಡಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Star Saree Fashion: ಸ್ಟ್ರೀಟ್‌ ಫ್ಯಾಷನ್‌ಗೂ ಎಂಟ್ರಿ ಕೊಟ್ಟಿದೆ ಇಂಡೊ-ವೆಸ್ಟರ್ನ್ ಸೀರೆ!

Exit mobile version