ಶೀಲಾ ಸಿ. ಶೆಟ್ಟಿ, ಬೆಂಗಳೂರು
ನವರಾತ್ರಿಯ ಏಳನೇ ದಿನದ ಬಣ್ಣ ಬೂದು (Navaratri Grey Colour Tips) ವರ್ಣ. ಇದಕ್ಕೆ ಪೂರಕ ಎಂಬಂತೆ, ಮಹಿಳೆಯರು, ಹುಡುಗಿಯರು ಈ ಕಲರ್‌ನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇನ್ನು, ಪ್ರತಿ ವರ್ಷ ಒಂದೇ ಬಗೆಯಲ್ಲಿ ಕಾಣಿಸಿಕೊಳ್ಳಲು ಬಹಳಷ್ಟು ಸ್ತ್ರೀಯರಿಗೂ ಬೇಸರ. ಅದರಲ್ಲೂ ಬೂದು ವರ್ಣ, ತೀರಾ ಡಲ್ ಕಲರ್. ಈ ಕಲರ್‌ನಲ್ಲೂ ಹೇಗೆಲ್ಲಾ ಆಕರ್ಷಕವಾಗಿ ಕಾಣಿಸಿಕೊಳ್ಳಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
“ನವರಾತ್ರಿಯ 7 ನೇ ದಿನ ಶುಭಾಂಕರಿ, ಭೈರವಿ, ಚಾಮುಂಡ, ಕಾಳರಾತ್ರಿ ಎಂದೆಲ್ಲಾ ಹೇಳಲಾಗುತ್ತದೆ. ಈ ದಿನದಂದು ದೇವಿ ಧರಿಸುವ ಹಾಗೂ ಆಕೆಗೆ ಇಷ್ಟವಾಗುವ ಬೂದು ಬಣ್ಣದಲ್ಲಿ ಕಾಣಿಸಿಕೊಳ್ಳುವುದು ಇಂದು ಸಾಮಾನ್ಯವಾಗಿದೆ. ಇದಕ್ಕೆ ಪೂರಕ ಎಂಬಂತೆ, ಮಹಿಳೆಯರು ಈ ವರ್ಣದ ಟ್ರೆಂಡಿ ಸೀರೆ ಹಾಗೂ ಉಡುಪುಗಳಲ್ಲಿ ಸಿಂಗರಿಸಿಕೊಳ್ಳುತ್ತಾರೆ. ಕೆಲವರು ಹೊಸ ಸೀರೆ ಕೊಂಡು ಉಟ್ಟರೇ, ಮತ್ತೇ ಕೆಲವರು ಹಳೆ ಸೀರೆಯಲ್ಲೆ ಕಾಣಿಸಿಕೊಳ್ಳುತ್ತಾರೆ. ಇನ್ನು ಕೆಲವರು ತಮ್ಮ ಬಳಿ ಇರುವ ಗ್ರೇ ವರ್ಣದ ಉಡುಪನ್ನು ಧರಿಸುತ್ತಾರೆ” ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗ್ರೇ ಸೀರೆ ಸ್ಟೈಲಿಂಗ್ ಹೀಗಿರಲಿ
ಸಮೀಕ್ಷೆಯೊಂದರ ಪ್ರಕಾರ, ಬೂದು ಬಣ್ಣದ ಸೀರೆಗಳನ್ನು ಇಷ್ಟಪಡುವವರು ಹಾಗೂ ಆಯ್ಕೆ ಮಾಡುವವರು ತೀರಾ ಕಡಿಮೆ ಎನ್ನಲಾಗಿದೆ. ಹಾಗಾಗಿ ಈ ಶೇಡ್‌ನ ಸೀರೆಗಳ ಕಲೆಕ್ಷನ್ ಮಹಿಳೆಯರ ಬಳಿ ತೀರಾ ಕಡಿಮೆ ಇರುತ್ತದಂತೆ. ಅದಕ್ಕಾಗಿಯೇ, ಉಟ್ಟ ಹಳೆ ಸೀರೆಯನ್ನೇ ಉಟ್ಟು ಸಂಭ್ರಮಿಸಲು ಇಚ್ಛಿಸುವವರು ಹೊಸ ಲುಕ್ ನೀಡಬಹುದು. ಬಾರ್ಡರ್ ಬಣ್ಣದ ಸೀರೆಯಲ್ಲಿ, ಬಾರ್ಡರ್‌ಗೆ ಮ್ಯಾಚ್ ಆಗುವಂತಹ ಸ್ಟೇಟ್‌ಮೆಂಟ್ ಜ್ಯುವೆಲರಿಗಳನ್ನು ಧರಿಸಬಹುದು. ಬ್ಲಾಕ್ ಅಥವಾ ಆಕ್ಸಿಡೈಸ್ಡ್ ಆಭರಣಗಳನ್ನು ಧರಿಸಿಕೊಳ್ಳಬಹುದು. ಶಿಫಾನ್, ಜಾರ್ಜೆಟ್ ಸೀರೆಯಾದಲ್ಲಿ ಕ್ಯಾಶುವಲ್ ಲುಕ್ ನೀಡುವುದು ಉತ್ತಮ. ಸಿಂಪಲ್ ಲುಕ್ ನೀಡಬಹುದು. ಹೇರ್‌ಸ್ಟೈಲ್ ಸೀರೆಯ ಸ್ಟೈಲಿಂಗ್ ತಕ್ಕಂತಿರಲಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಗ್ರೇ ಎಥ್ನಿಕ್ ವೇರ್‌ಗಳಿಗೆ ನೀಡಿ ಡಿಫರೆಂಟ್ ಲುಕ್
ಇನ್ನು ಗ್ರೇ ವರ್ಣದ ಎಥ್ನಿಕ್ ವೇರ್‌ಗಳಿಗೆ ಆಯಾ ಡಿಸೈನ್‌ಗೆ ತಕ್ಕಂತೆ ಸ್ಟೈಲಿಂಗ್ ಮಾಡಿ. ಬಂಗಾರದ ಆಭರಣಗಳಿಗಿಂತ ಟೆರಾಕೋಟಾ, ಆಕ್ಸಿಡೈಸ್ಡ್ ಜ್ಯುವೆಲರಿಗಳು ಮ್ಯಾಚ್ ಆಗುತ್ತವೆ. ಟ್ರೆಡಿಷನಲ್ ಲುಕ್ ನೀಡಬೇಕಾದಲ್ಲಿ ಆದಷ್ಟೂ ಮೇಕಪ್‌ನಲ್ಲಿ ಕಾಜಲ್, ಐ ಲೈನರ್ ಸೇರಿಸಿಕೊಳ್ಳಿ. ಬ್ಲ್ಯಾಕ್ ಬಿಂದಿ ಮ್ಯಾಚ್ ಮಾಡಿ.
- ಗ್ರೇ ವರ್ಣದ ಸೀರೆಗಳಿಗೆ ಬ್ಲ್ಯಾಕ್ ಮೆಟಲ್ ಜ್ಯುವೆಲ್ಸ್ ಬೆಸ್ಟ್ ಮ್ಯಾಚಿಂಗ್.
- ಕಾಂಟ್ರಾಸ್ಟ್ ಮ್ಯಾಚಿಂಗ್ ಈ ವರ್ಣಕ್ಕೆ ಹೊಂದುವುದಿಲ್ಲ, ನೆನಪಿರಲಿ.
- ಪಾರ್ಟಿವೇರ್ ಸೀರೆಗಳು ಈ ವರ್ಣದಲ್ಲಿ ಲಭ್ಯ. ಅವಕ್ಕೆ ಟ್ರೆಡಿಷನಲ್ ಲುಕ್ ನೀಡುವ ಬ್ಲೌಸ್ ಧರಿಸಿ, ಉಡಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)